ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯ ಮಹಿಳೆಯರಿಗೆ ಆಡಳಿತ ಅಧಿಕಾರಗಳು ಲಭ್ಯವಾಗಲಿದೆ
Published 3 ನವೆಂಬರ್ 2023, 20:23 IST
ಪ್ರಜಾವಾಣಿ ವಿಶೇಷ
author
ಮೇಷ
ಲೆಕ್ಕ ಪರಿಶೋಧಕರಿಗೆ ಮತ್ತು ನ್ಯಾಯವಾದಿಗಳಿಗೆ ತೃಪ್ತಿಕರವಾದ ದಿನಗಳು. ಆರ್ಥಿಕ ತಾಪತ್ರಯಗಳು ಯಾರಲ್ಲಿಯೂ ಹೇಳಿಕೊಳ್ಳಲಾಗದಂತಾಗಲಿದೆ. ಸಂಜೆಯ ಸಮಯದಲ್ಲಿ ತಲೆ ನೋವಿನಂಥ ಸಮಸ್ಯೆ ಎದುರಾಗಬಹುದು.
ವೃಷಭ
ಹಾಸ್ಯ ಪ್ರಜ್ಞೆ ಹೆಚ್ಚುವುದು. ಆದರೆ ಹಾಸ್ಯದಿಂದ ಬೇರೆಯವರ ಮನಸ್ಸಿಗೆ ನೋವು ಉಂಟಾಗದಂತೆ ನೋಡಿಕೊಳ್ಳಿ. ವೃತ್ತಿರಂಗದಲ್ಲಿ ನಿಮಗಾಗಿ ಅದೃಷ್ಟದ ಬಾಗಿಲು ತೆರೆಯುವುದು. ಧರ್ಮಕಾರ್ಯಗಳಿಗೆ ಧನ ವ್ಯಯವಾಗಲಿದೆ.
ಮಿಥುನ
ಉದ್ಯೋಗದ ಹುಡುಕಾಟ ನಡೆಸುವವರಿಗೆ ಅಪರಿಚಿತ ವ್ಯಕ್ತಿಯಿಂದ ಸಹಾಯ ಆಗುವುದು. ಹೂಗಳ ರಫ್ತು ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವಿದೆ. ಮಹಿಳೆಯರಿಗೆ ಆಡಳಿತ ಅಧಿಕಾರಗಳು ಲಭ್ಯವಾಗಲಿದೆ.
ಕರ್ಕಾಟಕ
ಹೊಸ ಮನೆಯ ಅಥವಾ ನಿವೇಶನದ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಓಡಾಟ ನಡೆಸಬೇಕಾಗುವುದು. ಕಂದಾಯ ಅಧಿಕಾರಿಗಳಿಗೆ ಕೆಲಸದ ಹೊಣೆ ಹೆಚ್ಚುವುದು. ವ್ಯಾಪಾರಗಳು ಸರಾಗವಾಗಿ ನಡೆಯಲಿವೆ.
ಸಿಂಹ
ಸಮಾಜದಲ್ಲಿ ಸ್ಥಾನಮಾನ ಹೊಂದಿರುವ ನಿಮಗೆ ಮಸಿ ಬಳಿಯುವ ಪ್ರಯತ್ನ ನಡೆಯುವುದು. ಕಬ್ಬಿಣ ಮುಂತಾದ ಕಟ್ಟಡ ನಿರ್ಮಾಣದ ಸಾಮಗ್ರಿಗಳಿಂದ ಲಾಭವಿದೆ. ಕಾರ್ಖಾನೆ ಕೆಲಸಗಾರರಿಗೆ ಕೆಲಸ ಇರುವುದು.
ಕನ್ಯಾ
ತಾಯಿಯ ಅಥವಾ ಸೋದರ ಮಾವನ ಆರೋಗ್ಯದ ವ್ಯತ್ಯಾಸದಿಂದ ದಿನಚರಿಯಲ್ಲಿ ಬದಲಾವಣೆ ಉಂಟಾಗುತ್ತದೆ. ರಾಜಕೀಯ ವಿಷಯಗಳಲ್ಲಿ ಮೌನ ವಹಿಸುವುದು ಲೇಸು. ಕೋರ್ಟಿನ ವ್ಯವಹಾರಗಳಲ್ಲಿ ಜಯ.
ತುಲಾ
ಮಕ್ಕಳು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ, ಏಕಾಗ್ರತೆಯನ್ನು ಕಾಯ್ದುಕೊಳ್ಳಿ. ಇಂದಿನ ಎಲ್ಲಾ ಬೆಳವಣಿಗೆಗಳಿಗೂ ನಾಯಕತ್ವವನ್ನು ವಹಿಸಲಿದ್ದೀರಿ. ಪ್ರೀತಿ-ಪ್ರೇಮದ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ.
ವೃಶ್ಚಿಕ
ಉನ್ನತ ಶಿಕ್ಷಣಕ್ಕಾಗಿ ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಅಧ್ಯಯನ ನಡೆಸುವವರು ವಿದೇಶ ಪ್ರಯಾಣ ಆಲೋಚನೆ ಮಾಡಬಹುದು. ಸಮಾಜದಲ್ಲಿ ಅವಮಾನಕ್ಕೆ ಒಳಗಾಗುವ ಸನ್ನಿವೇಶಗಳು ಎದುರಾಗುವುದು.
ಧನು
ಉದ್ಯಮಿಗಳು ಕೆಲಸಗಾರರಲ್ಲಿ ಯಾವುದೇ ಮನಸ್ತಾಪಗಳನ್ನು ಮಾಡಿಕೊಳ್ಳಬೇಡಿ. ಇದು ಸಾಧನೆಯಲ್ಲಿ ಮೇಲಕ್ಕೆ ಸಾಗಲು ಸಹಕಾರಿಯಾಗಲಿದೆ. ವ್ಯವಹಾರದಲ್ಲಿ ಸಣ್ಣ ಪುಟ್ಟ ನಷ್ಟ ಸಂಭವಿಸುತ್ತದೆ.
ಮಕರ
ವ್ಯವಹಾರ ಸಂಬಂಧಿ ಮಾತುಕತೆಗಳು ಇಂದು ಫಲ ನೀಡಲಿವೆ. ಕೃಷಿ ಕೈಗಾರಿಕೆ ವ್ಯವಹಾರಗಳು ಸಮಾಧಾನಕರ ಆದಾಯ ತರಲಿವೆ. ಕಾನೂನಿಗೆ ವಿರುದ್ಧ ಕೆಲಸವನ್ನು ಮಾಡಬೇಡಿ. ಸಾಲಬಾಧೆ ಕಾಡಲಿದೆ.
ಕುಂಭ
ಔಷಧ ಮಾರಾಟಗಾರರಿಗೆ ಲಾಭವಾಗುತ್ತದೆ. ಇದುವರೆಗೆ ಗುಪ್ತವಾಗಿದ್ದ ಕೌಟುಂಬಿಕ ವಿಷಯಗಳು ತೆರೆಯ ಮೇಲೆ ಬರಲಿವೆ. ಶತ್ರುಗಳ ವಿರುದ್ಧ ಧೈರ್ಯವಾಗಿ ಹೋರಾಡುವ ಪ್ರಯತ್ನವಿರಲಿ.
ಮೀನ
ಮಿತ್ರ ವೃಂದದಲ್ಲಿ ಕಂಡು ಬರುವ ಗೊಂದಲ ಹಾಗೂ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿಕೊಡುವುದರಲ್ಲಿ ಯಶಸ್ವಿಯಾಗುವಿರಿ. ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಲಾಭವಾಗುವುದು.