ಗುರುವಾರ, 17 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜೂನ್‌ 22 ಭಾನುವಾರ 2025– ಇವರಿಗೆ ಬಂಗಾರ ಖರೀದಿಸುವ ಮನಸ್ಸಾಗುವುದು
Published 21 ಜೂನ್ 2025, 18:46 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆ ಕೇಳಿ ಆನಂದಆಗಲಿದೆ. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಬರಲಿದೆ. ನೃತ್ಯಾಭ್ಯಾಸ ಮುಂದುವರೆಸುವಂತೆ ಅಧ್ಯಾಪಕರಿಂದ ಒತ್ತಾಯ ಹೆಚ್ಚುವುದು.
ವೃಷಭ
ನಿಮ್ಮ ಕನಸಿನ ಉದ್ಯೋಗವನ್ನು ಪಡೆಯಲು ಉನ್ನತ ಓದಿನೆಡೆಗೆ ಹೆಚ್ಚು ಗಮನ ನೀಡಬೇಕಾಗುವುದು. ಚಿತ್ರಕಲೆಯಲ್ಲಿನ ನಿಮ್ಮ ಆಸಕ್ತಿಯಿಂದಾಗಿ ಹೆಚ್ಚಿನ ಕಲಿಕೆಗೆ ವಿಶೇಷ ತರಗತಿಗೆ ಹೋಗಲು ತಂದೆಯಿಂದ ಒಪ್ಪಿಗೆ ದೊರಕಲಿದೆ.
ಮಿಥುನ
ಒಣಪ್ರತಿಷ್ಠೆಯಿಂದಾಗಿ ಸಂಬಂಧಗಳು ನುಚ್ಚುನೂರಾಗುವ ಪರಿಸ್ಥಿತಿ ತಂದುಕೊಳ್ಳಬೇಡಿ. ವೈದ್ಯರ ತಪಾಸಣೆಯಿಂದ ಬಂದ ಫಲಿತಾಂಶ ಆತಂಕವನ್ನು ಸೃಷ್ಟಿ ಮಾಡಲಿದೆ. ಇನ್ನೊಬ್ಬರ ಅಭಿಪ್ರಾಯ ಪಡೆದು ಚಿಕಿತ್ಸೆ ತೆಗೆದುಕೊಳ್ಳಿ.
ಕರ್ಕಾಟಕ
ಅವಶ್ಯಕ ವಸ್ತುಗಳ ಗಳಿಕೆಯಿಂದ ಸಂತೋಷ ವೃದ್ಧಿಯಾಗುವುದು. ಮಕ್ಕಳ ವಿಚಾರದಲ್ಲಿ ಕಾಳಜಿ ತೋರುವ ಅನಿವಾರ್ಯ ಹೆಚ್ಚಲಿದೆ. ಶ್ರೀ ಶಾರದೆಯನ್ನು ಸ್ತುತಿಸುವುದರಿಂದ ಮೇಧಾಶಕ್ತಿ ಅಭಿವೃದ್ಧಿಯಾಗುವುದು.
ಸಿಂಹ
ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆ ಇರುವಂತೆ ತೋರಿ ಮನಸ್ಸಿಗೆ ನಿರಾಳವಾಗುವುದು. ಯಾವ ಯಾಗ ಮಾಡಿದರೂ ಗುರುವಿನ ಶಾಪ ಪರಿಹಾರಆಗುವುದಿಲ್ಲ. ಆದ್ದರಿಂದ ಗುರುಗಳಿಗೆ ನೋವಾಗುವ ಕೆಲಸವನ್ನು ಮಾಡದಿರಿ.
ಕನ್ಯಾ
ಖರ್ಚಿನ ವಿಚಾರದಲ್ಲಿ ಮಿತವ್ಯಯಿಗಳಾಗುವ ಪ್ರಯತ್ನದಿಂದಾಗಿ ಶ್ರೀಮಂತರಾಗಬಹುದು. ನೀವು ಮಕ್ಕಳ ಶ್ರೇಯಸ್ಸಿಗಾಗಿ ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದ ಇಂದು ಉತ್ತಮ ಫಲ ನಿರೀಕ್ಷಿಸಬಹುದು.
ತುಲಾ
ಕೆಲಸದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಿರಿ. ಏನೇ ಆದರೂ ಅದನ್ನು ಮುಕ್ತವಾಗಿ ಸ್ವೀಕರಿಸುವ ಭಾವನೆ ಇರಲಿ, ನಿಮ್ಮ ಮನೋಭಿಲಾಷೆ ಈಡೇರುವುದು. ಆಟಿಕೆಗಳ ಮಾರಾಟದವರಿಗೆ ಉತ್ತಮ ಲಾಭವಿರುವುದು.
ವೃಶ್ಚಿಕ
ದಿನದಿಂದ ದಿನಕ್ಕೆ ಹೊಸ ಹೊಸ ಪ್ರಯತ್ನವಿರಲಿ. ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಉತ್ಸಾಹದಿಂದ ಭಾಗವಹಿಸುವಿರಿ. ಸಂಗೀತ ಕಲಾವಿದರಿಗೆ ಉತ್ತಮ ವೇದಿಕೆ ಸಿಗುವ ಮುನ್ಸೂಚನೆ ಸಿಗುತ್ತದೆ.
ಧನು
ಎಲ್ಲ ಕೆಲಸಗಳಲ್ಲೂ ಧೈರ್ಯದಿಂದ ಮುನ್ನಡೆಯನ್ನು ಸಾಧಿಸುವಿರಿ. ವೃತ್ತಿಯಲ್ಲಿ ನಿಮ್ಮ ಅನುಭವ ಹಾಗೂ ಪರಿಶ್ರಮ ಸೂಕ್ತ ಸಮಯದಲ್ಲಿ ಬೆಳಕಿಗೆ ಬಂದು, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಸಿಗುವುದು.
ಮಕರ
ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರದಲ್ಲಿರುವವರು ಇಂದು ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಾಗಬಹುದು. ಕೊಡುಕೊಳ್ಳುವ ವ್ಯವಹಾರಗಳಲ್ಲಿ ಲಾಭ ಹೆಚ್ಚಿ ,ಕೆಲಸಗಳನ್ನು ವೃದ್ಧಿಸಿಕೊಳ್ಳುವಿರಿ.
ಕುಂಭ
ತಂದೆಯ ಮನಸ್ಸಿಗೆ ನೋವಾಗುವ ಸಂಗತಿಯು ಇಂದು ನಿಮ್ಮಿಂದ ನಡೆಯಲಿದೆ. ಕಬ್ಬಿಣ ಅಥವಾ ಗ್ಲಾಸ್‌ಗಳಿಂದ ಗಾಯಗಳಾಗುವ ಲಕ್ಷಣಗಳಿವೆ. ಅಂತಹ ಕೆಲಸಗಳಲ್ಲಿ ಹೆಚ್ಚು ಗಮನವಿರಲಿ. ಹಳದಿ ಬಣ್ಣವು ಅದೃಷ್ಟ ತರಲಿದೆ.
ಮೀನ
ಸ್ವ ಉದ್ಯೋಗಿಗಳಿಗೆ ವರಮಾನದಲ್ಲಿ ಉತ್ತಮ ಸುಧಾರಣೆಯು ಕಂಡು ಬರುವುದು. ಕೂಡಿಟ್ಟ ಹಣದಿಂದ ಬಟ್ಟೆ ಅಥವಾ ಬಂಗಾರ ಖರೀದಿಸುವ ಮನಸ್ಸಾಗುವುದು, ಅಂತೆಯೇ ಮಾಡುವುದರಿಂದ ಸಂತಸವಾಗಲಿದೆ.
ADVERTISEMENT
ADVERTISEMENT