ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವ್ಯಾಪಾರದಲ್ಲಿ ಆದಾಯಕ್ಕಿಂತ ಹೆಚ್ಚು ಲಾಭ ಗಳಿಕೆ
Published 9 ನವೆಂಬರ್ 2023, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅವಕಾಶ ನಿಮ್ಮನ್ನರಸಿ ಬರಲಿದೆ. ವಿವೇಚನೆಯಿಂದ ಉಪಯೋಗಿಸಿಕೊಂಡಲ್ಲಿ ಹೆಚ್ಚಿನ ಅನುಕೂಲ. ಅರ್ಧಕ್ಕೆ ನಿಂತಿದ್ದ ಗೃಹ ನಿರ್ಮಾಣ ಕೆಲಸ ಮುಂದುವರೆಯುವುದು. ದಂತ ವೈದ್ಯರಿಗೆ ಒಳ್ಳೆಯ ದಿನ.
ವೃಷಭ
ಅಹಂಕಾರದ ನಡುವಳಿಕೆ ಸೋಲು, ನಷ್ಟ, ನಿರಾಸೆಗೆ, ಏಕಾಂಗಿತನಕ್ಕೆ ನೇರ ಕಾರಣ. ಹಣ ಹೂಡಿಕೆ ವಿಷಯದಲ್ಲಿ ನಿಮ್ಮ ಅನಿಸಿಕೆಯಂತೆ ನಡೆಯುವುದು ಉತ್ತಮ. ಯಶಸ್ಸು ನಿಮ್ಮ ಪಾಲಿಗೆ ನಿಶ್ಚಿತವಾಗಿರುತ್ತದೆ.
ಮಿಥುನ
ಹೊಸ ಕ್ರಿಯಾಶೀಲ ಉದ್ಯೋಗದಿಂದ ತೃಪ್ತಿ ಹಾಗೂ ನೆಮ್ಮದಿ ಕಾಣುವಿರಿ. ಸಾಲ ಮರುಪಾವತಿ ವಿಚಾರದಿಂದಾಗಿ ತಲೆಬಿಸಿ. ವ್ಯಾಪಾರಗಳಲ್ಲಿ ನಿರೀಕ್ಷಿತ ಆದಾಯಕ್ಕಿಂತ ಹೆಚ್ಚು ಲಾಭಗಳಿಸುವಿರಿ.
ಕರ್ಕಾಟಕ
ಅರ್ಧಕ್ಕೆ ನಿಂತಿರುವ ವ್ಯವಹಾರ ಪೂರ್ತಿಗೊಳಿಸಲು ವ್ಯಕ್ತಿಗಳ ಮೊರೆ ಹೋಗುವುದು. ನೇರ ಭೇಟಿ ಮಾಡುವುದು ಉತ್ತಮ. ಸಾಧ್ಯವಾದಷ್ಟೂ ಉಳಿತಾಯ ಮಾಡುವ ಪ್ರಯತ್ನ ದಿನ ನಿತ್ಯದಲ್ಲಿ ರೂಢಿಸಿಕೊಳ್ಳಿ.
ಸಿಂಹ
ನಿಮ್ಮ ಕೆಲಸಕಾರ್ಯಗಳ ಅಭಿವೃದ್ಧಿಯ ಬಗ್ಗೆ ಯೋಚಿಸಲು ಮತ್ತು ಹೊಸ ಹೊಂದಾಣಿಕೆಗಳ ಬಗ್ಗೆ ಕೆಲಸ ಮಾಡಲು ಸೂಕ್ತ ದಿನ. ಬಂಧುಗಳಲ್ಲಿ ವಿಶ್ವಾಸ, ಸಂಬಂಧ ಉಳಿಸಿ-ಬೆಳೆಸಿಕೊಳ್ಳುವ ಪ್ರಯತ್ನವಿರಲಿ.
ಕನ್ಯಾ
ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಪ್ರಯತ್ನಬಲ ಹೆಚ್ಚಿಸಿದರೆ ಉದ್ಯೋಗ ಪ್ರಾಪ್ತಿಗೆ ಅನುಕೂಲ. ಗೆಳೆಯರೊಂದಿಗೆ ದೂರದ ಪ್ರಯಾಣದ ಸಾಧ್ಯತೆ. ಪತ್ರವ್ಯವಹಾರದಲ್ಲಿ ಅನುಕೂಲವಾಗಲಿದೆ.
ತುಲಾ
ದೇಹದಲ್ಲಿ ರಕ್ತ ಸಂಬಂಧ ತೊಂದರೆ ಎದುರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಮಾಧ್ಯಮ ಸಂಸ್ಥೆಗಳವರಿಗೆ ಉತ್ತಮ ದಿನ.
ವೃಶ್ಚಿಕ
ಹಣಕಾಸಿನ ವ್ಯವಹಾರಗಳೆಲ್ಲ ಸುಗಮವಾಗಿ ಸಾಗುತ್ತಿರುವುದರಿಂದ ಮನಸ್ಸು ನಿರಾಳವಾಗಿರುವುದು. ವಾಹನಗಳ ಬಿಡಿ ಭಾಗಗಳ ಮಾರಾಟದಿಂದ ಲಾಭ. ಲೇವಾದೇವಿ ವ್ಯವಹಾರದಲ್ಲಿ ವಂಚನೆಗೆ ಒಳಗಾಗುವಿರಿ.
ಧನು
ಅನಾವಶ್ಯಕವಾಗಿ ಎಳೆದುಕೊಳ್ಳುವ ಚಿಂತೆಯಿಂದ ಆರೋಗ್ಯದಲ್ಲಿ ಏರುಪೇರು. ಸೇವೆಯ ಕಾಲದ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಸಂಗೀತದಲ್ಲಿನ ನಿಮ್ಮ ಆಸಕ್ತಿಗೆ ಮನೆಯವರಿಂದ ಪ್ರೋತ್ಸಾಹ.
ಮಕರ
ಸಂಶೋಧನಾ ವಿದ್ಯಾರ್ಥಿಗಳಿಗೆ ಇದುವರೆಗೆ ಕಲಿತಿರುವ ವಿಷಯಗಳನ್ನು ಪ್ರಾಯೋಗಿಕವಾಗಿ ಬಳಕೆಗೆ ತರಲು ಇದು ಸುದಿನ. ನಿಮ್ಮ ಚಟುವಟಿಕೆಗಳು ಚುರುಕುಗೊಂಡಿದ್ದು ತುಂಬಾ ಲವಲವಿಕೆಯಿಂದ ಇರುವಿರಿ.
ಕುಂಭ
ಇಂದು ಬರುವ ನೂತನ ಯೋಚನೆ ಖರ್ಚಿನದಾದರೂ ಮುಂದಿನ ದಿನದಲ್ಲಿ ಉಪಕಾರಿ. ಅದರಿಂದ ನಿಮ್ಮ ಕೀರ್ತಿ ಎಲ್ಲ ಕಡೆಗೆ ಹರಡುವುದು. ಷೇರು ವ್ಯವಹಾರದಲ್ಲಿ ಸಮಸ್ಯೆ ಅಥವಾ ನಷ್ಟ ಸಂಭವಿಸಬಹುದು.
ಮೀನ
ಕಾರ್ಮಿಕರ ಸಮಸ್ಯೆಗಳಿಗೆ ಹೆಚ್ಚಿನ ಪ್ರತಿಕ್ರಿಯೆ ನೀಡಿ ಅವರ ಮನಸ್ಸಿನಲ್ಲಿ ಉತ್ತಮ ಸ್ಥಾನವನ್ನು ಸಂಪಾದಿಸಿಕೊಳ್ಳುವಂತೆ ನಿಮ್ಮ ವ್ಯಕ್ತಿತ್ವವಿರಲಿ. ಕೆಲವು ಒತ್ತಡಗಳಿಂದ ಹೊರಬರಲು ವಿಶ್ರಾಂತಿ ಬಯಸುವಿರಿ.
ADVERTISEMENT
ADVERTISEMENT