ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಫೆಬ್ರುವರಿ 23 ಶುಕ್ರವಾರ 2024– ವಿವಾಹ ಪ್ರಸ್ತಾಪವು ಬಲಗೊಳ್ಳಲಿದೆ
Published 22 ಫೆಬ್ರುವರಿ 2024, 19:07 IST
ಪ್ರಜಾವಾಣಿ ವಿಶೇಷ
author
ಮೇಷ
ಪ್ರೀತಿ ಪಾತ್ರರೊಂದಿಗೆ ಹೊಸ ಯೋಜನೆಯನ್ನು ಆರಂಭಿಸುವ ಬಗ್ಗೆ ಚರ್ಚೆ ನಡೆಸುವಿರಿ. ವೈವಾಹಿಕ ಜೀವನದಲ್ಲಿ ಪರಸ್ಪರ ಹೊಂದಾಣಿಕೆಯಿದ್ದು ಸಂತೋಷದಿಂದಿರುವಿರಿ. ಮಾರಾಟದ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳಬಹುದು.
ವೃಷಭ
ಗೋವಿನ ಸೇವೆ ಮಾಡುವುದರಿಂದ ಸಮಸ್ಯೆಗಳಿಗೆ ಪರಿಹಾರ ತಾನಾಗಿಯೇ ಗೋಚರಿಸಲಿದೆ. ಉತ್ಸಾಹ ಹೆಚ್ಚಿಸುವ ಪ್ರೋತ್ಸಾಹಕರ ಸುದ್ದಿ ಕೇಳುತ್ತೀರಿ. ಸಾರಿಗೆ ಉದ್ಯೋಗದವರಿಗೆ ಉತ್ತಮ ದಿನ.
ಮಿಥುನ
ಕುಟುಂಬದಲ್ಲಿ ಆಸ್ತಿಯ ಸಂಬಂಧಿತ ಎದುರಾದ ಸಮಸ್ಯೆಗಳು ನಿರಾತಂಕವಾಗಿ ಮುಗಿಯಲಿದೆ. ಕೆಲಸಗಳನ್ನು ಸಮರ್ಪಕವಾಗಿ ಮಾಡಿದ ತೃಪ್ತಿಕರ ಭಾವ ಉಂಟಾಗಲಿದೆ. ಆಸ್ತಿ ಸಂಬಂಧ ಮಾತುಕತೆ ನಡೆಯುವುದು.
ಕರ್ಕಾಟಕ
ಸವಿತೃ ಸೂರ್ಯ ನಾರಾಯಣನಿಗೆ ನಮಸ್ಕರಿಸುವುದರಿಂದ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದಗಳಿರುವುದಿಲ್ಲ. ಅನವಶ್ಯಕ ಚಿಂತೆ ಮಾಡುವುದರಿಂದ ಆರೋಗ್ಯದಲ್ಲಿ ಏರುಪೇರು ಕಂಡುಬರಲಿದೆ.
ಸಿಂಹ
ಬೋಧನೆಯಲ್ಲಿ ವಿಶೇಷ ಪರಿಣತಿ ಹೊಂದಿರುವ ನಿಮಗೆ ಶಿಷ್ಯರ ಸಂಖ್ಯೆ ವೃದ್ಧಿಯಾಗಲಿದೆ. ಪಿತ್ತ ಉಷ್ಣ ಪ್ರಕೋಪದಿಂದಾಗಿ ಆರೋಗ್ಯ ಅತ್ಯಂತ ಸೂಕ್ಷ್ಮವಾಗುವುದು. ವಿವಾಹ ಪ್ರಸ್ತಾಪವು ಬಲಗೊಳ್ಳಲಿದೆ.
ಕನ್ಯಾ
ಬೇರೆಯವರ ಬಗ್ಗೆ ಅನುಕಂಪ ತೋರುವ ನೀವು ನಿಮ್ಮ ಬಗ್ಗೆ ಗಮನ ಹರಿಸುವುದನ್ನು ಮರೆಯದಿರಿ. ಕಾರ್ಯವನ್ನು ಜಯಿಸುವ ಹಂಬಲದಲ್ಲಿ ಆರೋಗ್ಯ ಕಳೆದುಕೊಳ್ಳಬೇಡಿ. ತಾಂತ್ರಿಕ ವಿದ್ಯಾರ್ಥಿಗಳಿಗೆ ಶುಭವಾಗುವುದು.
ತುಲಾ
ಬಹಳ ದಿನಗಳ ನಂತರ ಸೋದರನ ಆಗಮನದಿಂದ ಮನೆಯಲ್ಲಿ ಹೆಚ್ಚಿನ ಸಂಭ್ರಮವಿರುವುದು. ಕಠಿಣ ಪರಿಶ್ರಮದಿಂದ ಆರ್ಥಿಕವಾಗಿ ಅಲ್ಪ ಚೇತರಿಕೆ ಕಾಣುವುದು. ನಿಮ್ಮ ಗೌರವ , ಪ್ರತಿಷ್ಠೆ ಹೆಚ್ಚಲು ಸಮಯ ಬೇಕಿದೆ.
ವೃಶ್ಚಿಕ
ಇನ್ನೊಬ್ಬರಿಗೆ ಹಣವನ್ನು ಕೊಡುವ ಅಥವಾ ಸ್ವೀಕರಿಸುವ ವಿಚಾರದಲ್ಲಿ ಅತ್ಯಂತ ಎಚ್ಚರಿಕೆಯಲ್ಲಿರಬೇಕಾಗುತ್ತದೆ. ದಿಟ್ಟತನ ಸಾಧಿಸಲೇ ಬೇಕೆಂಬ ಛಲದಿಂದಾಗಿ ಕಾರ್ಯ ಕೈಗೂಡುವುದು.
ಧನು
ನೂತನ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಿಬ್ಬಂದಿವರ್ಗ ಆನಂದದಿಂದ ಸಹಕರಿಸಲಿದ್ದಾರೆ. ಕೆಲಸ ಕಾರ್ಯಗಳಲ್ಲಿ ಅತಿ ಉತ್ಸಾಹವನ್ನು ಕಾಣುವಿರಿ. ರಾಜಕೀಯ ವ್ಯಕ್ತಿಗಳೊಂದಿಗೆ ಒಡನಾಟ ಬೆಳೆಸಿಕೊಳ್ಳುವಿರಿ.
ಮಕರ
ಆತ್ಮ ವಿಶ್ವಾಸದಿಂದ ಕೆಲಸಕಾರ್ಯಗಳಲ್ಲಿ ಯಶಸ್ಸು ಹೊಂದುವಿರಿ. ಹಣ ಸಂಪಾದನೆಗಾಗಿ ಯಾವುದೇ ಅಡ್ಡ ಮಾರ್ಗವನ್ನು ಆರಿಸಿಕೊಳ್ಳುವುದು ಸರಿಯಲ್ಲ. ಬ್ಯಾಂಕ್ ಅಧಿಕಾರಿಗಳಿಗೆ ವರ್ಗಾವಣೆ ಸಂಭವವಿರುವುದು.
ಕುಂಭ
ವೃತ್ತಿ ಪರವಾಗಿ ಸ್ಥಳ ಬದಲಾವಣೆಯಾದರೆ ಕಷ್ಟವಾಗಬಹುದು ಎಂಬ ಶಂಕೆ ಬೇಡ, ಅಲ್ಲಿಯೂ ಬದುಕು ಹಸನಾಗಲಿದೆ. ವಿದ್ಯಾರ್ಥಿಗಳಿಗೆ ತಮ್ಮ ಸಾಧನೆಗೆ ಬೇಕಾದ ವಾತಾವರಣ ಮತ್ತು ಪ್ರೋತ್ಸಾಹ ಲಭಿಸಲಿದೆ.
ಮೀನ
ಮಕ್ಕಳಿಗೆ ಖರ್ಚು ವೆಚ್ಚಗಳ ಬಗ್ಗೆ ನಿಗಾ ವಹಿಸುವಂತೆ ತಿಳಿ ಹೇಳಬೇಕಾದ ಪರಿಸ್ಥಿತಿ ಇರಲಿದೆ. ನಿಮ್ಮೆಲ್ಲಾ ಪ್ರಮುಖ ಗುರಿ ಸಾಧನೆಗಳಿಗೆ ಇಂದಿನಿಂದ ಒಳ್ಳೆಯ ಚಾಲನೆ ಸಿಗುವುದು. ಮನೆಯ ಕೆಲಸಗಳು ಸರಾಗವಾಗಿ ನೆರವೇರುವುದು.