ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಸೋಮವಾರ 29 ಮೇ 2023
Published 28 ಮೇ 2023, 22:04 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸವಾಲನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಅಭಿವೃದ್ಧಿಯಾಗು ವುದು. ಈ ಹಿಂದೆ ನಡೆದ ದುರ್ಘಟನೆ ಮತ್ತೆ ಮರುಕಳಿಸದಂತೆ ಎಚ್ಚರವಹಿಸುವುದು ಸೂಕ್ತ. ದೇಹಾಯಾಸ ಮತ್ತು ಶೀತ ಬಾಧೆ ನಿವಾರಣೆಯಾಗುವುದು.
ವೃಷಭ
ದೇವರ ಆಭರಣ ತಯಾರಿಕೆ ಅಥವಾ ದೇವಾಲಯದ ಕೆಲಸದ ಗುತ್ತಿಗೆದಾರರಿಗೆ ಹೊಸ ಗುತ್ತಿಗೆ ಸಿಗುವ ಸಂಭವಗಳಿವೆ. ಈ ದಿನದ ಕಾರ್ಯ ಮೊದಲೇ ನಿಶ್ಚಯಿಸಿಕೊಂಡು ಕ್ರಮ ಪ್ರಕಾರವಾಗಿ ಮಾಡುವುದು ಉತ್ತಮ.
ಮಿಥುನ
ದಾಂಪತ್ಯದಲ್ಲಿ ಸಮಸ್ಯೆಗಳು ತೋರಿಬಂದರೂ ಮುಂದಿನ ದಿನಗಳಲ್ಲಿ ಸಂತಸವಿದೆ. ಸಮಯಪ್ರಜ್ಞೆಯಿಂದ ಕಾರ್ಯನಿರ್ವಹಿಸಿ, ಗೆಲುವು ನಿಮ್ಮದಾಗುವುದು. ಸಂಬಂಧಿಗಳಲ್ಲಿರುವ ವ್ಯವಹಾರ ಮುಗಿಸುವ ಯತ್ನ ಮಾಡಿ.
ಕರ್ಕಾಟಕ
ಆತ್ಮ ವಿಶ್ವಾಸ ಹೆಚ್ಚಲಿದೆ. ದೃಢ ನಿಶ್ಚಯ ಮತ್ತು ಸಾಧಿಸಲೇ ಬೇಕೆಂಬ ಛಲದ ಮನೋಭಾವ ಯಶಸ್ಸಿಗೆ ಕಾರಣವೆನಿಸಲಿದೆ. ಮನೆಯ ಕಟ್ಟಡದ ದುರಸ್ತಿ ಕಾರ್ಯಗಳು ಅನಿವಾರ್ಯ. ಔಷಧ ಮಾರಾಟಗಳಲ್ಲಿ ಸಂಪಾದನೆ ಹೆಚ್ಚಲಿದೆ.
ಸಿಂಹ
ಮಗಳಿಂದ ಶುಭ ಸುದ್ದಿ ತಿಳಿಯುವಿರಿ. ಅಕ್ಕ-ಪಕ್ಕದವರನ್ನು ತಾತ್ಸಾರವಾಗಿ ಭಾವಿಸಬೇಡಿ. ಅವರಿಂದಾಗಿ ಹೆಸರು ಹಾಳಾಗುವಂತೆ ಮಾಡುವ ಪ್ರಯತ್ನ ನಡೆಯಬಹುದು. ಅಪರೂಪದ ಸಮಾರಂಭಕ್ಕೆ ಶುಭಾಹ್ವಾನ ಬರುವುದು.
ಕನ್ಯಾ
ಪರಿಸ್ಥಿತಿಗೆ ಹೊಂದಿಕೊಳ್ಳುವ ಸ್ವಭಾವವು ನಿಮ್ಮಲ್ಲಿದೆ. ಭಾಗ್ಯವಂತರಾದ ಸಂಸ್ಥೆಯ ಹೊಸ ಯೋಜನೆಯು ಬಹಳ ಸುಲಭವೆನಿಸಲಿದೆ. ಅಧಿಕಾರಕ್ಕಾಗಿ ಹೆಚ್ಚಿನ ಓಡಾಟವನ್ನು ನಡೆಸುವಿರಿ. ಕೃಷಿ ಚಟುವಟಿಕೆ ಹೆಚ್ಚಿಸಿಕೊಳ್ಳಬಹುದು.
ತುಲಾ
ಸಾಂಸಾರಿಕವಾಗಿ ಅಥವಾ ವೈಯಕ್ತಿಕವಾಗಿ ಕೆಲವು ಮುಖ್ಯ ನಿರ್ಧಾರ ಕೈಗೊಳ್ಳುವಿರಿ. ಕಾರ್ಮಿಕರ ಸಮಸ್ಯೆಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುವುದು. ಸ್ವತಂತ್ರ ಜೀವನ ನಡೆಸುವ ನಿಮ್ಮ ಮುಂಗೋಪಿತನದ ತೀರ್ಮಾನ ಸರಿಯಲ್ಲ.
ವೃಶ್ಚಿಕ
ಸ್ನೇಹಿತರಲ್ಲಿ ಅನಗತ್ಯ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ಸಹೋದ್ಯೋಗಿಯ ನೆರವಿನಿಂದ ಕೆಲಸ ಕಾರ್ಯಗಳು ಶೀಘ್ರವಾಗಿ ಮನಸ್ಸಿಗೆ ಹಿತ ಕೊಡುವ ರೀತಿಯಲ್ಲಿ ಪೂರ್ಣಗೊಳ್ಳಲಿದೆ.
ಧನು
ದೈವಾನುಗ್ರಹದಿಂದ ನೀವು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಪಡೆಯುವಿರಿ. ಸಮಯ ಯಾಚಿಸುತ್ತಿರುವುದರಿಂದ ಸ್ವಂತ ಕೆಲಸಗಳು ನಿಧಾನ ಗತಿಯಲ್ಲಿ ಸಾಗಲಿದೆ. ಉದ್ಯೋಗದಿಂದ ಒಳ್ಳೆಯ ಅನುಭವ ಸಿಗಲಿದೆ.
ಮಕರ
ಕುಟುಂಬದಲ್ಲಿ ಹಿಂದೆ ನಡೆದ ಕೆಟ್ಟ ವಿಚಾರಗಳ ಬಗ್ಗೆಮಾತನಾಡುವುದು ಸಹೋದರರಲ್ಲಿ ಪುನಃ ಭಿನ್ನಾಭಿಪ್ರಾಯ ಬೆಳೆಯಲು ಕಾರಣವಾಗುತ್ತದೆ. ನಿಮ್ಮನ್ನು ನೀವೇ ವಿಮರ್ಶಿಕೊಳ್ಳಿ ನಡವಳಿಕೆಯ ತಪ್ಪುಗಳು ಅರಿವಾಗುವುದು.
ಕುಂಭ
ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯವೆನಿಸಲಿದೆ. ಹಲವು ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ವೃಥಾ ವೈರತ್ವ ಕಟ್ಟಿಕೊಳ್ಳದೆ ಕಾರ್ಯನಿರ್ವಹಿಸಿ.
ಮೀನ
ಜೀವನದಲ್ಲಿ ಸೋಮಾರಿತನ ಜತೆ ಅಹಂಕಾರವನ್ನು ದೂರ ಮಾಡಿದರೆ, ಯೋಗ್ಯತೆಗೆ ಮೀರಿದ ಕೆಲಸಕಾರ್ಯಗಳಿಗೆ ಕೈ ಹಾಕಿದರೂ ಸಮಸ್ಯೆ ಆಗುವುದಿಲ್ಲ. ಖರ್ಚುವೆಚ್ಚಗಳನ್ನು ಸರಿಯಾದ ಲೆಕ್ಕಾಚಾರ ನಡೆಸಿ.