ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಏಪ್ರಿಲ್ 15 ಸೋಮವಾರ 2024– ಈ ರಾಶಿಯವರು ವಾಹನ ಚಾಲನೆ ಜಾಗರೂಕತೆ
Published 14 ಏಪ್ರಿಲ್ 2024, 18:34 IST
ಪ್ರಜಾವಾಣಿ ವಿಶೇಷ
author
ಮೇಷ
ಟೆಕ್ಸ್ಟ್‌ ಟೈಲ್‌ ಉದ್ಯಮದವರು ರಫ್ತು ವ್ಯಾಪಾರಗಳಿಂದ ಲಾಭವನ್ನು ಹೊಂದುವರು. ಗುರಿ ಸಾಧಿಸಲು ಹೊಸ ಬದಲಾವಣೆಗಳು ಅನಿವಾರ್ಯ ಎನಿಸಲಿದೆ. ತಂದೆಯಾಗುವ ಸುದ್ದಿ ಕೇಳಿ ಸಂತೋಷವಾಗುವುದು.
ವೃಷಭ
ನಿರುದ್ಯೋಗಿ ಯುವಕರು ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗಕ್ಕೆ ಪ್ರಯತ್ನ ಪಡಬಹುದು. ಧನಾಗಮನ ಹೆಚ್ಚಿದ್ದರೂ ಸಂಪಾದನೆಯ ಬಹುಪಾಲು ವೆಚ್ಚವಾಗಲಿದೆ. ಮಕ್ಕಳ ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ.
ಮಿಥುನ
ವ್ಯವಹಾರದಲ್ಲಿ ಕೆಲವೊಂದು ಸನ್ನಿವೇಶಗಳು ಪರವಾಗಿ ಇರುವಂತೆ ತೋರುವುದರಿಂದ ನಿರಾಳವಾಗಿ ಮುಂದುವರಿಯಿರಿ. ಸಂಜೆಯ ಸಮಯದಲ್ಲಿ ವಾಹನ ಚಾಲನೆಯಲ್ಲಿ ಜಾಗರೂಕತೆ ಮಾಡಿ.
ಕರ್ಕಾಟಕ
ಬೆಳವಣಿಗೆಯ ಹಾದಿಯಲ್ಲಿ ದಿಕ್ಕು ತಪ್ಪಿಸುವವರೇ ಹೆಚ್ಚಿರುವುದರಿಂದ ನಿಮ್ಮತನವನ್ನು ಪ್ರದರ್ಶಿಸುವುದು ಸ್ವಲ್ಪ ಕಷ್ಟವಾದೀತು. ದುರ್ಜನರಿಂದ ದೂರವಿದ್ದು ,ಸಜ್ಜನರಲ್ಲಿ ಸ್ನೇಹ ಮತ್ತು ವ್ಯವಹಾರ ಮಾಡುವುದು ಉತ್ತಮ.
ಸಿಂಹ
ಉನ್ನತ ಅಧಿಕಾರಿಗಳ ಜತೆಗಿನ ಸಂಬಂಧವನ್ನು ಉತ್ತಮವಾಗಿ ಇಟ್ಟುಕೊಳ್ಳುವುದರಿಂದ ಲಾಭವಾಗುತ್ತದೆ. ಕರ್ತವ್ಯ ಕೊರತೆಯಿಂದಾಗಿ ಜೀವನದಲ್ಲಿ ಉಲ್ಲಾಸವನ್ನು ಕಳೆದುಕೊಳ್ಳುವ ಸಮಯ ಎದುರಾಗಲಿದೆ.
ಕನ್ಯಾ
ಬುದ್ಧಿವಂತಿಕೆಯ ತೀರ್ಮಾನಗಳು ನಿಮ್ಮವರಲ್ಲಿ ನಿಮ್ಮನ್ನು ತೂಕದ ವ್ಯಕ್ತಿಯನ್ನಾಗಿ ಮಾಡುತ್ತದೆ. ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಲು ಈ ದಿನ ಸೂಕ್ತ. ಸಂಗಾತಿಯ ಮಾತಿಗೆ ಬೆಲೆ ಕೊಡಿ.
ತುಲಾ
ಬಹುಕಾಲಗಳಿಂದ ಸಾಲ ತೀರಿಸುವಿಕೆಯಂಥ ಯೋಜನೆ ಇದ್ದರೆ ಈಡೇರಲಿದೆ. ಧೈರ್ಯದಿಂದ ಮುನ್ನುಗ್ಗಿ ಕೆಲಸ ಮಾಡುವವರಿಗೆ ಕನಸುಗಳು ನನಸಾಗಲಿದೆ. ಏಳಿಗೆಗೆ ನೆರವಾಗುವವರ ಸಹಾಯ ಸಿಗುವುದು.
ವೃಶ್ಚಿಕ
ವಿದ್ಯುತ್ ಸಂಬಂಧಿ ವಸ್ತುಗಳ ಬಳಕೆಯನ್ನು ಮಾಡುವಾಗ ಹೆಚ್ಚಿನ ಮುಂಜಾಗ್ರತಾ ಕ್ರಮ ವಹಿಸುವುದು ಸೂಕ್ತ. ಗೃಹಿಣಿಯರು ಉತ್ತಮವಾದ ಹೊಗಳಿಕೆಯ ಮಾತುಗಳನ್ನು ಎದುರು ನೋಡಬಹುದು.
ಧನು
ಹೆಚ್ಚಿನ ಆತ್ಮಸ್ಥೈರ್ಯದಿಂದ ಯೋಜಿಸಿದ ಎಲ್ಲಾ ಕೆಲಸದಲ್ಲಿಯೂ ಜಯ ಕಾಣುವಿರಿ. ವಾಯುಸಂಬಂಧವಾಗಿ ಆರೋಗ್ಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಷೇರು ಮಾರಾಟಗಳಿಂದ ಲಾಭ ಹೊಂದುವಿರಿ.
ಮಕರ
ಸುತ್ತಣ ಪರಿಸರದಲ್ಲಿರುವ ಬುದ್ಧಿವಂತ ವ್ಯಕ್ತಿಗಳಿಂದ ಹೆಚ್ಚಿನ ಲಾಭ ಉಂಟಾಗುವುದು. ನಿಯಮಿತ ಆಹಾರದಿಂದ ದೇಹದಲ್ಲಿ ವಾತದ ಬಾಧೆಯು ಕಡಿಮೆಯಾಗಲಿದೆ. ಸಕ್ರಿಯವಾಗಿ ಭಾಗವಹಿಸಿ.
ಕುಂಭ
ಚಲನಚಿತ್ರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಕೌಶಲ ವೃದ್ಧಿಸಿಕೊಳ್ಳಲು ಹೊಸ ಅವಕಾಶಗಳು ದೊರೆಯಲಿವೆ. ವೈದ್ಯ ವೃತ್ತಿಯವರಿಗೆ ವಿಶೇಷ ಅನುಭವ ಸಿಗಲಿದೆ. ವೈದ್ಯರು ವೃತ್ತಿಯಲ್ಲಿ ಯಶಸ್ಸನ್ನು ಸಾಧಿಸಬಹುದು.
ಮೀನ
ಉನ್ನತ ಅಧಿಕಾರಿಗಳ ಮೇಲೆ ಇದ್ದ ತಪ್ಪು ತಿಳಿವಳಿಕೆಗಳು ದೂರಾಗಲಿವೆ. ಸತತ ಪ್ರಯತ್ನದಿಂದ ಸದ್ಯದಲ್ಲೇ ಕೆಲಸ ಕಾರ್ಯವನ್ನು ಆರಂಭಿಸುವಿರಿ. ಹಣದ ಹರಿವು ಅನುಭವಕ್ಕೆ ಬರಲಿದೆ.