ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜೂನ್ 24 ಸೋಮವಾರ 2024- ಇಂದು ಮಿತ್ರರಿಂದ ಸಹಾಯ ಸಿಗುವುದು
Published 23 ಜೂನ್ 2024, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಂಗಾತಿಯ ಅಗಲುವಿಕೆಯು ತಾತ್ಕಾಲಿಕವಾದುದು ಎಂಬುದು ಅರಿವಾಗುವುದು. ನಿಮ್ಮ ಒಳ್ಳೆಯ ಕನಸುಗಳಿಗೆ ಜೀವ ಬಂದಂತೆ ಭಾಸವಾಗುತ್ತದೆ. ಸ್ವಗೃಹ ನಿರ್ಮಾಣಕ್ಕೆ ಮಿತ್ರರಿಂದ ಸಹಾಯ ಸಿಗುವುದು.
ವೃಷಭ
ವೃತ್ತಿ ಜೀವನದಲ್ಲಿ ದೊರೆಯಬೇಕಿದ್ದ ಬಡ್ತಿ ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಿಕೆಯಾಗುವುದು. ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಸೂಕ್ತ.
ಮಿಥುನ
ಹೂಡಿಕೆಯಿಂದ ಲಾಭ ಬಂದಿರುವ ಸುದ್ದಿ ತಿಳಿದು ಸಂತೋಷವಾಗುವುದು. ರಾಸಾಯನಿಕ ಔಷಧಿಗಿಂತ ತೈಲ ಲೇಪನದಂತಹ ಚಿಕಿತ್ಸೆ ಮಾಡಿಕೊಳ್ಳುವುದರಿಂದ ಕಾಲು ನೋವು ನಿವಾರಣೆಯಾಗುವುದು.
ಕರ್ಕಾಟಕ
ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಮಧುರ ಘಟನೆ ಮನೆಯಲ್ಲಿ ನಡೆಯಲಿದೆ. ತಾಳ್ಮೆಯಿಂದ ವರ್ತಿಸಿದರೆ ಉತ್ತಮ ಫಲಿತಾಂಶ ಸಿಗಲಿದೆ. ಮನೆಯವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಿರಿ.
ಸಿಂಹ
ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲದೆ ಸೊರಗಿರುವ ನಿಮಗೆ ಅಪರಿಚಿತ ವ್ಯಕ್ತಿಯಿಂದ ಮಾರ್ಗದರ್ಶನ ಸಿಗಲಿದೆ. ಲೇವಾದೇವಿ ವ್ಯವಹಾರ ನಡೆಸುವವರು ಈ ದಿನ ವಿಶ್ರಾಂತಿ ಪಡೆಯುವುದು ಉತ್ತಮ.
ಕನ್ಯಾ
ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದರೆ ಎಲ್ಲವೂ ಸರಾಗವಾಗಿ ಪರಿಹಾರವಾಗುವುದು. ಸಂಪರ್ಕ ಸಂಬಂಧಿಸುವ ಸಾಧನಗಳ ನಿರ್ವಹಣೆಯ ಕೊರತೆಯಿಂದಾಗಿ ಅವುಗಳು ಕೈಕೊಡುವ ಸಾಧ್ಯತೆ ಇದೆ.
ತುಲಾ
ಶುದ್ಧ ಮನಸ್ಸಿನಿಂದ ಮಾಡಿದ ಧರ್ಮ ಕಾರ್ಯದಿಂದ ಶ್ರೇಯೋಭಿವೃದ್ಧಿಯಾಗುವುದು. ತಂದೆಯ ನಿರ್ಧಾರಗಳನ್ನು ಗೌರವಿಸಿ. ವೈವಾಹಿಕ ಸಂಬಂಧಗಳು ಗಟ್ಟಿಗೊಳ್ಳಲಿವೆ.
ವೃಶ್ಚಿಕ
ಜೀವನ ಶೈಲಿಯಲ್ಲಿ ಬದಲಾವಣೆ ಬೇಡವೆಂದು ನಿರ್ಧರಿಸುವುದು ಉತ್ತಮ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಲಭಿಸಲಿವೆ. ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಧಿಸುವಿರಿ.
ಧನು
ಆರ್ಥಿಕ ಪರಿಸ್ಥಿತಿಯು ನಿಮ್ಮ ಆಲೋಚನೆಯನ್ನೂ ಮೀರಿ ನಿಯಂತ್ರಣ ತಪ್ಪುವುದು. ಮಾತೃ ವರ್ಗದವರ ಸಹಾಯದಿಂದ ಹಣಕಾಸಿನ ಭಯ ನಿವಾರಣೆ ಆಗಲಿದೆ. ಬೆಂಕಿಯಿಂದ ಅಪಾಯ ಉಂಟಾಗಬಹುದು.
ಮಕರ
ಮನೆಯಲ್ಲಿ ವಿವಾಹಕ್ಕೆ ಸಂಬಂಧಿಸಿದ ವಿಚಾರಗಳು ಚರ್ಚೆಗೆ ಬರಲಿವೆ. ಹೂಡಿಕೆ ವಿಚಾರವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರು ಸಲಹೆ ನೀಡುವರು. ಮಕ್ಕಳ ಆರೋಗ್ಯದ ಮೇಲೆ ಗಮನವಿಡಿ.
ಕುಂಭ
ಪ್ರಯತ್ನದ ಜೊತೆಗೆ ದೇವರ ಕೃಪೆಗೆ ಪಾತ್ರರಾದರೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಲಿದೆ. ಮದುವೆಯ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗದೆ ಗೊಂದಲಕ್ಕೆ ಒಳಗಾಗುವಿರಿ.
ಮೀನ
ಪ್ರಾಣಿ ದಯಾ ಸಂಘದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೃದಯ ವಿದ್ರಾವಕ ಘಟನೆಯು ಕಣ್ಣೀರು ತರಿಸಲಿದೆ. ಮಕ್ಕಳ ಆರೋಗ್ಯದ ವಿಚಾರವಾಗಿ ಖರ್ಚು–ವೆಚ್ಚ ಹೆಚ್ಚಾಗಲಿದೆ.