ಮಂಗಳವಾರ, 15 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯ ಜೀವನ ಸುಖಮಯವಾಗಿರುವುದು
Published 5 ಜೂನ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊಸದಾಗಿ ಲೇವಾದೇವಿ ವ್ಯವಹಾರವನ್ನು ಆರಂಭಿಸುವ ಆಲೋಚನೆ ಹೊಂದಿದವರಿಗೆ ಅಧಿಕೃತ ಆರಂಭ ದಿನ. ಆರ್ಥಿಕ ವ್ಯವಸ್ಥೆ ನೋಡಿಕೊಳ್ಳುವವರಿಗೆ ಅಧಿಕಾರಿಗಳಿಂದ ಆದೇಶವಾಗುವುದು.
ವೃಷಭ
ಸಾಂಸಾರಿಕವಾಗಿ ಹಾಗೂ ಸಾಮಾಜಿಕವಾಗಿ ವರ್ತನೆಯಲ್ಲಿ ಸಮತೋಲನವನ್ನು ಹಾಗೂ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಉತ್ತಮವೆಂದು ಅನಿಸುವುದು. ಸಣ್ಣ ವ್ಯಾಪಾರಿಗಳಿಗೆ ಉತ್ತಮ ಆದಾಯ.
ಮಿಥುನ
ಸಕಾರಾತ್ಮಕ ಭಾವನೆಗಳ ಕುರಿತು ಮಡದಿಯೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಪರಿಹಾರವಾಗುತ್ತದೆ. ಮನೋಬಲದಿಂದ ನಡೆಯಬೇಕಾದ ಕೆಲಸ ಕಾರ್ಯಗಳು ಚುರುಕಾಗಿ ಮತ್ತು ಅಚ್ಚುಕಟ್ಟಾಗಿ ನಡೆಯುವುದು.
ಕರ್ಕಾಟಕ
ವಿಪರೀತ ಭಿನ್ನಾಭಿಪ್ರಾಯಗಳಿಂದ ಮುಂದೂಡಿದ್ದ ಸ್ವತ್ತು ವಿವಾದಗಳು ನಿರ್ಣಯವಾಗುವುದು. ಹಲವು ಕಾರ್ಯಗಳಲ್ಲಿ ಆಪ್ತೇಷ್ಟರ ಸಹಕಾರವಿರುವುದು. ವಿವಾಹ ಸಂಬಂಧದ ಮಾತುಕತೆ ತೃಪ್ತಿಕರ.
ಸಿಂಹ
ದೈಹಿಕವಾಗಿ ಕೆಲಸ ಮಾಡುವವರಿಗೆ ಅಧಿಕ ದೇಹಾಯಾಸವಾಗುವ ಸಂಭವವಿದೆ. ಸರ್ಕಾರಿ ನೌಕರರಿಗೆ ಇತರೆ ಕಾರ್ಯಗಳಿಂದ ಅಧಿಕ ಒತ್ತಡ ಉಂಟಾಗಬಹುದು. ಗಮನವಿಟ್ಟು ಕೆಲಸ ಮಾಡಿದರೆ ಯಶಸ್ಸನ್ನು ಸಾಧಿಸುವಿರಿ.
ಕನ್ಯಾ
ಬಹುಕಾಲ ನೆನಪಿನಲ್ಲಿ ಉಳಿಯುವಂಥ ಮಧುರ ಘಟನೆ ಜೀವನದಲ್ಲಿ ನಡೆಯಲಿದೆ. ಧರ್ಮಕಾರ್ಯಗಳಿಗಾಗಿ ಧನ ವಿನಿಯೋಗಿಸುವ ಬಗ್ಗೆ ಯೋಚಿಸಿ. ಬುದ್ಧಿವಂತಿಕೆಯಿಂದ ಬದುಕಬೇಕಾದ ದಿನ.
ತುಲಾ
ಪರಿಶ್ರಮದ ಜತೆ ಅಧಿಕ ಸಮಯವನ್ನು ವೃತ್ತಿಗೆ ಮೀಸಲಿಡಿ. ಪ್ರೇಮ ವಿವಾಹಕ್ಕಾಗಿ ಕಾಯುತ್ತಿರುವವರು ಕಾಯಬೇಕಾಗಬಹುದು. ಮನೆಯ ಸಮೀಪದ ಶಿವಾಲಯಕ್ಕೆ ಭೇಟಿ ನೀಡಿ ಶುಭವಾಗುತ್ತದೆ.
ವೃಶ್ಚಿಕ
ಯೋಜನೆಗಳ ಕುರಿತು ಸ್ಪಷ್ಟ ಮಾಹಿತಿಗಳನ್ನು ಕಲೆಹಾಕಿರುವುದರಿಂದ ಮಾರ್ಗಮಧ್ಯದ ಅಡೆತಡೆಗಳು ನಿವಾರಣೆಯಾಗಲಿವೆ. ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳುವುದರಿಂದ ನಕಾರಾತ್ಮಕ ಅಂಶಗಳು ದೂರ.
ಧನು
ಪ್ರಶ್ನೆಗಳಿಗೆ ವೃತ್ತಿರಂಗದ ಸ್ನೇಹಿತರಿಂದ ಉತ್ತಮ ಸಲಹೆಗಳು ದೊರಕಲಿವೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಇಡುವುದು ಉತ್ತಮ. ಶಸ್ತ್ರಚಿಕಿತ್ಸರಿಗೆ ಅಪರೂಪದ ಅನುಭವ ಸಿಗುವುದು.
ಮಕರ
ನೌಕರಿ ಬದಲಾವಣೆಯಿಂದ ಆಧಿಕ ಲಾಭ ಪಡೆಯುವ ಸಂಭವವಿದೆ. ಹೊರದೇಶದಲ್ಲಿರುವ ಮಗನ ಯಶಸ್ಸಿನಿಂದ ಮನೆಯಲ್ಲಿ ಸಂತಸದ ವಾತಾವರಣವಿರುತ್ತದೆ. ವಾದ ವಿವಾದಗಳು ದೂರಾಗಲಿವೆ.
ಕುಂಭ
ದವಸ ಧಾನ್ಯಗಳ ಸಗಟು ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಅನುಕೂಲವನ್ನು ಪಡೆಯುವರು. ವೈದ್ಯಕೀಯ ರಂಗದವರ ಪ್ರಗತಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ದಾಂಪತ್ಯ ಜೀವನ ಸುಖಮಯವಾಗಿರುವುದು.
ಮೀನ
ಅಧ್ಯಾಪಕರು, ರಂಗಕರ್ಮಿಗಳಿಗೆ ಒಳ್ಳೆಯ ಅವಕಾಶಗಳು ದೊರೆಯಲಿವೆ. ಅನಿರೀಕ್ಷಿತವಾಗಿ ಎದುರಾಗುವ ಎಡರು ತೊಡರುಗಳಿಂದ ಧೈರ್ಯ ಹೆಚ್ಚುತ್ತದೆ. ಮಾತೃವರ್ಗದವರ ನೆರವಿನಿಂದ ಸಂತೋಷವಾಗಲಿದೆ.
ADVERTISEMENT
ADVERTISEMENT