ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
16/06/2024 - 22/06/2024
ವಾರ ಭವಿಷ್ಯ: 23-6-20204ರಿಂದ 29-6-2024ರವರೆಗೆ– ಭಡ್ತಿ ದೊರೆಯುವ ಸಾಧ್ಯತೆಗಳಿವೆ
Published 22 ಜೂನ್ 2024, 18:35 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ದೇಹದಲ್ಲಿ ಹೊಸ ಚೈತನ್ಯ ಇರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯನ್ನುತಲುಪುತ್ತದೆ. ಅನಿರೀಕ್ಷಿತ ಖರ್ಚುಗಳು ಬರುತ್ತವೆ. ಹಿರಿಯರಿ ಗಾಗಿ ಹಣ ಖರ್ಚು ಮಾಡಬೇಕಾದ ಸಂದರ್ಭ ಇರುತ್ತವೆ. ವೃತ್ತಿಯಲ್ಲಿ ಗೊಂದಲಗಳಿದ್ದರೂ ಸಹಸಮಾಧಾನವಾಗಿ ಮುಂದುವರೆಯುವಿರಿ. ವಿದೇಶಗಳಿಗೆ ಆಹಾರ ಪದಾರ್ಥಗಳನ್ನು ರಫ್ತು ಮಾಡುವವರ ಆದಾಯ ಹೆಚ್ಚುತ್ತದೆ.ಕೃಷಿಕರಿಗೆ ಅನಿರೀಕ್ಷಿತ ಲಾಭಒದಗಿ ಅವರ ವಸ್ತುಗಳು ದೂರದ ಊರುಗಳಿಗೆ ರಫ್ತು ಆಗುವ ಅವಕಾಶ ಗಳಿವೆ. ತಾಯಿಯಿಂದ ನಿಷ್ಟೂರದ ನುಡಿಗಳು ಬರಬಹುದು. ತಂದೆಯಿಂದ ಉದ್ದಿಮೆಯನ್ನು ನಡೆಸುವ ಬಗ್ಗೆ ತಿಳುವಳಿಕೆ ದೊರೆಯುತ್ತದೆ. ವಿದೇಶದಲ್ಲಿರುವವರು ಆಸ್ತಿ ಮಾಡಿಕೊಳ್ಳುವ ಅವಕಾಶಗಳಿವೆ.
ವೃಷಭ
ಬಹಳ ಗಾಂಭೀರ್ಯತೆ ನಿಮ್ಮಲ್ಲಿ ಇರುತ್ತದೆ. ಆದಾಯವು ನಿಮ್ಮ ನಿರೀಕ್ಷೆಯಷ್ಟಿ ರುತ್ತದೆ. ಅನಿರೀಕ್ಷಿತ ಧನ ಆಗಮನವಿದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ತಂದೆ ಯಿಂದ ಕೃಷಿ ಭೂಮಿ ದೊರೆಯುವ ಸಾಧ್ಯತೆ ಗಳಿವೆ. ವೃತ್ತಿಯಲ್ಲಿ ಶ್ರಮಪಟ್ಟು ಕೆಲಸ ಮಾಡಿ ಹೆಸರನ್ನು ಗಳಿಸುವಿರಿ. ವಿದೇಶಕ್ಕೆ ಆಹಾರ ವಸ್ತುಗಳನ್ನು ರಫ್ತು ಮಾಡುವವರಿಗೆ ಆದಾಯ ಹೆಚ್ಚು ತ್ತದೆ.ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುವ ವರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ವಿದೇಶದಲ್ಲಿರುವವರಿಗೆ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಹಿನ್ನೆಡೆ ಆಗಬಹುದು. ನಿಂತಿದ್ದ ಕೃಷಿ ಚಟುವಟಿಕೆಗಳು ಪುನಃ ಆರಂಭವಾಗುತ್ತವೆ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಚುರುಕಾಗಿರುವುದು ಬಹಳ ಒಳ್ಳೆಯದು.
ಮಿಥುನ
ಬಹಳ ಘನವೆತ್ತ ವ್ಯಕ್ತಿಯಂತೆ ಕಾಣಲು ಪ್ರಯತ್ನಪಡುವಿರಿ. ಆದಾಯವು ನಿಮ್ಮ ಅಗತ್ಯ ವನ್ನು ಪೂರೈಸುವ ಸ್ಥಿರುತ್ತದೆ.ವಿದೇಶಿವ್ಯವಹಾರ ಗಳನ್ನು ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ದೈವ ಕಾರ್ಯಕ್ಕಾಗಿ ಹಣ ಖರ್ಚಾಗು ತ್ತದೆ. ಕೃಷಿಗಾಗಿ ಹೆಚ್ಚುಹಣ ಖರ್ಚುಮಾಡಬೇಕಾಗುತ್ತದೆ. ಕೃಷಿ ಉಪಕರಣಗಳನ್ನು ತಯಾರು ಮಾಡಿ ಮಾರುವವರಿಗೆ ಲಾಭವಿರುತ್ತದೆ. ವೃತ್ತಿ ಯಲ್ಲಿ ಕೆಲವರಿಗೆ ವಿದೇಶಯಾನ ಮಾಡುವ ಯೋಗವಿದೆ. ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಸ್ಥಾನದೊರೆಯು ತ್ತದೆ. ಆದಾಯ ತೆರಿಗೆ ತಜ್ಞರಿಗೆ ಬಿಡುವಿಲ್ಲದ ಕೆಲಸ ದೊರೆತು ಕೈತುಂಬಾ ಸಂಪಾದನೆ ಇರುತ್ತದೆ. ಕೃಷಿಕರಿಗೆ ಅಭಿವೃದ್ಧಿ ಇರುತ್ತದೆ.
ಕರ್ಕಾಟಕ
ಮನಸ್ಸಿನಲ್ಲಿ ಸ್ವಲ್ಪ ಗೊಂದಲಗಳಿರುತ್ತವೆ. ಮಾಡಬೇಕಾದ ಕಾರ್ಯಗಳನ್ನು ಪ್ರಾಮುಖ್ಯಕ್ಕೆ ಅನುಗುಣವಾಗಿ ಸರಿಯಾಗಿ ಮಾಡಿರಿ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಉದ್ಯೋಗ ಮಾರ್ಗದರ್ಶಕರಿಗೆ ಕೂಡಆದಾಯ ಹೆಚ್ಚುತ್ತದೆ. ಹೈನುಗಾರಿಕೆ ಮಾಡುವವರಿಗೆ ಈಗ ಆದಾಯದಲ್ಲಿ ಹೆಚ್ಚಳ ಉಂಟಾಗುತ್ತದೆ. ಕೆಲವು ಕಬ್ಬಿಣದ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರು ತ್ತದೆ. ಸಾಂಪ್ರದಾಯಿಕ ತಳಿಗಳಬೀಜೋತ್ಪಾದನೆ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿ ಸ್ವಲ್ಪ ಕಸಿವಿಸಿಗಳಿದ್ದರೂ ಸಹ ತೊಂದರೆ ಏನಿಲ್ಲ. ಪುಸ್ತಕ ವ್ಯಾಪಾರಿಗಳಿಗೆ ದಿನಸಿ ವ್ಯಾಪಾರಿಗಳಿಗೆ ಹೆಚ್ಚುಲಾಭವಿರುತ್ತದೆ. ಕೃಷಿಕರಿಗೆ ಹೆಚ್ಚಿನಲಾಭ ಸಿಗುವ ಸಾಧ್ಯತೆ ಇದೆ. ಕೃಷಿ ಉಪಕರಣಗಳನ್ನು ತಯಾರಿಸಿ ಮಾರುವವರಿಗೆ ಲಾಭವಿರುತ್ತದೆ.
ಸಿಂಹ
ನಿಮ್ಮಲ್ಲಿ ವ್ಯವಹಾರಿಕ ಮನೋಭಾವ ವಿರುತ್ತದೆ. ಆದಾಯವು ಕಡಿಮೆ ಇದ್ದರೂ ಆದಾಯ ಗಳಿಸಲು ಬದಲಿ ಉಪಾಯಗಳನ್ನು ಮಾಡುವಿರಿ. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ತಯಾರು ಮಾಡುವವರಿಗೆ ಲಾಭವಿದೆ. ನಿಮ್ಮ ಕೆಲಸ ಕಾರ್ಯಗಳಿಗೆ ಬಂಧುಗಳ ಅಡ್ಡಿ ಬರಬಹುದು. ಆಸ್ತಿ ವಿಚಾರದಲ್ಲಿ ಸರಿಯಾಗಿ ದಾಖಲೆ ಪರಿಶೀಲನೆ ಮಾಡಿಕೊಳ್ಳಿರಿ. ವೃತ್ತಿಯ ಸ್ಥಳದಲ್ಲಿ ಸಹೋದ್ಯೋಗಿಗಳ ಬೆಂಬಲ ದೊರೆ ಯುತ್ತದೆ. ವಾಯು ಪ್ರಕೋಪ ನಿಮ್ಮನ್ನು ಕಾಡ ಬಹುದು. ಹಲವಾರು ವಿಷಯಗಳಲ್ಲಿ ಸಂಗಾತಿ ನಿಮ್ಮನ್ನು ಪ್ರಶ್ನೆ ಮಾಡುವರು. ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಭಡ್ತಿ ದೊರೆಯುವ ಸಾಧ್ಯತೆಗಳಿವೆ. ತೆರಿಗೆ ತಜ್ಞರಿಗೆ ಹೆಚ್ಚು ಕೆಲಸ ದೊರೆತು ಲಾಭವಿರುತ್ತದೆ.
ಕನ್ಯಾ
ಈ ವಾರ ನಿಧಾನವೇ ಪ್ರಧಾನವಾಗಿರುತ್ತದೆ. ನಿಧಾನವಾಗಿ ಆಲೋಚಿಸಿಮಾಡಿದಕೆಲಸಗಳಲ್ಲಿ ಉತ್ತಮ ಫಲಿತಾಂಶವಿರುತ್ತದೆ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮದೇ ಆದ ನಡವಳಿಕೆಯಿಂದ ವಿರೋಧಿಗಳನ್ನು ಸಂಪಾದಿ ಸುವಿರಿ. ಆಸ್ತಿ ಮಾಡುವ ವಿಚಾರದಲ್ಲಿ ಹೊಸ ಚಟುವಟಿಕೆಗಳು ಆರಂಭವಾಗುತ್ತವೆ. ಹಳೆಯ ಮೂಳೆ ನೋವುಗಳು ಈಗ ಕಾಣಿಸಬಹುದು. ತಾಯಿಯ ಆರೋಗ್ಯಕ್ಕಾಗಿ ಹಣ ಖರ್ಚಾಗುತ್ತದೆ. ವಂಶ ಪಾರಂಪರಿಕ ವ್ಯಾಪಾರದಲ್ಲಿ ನಿರೀಕ್ಷಿತ ಲಾಭವಿರುತ್ತದೆ. ಕೃಷಿಯಿಂದ ಆದಾಯ ಸ್ವಲ್ಪ ಕಡಿಮೆ ಇರುತ್ತದೆ. ಹಿರಿಯರಿಂದ ನಿಮಗೆ ಅನುಕೂಲ ಮತ್ತು ಧನ ಸಹಾಯ ಇರುತ್ತದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಬಳಿ ವಶೀಲಿ ಮಾಡುವಿರಿ.
ತುಲಾ
ಮನಸ್ಸಿನಲ್ಲಿ ಗೊಂದಲಗಳಿದ್ದರೂ ಸಹ ಅದನ್ನು ತೋರಿಸಿಕೊಳ್ಳುವುದಿಲ್ಲ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ.ಸೋದರಿಯರಿಂದ ನಿಮ್ಮ ಕೆಲಸಗಳಿಗೆ ಸಹಕಾರ ಸಿಗಬಹುದು. ಮಧ್ಯವರ್ತಿ ಕೆಲಸ ಮಾಡುವವರಿಗೆ ಲಾಭ ವಾಗುತ್ತದೆ, ಹಾಗೂ ಧನ ಸಂಪಾದನೆ ಆಗುತ್ತದೆ. ಸ್ವಂತ ಆರೋಗ್ಯಕ್ಕಾಗಿ ಈಗ ಹಣ ಖರ್ಚಾಗುವ ಸಾಧ್ಯತೆಗಳಿವೆ. ಹಿರಿಯರು ನಿಮ್ಮ ವಿರುದ್ಧ ತಿರುಗಿ ಬೀಳುವ ಸಾಧ್ಯತೆಗಳಿವೆ. ತಂದೆಯಿಂದ ನಿರೀಕ್ಷಿತ ಸಹಾಯ ದೊರೆಯುವುದು ಕಡಿಮೆ ಯಾಗಬಹುದು. ವೃತ್ತಿಯಲ್ಲಿ ಸಿಗಬೇಕಾದ ಸ್ಥಾನ ಸಿಗುವುದು ನಿಧಾನ. ಸರ್ಕಾರಿ ಗುತ್ತಿಗೆಗಳನ್ನು ಅಥವಾ ಸರ್ಕಾರಿ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಹಣಕಾಸಿನ ಸಂಸ್ಥೆಗಳನ್ನು ನಡೆಸುವವರಿಗೆ ಅಷ್ಟುಏಳಿಗೆ ಇರುವುದಿಲ್ಲ.
ವೃಶ್ಚಿಕ
ವಾರದ ಆರಂಭದಲ್ಲಿ ದೃಢ ನಿರ್ಧಾರ ಗಳಿಲ್ಲದಿದ್ದರೂ ನಂತರ ಸರಿಯಾಗುತ್ತದೆ. ಆದಾಯವು ಉತ್ತಮವಾಗಿರುತ್ತದೆ.ಶತ್ರುಗಳನ್ನು ಅವರದೇ ರೀತಿಯ ತಂತ್ರಗಳಿಂದ ಮಣಿಸುವಿರಿ. ವಿದೇಶದಲ್ಲಿರುವ ಮಕ್ಕಳ ಬಗ್ಗೆ ಉತ್ತಮ ವಾರ್ತೆ ಗಳನ್ನು ಕೇಳುವಿರಿ. ಸಂಗಾತಿಗಾಗಿ ಹೆಚ್ಚುಖರ್ಚಾ ಗುವ ಸಾಧ್ಯತೆ ಇದೆ. ತೆರಿಗೆತಜ್ಞರಿಗೆ ಸ್ವಲ್ಪಸಮಸ್ಯೆ ಗಳಾಗುವ ಸಾಧ್ಯತೆಗಳಿವೆ.ತಂದೆಯಿಂದಅಥವಾ ತಾಯಿಯಿಂದ ಸಹಾಯಗಳು ದೊರೆಯುತ್ತವೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಸಾಕಷ್ಟು ಅಭಿ ವೃದ್ಧಿ ಇರುತ್ತದೆ. ಕ್ಷೀರೋತನ್ನಗಳನ್ನು ಮಾರಾಟ ಮಾಡುವವರಿಗೆ ಸಾಧಾರಣ ಲಾಭವಿರುತ್ತದೆ. ಗಣಿಗಾರಿಕೆಯನ್ನು ಮಾಡುವವರಿಗೆ ಹೆಚ್ಚು ಪೂರೈಕೆಯ ಆದೇಶಗಳುದೊರೆಯುತ್ತವೆ.
ಧನು
ಮನಸ್ಸಿನಲ್ಲಿ ಬಹಳ ಆನಂದ ವಿರುತ್ತದೆ. ಆದಾಯವು ನಿರೀಕ್ಷೆಗಿಂತ ಕಡಿಮೆ ಇರುತ್ತದೆ. ಎದುರಾಳಿಯನ್ನು ಮಣಿಸಲು ನೀವು ಹೂಡುವ ತಂತ್ರಗಳನ್ನು ನೋಡಿ ಶತ್ರುಗಳು ಹೆದರುವರು. ವಿದೇಶದಲ್ಲಿರುವವರು ಆಸ್ತಿ ಮಾಡಿಕೊಳ್ಳಬಹುದು. ಸರ್ಕಾರಿ ಕೆಲಸಗಳಲ್ಲಿ ನಿಧಾನಗತಿ ಇದ್ದರೂ ಕೆಲಸ ನಿಲ್ಲುವುದಿಲ್ಲ. ವೃತ್ತಿ ಧರ್ಮವನ್ನು ಪಾಲಿಸಿ ಉದ್ಯೋಗ ಸ್ಥಳದಲ್ಲಿ ನಿಮ್ಮ ಶ್ರಮದಿಂದ ನೀವು ಲಾಭ ಮಾಡಿಕೊಳ್ಳು ವಿರಿ. ತೀರ್ಥಯಾತ್ರೆಯ ಯೋಗವಿರುತ್ತದೆ. ಸರ್ಕಾರಿ ಸಹಾಯ ಧನಗಳು ಅನಿರೀಕ್ಷಿತವಾಗಿ ಬಂದು ಒದಗುತ್ತವೆ. ಹಿರಿಯರಿಂದ ಮಾರ್ಗ ದರ್ಶನ ಸಹಕಾರಗಳು ದೊರೆಯುತ್ತವೆ. ವೃತ್ತಿಯಲ್ಲಿ ಜಿಜ್ಞಾಸಗಳಿದ್ದರೂ ಸಹ ಯಾವುದೇ ರೀತಿಯ ತೊಂದರೆ ಇಲ್ಲ .
ಮಕರ
ಮಾತನಾಡುವಾಗ ಎಚ್ಚರಿಕೆ ಇರಲಿ. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ಈಗ ಪರಾಕ್ರಮ ನಿಮ್ಮ ಮೈಗೂಡಿರುತ್ತದೆ. ಕೃಷಿ ಯಿಂದ ಆದಾಯವಿರುತ್ತದೆ.ಕೃಷಿಭೂಮಿಯನ್ನು ಹೊಂದುವ ಯೋಗವಿದೆ. ವಿದ್ಯಾರ್ಥಿಗಳಿಗೆ ಅತಿ ಯಶಸ್ಸಿನಕಾಲ. ತಂದೆಯು ನಿಮ್ಮ ಏಳಿಗೆಗಾಗಿ ಶ್ರಮವಹಿಸುವರು. ವೃತ್ತಿಯಲ್ಲಿ ಯಾವುದೇ ರೀತಿಯ ಏರಿಳಿತ ಇರುವುದಿಲ್ಲ. ಸಂಗಾತಿಯು ಮಾಡುವ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಹೈನುಗಾರಿಕೆಯನ್ನು ಮಾಡುವವರಿಗೆ ಆದಾಯ ದಲ್ಲಿ ಕಡಿಮೆಯಾಗುವ ಸಾಧ್ಯತೆಗಳಿವೆ. ತಂದೆ ಯಿಂದ ವ್ಯವಹಾರಕ್ಕೆ ಅಗತ್ಯ ಧನಸಹಾಯ ಸಿಗುತ್ತದೆ. ನಾಟಿ ವೈದ್ಯರಿಗೆ ಬೇಡಿಕೆ ಬರುತ್ತದೆ.
ಕುಂಭ
ನ್ಯಾಯ ಅನ್ಯಾಯಗಳಿಗೆ ಹಿರಿಯರು ಹೆಚ್ಚುಗಮನ ಕೊಡುವರು.ಆದಾಯಸಾಮಾನ್ಯ ಮಟ್ಟದಲ್ಲಿರುತ್ತದೆ. ಕೆಲವರಿಗೆ ಮಾತು ಬಹಳ ಒರಟಾಗಬಹುದು.ಕೆಲವರ ಕೆಲಸಗಳಿಗೆ ಬಂಧು ಗಳು ಅಡ್ಡಿಮಾಡುವರು. ಉಪಾಧ್ಯಾಯರುಗ ಳಿಗೆ ನಿರೀಕ್ಷಿತ ಆದಾಯವಿರುತ್ತದೆ. ಮಕ್ಕಳ ಏಳಿಗೆಯು ಉತ್ತಮವಾಗಿರುತ್ತದೆ. ಮನೋ ವೈದ್ಯರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸರ್ಕಾರಿ ಸಹಾಯಧನಗಳು ಬರಬಹುದು. ವಿದೇಶಿ ವ್ಯವಹಾರ ಮಾಡುವವರ ಲಾಭ ಹೆಚ್ಚುತ್ತದೆ. ರಾಜಕಾರಣಿಗಳಿಗೆ ಅವರ ಮಾತಿನಿಂದಲೇ ಸಿಕ್ಕಿ ಬೀಳುವ ಸಾಧ್ಯತೆಗಳಿವೆ. ಕೆಲವರು ಅವರ ದೇಹದಾಡ್ಯತೆಯ ಕಡೆಗೆ ಹೆಚ್ಚು ಗಮನ ಕೊಡು ವರು .ಸಿದ್ಧ ಉಡುಪುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಲಾಭ ಹೆಚ್ಚು.
ಮೀನ
ಧರ್ಮ ಕರ್ಮಗಳ ನಡುವಿನ ಜಿಜ್ಞಾಸೆಯನ್ನು ಬಿಟ್ಟಿರುತ್ತೀರಿ. ಮಾತಿನಲ್ಲಿ ಬಹಳ ಕಠಿಣತೆಯನ್ನು ಕಾಣಬಹುದು. ಆದಾಯವು ಕಡಿಮೆ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳಿಗೆ ಹಿರಿಯರ ನೆರವನ್ನು ಪಡೆಯಲು ಯತ್ನಿಸುವಿರಿ. ಸಂಸಾರದಲ್ಲಿ ಸುಖವಿರುತ್ತದೆ. ಆಸ್ತಿಖರೀದಿಯ ವಿಚಾರದಲ್ಲಿಹಣಒಗ್ಗೂಡಿಸಲು ಶುರು ಮಾಡುವಿರಿ. ಭಾಷಾ ಪಂಡಿತರಿಗೆ ವಿಶೇಷ ಅನುಕೂಲ ದೊರೆಯುತ್ತದೆ. ಅನಾರೋಗ್ಯ ಪೀಡಿತರ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಬಗ್ಗೆ ಸಂಗಾತಿಯು ತೋರಿಸುವ ಉಪೇಕ್ಷಿತ ನಡವಳಿಕೆಗಳು ಬೇಸರತರಿಸಬಹುದು. ಬಂಧು ಗಳ ನಡುವೆ ಬಹಳ ಭಿನ್ನಾಭಿಪ್ರಾಯಗಳು ಇರುತ್ತವೆ.ಉದ್ಯೋಗದಲ್ಲಿ ಅಭಿವೃದ್ಧಿ ಇರುತ್ತದೆ. ಕೃಷಿಯಿಂದ ಆದಾಯ ಹೆಚ್ಚಿಗೆ ಬರುತ್ತದೆ.