ವಿಜಯಪುರ: ‘ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸ್ಥಾನಕ್ಕೆ ಪರ್ಯಾಯ ಸ್ವಾಮೀಜಿ ನೇಮಕ ಮಾಡುವ ಬದಲು, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರೇ ಸ್ವಾಮೀಜಿ ಆಗಲು ಹೇಳಿ’ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪರ್ಯಾಯ ಪೀಠ, ಮಠಗಳು ಮಾಡುವುದರಿಂದ ಭಕ್ತರಿಗೆ, ಸಮಾಜಕ್ಕೆ ತೊಂದರೆ ಹೆಚ್ಚು, ಆ ಮಠಕ್ಕೆ ಹೋದರೆ ಈ ಮಠದವರು ಮುನಿಸಿಕೊಳ್ಳುತ್ತಾರೆ, ಈ ಮಠಕ್ಕೆ ಹೋದರೆ ಆ ಮಠದವರು ಮುನಿಸಿಕೊಳ್ಳುತ್ತಾರೆ’ ಎಂದರು.

‘ಈ ಹಿಂದೆ ಒಬ್ಬರು ಕೂಡಲಸಂಗಮ ಪೀಠಕ್ಕೆ ಪರ್ಯಾಯವಾಗಿ ಜಮಖಂಡಿ ತಾಲ್ಲೂಕಿನಲ್ಲಿ ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ಮಾಡಿ ಅಲ್ಲೊಂದು ಸ್ವಾಮೀಜಿಯನ್ನು ಕೂರಿಸಿದ್ದಾರೆ. ಇದರಿಂದ ಏನಾದರೂ ಸಮಾಜದಲ್ಲಿ ರಕ್ತಕ್ರಾಂತಿ ಆಗಿದೆಯಾ? ರಕ್ತದ ಹೊಳೆ ಹರಿದಿದೆಯಾ? ಏನೂ ಆಗಿಲ್ಲ’ ಎಂದರು.

‘ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಆಹಾರದಲ್ಲಿ ವಿಷ ಮಿಶ್ರಣ ಮಾಡಲಾಗಿದೆ’ ಎಂಬ ಶಾಸಕ ಅರವಿಂದ ಬೆಲ್ಲದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಬೆಲ್ಲದ ಅವರು ವಿಧಾನಸಭಾ ಉಪ ನಾಯಕರಿದ್ದಾರೆ. ಅವರ ಬಳಿ ಬಹಳ ಮಾಹಿತಿ ಇರುತ್ತದೆ. ಆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಸುಮ್ಮಸುಮ್ಮನೇ ಅಂತಹ ಆರೋಪ ಮಾಡಲು ಹೋಗುವುದಿಲ್ಲ’ ಎಂದರು.

ಉಪಯೋಗ ಪಡೆದಿಲ್ಲ

‘ನಾನು ಯಾವುದೇ ಸ್ವಾಮೀಜಿ, ಜಗದ್ಗುರಗಳಿಂದ ಇದುವರೆಗೂ ಉಪಯೋಗಪಡೆದುಕೊಂಡಿಲ್ಲ, ನನ್ನ ಮಂತ್ರಿ ಮಾಡಿಸಿ ಎಂದು ₹11 ಲಕ್ಷ ಕಾಣಿಕೆ ಇಟ್ಟು ಪಾದಪೂಜೆ ಮಾಡಲು ಹೋಗಿಲ್ಲ, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಹೊರತು ಮತ್ತ್ಯಾವ ಸ್ವಾಮೀಜಿಗಳ ಕಾಲಿಗೂ ಇನ್ನೂ ಬಿದ್ದಿಲ್ಲ’ ಎಂದು ಹೇಳಿದರು.

‘ಬಸವ ತತ್ವ ಹೇಳುವ ಕೆಲವು ಲಪೂಟರಿದ್ದಾರೆ. ಬಸವಣ್ಣನನ್ನು ಪೇಟೆಂಟ್ ಮಾಡಿಕೊಂಡವರಂತೆ ಮಾತನಾಡುತ್ತಾರೆ. ಬಸವಣ್ಣ ಹೇಳಿದ್ದಾನೆ ಎಂದು ತಾವೇ ಸುಳ್ಳು ಸೃಷ್ಟಿಸಿ ಹೇಳುತ್ತಾರೆ. ಬಸವಣ್ಣನ ಹೆಸರು ಹೇಳಿ ತಮ್ಮ ಉದ್ಯೋಗ ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

‘ಬಸವಣ್ಣ ಹಿಂದೂ ಧರ್ಮಕ್ಕೆ ಬೈದ ಎಂದು ಹೇಳುತ್ತಾರೆ. ಬಸವಣ್ಣ ಎಲ್ಲಿಯೂ ಹಿಂದೂ ಧರ್ಮಕ್ಕೆ ಬೈದಿಲ್ಲ, ಸತಾನತ ಧರ್ಮದ ಕೆಲವು ನಿಯಮಗಳನ್ನು ವಚನಗಳ ಮೂಲಕ ಸರಳವಾಗಿ ಹೇಳಿದ್ದಾರೆ, ಸಮಾಜದಲ್ಲಿ ಆಚರಣೆಯಲ್ಲಿದ್ದ ಮೂಢನಂಬಿಕೆ ಹೋಗಲಾಡಿಸಲು ಸಾಮಾಜಿಕ ಸುಧಾರಣೆ ಮಾಡಿದ್ದಾರೆ. ಆದರೆ, ಕೆಲವರು ಬಸವಣ್ಣನನ್ನು ಭಾರತದ ಕಮುನಿಷ್ಠರ ನಾಯಕ ಎಂದು ಬಿಂಬಿಸುತ್ತಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.