ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ: 2024 ಮಾರ್ಚ್– ಈ ರಾಶಿಯವರ ವೆಚ್ಚ ಹೆಚ್ಚಾಗಲಿದೆ
Published 1 ಮಾರ್ಚ್ 2024, 12:25 IST
ಅರುಣ ಪಿ.ಭಟ್ಟ
ಮೇಷ
ಕಲಾವಿದರಿಗೆ, ಸಾಹಿತಿಗಳಿಗೆ ಮಾನ ಸನ್ಮಾನ ಯೋಗ. ಅರ್ಧದಲ್ಲಿ ನಿಂತ ಕಟ್ಟಡ, ಮನೆ ನಿರ್ಮಾಣ ಕಾರ್ಯಗಳಿದ್ದರೆ ಪೂರ್ಣಗೊಳ್ಳುವುದು. ಚಿಕ್ಕ ಪ್ರವಾಸ. ಆರ್ಥಿಕ ಅನುಕೂಲತೆ. ಉದ್ಯೋಗ ವ್ಯವಹಾರಗಳಲ್ಲಿ ಉತ್ತಮ ಲಾಭ. ಒಟ್ಟಾರೆಯಾಗಿ ಸಂತಸದ ವಾತಾವರಣ. ಶುಭ: 14,19,29 ಅಶುಭ: 11,16,21.
ವೃಷಭ
ಮನೆಯಲ್ಲಿ ವಿವಾದಗಳು. ಬಂಧುಗಳಿಂದ ಕಿರಿಕಿರಿ. ಅನಾವಶ್ಯಕ ಖರ್ಚು. ಉನ್ನತ ಶಿಕ್ಷಣದಲ್ಲಿ ಪ್ರಗತಿ. ತಿಂಗಳ ಅಂತ್ಯದಲ್ಲಿ ಆದಾಯ ಏರಿಕೆಯಾಗಬಹುದು. ವ್ಯಾಪಾರ ವ್ಯವಹಾರದಲ್ಲಿ ಲಾಭ ಕಂಡುಬರಲಿದೆ. ಮಂಗಲ ಕಾರ್ಯದಲ್ಲಿ ಭಾಗಿಯಾಗುವಿರಿ ಅಥವಾ ನೀವೇ ನೆರವೇರಿಸುವಿರಿ. ಶುಭ: 07,12,22. ಅಶುಭ: 09,17,27.
ಮಿಥುನ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು. ವ್ಯಾಪಾರ, ಉದ್ಯೋಗದಲ್ಲಿ ಲಾಭ. ಹಿರಿಯರ ಪ್ರೀತಿ ಆಶೀರ್ವಾದ ಲಭಿಸುವುದು. ಆಸ್ತಿ ಖರಿದಿ ಬಗ್ಗೆ ಚಿಂತನೆ. ಕಲಾವಿದರಿಗೆ, ಸಾಹಿತಿಗಳಿಗೆ ಉತ್ತಮ. ಸಂಘ ಸಂಸ್ಥೆಗಳಿಂದ ಧನಲಾಭ. ಶತ್ರುಗಳು ಹಿಂದೆ ಸರಿಯುವರು. ಸರಕಾರಿ ಕೆಲಸ ಶೀಘ್ರ ಆಗುವುದು. ಶುಭ: 10,14,22 ಅಶುಭ: 11,19,24.
ಕರ್ಕಾಟಕ
ಪಾಲುದಾರಿಕೆ ಉದ್ಯೋಗದಲ್ಲಿ ತೊಂದರೆ, ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಬಹುದು. ವಿಚಿತ್ರ ಆರ್ಥಿಕ ಮುಗ್ಗಟ್ಟಿನ ತಿಂಗಳು. ಸ್ವತಂತ್ರ ವೃತ್ತಿಪರರಿಗೆ ಉತ್ತಮ ಲಾಭ. ಸರ್ಕಾರಿ ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ. ವಿದ್ಯಾರ್ಥಿಗಳಿಗೆ ಶುಭ. ಸೋದರರಿಂದ ಶುಭಸುದ್ದಿ ಬರಲಿದೆ. ಶುಭ: 11,14,26 ಅಶುಭ: 10,15,23.
ಸಿಂಹ
ವಿದ್ಯಾರ್ಥಿಗಳಿಗೆ ಪ್ರಗತಿ. ಆರೋಗ್ಯ ಉತ್ತಮವಾಗಿರುತ್ತದೆ, ಹೆಚ್ಚು ಉತ್ಸಾಹ ಹಾಗೂ ಸಂತೋಷದಿಂದ ಕಾಣಿಸಿಕೊಳ್ಳುತ್ತೀರಿ. ತಿಂಗಳಾಂತ್ಯದಲ್ಲಿ ವ್ಯಾಪಾರ ವ್ಯವಹಾರ ಲಾಭದಾಯಕವಾಗಿರುತ್ತದೆ. ಸಂಗಾತಿಗೆ ಕೆಲವು ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಶುಭ: 15,21,27 ಅಶುಭ: 12,19,28.
ಕನ್ಯಾ
ಯುವ ಜನರಿಗೆ ಉತ್ತಮ ಸಮಯ. ಹೊಸ ಯೋಜನೆಗಳು ಸಾಕಾರಗೊಳ್ಳುತ್ತವೆ. ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ನಿಮ್ಮ ಆರೋಗ್ಯದ ಕಡೆಗೂ ಗಮನ ಕೊಡಿ. ಬಾಕಿ ಹಣ ಕೈಸೇರುವುದು. ಶುಭ: 12,16,24 ಅಶುಭ: 11,18,28.
ತುಲಾ
ಈ ಮಾಸ ಎಲ್ಲ ವಿಚಾರಗಳಲ್ಲೂ ನಿಮಗೆ ಶುಭದಾಯಕವಾಗಿರಲಿದೆ. ವ್ಯಾಪಾರ ವ್ಯವಹಾರಸ್ಥರಿಗೆ ಉತ್ತಮ ಲಾಭ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆ. ಕುಟುಂಬ ಸೌಖ್ಯ. ಮನೆಗೆ ಹೊಸ ಪೀಠೋಪಕರಣ ಅಲಂಕಾರಿಕ ವಸ್ತುಗಳ ಖರೀದಿ ಸಾಧ್ಯತೆ. ಆರೋಗ್ಯದಲ್ಲಿ ಚೇತರಿಕೆ. ಶುಭ: 16,22,29 ಅಶುಭ: 13,19,27.
ವೃಶ್ಚಿಕ
ಕೆಲಸದಲ್ಲಿ ಇನ್ನಷ್ಟು ಶಿಸ್ತು ಅಳವಡಿಸಲು ಯತ್ನಿಸುವಿರಿ. ಹಲವು ಸವಾಲುಗಳು ಏಕಕಾಲಕ್ಕೆ ಎದುರಾಗಬಹುದು. ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ತಿಂಗಳ ಮಧ್ಯಭಾಗದಲ್ಲಿ ವ್ಯಾಪಾರ ಉದ್ಯಮ ವಿಸ್ತರಣೆಗೆ ಹೆಚ್ಚಿನ ಅವಕಾಶಗಳು ದೊರೆಯಲಿವೆ. ವೆಚ್ಚ ಹೆಚ್ಚಾಗಲಿದೆ. ಶುಭ: 10,17,21 ಅಶುಭ: 12,16,23.
ಧನು
ಉದ್ಯಮವನ್ನು ವಿಸ್ತರಿಸುವಿರಿ. ಬಿಡುವಿಲ್ಲದ ಉದ್ಯೋಗದ ಮಧ್ಯೆಯೂ ಕುಟುಂಬ ಜೀವನಕ್ಕೆ ಹೆಚ್ಚಿನ ಸಮಯವನ್ನು ಇಡಬೇಕಾಗುತ್ತದೆ. ತಿಂಗಳ ಮಧ್ಯಭಾಗದಲ್ಲಿ ವ್ಯಾಪಾರ ಹಾಗೂ ವೈಯಕ್ತಿಕ ವಿಚಾರಗಳಲ್ಲಿ ಸವಾಲುಗಳು ಎದುರಾಗಬಹುದು. ಇದು ಚಿಂತೆಗೆ ಕಾರಣವಾಗಲಿದೆ. ಶುಭ: 15,17,29 ಅಶುಭ: 12,20,27.
ಮಕರ
ಮನೆಗೆ ಹಳೆಯ ಮಿತ್ರರ ಆಗಮನ. ಆದಾಯಕ್ಕೆ ಸಂಬಂಧಿಸಿದ ಮೂಲಗಳಿಂದ ಉತ್ತಮ ಲಾಭ ಪಡೆಯುವ ಅವಕಾಶ. ಇದರಿಂದ ಹೆಚ್ಚು ಉತ್ಸಾಹಭರಿತರಾಗಿ, ಉಲ್ಲಸಿತರಾಗಿ ಕಾಣಿಸಿಕೊಳ್ಳಲಿದ್ದೀರಿ. ವಿದ್ಯಾರ್ಥಿಗಳಿಗೆ ಯಶಸ್ಸು. ಕಾಲು ನೋವಿನ ಸಮಸ್ಯೆ ಕಾಡಬಹುದು. ಶುಭ: 19,22,28 ಅಶುಭ: 12,16,21.
ಕುಂಭ
ಹೊಸ ಉತ್ಸಾಹ, ಪಾಲುದಾರಿಕೆ ವ್ಯವಹಾರಗಳಲ್ಲಿ ಹೊಸ ಅವಕಾಶಗಳು. ಅನಿರೀಕ್ಷಿತ ಖರ್ಚುಗಳಿಗಾಗಿ ಹಣ ಮೀಸಲಿಡಬೇಕಾಗುವುದು. ಆರೋಗ್ಯದಲ್ಲಿ ಏರುಪೇರುಗಳಾಗಬಹುದು. ಪಿತ್ರಾರ್ಜಿತ ಆಸ್ತಿ ಹಂಚಿಕೆ ವಿಚಾರದಲ್ಲಿ ಸೋದರ ಸೋದರಿಯರ ಜತೆ ಸಂಘರ್ಷ ಏರ್ಪಡಬಹುದು. ಶುಭ: 15,25,28 ಅಶುಭ:14,21,28.
ಮೀನ
ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯುವುದು, ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ವ್ಯಾಪಾರ– ಉದ್ಯಮಗಳಲ್ಲಿ ಬೇಡಿಕೆಗೆ ತಕ್ಕಂತೆ ಪೂರೈಕೆ ಒದಗಿಸಲು ಸಿದ್ಧತೆ ಮಾಡಿಕೊಳ್ಳಿ. ಹಣಕಾಸಿನ ಹರಿವು ಹೆಚ್ಚಳವಾಗಲಿದೆ. ವೈಯಕ್ತಿಕ ಸಂಬಂಧಗಳಲ್ಲಿ ಎಚ್ಚರಿಕೆಯಿಂದಿರಿ. ಮಾತು ಮಿತವಾಗಿರಲಿ. ಶುಭ: 16,20,28 ಅಶುಭ: 12,22,29.