ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಏಪ್ರಿಲ್ 21 ಭಾನುವಾರ 2024–ಈ ರಾಶಿಯವರಿಗೆ ಉತ್ತಮ ಅವಕಾಶಗಳು ಬರಲಿವೆ
Published 20 ಏಪ್ರಿಲ್ 2024, 20:21 IST
ಪ್ರಜಾವಾಣಿ ವಿಶೇಷ
author
ಮೇಷ
ನೀವು ತಲುಪಿದ ಸ್ಥಾನದಲ್ಲಿ ನ್ಯಾಯಯುತವಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುವ ಯೊಚನೆ ಮಾಡಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಯೋಗಪಟುಗಳಿಗೆ ಉತ್ತಮ ಅವಕಾಶಗಳು ಬರಲಿವೆ.
ವೃಷಭ
ನಿನ್ನೆ ಮೊನ್ನೆಯಷ್ಟೆ ಇತ್ಯರ್ಥವಾಯಿತು ಎಂದುಕೊಂಡ ಕುಟುಂಬ ಕಲಹವು ಮತ್ತೆ ಹೊಗೆಯಾಡುವ ಸಾಧ್ಯತೆ ಇದೆ. ಸಾಧು ಸಂತರ ಮಾತುಗಳು ನಿಮ್ಮನ್ನು ಇಂದು ಆಕರ್ಷಿಸಲಿವೆ. ಮಕ್ಕಳ ಯೋಗಕ್ಷೇಮವನ್ನು ಮರೆಯಬೇಡಿ.
ಮಿಥುನ
ಉದ್ಯೋಗ ಆಕಾಂಕ್ಷಿಗಳು ನಿಮ್ಮದೇ ಇಷ್ಟ ಕ್ಷೇತ್ರದಲ್ಲಿ ಕೆಲಸ ಪಡೆಯುವುದರಿಂದ ಉತ್ತಮ ಹೆಸರು ಪಡೆಯುವಿರಿ. ಆರೋಗ್ಯದ ಏರುಪೇರುಗಳಾಗುವ ಸಾಧ್ಯತೆ ಇದ್ದು, ಎಚ್ಚರ ವಹಿಸಬೇಕು.
ಕರ್ಕಾಟಕ
ನಿಮ್ಮ ಮೃದು ನಡತೆ ಹಾಗೂ ನಿಮ್ಮ ಸುತ್ತಮುತ್ತಲಿನ ವ್ಯಕ್ತಿಗಳ ಜೊತೆ ಅನ್ಯೋನ್ಯವಾದ ನಡತೆಯಿಂದ ಮನ್ನಣೆ ಗಳಿಸುತ್ತೀರಿ. ಸಹೋದರರ ಜೊತೆ ಉತ್ತಮ ಬಾಂಧವ್ಯ ಮತ್ತು ಸ್ನೇಹ ಸಂಬಂಧಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ.
ಸಿಂಹ
ಕೃಷಿಗೆ ಸಂಬಂಧಿಸಿದ ಆರ್ಥಿಕತೆಯಲ್ಲಿ ಪಡೆದ ಸಾಲ ಹಿಂದಿರುಗಿಸುವ ಶಕ್ತಿ ದೊರಕಲಿದೆ. ಅನೇಕ ಕಾಲದಿಂದ ಕಾಡುತ್ತಿರುವ ದೇಹ ಬಾಧೆ ನಿವಾರಿಸಿಕೊಳ್ಳಲು ವೈದ್ಯರನ್ನು ಬದಲಿಸುವುದು ಉತ್ತಮ.
ಕನ್ಯಾ
ಸಂಗಾತಿಯೊಂದಿಗಿನ ಸಂಬಂಧ ಗಟ್ಟಿ ಮಾಡಿಕೊಳ್ಳಲು ನಿಮ್ಮ ಬಿಡುವಿಲ್ಲದ ಸಮಯದಲ್ಲೂ ಸ್ವಲ್ಪ ಸಮಯ ನೀಡುವ ಪ್ರಯತ್ನ ಮಾಡಿ. ಬಂಧುಗಳಿಂದ ಉಡುಗೊರೆಯ ರೂಪದಲ್ಲಿ ದ್ರವ್ಯ ಲಾಭವಾಗಲಿದೆ.
ತುಲಾ
ನಿಮ್ಮ ಇಂದಿನ ದಿನದಲ್ಲಿ ವೃತ್ತಿಯ ವಿಷಯವಾಗಿ ವಿಷೇಶವಾದ ವ್ಯಕ್ತಿಯೊಬ್ಬರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಕಚೇರಿ ಕೆಲಸದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಲಿದೆ.
ವೃಶ್ಚಿಕ
ಉಚ್ಚ ಸ್ಥಾನದಲ್ಲಿರುವಂತಹ ನೀವು ತಪ್ಪುಗಳನ್ನು ಮಾಡಿದ್ದಲ್ಲಿ, ನಿಮ್ಮನ್ನೇ ಅನುಸರಿಸುವ ಸಹೋದ್ಯೋಗಿಗಳಿಗೆ ನೀವು ಏನೂ ಹೇಳಲಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕತ್ತಲೆಯಲ್ಲಿ ಸಂಚರಿಸದಿರಿ.
ಧನು
ಸಮಯದ ಗಡುವಿರುವ ಕೆಲಸಗಳನ್ನು ಕಡೆಯ ತನಕ ಉಳಿಸಿಕೊಳ್ಳುವ ಬದಲು ಈಗಲೇ ಮುಗಿಸಿಕೊಳ್ಳುವುದು ಉತ್ತಮ. ವೃದ್ಧರಾದ ತಂದೆಯ ಆರೋಗ್ಯವು ಕ್ಷೀಣಿಸಬಹುದಾದ್ದರಿಂದ ಎಚ್ಚರ ವಹಿಸಬೇಕು.
ಮಕರ
ಇಂದು ವಿವಿಧ ಕಾರ್ಯಗಳ ಜವಾಬ್ದಾರಿಗಳ ಭಾರ ನಿಮ್ಮ ಮೇಲೆಯೇ ಬೀಳುವುದರಿಂದ ಕೆಲಸದ ಒತ್ತಡ ಹೆಚ್ಚಿರುತ್ತದೆ. ಆಸೆಗಳು ಈಡೇರಿ ಸಂಸಾರದಲ್ಲಿ ನೆಮ್ಮದಿ ಕಾಣುವುದರಿಂದಾಗಿ ಮನಸ್ಸು ಉಲ್ಲಾಸವಾಗಿರುತ್ತದೆ.
ಕುಂಭ
ಲೋಹ ವಸ್ತುಗಳ ವ್ಯಾಪಾರಿಗಳಿಗೆ ಸಂಪಾದನೆ ಹೆಚ್ಚಳವಾಗುವ ಜೊತೆಗೆ ವ್ಯಾವಹಾರಿಕ ಪ್ರಚಾರಗಳು ಸಿಗಲಿದೆ. ಪ್ರಶಾಂತ ವಾತಾವರಣದ ಅಗತ್ಯವು ಇಂದು ನಿಮಗೆ ಇರುವುದರಿಂದ ಉದ್ಯಾನವನಕ್ಕೆ ಭೇಟಿ ನೀಡಿ.
ಮೀನ
ಸಮಾಜದಲ್ಲಿ ಬೆರೆಯುವುದರಿಂದ ಅಥವಾ ಅಕ್ಕ-ಪಕ್ಕದವರ ಜತೆ ಮಾತುಕತೆಯಿಂದ ಉದ್ಯೋಗಕ್ಕೆ ಸಂಬಂಧಿಸಿ ಅನುಕೂಲವಾಗಲಿದೆ. ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವ ಹೊಂದುವ ಅವಕಾಶವಿದೆ.