ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
19/11/2023 - 25/11/2023
ವಾರ ಭವಿಷ್ಯ: ನ. 26 ರಿಂದ ಡಿ. 2ವರೆಗೆ– ಈ ರಾಶಿಯವರಿಗೆ ನಿರೀಕ್ಷಿತ ಆದಾಯ
Published 25 ನವೆಂಬರ್ 2023, 18:33 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಅಶ್ವಿನಿ ಭರಣಿ ಕೃತಿಕ 1 ಬಂಧುಗಳ ನಡುವೆ ನಿಮ್ಮ ವೈಭವವನ್ನು ತೋರಿಸಿಕೊಳ್ಳಲು ಪ್ರಯತ್ನಪಡುವಿರಿ. ಹಣದ ಒಳ ಹರಿವು ಮಧ್ಯಮಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆ ಯಿಂದ ಶತ್ರುಗಳನ್ನು ಹೆಚ್ಚು ಮಾಡಿಕೊಳ್ಳವಿರಿ. ಹೈನು ಗಾರಿಕೆ ಮಾಡಲು ಬಹಳ ಹೆಚ್ಚುಆಸಕ್ತಿಯನ್ನು ತೋರು ವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಕಡಿಮೆ ಇರುತ್ತದೆ.ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಮುನ್ನಡೆ ಇದ್ದರೂ ಸಹ ಜಾಣತನದಿಂದ ಕೆಲಸ ಮಾಡಿ ಕೊಳ್ಳುವುದು ಒಳ್ಳೆಯದು. ತಂದೆಯು ನಿಮ್ಮ ವ್ಯವ ಹಾರಗಳಿಗೆ ಹಣ ಸಹಾಯ ಮಾಡುವುದಲ್ಲದೆ ವ್ಯವ ಹಾರವನ್ನು ಸರಿದಾರಿಗೆ ತರುವರು. ವೃತ್ತಿಯಲ್ಲಿ ನೀವು ಸಂತೋಷ ಪಡುವ ಸಂದರ್ಭಗಳು ಬರುತ್ತವೆ. ಸಂಗೀತಗಾರರಿಗೆ ಹೆಚ್ಚಿನ ಗೌರವಗಳು ದೊರೆಯುವ ಸಾಧ್ಯತೆಗಳಿವೆ. ರಾಜಕಾರಣಿಗಳಿಗೆ ಅವರ ಉದ್ದೇಶ ಸಫಲವಾಗುವ ಅವಕಾಶಗಳು ಒದಗುತ್ತವೆ.
ವೃಷಭ
ಕೃತಿಕಾ2 3 4 ರೋಹಿಣಿ ಮೃಗಶಿರಾ1 2 ವ್ಯಾಪಾರ ವ್ಯವಹಾರಗಳಲ್ಲಿ ನಿಮ್ಮ ತಂತ್ರಗಳು ಫಲಿಸಿ ಹೆಚ್ಚು ಲಾಭ ಬರುವುದರಿಂದ ಪಾಲುದಾರರು ನಿಮ್ಮಮಾತಿಗೆ ಹೆಚ್ಚುಬೆಲೆ ಕೊಡುವರು. ಹಣದ ಒಳ ಹರಿವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಸರ್ಕಾರ ಅಥವಾ ಸಂಸ್ಥೆಗಳ ಜೊತೆ ಮಾಡಿಕೊಂಡ ಒಪ್ಪಂದಗಳು ನಿಮಗೆ ಅನುಕೂಲವಾಗುತ್ತದೆ. ಹಿರಿಯ ಮಹಿಳೆಯರಿಂದ ಹೆಚ್ಚಿನ ಅನುಕೂಲತೆಗಳು ಒದಗುತ್ತವೆ. ಸಂಗೀತಗಾರ ರಿಗೆ ಹೆಚ್ಚು ಅವಕಾಶಗಳು ದೊರೆತು ಸಂಪಾದನೆ ಸಹ ಹೆಚ್ಚುತ್ತದೆ. ಆಸ್ತಿ ವಿವಾದಗಳು ಬಗೆಹರಿದು ಹಿರಿಯರ ಆಸ್ತಿಯನ್ನು ನೀವು ಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಮಾಧ್ಯಮ ಫಲಿತಾಂಶವಿರುತ್ತದೆ.ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮ ವನ್ನು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ವೃತ್ತಿಯ ಸ್ಥಳದಲ್ಲಿ ನಿಮ್ಮ ವ್ಯಕ್ತಿತ್ವದಿಂದ ಹೆಸರು ಪಡೆಯುವಿರಿ. ವಿದೇಶಿ ವ್ಯವಹಾರ ಮಾಡುವ ವರಿಗೆ ಅಭಿವೃದ್ಧಿ ಇರುತ್ತದೆ.
ಮಿಥುನ
ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3 ಯಾವುದೋ ಒತ್ತಡಕ್ಕೆ ಸಿಲುಕಿದಂತೆ ವಾರದ ಆರಂಭದಲ್ಲಿ ಭಾಸವಾಗುವುದು. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಹರಿತವಾದ ಆಯುಧಗಳಿಂದ ದೂರವಿರಿ. ಕಣ್ಣಿನ ರಕ್ತ ಪರಿಚಲನೆ ಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಕೂಡಲೇ ಚಿಕಿತ್ಸೆಗೆ ಹೋಗುವುದು ಒಳಿತು. ಕೊಂಡುಕೊಂಡಿದ್ದ ಭೂಮಿಗೆ ಹಣಕೊಡಲು ಸಮಯ ದೊರೆಯುತ್ತದೆ. ವಿದ್ಯಾರ್ಥಿ ಗಳಿಗೆ ಸಾಮಾನ್ಯವಾದ ಫಲಿತಾಂಶವಿರುತ್ತದೆ. ಈಗ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳದೇ ಹೋದರೆ ನಷ್ಟ ಅನುಭವಿಸಬೇಕಾಗ ಬಹುದು. ಸಂಗಾತಿಯ ಸಂಪಾದನೆಯಲ್ಲಿ ಹೆಚ್ಚಳ ವನ್ನು ಕಾಣಬಹುದು. ಪುಸ್ತಕ ಪ್ರಕಾಶಕರಿಗೆ ಹೆಚ್ಚು ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ತಾಯಿಯಿಂದ ಹೆಚ್ಚು ಧನಸಹಾಯಗಳು ಒದಗಿಬರುತ್ತದೆ. ಕೃಷಿಯಿಂದ ಆದಾಯವಿರುತ್ತದೆ.
ಕರ್ಕಾಟಕ
ಪುನರ್ವಸು 4 ಪುಷ್ಯ ಆಶ್ಲೇಷ ಹಂಗಾಮಿ ಉದ್ಯೋಗ ಮಾಡುತ್ತಿರುವ ಕೆಲವರಿಗೆ ಈಗ ಉದ್ಯೋಗ ಖಾಯಂ ಆಗುವ ಲಕ್ಷಣಗಳಿವೆ. ಧನದಾಯವು ಉತ್ತಮವಾಗಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ಸ್ವಲ್ಪಹಣ ಖರ್ಚಾಗಬಹುದು.ನಿಮ್ಮ ಚಟುವಟಿಕೆಗಳಲ್ಲಿ ಆಲಸೀತನವನ್ನು ಕಾಣಬಹುದು. ಸ್ಥಿರಾಸ್ತಿ ಕೊಳ್ಳುವ ಯೋಚನೆ ಸದ್ಯಕ್ಕೆ ಬೇಡ. ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಮಕ್ಕಳ ಪ್ರಗತಿಯ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳುವಿರಿ. ಆಹಾರ ಅಥವಾ ನೀರಿನ ವ್ಯತ್ಯಾಸದಿಂದ ಆರೋಗ್ಯ ವ್ಯತ್ಯಾಸಗಳಾಗಬಹುದು.ರಾಜಕೀಯ ನಾಯಕರ ಗಳಿಗೆ ಕಾನೂನಿನ ತೊಡಕುಗಳುಮ್ಮ ಎದುರಾಗುವ ಸಾಧ್ಯತೆಗಳಿವೆ. ತಂದೆಮಕ್ಕಳ ನಡುವೆ ಇದ್ದ ನಿರೀಕ್ಷಿತ ಮಟ್ಟದಸಂಬಂಧದಲ್ಲಿ ಸ್ವಲ್ಪ ಇರಿಸುಮುರಿಸುಆಗುವ ಲಕ್ಷಣಗಳಿವೆ. ವೃತ್ತಿಯಲ್ಲಿದ್ದ ಗೊಂದಲಗಳು ನಿವಾರಣೆ ಯಾಗುವ ಲಕ್ಷಣಗಳಿವೆ.
ಸಿಂಹ
ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1 ಆಡಳಿತಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ ಹೆಚ್ಚು ಯಶಸ್ಸು ಸಿಗುವಸಾಧ್ಯತೆ ಇದೆ. ಕೆಲವರಿಗೆ ಹಣಕಾಸಿನ ವ್ಯವಹಾರಗಳಲ್ಲಿ ಲಾಭವಿರುತ್ತದೆ. ತಂದೆಯಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಶೀತ ಬಾಧೆಗಳು ಸ್ವಲ್ಪ ತೊಂದರೆ ಕೊಡಬಹುದು. ಸಂಸಾರದಲ್ಲಿ ಸ್ವಲ್ಪ ಕಾವೇರಿದ ವಾತಾವರಣ ಇರುತ್ತದೆ. ವಿದೇಶಿ ಕಂಪನಿ ಗಳಿಗೆ ಕಚ್ಚಾಮಾಲನ್ನು ಪೂರೈಸುವವರಿಗೆ ಹೆಚ್ಚಿನ ಅವ ಕಾಶಗಳು ದೊರೆಯುತ್ತವೆ. ಮನೆಯ ಪಾಠ ಮಾಡುವ ವರಿಗೆ ಹೆಚ್ಚಿನ ಏಳಿಗೆ ಇರುತ್ತದೆ. ವೃತ್ತಿಯಲ್ಲಿ ನಿಂತಿದ್ದ ಬಾಕಿ ಹಣಗಳು ಈಗ ಬರುತ್ತವೆ. ಭೂಮಿ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಬರಬಹುದು. ಕುಟುಂಬದಲ್ಲಿ ನಿಮ್ಮ ಮಾತಿಗೆ ಹೆಚ್ಚು ಬೆಲೆ ಬರುತ್ತದೆ. ಧನದಾಯವು ಮಧ್ಯಮ ಗತಿಯಲ್ಲಿರುತ್ತದೆ. ಉಡುಪುಗಳನ್ನು ಮಾರುವವರಿಗೆ ಹೆಚ್ಚಿನ ಲಾಭ ವಿರುತ್ತದೆ. ಮಕ್ಕಳ ಖುಷಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ.
ಕನ್ಯಾ
ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1 2 ದೊಡ್ಡ ಮನುಷ್ಯರಂತೆ ತೋರಿಸಿಕೊಳ್ಳಲು ಹೋಗಿ ನಗೆಪಾಟಲಾಗುವಿರಿ. ಧನಾದಾಯವು ಮಂದ ಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆ ಅಥವಾ ಕಾರ್ಯ ಗಳಿಂದ ಹಿರಿಯರ ಕೆಂಗಣ್ಣಿಗೆ ಗುರುಯಾಗುವಿರಿ. ವಿದ್ಯಾರ್ಥಿಗಳಿಗೆ ಆಸಕ್ತ ವಿಷಯಗಳಲ್ಲಿ ಉತ್ತಮ ಫಲಿತಾಂಶ ಬರುತ್ತದೆ. ಸಾಂಪ್ರದಾಯಕ ಕೃಷಿಯನ್ನು ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಂಗಾತಿಯ ಸುಳ್ಳಿನ ಕಂತೆಗಳು ಮುಜುಗರ ತರುವ ಸಾಧ್ಯತೆಗಳಿವೆ. ಸಂಗಾತಿಯ ಬೇಜವಾಬ್ದಾರಿ ಉತ್ತರಗಳು ಬೇಸರ ತರಿ ಸುತ್ತವೆ. ಪಾಲುದಾರಿಕೆಯ ವ್ಯವ ಹಾರಗಳಲ್ಲಿ ನಿಮ್ಮ ಬಗ್ಗೆ ಹೆಚ್ಚು ಚರ್ಚೆ ನಡೆದು ಬರುವ ಆದಾಯದಲ್ಲಿ ಕಡಿಮೆಯಾಗುವ ಸಾಧ್ಯತೆಗಳಿವೆ. ತವರು ಮನೆಯ ಕಡೆಯಿಂದ ಆಸ್ತಿ ಅಥವಾ ಹಣಬರುವಸಾಧ್ಯತೆಗಳಿವೆ. ಕಣ್ಣಿನ ತೊಂದರೆ ಇರುವವರು ಎಚ್ಚರಿಕೆ ತೆಗೆದುಕೊಳ್ಳಿರಿ.ಹೈನುಗಾರಿಕೆ ಮಾಡುವವರಿಗೆ ನಿರೀಕ್ಷಿತ ಆದಾಯಗಳು ಇರುತ್ತವೆ.
ತುಲಾ
ಚಿತ್ತಾ 3 4 ಸ್ವಾತಿ ವಿಶಾಖ 1 2 3 ನಿಮ್ಮ ಬಗ್ಗೆ ನಿಮಗೆ ಮೊದಲು ನಂಬಿಕೆ ಇರಲಿ. ಹಣದ ಒಳಹರಿವು ನಿರೀಕ್ಷಿತಮಟ್ಟಕ್ಕೆ ಇರುತ್ತದೆ. ನಿಮ್ಮ ಮಾತಿನ ಬಗ್ಗೆ ಗಮನ ಇರಲಿ, ನೀವು ಜಾಣ್ಮೆಯಿಂದ ಮಾತನಾಡಿದರು ಅದರ ಅರಿವು ಬೇರೆಯವರ ಮೇಲೆ ಆಗುತ್ತದೆ. ನಿಮ್ಮ ನಡವಳಿಕೆಗಳ ಬಗ್ಗೆ ಟೀಕೆಗಳು ಕೇಳಿ ಬರಬಹುದು. ಆಸ್ತಿಕೊಳ್ಳಲು ಹೊಸ ದಾರಿಗಳು ಈಗ ಗೋಚರಿಸುತ್ತವೆ. ಮಕ್ಕಳಿಂದ ನಿರೀಕ್ಷಿತ ಗೌರವ ದೊರೆ ಯುವುದಿಲ್ಲ.ದೇವರ ಮೂರ್ತಿಗಳನ್ನು ಎರಕಹೊಯ್ಯು ವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ತಂದೆಯಿಂದ ವ್ಯಾಪಾ ರದ ಒಳ ಸುಳಿಗಳನ್ನು ತಿಳಿಯಬಹುದು. ಉದ್ಯೋಗ ದಲ್ಲಿನ ಸ್ಥಾನಮಾನದಲ್ಲಿ ಸ್ವಲ್ಪ ಗೊಂದಲಗಳು ಏರ್ಪ ಡಬಹುದು. ಸರ್ಕಾರಿ ಕೆಲಸ ಕಾರ್ಯಗಳು ಸಾಕಷ್ಟು ಮುನ್ನಡೆ ಇರುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಹಿರಿಯರಿಂದ ಸ್ವಲ್ಪಮಟ್ಟಿನ ಧನ ಸಹಾಯ ಆಗಬಹುದು.
ವೃಶ್ಚಿಕ
ವಿಶಾಖಾ 4 ಅನುರಾಧ ಜೇಷ್ಠ ಅತಿಯಾದ ಆತ್ಮ ಗೌರವವಿರುತ್ತದೆ. ಕೆಲವೊಂದು ದೃಢ ನಿರ್ಧಾರಗಳನ್ನು ತೆಗೆದುಕೊಂಡು ಮುನ್ನಡೆಯುವಿರಿ. ಹಣದ ಒಳಹರಿವು ನಿಮ್ಮ ಅಗತ್ಯ ವನ್ನು ಪೂರೈಸುತ್ತದೆ. ಮಾತಿನಲ್ಲಿ ಬಹಳಜಾಣ್ಮೆಯನ್ನು ಕಾಣಬಹುದು. ಗುರುಗಳು ಮತ್ತು ಹಿರಿಯರ ಮೇಲೆ ಗೌರವಗಳು ಹೆಚ್ಚುತ್ತವೆ. ನಿಮ್ಮ ಶತ್ರುಗಳಲ್ಲೊಬ್ಬನನ್ನು ನಿಮ್ಮವನನ್ನಾಗಿ ಮಾಡಿಕೊಂಡು ಉಳಿದವರನ್ನುಮಣಿ ಸುವಿರಿ. ಕೃಷಿಕರು ಹೆಚ್ಚಿನ ಅಭಿವೃದ್ಧಿಯನ್ನು ಕಾಣಬ ಹುದು ಹಾಗೂ ಅವರಆದಾಯ ಹೆಚ್ಚುತ್ತದೆ.ವಿದ್ಯಾರ್ಥಿ ಗಳಿಗೆ ಸೀಮಿತಪ್ರಗತಿ ಇರುತ್ತದೆ. ತಾಯಿಯ ಆರೋಗ್ಯ ಕ್ಕಾಗಿ ಹೆಚ್ಚಿನಹಣ ಖರ್ಚಾಗುವುದು.ಸಂಗಾತಿಯವ್ಯವ ಹಾರದಲ್ಲಿ ಸಾಮಾನ್ಯ ಆದಾಯ ಇರುತ್ತದೆ. ವಾಯು ಯಾನ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ಅಭಿವೃದ್ಧಿ ಇರುತ್ತದೆ. ವೃತ್ತಿಯಲ್ಲಿ ಸಹೋದ್ಯೋಗಿ ಗಳಿಂದ ಹೆಚ್ಚಿನ ಸಹಕಾರಗಳು ದೊರೆತು ಸಂತೋಷ ಪಡುವಿರಿ.
ಧನು
ಮೂಲ ಪೂರ್ವಾಷಾಢ ಉತ್ತರಾಷಾಢ 1 ಸಮಾಜದಲ್ಲಿ ಮತ್ತು ಬಂಧುಗಳಲ್ಲಿ ನಿಮಗೆ ಹೆಚ್ಚಿನ ಗೌರವ ದೊರೆಯುತ್ತದೆ. ಹಣದ ಒಳ ಹರಿವು ನಿಮ್ಮನಿರೀಕ್ಷೆಯನ್ನು ತಲುಪುತ್ತದೆ.ಹಾಡುಗಾರ ರಿಗೆ ಮತ್ತು ಸಂಗೀತಗಾರರಿಗೆ ಹೆಚ್ಚಿನ ಅವಕಾಶಗಳು ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ರಾಜಕೀಯ ನಾಯಕರಗಳು ತಮ್ಮ ಚಾಣಾಕ್ಷತನವನ್ನು ಮರೆದು ಜನರನ್ನು ಸೆಳೆಯುವರು.ನ್ಯಾಯವಾದಿಗಳಿಗೆ ಉತ್ತಮ ದಾವೆಗಳು ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ವಾಹನ ತಯಾರಿಕಾ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ನಿರೀಕ್ಷಿತ ತಯಾರಿಕಾ ಆದೇಶ ಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನ ದಲ್ಲಿ ಅತಿಹೆಚ್ಚಿನ ಮುನ್ನಡೆ ಇರುತ್ತದೆ. ಉದ್ಯೋಗ ಸ್ಥಳ ದಲ್ಲಿ ನಿರೀಕ್ಷಿತ ಆದಾಯ ಕಡಿಮೆಯಾಗಬಹುದು. ಧಾರ್ಮಿಕ ಕೆಲಸಗಳನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ.
ಮಕರ
ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2 ನಿಮ್ಮ ಪ್ರೇಮಪ್ರಕರಣಗಳಿಗೆ ಹಿರಿಯರಒಪ್ಪಿಗೆ ದೊರೆಯುತ್ತದೆ.ಕೃಷಿಗೆ ಸಂಬಂಧಿಸಿದ ಯಂತ್ರೋಪ ಕರಣಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ ಗೃಹಬಳಕೆಯ ಯಂತ್ರೋಪಕರಣಗಳನ್ನು ತಯಾರಿಸು ವವರಿಗೆ ಬೇಡಿಕೆ ಹೆಚ್ಚುತ್ತದೆ. ಉದ್ಯಮಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸುವವರ ಬೇಡಿಕೆ ಹೆಚ್ಚಾಗುತ್ತದೆ. ಧನದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಸಂಸಾರ ದಲ್ಲಿ ಸಾಕಷ್ಟು ಸಂತೋಷವಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮಧ್ಯಮಗತಿಯ ಯಶಸ್ಸು ಇರುತ್ತದೆ.ಸರ್ಕಾರದ ಕಡೆಯಿಂದ ಬರಬೇಕಾಗಿದ್ದ ಧನಸಹಾಯ ಗಳು ಬರುತ್ತವೆ. ವ್ಯಾಪಾರದಲ್ಲಿ ಇದ್ದ ಸರ್ಕಾರದ ತೊಡಕುಗಳು ನಿವಾರಣೆಯಾಗುತ್ತವೆ. ಸಂಗಾತಿಯ ಸಂಪಾದನೆ ನಿಧಾನ ವಾಗಿ ಏರಿಕೆಯಾಗುತ್ತದೆ.
ಕುಂಭ
ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3 ಮನಸ್ಸಿನಲ್ಲಿ ಸ್ಥಿರತೆ ಇರುತ್ತದೆ. ಹಿರಿಯರು ತಮ್ಮ ಗುರಿಗಳತ್ತ ಗಮನಹರಿಸಿ ಯಶಸ್ಸನ್ನು ಸಾಧಿಸುವರು. ದನದಾಯವು ಸಾಮಾನ್ಯ ಗತಿಯಲ್ಲಿ ಇದ್ದರೂ ವಿದೇಶ ದಲ್ಲಿರುವವರ ಆದಾಯ ಹೆಚ್ಚುತ್ತದೆ. ವಿದೇಶದಲ್ಲಿ ಪಾಠ ಪ್ರವಚನ ಮಾಡುವವರಿಗೆ ಹೆಚ್ಚಿನ ಬೇಡಿಕೆ ಬರು ತ್ತದೆ. ಧರ್ಮಭೋದನೆ ಮಾಡುವವರಿಗೆ ಹೆಚ್ಚಿನ ಅನು ಕೂಲಗಳು ದೊರೆಯುತ್ತವೆ. ಸ್ಥಿರ ಆಸ್ತಿಗಾಗಿ ಒಟ್ಟು ಮಾಡಿದ್ದ ಹಣ ಬೇರೊಂದಕ್ಕೆ ಖರ್ಚಾಗಬಹುದು. ತಾಯಿಯಿಂದ ದೊರೆಯುವ ಸಹಾಯಗಳು ನಿಲ್ಲುವ ಸಾಧ್ಯತೆಗಳಿವೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಆದಾಯ ಸ್ವಲ್ಪ ಕಡಿಮೆಯಾಗಬ ಹುದು. ಸಂಗಾತಿಯ ನೆರವಿನಿಂದ ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ಆಭರಣ ತಯಾರಿಕರಿಗೆ ಬೇಡಿಕೆ ಸ್ವಲ್ಪ ಕಡಿಮೆ ಆಗು ತ್ತದೆ. ತಂದೆಯಿಂದ ಸಿಗುವ ಧನಸಹ ಸ್ವಲ್ಪ ಕಡಿಮೆ ಯಾಗಬಹುದು.
ಮೀನ
ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ ಬಹಳ ಬೇಜವಾಬ್ದಾರಿಯ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಹಣದ ಒಳಹರಿವು ನಿಮ್ಮನಿರೀಕ್ಷೆಗೆ ತಕ್ಕಂತೆ ಇರುತ್ತದೆ. ಭಾಷಾ ವಿಮರ್ಶಕಾರರಿಗೆ ಉತ್ತಮ ಗೌರವ ದೊರೆಯುವ ಸಾಧ್ಯತೆ ಇದೆ. ಹಿರಿಯರ ಆಸ್ತಿಪಾಸ್ತಿಗಳ ಬಗ್ಗೆ ಹೊಸ ಸಮಸ್ಯೆಗಳು ಹುಟ್ಟಬಹುದು. ಸಂಗೀತ ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಖಂಡಿತ ಇರುತ್ತದೆ. ಸರ್ಕಾರಿ ಸಂಸ್ಥೆಗಳಲ್ಲಿ ನಿಮ್ಮ ದಾಖಲಾತಿಗಳ ಬಗ್ಗೆ ಹೊಸ ಗೊಂದಲಗಳು ಹುಟ್ಟಿಕೊಳ್ಳಬಹುದು. ನಿಮ್ಮ ಸಂಗಾತಿಯು ನಿಮಗೆ ನೀಡುವ ಹಣದಲ್ಲಿ ಸ್ವಲ್ಪ ಕಡಿತ ಮಾಡುವರು.ಅನಿರೀಕ್ಷಿತವಾಗಿ ಹಣ ಕಳೆದುಹೋಗುವ ಸಾಧ್ಯತೆಗಳಿರುತ್ತವೆ ಎಚ್ಚರ ವಹಿಸಿರಿ. ತಂದೆಯಿಂದ ನಿಮಗೆ ಆಸ್ತಿಯಾಗಿ ಭೂಮಿ ಅಥವಾ ವ್ಯವಹಾರದ ಪಾಲುದಾರಿಕೆ ಸಿಗಬಹುದು. ವೃತ್ತಿಯಿಂದ ಆದಾಯ ಹೆಚ್ಚು ಬರುವುದರ ಜೊತೆಗೆ ಸ್ಥಾನಮಾನ ಸಹ ಹೆಚ್ಚ ಬಹುದು.