ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ | ಮೇ 2024: ಈ ರಾಶಿಯವರಿಗೆ ಉನ್ನತ ಶಿಕ್ಷಣದಲ್ಲಿ ಯಶಸ್ಸು
Published 30 ಏಪ್ರಿಲ್ 2024, 21:40 IST
ಅರುಣ ಪಿ.ಭಟ್ಟ
ಮೇಷ
ಮನೆಯ ದುರಸ್ತಿ, ನವೀಕರಣಕ್ಕೆ ಖರ್ಚು. ದಾನ ಧರ್ಮಗಳಲ್ಲಿ ಆಸಕ್ತಿ. ವ್ಯಾಪಾರ, ಉದ್ಯೋಗ ವಿಚಾರದಲ್ಲಿ ದೊಡ್ಡ ಅಧಿಕಾರಿಗಳು, ವ್ಯಾಪಾರಸ್ಥರ ಜತೆಗೆ ಮಾತುಕತೆ. ಕುಟುಂಬ ಬಾಂಧವ್ಯ ಗಟ್ಟಿಯಾಗುತ್ತದೆ. ಸಾಮಾಜಿಕ-,ರಾಜಕೀಯ ಕ್ಲೇತ್ರದಲ್ಲಿ ಶ್ರಮಪಟ್ಟು ಕೆಲಸ ಮಾಡಬೇಕು.
ವೃಷಭ
ಉತ್ಸಾಹ ಹೆಚ್ಚಲಿದೆ. ಶ್ರಮದಿಂದ ಹೆಚ್ಚಿನ ಯಶಸ್ಸು ಪಡೆಯುವಿರಿ. ಆ ಕಾರಣಕ್ಕಾಗಿ ಹಲವು ಕೆಲಸ ಕಾರ್ಯಗಳನ್ನು ಪೂರೈಸಬೇಕಾಗುತ್ತದೆ. ಸಹೋದ್ಯೋಗಿಗಳ ಜತೆಗಿನ ಭಿನ್ನಾಭಿಪ್ರಾಯ ಮರೆಯಲು ಯತ್ನಿಸುವಿರಿ. ತಿಂಗಳ ಕೊನೆಯಲ್ಲಿ ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ.
ಮಿಥುನ
ವ್ಯಾಪಾರಸ್ಥರಿಗೆ, ಉದ್ಯಮಿಗಳಿಗೆ ಲಾಭ. ಅಂದುಕೊಂಡ ಹಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗಸ್ಥರು ಕೆಲಸದಲ್ಲಿ ಗುಣಮಟ್ಟ ಕಂಡುಕೊಳ್ಳುವರು. ಸಾಮಾಜಿಕ ಸ್ಥಾನಮಾನ ಹೆಚ್ಚಲಿದೆ. ಉತ್ಸಾಹವೂ ಹೆಚ್ಚಾಗಲಿದೆ. ತಲೆ ನೋವು ಹಲ್ಲು ನೋವು ಕಾಣಿಸಿಕೊಳ್ಳಬಹುದು.
ಕರ್ಕಾಟಕ
ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ಸಮಯವಿದು. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ಸ್ವಯಂ ವೈದ್ಯರಾಗಬೇಡಿ. ಮುಂಬರುವ ದಿನಗಳಲ್ಲಿ ಹಲವು ಅವಕಾಶಗಳು ಬರಲಿವೆ. ತಿಂಗಳ ಅಂತ್ಯದ ವೇಳೆ ತುಂಬ ಒಳ್ಳೆಯ ಮೊತ್ತ ದೊರೆಯಲಿದೆ.
ಸಿಂಹ
ಪ್ರಶಸ್ತಿ ಗೌರವಕ್ಕೆ ಪಾತ್ರರಾಗುವ ಯೋಗವಿದೆ. ಕಿರು ಪ್ರಯಾಣ ಮಾಡಬೇಕಾಗಿ ಬರಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ವೃತ್ತಿಪರ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡುವಿರಿ. ವ್ಯಾಪಾರಸ್ಥರಿಗೆ ಉತ್ತಮ ಸಂಪರ್ಕ ದೊರೆಯಲಿದೆ. ಆದಾಯದಲ್ಲಿ ಹೆಚ್ಚಳ.
ಕನ್ಯಾ
ಕುಟುಂಬ ಸದಸ್ಯರು, ಬಂಧುಗಳು, ಪ್ರೀತಿಪಾತ್ರರೊಂದಿಗೆ ಉತ್ತಮ ಕ್ಷಣಗಳನ್ನು ಕಳೆಯಲಿದ್ದೀರಿ. ವಿರೋಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದೀರಿ. ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮನ್ನಣೆ ಸಿಗಲಿದೆ. ದೊಡ್ಡ ವ್ಯವಹಾರಗಳ ಬಗ್ಗೆ ತೀರ್ಮಾನ ಕೈಗೊಳ್ಳುವಾಗ ತಾಳ್ಮೆ ಇರಲಿ.
ತುಲಾ
ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಲಾಭ. ಸಿನಿಮಾ, ವೈದ್ಯಕೀಯ, ಕಲಾ ವೃತ್ತಿಯಲ್ಲಿರುವವರಿಗೆ ಲಾಭ. ತಿಂಗಳ ಮಧ್ಯಭಾಗದಲ್ಲಿ ಪ್ರಗತಿ ವೇಗ ಪಡೆದುಕೊಳ್ಳುತ್ತದೆ. ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಆರೋಗ್ಯ ಚೆನ್ನಾಗಿರುತ್ತದೆ.
ವೃಶ್ಚಿಕ
ತಾಳ್ಮೆ ಮತ್ತು ಧೈರ್ಯ ಬಹಳ ಮುಖ್ಯವಾಗುತ್ತದೆ. ಸಮಯದ ಕೊರತೆ ಕಾಡುತ್ತದೆ. ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದುಕೊಳ್ಳುತ್ತೀರಿ. ತಿಂಗಳ ಅಂತ್ಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಅತ್ಯುತ್ತಮವಾಗುತ್ತದೆ. ವೈಯಕ್ತಿಕ ಸಂಬಂಧಗಳು ಉತ್ತಮವಾಗಿರುತ್ತವೆ.
ಧನು
ಆಸ್ತಿ ಖರೀದಿಗೆ ಸಂಬಂಧಪಟ್ಟ ಕಾಗದಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ಆರೋಗ್ಯ ಸಮಸ್ಯೆಗಳು ಕಾಡಬಹುದು. ವೈಯಕ್ತಿಕ ಸಂಬಂಧದಲ್ಲಿ ಕೆಲವು ಕಹಿ ಬೆಳವಣಿಗೆಗಳಾಗಬಹುದು. ಕುಟುಂಬದವರ ಬೆಂಬಲ ದೊರೆಯಲಿದೆ. ಒಡಹುಟ್ಟಿದವರೊಡನೆ ಬಾಂಧವ್ಯ ಗಟ್ಟಿಯಾಗುತ್ತದೆ.
ಮಕರ
ಪ್ರತಿಷ್ಠಿತ ಸಂಸ್ಥೆಯೊಂದರ ಜತೆಗೆ ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕುವ ಸಾಧ್ಯತೆಗಳಿವೆ. ವ್ಯಾಪಾರ ಉದ್ಯಮ ವಿಸ್ತರಣೆ ಬಗ್ಗೆ ಮುಖ್ಯ ತೀರ್ಮಾನ ಕೈಗೊಳ್ಳಲಿದ್ದೀರಿ. ವೈವಾಹಿಕ ಜೀವನ ಸಂತೋಷದಾಯಕವಾಗಿರುತ್ತದೆ. ಉದ್ಯೋಗ ನಿಮಿತ್ತವಾಗಿ ಪ್ರಯಾಣ ಮಾಡಬೇಕಾಗುತ್ತದೆ.
ಕುಂಭ
ಹಣದ ಸದುಪಯೋಗ ಮಾಡಿಕೊಳ್ಳುವ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಮಾರಾಟ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಲಾಭ ಪಡೆಯಲು ಅವಕಾಶಗಳಿವೆ. ಅಂದುಕೊಂಡ ಸಮಯಕ್ಕಿಂತ ಮುಂಚಿತವಾಗಿಯೇ ಗುರಿ ತಲುಪುವಿರಿ. ಸಂಗಾತಿಯ ಭಾವನೆಗಳಿಗೆ ಗೌರವ ನೀಡುತ್ತೀರಿ.
ಮೀನ
ಉನ್ನತ ಶಿಕ್ಷಣದಲ್ಲಿ ಯಶಸ್ಸು. ಉದ್ಯೋಗ ಸ್ಥಳದಲ್ಲಿ ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೀರಿ. ತಂದೆಗೆ ಅಥವಾ ತಂದೆಯ ಸಮಾನರಾದವರಿಗೆ ಅನಾರೋಗ್ಯ ಕಾಡಬಹುದು. ತಿಂಗಳ ಮಧ್ಯ ಭಾಗದಲ್ಲಿ ವೃತ್ತಿಪರ ಜೀವನದಲ್ಲಿ ಅತ್ಯುತ್ತಮವಾದ ಬೆಳವಣಿಗೆ ಇದೆ.