ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜನವರಿ 10 ಬುಧವಾರ 2024– ಇಂದು ಮನರಂಜನೆಯ ಕಾರ್ಯಕ್ರಮಗಳಲ್ಲಿ ಭಾಗಿ
Published 9 ಜನವರಿ 2024, 18:40 IST
ಪ್ರಜಾವಾಣಿ ವಿಶೇಷ
author
ಮೇಷ
ದೇವರ ಆಶೀರ್ವಾದ ನಿಮ್ಮ ಮೇಲಿರುವುದರಿಂದ ಇಂದಿನ ಪ್ರಯಾಣ ಅನುಕೂಲಕರವಾಗಿ, ಅನಾಯಾಸವಾಗಿ ಇರುತ್ತದೆ. ಜೀವನಶೈಲಿಗೆ ವಿರುದ್ಧವಾದ ಘಟನೆ ಈ ದಿನ ನಡೆಯಬಹುದು.
ವೃಷಭ
ಜಮೀನಿನ ಕೆಲಸ ಕಾರ್ಯಗಳು ಮನಸ್ಸಿನಲ್ಲಿ ತೀರ್ಮಾನಿಸಿದಂತೆ ನಡೆಯುವುದು ಕಷ್ಟವಾಗಲಿದೆ. ಬಂಧುಗಳಲ್ಲಿ ನಿಷ್ಠುರ ವರ್ತನೆಗೆ ಆಸ್ಪದ ನೀಡುವುದು ಸರಿಯಲ್ಲ. ಮಗಳ ಶಿಕ್ಷಣ ಮುಂದುವರಿಸುವ ಬಗ್ಗೆ ತೀರ್ಮಾನಿಸಿ.
ಮಿಥುನ
ಕಾನೂನು ವಿದ್ಯಾರ್ಥಿಗಳಿಗೆ ಅಥವಾ ನ್ಯಾಯಾಂಗ ಇಲಾಖೆಯವರಿಗೆ ಗೊಂದಲದ ವಾತಾವರಣ ಎದುರಾಗುವುದು. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು.
ಕರ್ಕಾಟಕ
ಗೆಳೆಯನ ಅನಿರೀಕ್ಷಿತ ಆಗಮನ ಸಮಯವನ್ನು ವ್ಯರ್ಥ ಮಾಡಿಸಿದರೂ ಮನಸ್ಸಿಗೆ ಸಂತೋಷ ಉಂಟಾಗುವುದು. ಮನೆಯವರೊಂದಿಗೆ ಮನರಂಜನೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
ಸಿಂಹ
ವಿದೇಶದಲ್ಲಿ ಉದ್ಯೋಗದ ಸಂಪಾದನೆಗೆ ಪ್ರಯತ್ನ ಮಾಡಬಹುದು. ಪರಿಣತರ ಸಲಹೆ, ಸೂಚನೆಗಳೊಂದಿಗೆ ಮುಂದುವರಿದರೆ ಪರಿಸ್ಥಿತಿ ತಿಳಿಯಾಗುತ್ತದೆ. ಹೆಂಡತಿಯ ಆರೋಗ್ಯದ ಬಗ್ಗೆ ಭೀತಿ ಅಗತ್ಯವಿಲ್ಲ.
ಕನ್ಯಾ
ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವುದರಿಂದ ವೈಯಕ್ತಿಕ ಜೀವನದಲ್ಲಿ ವಿಷಾದ, ದುಃಖ ಆವರಿಸುವ ಲಕ್ಷಣಗಳು ಗೋಚರಿಸುತ್ತಿರುವುದನ್ನು ಸರಿಪಡಿಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಸಾಧನೆಗೆ ಪೂರಕ ದಿನ.
ತುಲಾ
ಸಹೋದರರಲ್ಲಿ ಭಿನ್ನಾಭಿಪ್ರಾಯ ಮೂಡಿಸುವ ಕೆಲಸವು ನಿಮ್ಮ ದಾಯಾದಿಗಳಿಂದ ನಡೆಯಬಹುದು. ಸಮಸ್ಯೆಗೆ ಸಿಲುಕಿರುವ ನೀವು ನ್ಯಾಯ ಹೊಂದಲು ಕಷ್ಟ ಪಡಬೇಕಾಗಲಿದೆ. ಮೆಕ್ಯಾನಿಕ್‌ಗಳಿಗೆ ಆದಾಯ ತರುವ ದಿನ.
ವೃಶ್ಚಿಕ
ಸಾಕಷ್ಟು ಸಮಸ್ಯೆಗಳು ಆತ್ಮವಿಶ್ವಾಸಕ್ಕೆ ಅಡ್ಡಿಯನ್ನು ಉಂಟುಮಾಡಲಿದೆ. ಪರಿಸ್ಥಿತಿಯ ಲಾಭ ಪಡೆಯಲು ವಿಫಲರಾಗಬೇಡಿ. ಸಂದರ್ಭಗಳನ್ನು ಬಳಸಿಕೊಳ್ಳುವ ಜಾಣತನವನ್ನು ಅಭ್ಯಸಿಸಿಕೊಳ್ಳಿರಿ.
ಧನು
ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು. ಬೇರೆಯವರ ಸಹಾಯ ಅಪೇಕ್ಷಿಸದೆ ವಿಶ್ವಾಸದಿಂದ ಕಾರ್ಯೋನ್ಮುಖರಾಗಿ. ಜಯ ನಿಮ್ಮ ಪಾಲಿಗೆ ಒದಗುತ್ತದೆ.
ಮಕರ
ಅಭಿವೃದ್ಧಿಯ ಅಥವಾ ಕ್ರೋಡೀಕರಣದ ಬಗ್ಗೆ ಪ್ರಮುಖ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸರಿ ಸಮಯ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾದ ಪರಿಸ್ಥಿತಿ ತೋರಲಿದೆ. ಮದುವೆ ವಿಷಯ ಪ್ರಸ್ತಾಪವಾಗಲಿದೆ.
ಕುಂಭ
ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಹೊಸ ಯೋಜನೆಗಳನ್ನು ರೂಢಿಸಿಕೊಳ್ಳಬಹುದು. ಮಕ್ಕಳ ಬೆಳವಣಿಗೆ ವಿಚಾರದಲ್ಲಿ ಕಾಳಜಿ ತೋರುವ ಅನಿವಾರ್ಯತೆ ಹೆಚ್ಚಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಲಿದೆ.
ಮೀನ
ಸಮಸ್ಯೆಗಳಿಗೆ ಕಾರಣವಾಗಿರುವ ಜನ, ಪರಿಸ್ಥಿತಿ ಬಗ್ಗೆ ನಿಮಗೆ ಮಾಹಿತಿ ಇಲ್ಲದಿದ್ದರೆ ತೊಂದರೆ ಉಲ್ಬಣಿಸುವ ಸಾಧ್ಯತೆಗಳಿವೆ. ಶ್ರಮಕ್ಕೆ ಮನೆಯವರ ಸಂಪೂರ್ಣ ಸಹಾಯ ಸಹಕಾರಗಳು ಒದಗಲಿದೆ.