ಆತಿಥೇಯರಿಗೆ ಆರಂಭದಲ್ಲಿಯೇ ಪೆಟ್ಟುಕೊಟ್ಟ ಕ್ರಾಂತಿ ಗೌಡ್ | ಆಫ್ಸ್ಪಿನ್ನರ್ ಸ್ನೇಹ ರಾಣಾಗೆ ಎರಡು ವಿಕೆಟ್ | 6 ವಿಕೆಟ್ಗಳಿಗೆ 258 ರನ್ ಗಳಿಸಿದ ಇಂಗ್ಲೆಂಡ್

ಸೌತಾಂಪ್ಟನ್: ದೀಪ್ತಿ ಶರ್ಮಾ ಮತ್ತು ಜೆಮಿಮಾ ರಾಡ್ರಿಗಸ್ ಅವರ ಅಮೋಘ ಆಟದ ಬಲದಿಂದ ಭಾರತ ವನಿತೆಯರ ತಂಡವು ಬುಧವಾರ ಆರಂಭವಾದ ಇಂಗ್ಲೆಂಡ್ ಎದುರಿನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಶುಭಾರಂಭ ಮಾಡಿತು.

ದ ರೋಸ್ ಬೌಲ್ ಕ್ರೀಡಾಂಗಣ ದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 4 ವಿಕೆಟ್ಗಳಿಂದ ಜಯಿಸಿತು. ಮೂರು ಪಂದ್ಯಗಳ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ಟಾಸ್ ಗೆದ್ದ ಇಂಗ್ಲೆಂಡ್ ತಂಡವು 50 ಓವರ್ಗಳಲ್ಲಿ 6 ವಿಕೆಟ್ಗಳಿಗೆ 258 ರನ್ ಗಳಿಸಿತು. ಸೋಫಿಯಾ (83; 92ಎ, 4X9) ಮತ್ತು ಅಲೈಸ್ ಡೇವಿಡ್ಸನ್ ರಿಚರ್ಡ್ಸ್ (53; 73ಎ, 4X2) ಅವರ ಶತಕದ ಜೊತೆಯಾಟದಿಂದಾಗಿ (108 ರನ್) ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು. ಅದಕ್ಕುತ್ತರವಾಗಿ ಭಾರತ ತಂಡವು 48.2 ಓವರ್ಗಳಲ್ಲಿ 6 ವಿಕೆಟ್ಗಳಿಗೆ 262 ರನ್ ಗಳಿಸಿತು.

ಭಾರತ ತಂಡವು 124 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡಿತು. ಇದರಿಂದಾಗಿ ಜಯ ಕೈತಪ್ಪುವ ಆತಂಕ ಮೂಡಿತು. ಈ ಹಂತದಲ್ಲಿ ಜಿಮಿಮಾ (48; 54 ಎ) ಮತ್ತು ಅಜೇಯ ಅರ್ಧಶತಕ ಗಳಿಸಿದ (ಔಟಾಗದೇ 62) ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಡಂಕ್ಲಿ–ಅಲೈಸ್ ಜೊತೆಯಾಟ:

ಇಂಗ್ಲೆಂಡ್ ತಂಡವು 97 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡಿತ್ತು. ನಾಯಕಿ ನ್ಯಾಟ್ ಶಿವರ್ ಬ್ರಂಟ್ ಕೂಡ ಪೆವಿಲಿಯನ್ಗೆ ಮರಳಿದ್ದರು. ಈ ಹಂತದಲ್ಲಿ ಜೊತೆಗೂಡಿದ ಸೋಫಿಯಾ ಮತ್ತು ಅಲೈಸ್ ತಂಡಕ್ಕೆ ಆಸರೆಯಾದರು. 30ನೇ ಓವರ್ನಲ್ಲಿ ಮಧ್ಯಮವೇಗಿ ಕ್ರಾಂತಿ ಗೌಡ ಅವರು ತಮ್ಮದೇ ಬೌಲಿಂಗ್ನಲ್ಲಿ ಡೇವಿಡ್ಸನ್ ಕ್ಯಾಚ್ ಕೈಚೆಲ್ಲಿದರು. ನಂತರದ ಓವರ್ನಲ್ಲಿ ಸೋಫಿ ಅವರಿಗೆ ಜೆಮಿಮಾ ಜೀವದಾನ ಕೊಟ್ಟರು. ಇದರಿಂದಾಗಿ ಇಂಗ್ಲೆಂಡ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವ ಕೌರ್ ಪಡೆಯ ಗುರಿ ಈಡೇರಲಿಲ್ಲ.

ಆರಂಭಿಕ ಪೆಟ್ಟು:

ಭಾರತ ತಂಡದ ಭರವಸೆಯ ಮಧ್ಯಮವೇಗಿ ಕ್ರಾಂತಿ ಗೌಡ್ (55ಕ್ಕೆ2) ಅವರು ಆತಿಥೇಯರಿಗೆ ಆರಂಭದಲ್ಲಿಯೇ ಪೆಟ್ಟುಕೊಟ್ಟರು. ತಮ್ಮ ಮೊದಲ ಓವರ್ನಲ್ಲಿ ಎಮಿ ಜೋನ್ಸ್ ಅವರನ್ನು ಕ್ಲೀನ್ಬೌಲ್ಡ್ ಮಾಡಿದರು. ಎರಡನೇ ಓವರ್ನಲ್ಲಿ ಟಾಮಿ ಬೆಮೌಂಟ್ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು.

ಇದರಿಂದಾಗಿ ಇಂಗ್ಲೆಂಡ್ ತಂಡವು ಕೇವಲ 20 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಎಮಾ ಲ್ಯಾಂಬ್ (39; 50ಎ, 4X4) ಮತ್ತು ನಾಯಕಿ ನ್ಯಾಟ್ ಶಿವರ್ ಬ್ರಂಟ್ (41; 52ಎ, 4X5) ಮೂರನೇ ವಿಕೆಟ್ ಜೊತೆಯಾಟದಲ್ಲಿ 71 ರನ್ ಸೇರಿಸಿದರು. ಈ ಪಾಲುದಾರಿಕೆ ಆಟವು ಇನ್ನಷ್ಟು ದೀರ್ಘವಾಗಿ ಬೆಳೆಯದಂತೆ ಆಫ್ಸ್ಪಿನ್ನರ್ ಸ್ನೇಹ ರಾಣಾ ನೋಡಿಕೊಂಡರು. ಅವರು ಮೊದಲಿಗೆ ಬ್ರಂಟ್ ವಿಕೆಟ್ ಪಡೆದರು. ಸ್ನೇಹ ಬೌಲಿಂಗ್ನಲ್ಲಿ ಲ್ಯಾಂಬ್ ಕ್ಯಾಚ್ ಪಡೆದ ನಾಯಕಿ ಹರ್ಮನ್ಪ್ರೀತ್ ಕೌರ್
ಸಂಭ್ರಮಿಸಿದರು.

ಸ್ನೇಹ ಹಾಕಿದ ಇನ್ನೊಂದು ಓವರ್ನಲ್ಲಿ ಜೆಮಿಮಾ ಪಡೆದ ಆಕರ್ಷಕ ಕ್ಯಾಚ್ಗೆ ಬ್ರಂಟ್ ಆಟ ಮುಗಿಯಿತು. ಆಗಿನ್ನೂ ತಂಡದ ಮೊತ್ತ 100ರ ಗಡಿ ದಾಟಿರಲಿಲ್ಲ. ಆದರೆ ಭಾರತ ತಂಡದವರ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ. ಸೋಫಿಯಾ ಮತ್ತು ಡೇವಿಡಸನ್ ಜೋಡಿ ಮಿಂಚಿತು.

ಸಂಕ್ಷಿಪ್ತ ಸ್ಕೋರು:

ಇಂಗ್ಲೆಂಡ್: 50 ಓವರ್ಗಳಲ್ಲಿ 6ಕ್ಕೆ258 (ಎಮಾ ಲ್ಯಾಂಬ್ 39, ನ್ಯಾಟ್ ಶಿವರ್ ಬ್ರಂಟ್ 41, ಸೋಫಿಯಾ ಡಂಕ್ಲಿ 83, ಡೇವಿಡಸನ್ ರಿಚರ್ಡ್ಸ್ 53, ಸೋಫಿ ಎಕ್ಲೆಸ್ಟೊನ್ ಔಟಾಗದೇ 23, ಕ್ರಾಂತಿ ಗೌಡ್ 55ಕ್ಕೆ2, ಸ್ನೇಹ ರಾಣಾ 31ಕ್ಕೆ2) ಭಾರತ: 48.2 ಓವರ್ಗಳಲ್ಲಿ 6 ವಿಕೆಟ್ಗಳಿಗೆ 262 (ಪ್ರತೀಕಾ ರಾವಲ್ 36, ಸ್ಮೃತಿ ಮಂದಾನ 28, ಹರ್ಲೀನ್ ಡಿಯೊಲ್ 27, ಜಿಮಿಮಾ ರಾಡ್ರಿಗಸ್ 48, ದೀಪ್ತಿ ಶರ್ಮಾ ಔಟಾಗದೇ 62, ಅಮನ್ಜೋಜ್ ಕೌರ್ ಔಟಾಗದೇ 20, ಶಾರ್ಲೆಟ್ ಡೀನ್ 52ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 4 ವಿಕೆಟ್ಗಳ ಜಯ. ಸರಣಿಯಲ್ಲಿ 1–0 ಮುನ್ನಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.