ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
Horoscope Today - ದಿನ ಭವಿಷ್ಯ| ಕಟಕ ರಾಶಿಯವರ ಮನದ ಆಸೆಗಳು ಇಂದು ಈಡೇರಲಿವೆ
Published 28 ಜೂನ್ 2023, 23:34 IST
ಕೆ.ಎಲ್.ವಿದ್ಯಾಶಂಕರ ಸೋಮಯಾಜಿ
ಮೇಷ
ಹಿರಿಯರಿಂದ ಬೈಸಿಕೊಂಡ ಸಲುವಾಗಿ ಮನೆಯಲ್ಲಿ ಯಾರ ನೆರವೂ ಇಲ್ಲದೆ ಎಲ್ಲಾ ಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವಿರಿ. ಷೇರು ವ್ಯವಹಾರಗಳ ಹೂಡಿಕೆಯು ಸತ್ಫಲ ನೀಡಲಾರದು. ಕೆಂಪು ಬಣ್ಣ ಶುಭ ತರಲಿದೆ.
ವೃಷಭ
ಆಯ್ಕೆ ಸರಿಯಾಗಿದ್ದು ಕೆಲಸಗಳನ್ನು ನಿರ್ಭಯವಾಗಿ ಮಾಡಿ ಮುಗಿಸುವಿರಿ. ಹೋಟೆಲ್ ಅಥವಾ ಸಮಾರಂಭಗಳಲ್ಲಿ ಊಟ ಮಾಡುವಾಗ ಎಚ್ಚರದಿಂದಿರಿ. ಕೆಲಸದ ಬಗ್ಗೆ ಅಧ್ಯಯನ ನಡೆಸಿಕೊಳ್ಳಿರಿ.
ಮಿಥುನ
ವ್ಯವಹಾರದಲ್ಲಿ ಬಹಳ ದಿನಗಳ ನಿರೀಕ್ಷಿತ ಬೆಳವಣಿಗೆ ಸಂಭವಿಸಬಹುದು. ಮನೋಕಾಮನೆಗಳು ಪೂರ್ಣಗೊಳ್ಳಲು ದುರ್ಗಾಪರಮೇಶ್ವರಿಯ ಆರಾಧನೆ ಮಾಡಿ. ನೆಮ್ಮದಿಯ ವಾತಾವರಣ ಉಂಟಾಗಲಿದೆ.
ಕರ್ಕಾಟಕ
ವೈಯಕ್ತಿಕ ವಿಚಾರಗಳಲ್ಲಿ ಅನ್ಯರಿಂದಾಗುವ ಒತ್ತಡಗಳಿಗೆ ಸಿಲುಕಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು. ನಿಮ್ಮ ಶತ್ರುಗಳ ಬಣ್ಣ ಬಯಲಾಗುವುದು ಸಂತೋಷಕ್ಕೆ ಕಾರಣವಾಗುತ್ತದೆ. ಮನದ ಆಸೆಗಳು ಈ ದಿನ ಈಡೇರಲಿವೆ.
ಸಿಂಹ
ಸಿಂಹ: ಕೃಷಿಯಲ್ಲಿ ಪಾಲಿಸುತ್ತಿರುವ ತಂತ್ರಗಳು ಶೀಘ್ರದಲ್ಲೇ ಫಲ ನೀಡಲಿದೆ. ವಿರೋಧಿಗಳ ಜೊತೆಯಲ್ಲಿ ದಿನದ ಹಲವು ಸಮಯವನ್ನು ಕಳೆಯಬೇಕಾಗುತ್ತದೆ. ಸಣ್ಣ ಉದ್ಯಮಿಗಳಿಗೆ ಹೆಚ್ಚು ವ್ಯಾಪಾರ ನಡೆಯುವುದು.
ಕನ್ಯಾ
ಕಾರ್ಯಕ್ಷೇತ್ರದಲ್ಲಿ ಕೆಲಸದ ಒತ್ತಡ ಕಡಿಮೆಯಾಗಿ ಮನೆಯ ವಿಚಾರಕ್ಕೆ ಸಮಯ ನೀಡಲು ಅವಕಾಶವಾಗುವುದು. ಹಿರಿಯರಿಂದ ಹಿತವಾಕ್ಯಗಳು, ಮಾರ್ಗದರ್ಶನ ಸಿಗುವುದು. ಪುಸ್ತಕ ಓದುವ ಹವ್ಯಾಸ ಹುಟ್ಟಲಿದೆ.
ತುಲಾ
ಮನರಂಜನೆಗೂ ಸಾಕಷ್ಟು ಸಮಯವನ್ನು ಮೀಸಲಿಟ್ಟು ಸಂತಸದಿಂದಿರುವಂತೆ ಆಗುವುದು. ಸ್ವತ್ತಿನ ವಿಚಾರದಲ್ಲಿ ಬಂಧುಗಳು ನೆರವಿಗೆ ಬರುವರು. ಲೆಕ್ಕ ಪರಿಶೋಧಕರು ಕೆಲಸದಲ್ಲಿ ಹೆಚ್ಚಿನ ತೃಪ್ತಿಯನ್ನು ಕಾಣಲಿದ್ದೀರಿ.
ವೃಶ್ಚಿಕ
ವಿವಾಹ ವಿಷಯಗಳು ನಿಶ್ಚಿತಗೊಂಡಿದ್ದರೂ ಇನ್ನೊಮ್ಮೆ ವಿಚಾರಿಸಿ ದೃಢಪಡಿಸಿಕೊಳ್ಳುವುದು ಉತ್ತಮ. ಲೇವಾದೇವಿ ವ್ಯವಹಾರಗಳು ಉತ್ತಮವಾಗಿ ಮುಂದುವರೆಯುವುದು.
ಧನು
ವ್ಯವಹಾರಿಕ ಚಾಣಾಕ್ಷತನಕ್ಕೆ, ಕ್ರಿಯಾಶೀಲತೆಗೆ ಸರಿಯಾಗಿ ಈ ದಿನ ಲಾಭವಾಗುವುದು. ನಾನಾ ರೀತಿಯಲ್ಲಿ ಉನ್ನತಿ ಗೋಚರಕ್ಕೆ ಬಂದರೂ ಹಣದ ಖರ್ಚು ವೆಚ್ಚಗಳ ಲೆಕ್ಕಾಚಾರದ ಬಗ್ಗೆ ಗಮನವಿರಲಿ.
ಮಕರ
ವ್ಯಾಪಾರ ವಿಷಯಗಳ ಸಂಬಂಧದಲ್ಲಿ ಕ್ಲಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಅಂತರಂಗದ ಭಾವನೆಗಳಿಗೆ ಆದ್ಯತೆ ನೀಡಿ. ನಿಮ್ಮ ಉತ್ತಮ ಕಾರ್ಯದಿಂದ ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯಾಗುವಿರಿ.
ಕುಂಭ
ಪ್ರಾಮಾಣಿಕತೆಯ ಗುಣ ನೆರವಿಗೆ ಬರುತ್ತದೆ. ಅಸಹಾಯಕ ಪರಿಸ್ಥಿತಿಯಲ್ಲಿರುವ ನೀವು ಪರಿಣತರ ಸಲಹೆ, ಸೂಚನೆಗಳೊಂದಿಗೆ ಗಣಪತಿಯ ಆರಾಧನೆಯಿಂದ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ‌.
ಮೀನ
ಒಂದು ಘಟನೆ ನಿಮ್ಮನ್ನು ಭಾವುಕರನ್ನಾಗಿ ಮಾಡಲಿದೆ. ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವಿರಿ. ಅನ್ನ ದಾನ ಮಾಡುವ ಯೋಚನೆಗಳು ಈ ದಿನ ನಿಮಗೆ ಬರಲಿದೆ.