ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಫೆಬ್ರುವರಿ 19 ಸೋಮವಾರ 2024– ಇಂದು ಸ್ವಂತ ಕೆಲಸ ಪೂರ್ತಿಗೊಳಿಸುವಿರಿ
Published 18 ಫೆಬ್ರುವರಿ 2024, 18:31 IST
ಪ್ರಜಾವಾಣಿ ವಿಶೇಷ
author
ಮೇಷ
ಆಸ್ತಿ ವ್ಯವಹಾರಗಳಿಂದ ಉತ್ತಮ ಲಾಭ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆ, ಪ್ರಾಮಾಣಿಕತೆಗೆ ಹೆಚ್ಚಿನ ಗೌರವಾದರಗಳು ಸಿಗುವುದು. ಸ್ವಂತ ಕೆಲಸ ಪೂರ್ತಿಗೊಳಿಸುವಿರಿ.
ವೃಷಭ
ಅನವಶ್ಯಕ ಚಿಂತೆ, ದೂರ ಪ್ರವಾಸದಿಂದ ಖರ್ಚು ಹಾಗೂ ಹಾಳು ವ್ಯಸನಗಳು ಈ ದಿನ ಕಡಿಮೆಯಾಗಲಿದೆ. ವ್ಯವಹಾರದಲ್ಲಿ ಹೆಚ್ಚಿನ ಸಮಯ ವ್ಯಯಿಸುವುದರಿಂದ ಕಾರ್ಯಗಳನ್ನು ಸುಸ್ಥಿತಿಗೆ ತರಬಹುದು.
ಮಿಥುನ
ನೂತನ ವ್ಯವಹಾರದ ಪ್ರಾರಂಭ ಯೋಚನೆಯಲ್ಲಿರುವವರು ಅದರ ಸಾಧಕ ಬಾಧಕದ ಬಗ್ಗೆ ಸಂಪೂರ್ಣವಾಗಿ ಗಮನಹರಿಸುವುದು ಉತ್ತಮ. ಜೀವನ ಸಂಗಾತಿಯ ಆಯ್ಕೆ ವಿಚಾರದಲ್ಲಿ ಹಿರಿಯರ ಮಾತಿನತ್ತ ಗಮನ ಕೊಡಿ.
ಕರ್ಕಾಟಕ
ಧಾರ್ಮಿಕ ಕ್ಷೇತ್ರದಲ್ಲಿರುವವರು ವೃತ್ತಿ ಜೀವನದತ್ತ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು. ಕೋರ್ಟು ವ್ಯವಹಾರಗಳಲ್ಲಿ ಹಿನ್ನಡೆ ಅಥವಾ ನಿರೀಕ್ಷಿಸಿದ ಯಾವುದೇ ತೀರ್ಮಾನ ಸಿಗದಂತಾಗುತ್ತದೆ.
ಸಿಂಹ
ನಿಮಗೆ ಜನ್ಮತಃ ಬಂದಿರುವ ಧೈರ್ಯ ಹಾಗೂ ಸಹಿಷ್ಣುತೆ ನೆರವಿಗೆ ಬರಲಿದೆ. ನಿಮ್ಮಿಚ್ಛೆಯ ಭೂಮಿಯನ್ನೇ ಖರೀದಿಸುವ ಭಾಗ್ಯ ನಿಮ್ಮದಾಗಲಿದೆ. ವಿವಾಹದ ಬಗ್ಗೆ ಯೋಚನೆ ಬರಲಿದೆ.
ಕನ್ಯಾ
ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ಜತೆಗೆ ಕಲಿಕೆಗಾಗಿ ಪ್ರಯಾಣ ಮಾಡಬೇಕಾಗುತ್ತದೆ. ಹೊಸ ಕಾರ್ಯದ ಸಂಪೂರ್ಣ ಜವಾಬ್ದಾರಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆ ನಿಮ್ಮದಾಗಲಿದೆ. ಸ್ನೇಹಿತರು ಇನ್ನಷ್ಟು ಹತ್ತಿರವಾಗುವರು.
ತುಲಾ
ಜನರೊಂದಿಗಿನ ಹೆಚ್ಚಿನ ಸಂಪರ್ಕದಿಂದ ಅನಿವಾರ್ಯದ ಸಮಯ ಎದುರಿಸಬಹುದು. ನ್ಯಾಯವಾದಿಗಳಿಗೆ ಜಯ ದೊರೆತು ಧನಾಗಮವಾಗಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.
ವೃಶ್ಚಿಕ
ನಿರೀಕ್ಷೆಗೆ ಅಥವಾ ಪ್ರಯತ್ನಕ್ಕೆ ನಿಲುಕದ ವ್ಯಕ್ತಿಗಾಗಲಿ ಅಥವಾ ವಸ್ತುವಿಗಾಗಲೀ ಕಾಲಹರಣ ಮಾಡದಿರಿ. ನಿಮಗೆ ಬರಬೇಕಾದದು ನಿಮ್ಮನ್ನು ಅರಸಿ ಬಂದೇ ಬರುವುದು. ಬಿಳಿ ಬಣ್ಣದ ಉಡುಗೆ ಶುಭ ತರುವುದು.
ಧನು
ದೊಡ್ಡ ಮೊತ್ತದ ಅಥವಾ ಹೆಚ್ಚಿನ ಜವಾಬ್ದಾರಿಯ ಯಾವುದೇ ಕೆಲಸವನ್ನು ಒಪ್ಪಿಕೊಳ್ಳಬೇಡಿ. ಆರ್ಥಿಕವಾಗಿ ಲೇವಾದೇವಿ ವ್ಯವಹಾರದಲ್ಲಿ ಜಾಗರೂಕತೆ ಇರಲಿ. ವೈಯಕ್ತಿಕ ನಿಲುವುಗಳಿಗೆ ಆದ್ಯತೆ ಕೊಡುವುದು ಲೇಸು.
ಮಕರ
ಸಾಲವನ್ನು ತೀರಿಸಿದ ಸಂತೃಪ್ತಿ ಸಿಗಲಿದೆ. ಮಗಳಿಗೆ ಆಪ್ತರ ಸಹಾಯ ದಿಂದ ಉತ್ತಮ ಉದ್ಯೋಗ ಲಭಿಸಲಿದೆ. ಕೆಲಸವನ್ನು ತ್ವರಿತಗೊಳಿಸುವುದರಿಂದ ಉಂಟಾಗುವ ನಷ್ಟದ ಪ್ರಮಾಣವನ್ನು ಕಡಿಮೆಗೊಳಿಸಿಕೊಳ್ಳಬಹುದು.
ಕುಂಭ
ಇಷ್ಟು ದಿನ ತೋರಿದ ತಾಳ್ಮೆಗೆ ಪ್ರತಿಯಾಗಿ ನಿಮ್ಮ ನಿಜವಾದ ಕಾರ್ಯಗಳಿಗೆ ಕಾಲ ಕೂಡಿಬರಲಿದೆ. ವಿದ್ಯುತ್ ಉಪಕರಣಗಳ ಮಾರಾಟದಿಂದ ಲಾಭ ಪಡೆಯುವಿರಿ. ವಾಗ್ಮಿಗಳಿಗೆ ಶುಭವಾಗುವುದು.
ಮೀನ
ಮನಸ್ಸಿನ ನಾಗಾಲೋಟಕ್ಕೆ ಕಡಿವಾಣ ಹಾಕಿ. ಸಂಯಮದ ನಡವಳಿಕೆ ಅಗತ್ಯ. ಹೊಸ ವ್ಯಕ್ತಿಗಳಿಂದ ಪ್ರಚೋದನೆಗೆ ಒಳಗಾಗದಿರಿ. ಚಾಲಕ ವೃತ್ತಿಯವರು ಉದ್ಯೋಗದಲ್ಲಿ ಜಾಗ್ರತರಾಗಿರಿ.