ದಿನ ಭವಿಷ್ಯ: ನಿರುದ್ಯೋಗಿಗಳಿಗೆ ಉತ್ತಮ ಕೆಲಸ ದೊರೆಯಲಿದೆ
Published 9 ಜೂನ್ 2025, 0:11 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮನುಷ್ಯ ಪ್ರಯತ್ನದ ಜತೆ ದೇವರ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ಎದುರಾಳಿಗಳು ಮರುಪ್ರಶ್ನೆಯನ್ನು ಮಾಡಲಾಗದಂಥ ಮಾತುಗಳನ್ನು ಆಡುವಿರಿ. ಉದ್ಯೋಗದ ಗೆಲುವು ನಿಮ್ಮದೆ ಆಗಿರುತ್ತದೆ.
ವೃಷಭ
ಕೆಲ ಯೋಜನೆಗಳನ್ನು ಹೊರತುಪಡಿಸಿದರೆ ಎಲ್ಲವೂ ಸಾಂಗವಾಗಿ ನೆರವೇರುತ್ತವೆ. ನಿಮ್ಮ ವಾಕ್ಪಟುತ್ವವು ಸರಿಯಾದ ಸಮಯಕ್ಕೆ ಸಹಾಯಕ್ಕೆ ಬರಲಿದೆ.
ಮಿಥುನ
ಮನೆಯನ್ನು ನಿರ್ಮಾಣ ಮಾಡುವ ಅಥವಾ ನವೀಕರಿಸುವಂತಹ ಆಲೋಚನೆಯಲ್ಲಿ ತೊಡಗುವಿರಿ. ಅಂತರಾತ್ಮದ ಮಾತನ್ನು ಕೇಳುವುದರಿಂದ ಶ್ರೇಯಸ್ಸು ಉಂಟಾಗುತ್ತದೆ. ಸಣ್ಣ ಕೈಗಾರಿಕೆ ಉದ್ಯಮಿಗಳಿಗೆ ಲಾಭವಿದೆ.
ಕರ್ಕಾಟಕ
ಮೇಲಧಿಕಾರಿಗಳಲ್ಲಿ ವೇತನ ಹೆಚ್ಚಳದ ಬಗ್ಗೆ ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಪುಸ್ತಕ ಮುದ್ರಣಾಲಯದವರಿಗೆ ಅಥವಾ ಪುಸ್ತಕದ ವ್ಯಾಪಾರಿಗಳಿಗೆ ಒಳ್ಳೆಯ ಲಾಭ.
ಸಿಂಹ
ಸ್ವ ಉದ್ಯೋಗಿಗಳಿಂದ ಅಪೇಕ್ಷೆಯ ರೀತಿಯಾಗಿ ಧನಸಹಾಯ ಸಿಗಲಿದೆ. ಕಾನೂನಿನ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ಅವಕಾಶ ಒದಗಲಿದೆ. ಪ್ರಯಾಣದಲ್ಲಿ ವಿಳಂಬವಾಗುತ್ತದೆ.
ಕನ್ಯಾ
ಆಡಳಿತ ಕೆಲಸಗಳಿಗೆ ಸೂಕ್ತ ವ್ಯಕ್ತಿಯನ್ನು ತಿಳಿಸುವಂತೆ ಪರಿಚಿತರಲ್ಲಿ ಕೇಳಿಕೊಳ್ಳುವುದರಿಂದ ಸುಲಭವಾಗಿ ಫಲ ಸಿಗುವುದು. ರಾಜಕೀಯ ವ್ಯಕ್ತಿಗಳಿಗೆ ಓಡಾಟ ಹೆಚ್ಚಲಿದೆ. ಶುಭಕ್ಕಾಗಿ ದುರ್ಗಾಪರಮೇಶ್ವರಿಯನ್ನು ಆರಾಧಿಸಿ.
ತುಲಾ
ವ್ಯವಸ್ಥಿತವಾಗಿ ದಿನಚರಿ ರೂಪಿಸಿಕೊಂಡರೆ ಈಗಾಗಲೇ ಆರಂಭಿಸಿರುವ ಯೋಜನೆಗಳು ಸಂಪೂರ್ಣ ಶುಭಫಲದೊಂದಿಗೆ ಪೂರ್ಣಗೊಳ್ಳಲಿವೆ. ಚಲನಚಿತ್ರ ಯಶಸ್ವಿಗೊಂಡು ಲಾಭ ಗಳಿಸುವಂತೆ ಆಗುವುದು.
ವೃಶ್ಚಿಕ
ಅಭಿಪ್ರಾಯಗಳಿಗೆ ಮನ್ನಣೆ ಇದೆಯೇ ಎಂಬುದನ್ನು ಮೊದಲು ಖಚಿತಪಡಿಸಿಕೊಂಡು ಹಿತವಚನಗಳನ್ನು ಹೇಳಲು ಮುಂದುವರಿಯಿರಿ. ನ್ಯಾಯಾಧೀಶರಿಗೆ ಅನಿವಾರ್ಯದ ಸಂದರ್ಭ ಎದುರಾಗಲಿದೆ.
ಧನು
ಮನೆಯಲ್ಲಿ ಶಾಂತ ವಾತಾವರಣವಿದ್ದು , ನಿಧಾನಗತಿಯ ಕಾರ್ಯಗಳು ಚುರುಕಾಗಿ ಮನಸ್ಸಿಗೆ ತುಸು ನೆಮ್ಮದಿ ಬರುವುದು. ಜಮೀನು ಕೊಡು ಕೊಳ್ಳುವಿಕೆ ವ್ಯವಹಾರಗಳು ಹೆಚ್ಚಲಿವೆ. ಅದರಲ್ಲಿ ಲಾಭವಾಗುವುದು.
ಮಕರ
ಕೌಟುಂಬಿಕವಾಗಿ ತೀರ್ಮಾನ ತೆಗೆದುಕೊಳ್ಳುವ ವಿಚಾರದಲ್ಲಿ ಏಕಮುಖವಾದ ನಿರ್ಧಾರವಾಗಲಿ, ಆತುರವಾಗಲಿ ಬೇಡ. ಸಿಹಿತಿಂಡಿ ವ್ಯಾಪಾರಿಗಳಿಗೆ ಲಾಭದ, ನಷ್ಟದ ಮಿಶ್ರಫಲ ಅನುಭವಕ್ಕೆ ಬರಲಿದೆ.
ಕುಂಭ
ಬರಬೇಕಾಗಿದ್ದ ಹಣಕ್ಕೆ ತುಸು ಅಡಚಣೆಗಳನ್ನು ನಿವಾರಿಸಿಕೊಳ್ಳಬೇಕಾಗುವುದು. ಉದ್ಯೋಗದಲ್ಲಿ ಸಮಾಧಾನ ಸಿಗದಿದ್ದರೂ ಆರ್ಥಿಕವಾಗಿ ತೊಂದರೆಗಳಾಗುವುದಿಲ್ಲ. ನಿರುದ್ಯೋಗಿಗಳಿಗೆ ಉತ್ತಮ ಕೆಲಸ ದೊರೆಯಲಿದೆ.
ಮೀನ
ಬಂಧುಮಿತ್ರರೊಂದಿಗೆ ಸಂತೋಷ ವಿಷಯಗಳನ್ನು ಹಂಚಿ ಕೊಳ್ಳುವುದು ಸರಿಯಲ್ಲ. ದಿನಗೂಲಿ ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಆದಾಯ ಸಿಗಲಿದೆ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆ ಎದುರಾಗಬಹುದು.