ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ರಾಜಕಾರಣಿಗಳ ಜತೆ ಬೆಳೆಸಿಕೊಂಡ ಒಡನಾಟದಿಂದ ಅಪಾಯ
Published 13 ಏಪ್ರಿಲ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಿದ್ಯಾರ್ಥಿಗಳಿಗೆ ಬಹುಭಾಷಾ ಕಲಿಕೆಯಂಥ ಅನೇಕ ಅವಕಾಶಗಳು ಒದಗಿ ಬರುವವು. ಸಿಮೆಂಟ್ ಕಾರ್ಖಾನೆಯ ಉದ್ಯೋಗಿಗಳಿಗೆ ಉಸಿರಾಟ ಸಮಸ್ಯೆಯಂಥ ತೊಂದರೆಗಳು ಎದುರಾಗಬಹುದು.
ವೃಷಭ
ಅಧಿಕ ಜವಾಬ್ದಾರಿ ಅಥವಾ ಒತ್ತಡ ತರುವಂತಹ ಕೆಲಸಗಳಿಂದ ದೂರವಿರಿ. ಕ್ರೀಡಾಪಟುಗಳು ಮತ್ತು ಕಲಾವಿದರಿಗೆ ಸರ್ಕಾರದಿಂದ ಪ್ರಶಸ್ತಿ ಮತ್ತು ಸನ್ಮಾನಗಳು ಲಭಿಸಬಹುದು. ಆರೋಗ್ಯದಲ್ಲಿ ಎಚ್ಚರಿಕೆ ತೀರ ಅಗತ್ಯ.
ಮಿಥುನ
ಯಾವುದೇ ರೀತಿಯ ವಾಗ್ದಾನಗಳನ್ನು ಮಾಡುವಾಗ ಹಲವು ಬಾರಿ ಯೊಚಿಸಿ, ಉಳಿಸಿಕೊಳ್ಳಲು ಕಷ್ಟವಾಗುವಂಥ ಮಾತುಗಳನ್ನು ಕೊಡದಿರಿ. ಮನಸ್ಸಿನ ಉದ್ವೇಗ ಕಡಿಮೆ ಮಾಡಿಕೊಳ್ಳಲು ದೇವರ ಧ್ಯಾನದಲ್ಲಿ ತೊಡಗುವಿರಿ.
ಕರ್ಕಾಟಕ
ಈ ದಿನದ ಪ್ರಮುಖ ಕೆಲಸ ಸಂಗಡಿಗರ ಸಹಾಯದಿಂದ ಪೂರ್ಣಗೊಳ್ಳುವುದು. ಕುಟುಂಬದವರೊಂದಿಗೆ ಸಂತೋಷದಿಂದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಿರಿ. ಕಾಗದ ಪತ್ರಗಳ ನಿರ್ವಹಣೆಯಲ್ಲಿ ಎಚ್ಚರವಹಿಸಿ.
ಸಿಂಹ
ಒತ್ತಾಯ ಪೂರ್ವಕವಾಗಿ ಮಾಡುತ್ತಿರುವ ಕೆಲಸ ಕಾರ್ಯಗಳನ್ನು ಬಿಡಬೇಕು ಎನ್ನುವಂಥ ಮನೋಭಾವ ಬರುವ ಸಾಧ್ಯತೆಗಳಿವೆ. ರಾಜಕಾರಣಿಗಳ ಜತೆ ಅಧಿಕವಾಗಿ ಬೆಳೆಸಿಕೊಂಡ ಒಡನಾಟ ಅಪಾಯ ತಂದೊಡ್ಡಲಿದೆ.
ಕನ್ಯಾ
ಮಾತುಗಾರಿಕೆಯ ಸಾಮರ್ಥ್ಯದಿಂದ ಇತರರನ್ನು ಗೆಲ್ಲುವ ಸಾಮರ್ಥ್ಯ ನಿಮ್ಮಲ್ಲಿದೆ. ಅದನ್ನು ನೀವು ಬಳಸಿಕೊಳ್ಳಬಹುದು. ಬಂಧುಗಳು ಹಾಗು ಮಿತ್ರರೊಡನೆ ಸಂತೋಷದ ಕ್ಷಣಗಳನ್ನು ಇಂದು ಹಂಚಿಕೊಳ್ಳಲಿದ್ದೀರಿ.
ತುಲಾ
ಹಲವು ವರ್ಷಗಳ ಹಿಂದೆಯೇ ಸಂಕಲ್ಪಿಸಿದ ಕೆಲಸ ಒಂದು ದೈವಾನುಗ್ರಹದಿಂದ ಆರಂಭವಾಯಿತೆಂದು ಸಂತೋಷ ಪಡುವಂತಾಗಲಿದೆ. ಯಾವ ಹೊಸ ಜನರು ಇಂದು ಪರಿಚಯವಾದರೂ ಪರೀಕ್ಷಿಸದೇ ನಂಬಬೇಡಿ.
ವೃಶ್ಚಿಕ
ವಾಣಿಜ್ಯ ರಂಗದಲ್ಲಿ ಹೊಸ ತಿರುವು ವಾಣಿಜ್ಯ ಸಂಕೀರ್ಣ ನಿರ್ಮಿಸಲು ಪರವಾನಗಿ ಕೇಳಿದವರಿಗೆ ಶುಭ ಸಂಕೇತದಿಂದ ಸಿಗುವುದು. ಅಧಿಕಾರಿ ವರ್ಗದವರಿಂದ ನಿಮ್ಮ ಸಾಮರ್ಥ್ಯಕ್ಕೆ ಅನುಗುಣಧ ಪ್ರಶಂಸೆ ಕೇಳಲ್ಪಡುವಿರಿ.
ಧನು
ವೈವಾಹಿಕ ಜೀವನದಲ್ಲಿ ನಿಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಬೇಕೆಂದು ತೀರ್ಮಾನಿಸಿದ್ದರೂ, ಅದು ಅಷ್ಟು ಸುಲಭವಾಗಿ ನಡೆಯುವುದಿಲ್ಲ. ಕಾನೂನು ಪಂಡಿತರಿಗೆ ಹೆಚ್ಚಿನ ಬೇಡಿಕೆ ಇದ್ದು ನಿಮ್ಮ ಆದಾಯ ಹೆಚ್ಚುತ್ತದೆ.
ಮಕರ
ಹೆಂಡತಿಯ ಆರೈಕೆ ವಿಷಯವಾಗಿ ತಾಯಿ ಅಥವಾ ಅತ್ತೆಯವರನ್ನು ಕರೆ ತರುವಂತೆ ಆಗುವುದು. ವಸ್ತ್ರ ವಿನ್ಯಾಸಕಾರರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ಹಣದ ಹೆಚ್ಚುವರಿ ಅಗತ್ಯದಿಂದ ಧೃತಿಗೆಡಬಹುದು.
ಕುಂಭ
ಹೆಚ್ಚಿನ ಒಡನಾಟ ಹೊಂದಿರುವ ವ್ಯಕ್ತಿಗಳ ಹರಿತವಾದ ನುಡಿಗಳು ಮನಸ್ಸಿಗೆ ಬೆಸರವನ್ನು ಉಂಟುಮಾಡಬಹುದು. ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ನಿಮ್ಮ ಹೊಸ ಯೋಜನೆಗಳು ಜಾರಿಯಾಗಲಿದೆ.
ಮೀನ
ಸಾಂಸಾರಿಕ ವಿಚಾರಕ್ಕೆ ಸಂಬಂಧಿಸದಂತೆ ಈ ದಿನ ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಇತರರನ್ನು ನಂಬದಿರುವ ಪರಿಸ್ಥಿತಿ ಬರುವುದು. ವೃತ್ತಿರಂಗದಲ್ಲಿ ಮೋಸ ಹೋಗಬಹುದು.