ಮಂಗಳವಾರ, 22 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಜನವರಿ 8 ಸೋಮವಾರ 2024- ಈ ರಾಶಿಯವರಿಗೆ ಇಂದು ಆತಂಕ ದೂರವಾಗುವುದು
Published 7 ಜನವರಿ 2024, 18:39 IST
ಪ್ರಜಾವಾಣಿ ವಿಶೇಷ
author
ಮೇಷ
ರಿಯಲ್ ಎಸ್ಟೇಟ್ ವ್ಯವಹಾರಸ್ಥರಿಗೆ ಕಾರ್ಯ ಸಾಧನೆಗೆ ಅನುಕೂಲಕರ ಹಾಗೂ ಲಾಭದಾಯಕವಾದ ವಾತಾವರಣ ಸಿಗುವುದು. ಜಾಹೀರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಫಲ ಕೊಡಲಿದೆ.
ವೃಷಭ
ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಅನುಕೂಲ ಗಳಾಗುವ ಸಾಧ್ಯತೆ ಇದೆ. ಮಾನಸಿಕ ಕೊರಗು ನಿಮ್ಮ ಸಂತೋಷಕ್ಕೆ ಭಂಗ ಉಂಟುಮಾಡುವುದು. ಸಂಬಂಧಿಕರಲ್ಲಿ ಹಣದ ವ್ಯವಹಾರ ನಡೆಸಬೇಡಿ.
ಮಿಥುನ
ದಿನದ ಮೊದಲಾರ್ಧ ನಿಮಗೆ ಸ್ವಲ್ಪಮಟ್ಟಿಗಿನ ಬೇಸರವನ್ನು ತರಬಹುದು. ಆದರೆ ದಿನದ ಕೊನೆಯನ್ನು ಸಂತೋಷದಲ್ಲಿ ಕಳೆಯುತ್ತೀರಿ. ನಿಮ್ಮ ಸಂಪಾದನೆಯನ್ನು ನೋಡಿದ ಕೆಲವರು ಮತ್ಸರಪಡುವಂತಾಗುತ್ತದೆ.
ಕರ್ಕಾಟಕ
ಸಾಮಾಜಿಕ ವಲಯದಲ್ಲಿ ಬರುವ ಅವಕಾಶಗಳನ್ನು ನಿಮ್ಮತ್ತ ತಿರುಗಿಸಿಕೊಂಡು ಸದುಪಯೋಗಪಡಿಸಿಕೊಳ್ಳುವುದು ನಿಮ್ಮ ಕೈಗೆ ಬಿಟ್ಟ ವಿಷಯ ವಾಗಿರುತ್ತದೆ. ತಲೆ ನೋವಿನಂತಹ ಸಮಸ್ಯೆ ಎದುರಾಗಬಹುದು.
ಸಿಂಹ
ಪ್ರತಿಷ್ಟಿತ ಮತ್ತು ಪ್ರಭಾವಿ ವ್ಯಕ್ತಿಗಳ ಪರಿಚಯವು ನಿಮ್ಮ ಭವಿಷ್ಯದ ಆಲೋಚನೆಗಳನ್ನು ಉತ್ತಮಗೊಳಿಸಲು ಕಾರಣವಾಗುವುದು. ನಿಮ್ಮ ಕೆಲಸ ಕಾರ್ಯಗಳು ಯಾವುದೇ ಆತಂಕವಿಲ್ಲದೆ ನಡೆಯುವುದು.
ಕನ್ಯಾ
ಸಾಂಸ್ಕೃತಿಕವಾಗಿ ಅದರಲ್ಲೂ ಮುಖ್ಯವಾಗಿ ನಟನಾ ವೃತ್ತಿಯವರಿಗೆ ಖ್ಯಾತಿ ಮತ್ತು ಸಂಪತ್ತು ಹರಿದು ಬರಲಿದೆ. ಮೋಜು ಮಸ್ತಿಯ ಆಲೋಚನೆಯಿಂದ ದೂರವಿರುವ ಪ್ರಯತ್ನ ಒಳ್ಳೆಯದು. ಅಧ್ಯಾಪಕರಿಗೆ ಹೆಚ್ಚಿನ ಕೆಲಸಗಳು ಇರಲಿವೆ.
ತುಲಾ
ನೀವೇ ಸ್ವಂತವಾಗಿ ಶುರು ಮಾಡಿದಂತಹ ವ್ಯವಹಾರದಲ್ಲಿ ಲಾಭಗಳಿಸುವ ವಿಚಾರದಲ್ಲಿ ಸ್ವಲ್ಪ ದಿನಗಳ ಮಟ್ಟಿಗೆ ಕಾಯಬೇಕಾಗುವುದು. ಉದ್ಯೋಗದಲ್ಲಿ ಉತ್ತಮ ಹೆಸರು ಗಳಿಸುವ ಪ್ರಯತ್ನಕ್ಕೆ ಶುಭವಾಗುತ್ತದೆ.
ವೃಶ್ಚಿಕ
ಸದ್ಯದ ಪರಿಸ್ಥಿತಿಯಲ್ಲಿ ಇರುವ ಕೆಲಸ ಬಿಡುವ ಯೋಚನೆ ಸರಿಯಲ್ಲ. ವೈಯಕ್ತಿಕವಾದ ಕಷ್ಟಗಳನ್ನು ಯಾರಲ್ಲಿಯೂ ಹೇಳಿಕೊಳ್ಳಬೇಡಿ. ನಿಮ್ಮ ಈ ದಿನದ ಸಾಧನೆಗೆ ತಾಯಿಯ ಬೆಂಬಲ, ಪ್ರೋತ್ಸಾಹ ಸಿಗುವುದು.
ಧನು
ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ನಿಗಾ ಕೊಡುವಂತೆ ಅಧಿಕಾರಿಗಳಿಂದ ಸಂದೇಶ ಬರಲಿದೆ. ಗೋವಿನ ಉತ್ಪನ್ನಗಳ ಮಾರಾಟಗಾರರಿಗೆ ಹೆಚ್ಚಿನ ಲಾಭ ಬರುವುದು. ಮಗನಿಗಾಗಿ ವೈದ್ಯಕೀಯ ಖರ್ಚು ಸಂಭವಿಸಬಹುದು.
ಮಕರ
ಆಪ್ತ ಸ್ನೇಹಿತರು ಮತ್ತು ನೆರೆಯವರೊಂದಿಗೆ ಬಾಂಧವ್ಯ ಉತ್ತಮಗೊಳ್ಳುವುದು. ಕೈ ಬಿಟ್ಟಿರುವ ಯೋಜನೆಗಳನ್ನು ಮತ್ತೆ ಮುಂದುವರೆಸಲು ಒತ್ತಡ ಬರಬಹುದು. ಶ್ರೀಮಂತ ಜೀವನವನ್ನು ಮನಸ್ಸು ಹಂಬಲಿಸಲಿದೆ.
ಕುಂಭ
ಸರ್ಕಾರಿ ವೃತ್ತಿಯವರಿಗೆ ಸ್ಥಾನ ಪಲ್ಲಟನೆಯ ಯೋಗ ಅಥವಾ ನೂತನ ಕ್ಷೇತ್ರದ ಹೊಣೆಗಾರಿಕೆಯನ್ನು ವಹಿಸಬೇಕಾದ ಸ್ಥಿತಿ ಎದುರಾಗಲಿದೆ. ವೃತ್ತಿ ನಿಮಿತ್ತದಲ್ಲಿ ಜೀವನ ಮುನ್ನಡೆಸುವ ಚಿಂತೆ, ಆತಂಕ ದೂರವಾಗುವುದು.
ಮೀನ
ರಾಜಕೀಯ ಜೀವನದಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸಿಕೊಳ್ಳಲು ಅನುಕೂಲವಾಗುವ ಅವಕಾಶಗಳು ದೊರೆಯಲಿದೆ. ನಿಮ್ಮ ಪ್ರಯತ್ನಕ್ಕೆ ಸರಿಯಾಗಿ ನಿಮ್ಮ ಸಂಪಾದನೆಯನ್ನು ಉಳಿಸಿಕೊಳ್ಳಲು ಅಸಾಧ್ಯವಾಗಲಿದೆ.
ADVERTISEMENT
ADVERTISEMENT