ದಿನ ಭವಿಷ್ಯ: ಆಗಸ್ಟ್ 21 ಗುರುವಾರ 2025– ಅನಾವಶ್ಯಕ ವಿವಾದ ಏಳಿಗೆ ತಡೆಯುತ್ತದೆ
Published 20 ಆಗಸ್ಟ್ 2025, 18:31 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಕೆಲಸಗಳೆಲ್ಲ ಬಿರುಸಿನಿಂದ ಸಾಗಲಿದೆ ಮತ್ತು ಮುಕ್ತಾಯದ ಹಂತ ತಲುಪುವುದು. ನಿಮ್ಮ ಜೀವನದಲ್ಲಿ ಹೊಸದೊಂದು ಅಧ್ಯಾಯ ಆರಂಭ ಮಾಡುವ ಬಗ್ಗೆ ಗಮನಹರಿಸಿ. ಆಲಸ್ಯ ದೂರಮಾಡಿ, ಶುಭವಾಗುತ್ತದೆ.
ವೃಷಭ
ತಾಯಿಯವರ ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಬಹುದು. ಮಗನಿಗೆ ಹೆಚ್ಚಿನ ಪರಿಶ್ರಮವಿಲ್ಲದೇ ಕೆಲಸ ದೊರೆತಿದ್ದಕ್ಕೆ ಕುಟುಂಬಕ್ಕೆ ಸಂತಸ. ಜಮೀನು ಖರೀದಿ, ರಿಯಲ್ ಎಸ್ಟೇಟ್ ವ್ಯವಹಾರಗಳಿಂದ ವರಮಾನ ಹೆಚ್ಚಳ.
ಮಿಥುನ
ಹಿರಿಯರ ಜೊತೆಗಿನ ಅನಾವಶ್ಯಕ ವಿವಾದ ನಿಮ್ಮ ಏಳಿಗೆಯನ್ನು ಕುಂಠಿತಗೊಳಿಸುತ್ತದೆ. ಕಟ್ಟಡ ಗುತ್ತಿಗೆದಾರರಿಗೆ ಆರ್ಥಿಕವಾಗಿ ನಷ್ಟ ಮತ್ತು ಕಾರ್ಮಿಕರ ಕೊರತೆ. ಕಾರ್ಮಿಕರಲ್ಲಿ ಭಿನ್ನಾಭಿಪ್ರಾಯ ಬಾರದಂತೆ ಎಚ್ಚರವಹಿಸಿ.
ಕರ್ಕಾಟಕ
ಷೇರು ಖರೀದಿ ಅಥವಾ ನಿವೇಶನಗಳಿಗೆ ಮುಂಗಡ ಪಾವತಿ ಮಾಡುವ ಮುನ್ನ ಹತ್ತು ಬಾರಿ ಆಲೋಚಿಸಿ, ನಂತರ ತೀರ್ಮಾನಕ್ಕೆ ಬನ್ನಿ. ರೈತಾಪಿ ವರ್ಗದವರಿಗೆ ವೃತ್ತಿಯಲ್ಲಿನ ಕ್ರಿಯಾಶೀಲತೆ ಶುಭದಾಯಕವಾಗುತ್ತದೆ.
ಸಿಂಹ
ಕಟ್ಟಡ ಕಾರ್ಮಿಕರಿಗೆ ಹೆಚ್ಚಿನ ಸಂಪಾದನೆಯ ಜೊತೆಯಲ್ಲಿ ಉಡುಗೊರೆ ಸಿಗುವ ಯೋಗ ಇರುವುದು. ಕರಕುಶಲ ವಸ್ತುಗಳ ತಯಾರಕರು ತಮ್ಮ ಉತ್ತಮವಾದ ಕೆಲಸಗಳಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವರು.
ಕನ್ಯಾ
ಯಂತ್ರೋಪಕರಣಗಳ ಮಾರಾಟಗಾರರಿಗೆ ಲಾಭವುಂಟಾಗುವುದು. ಆತುರದ ಸ್ವಭಾವವನ್ನು ಕೊಂಚ ಸರಿಪಡಿಸಿಕೊಂಡು ಮತ್ತೊಬ್ಬರ ಭಾವನೆಗಳಿಗೆ ನೀವು ಹೇಗೆ ಪ್ರತಿಕ್ರಿಯಿಸಬೇಕೆಂಬುದನ್ನು ತಿಳಿದು ಪ್ರತಿಕ್ರಿಯಿಸಿರಿ.
ತುಲಾ
ಆಫೀಸಿನ ಕೆಲಸಗಳು ಸುಗಮವಾಗಿ ನೆರವೇರಲಿದೆ. ಸ್ನೇಹಿತರೊಬ್ಬರ ನೆರವಿಗೆ ನಿಲ್ಲಲೇ ಬೇಕಾದ ಪರಿಸ್ಥಿತಿ ಎದುರಾಗಲಿದೆ. ಸಂತಸದಲ್ಲಿ ದಿನ ಕಳೆಯುವಿರಿ. ತಾಂತ್ರಿಕ ವಿದ್ಯಾರ್ಥಿಗಳಿಗೆ ಸರ್ವತೋಮುಖ ಅಭಿವೃದ್ಧಿ ಆಗಲಿದೆ.
ವೃಶ್ಚಿಕ
ನೀವು ಸ್ವಪ್ರೇರಣೆಯಿಂದ ದೊಡ್ಡ ಸಾಧನೆಗಳನ್ನು ಮಾಡುವಿರಿ. ನಿಮ್ಮ ತೀವ್ರ ಪ್ರತಿಸ್ಪರ್ಧಿಯನ್ನು ಭೇಟಿ ಮಾಡುವ ಅವಕಾಶ ಬರಲಿದೆ. ಶ್ರೀ ಆಂಜನೇಯ ಸ್ವಾಮಿಯ ದರ್ಶನವು ಮನಸ್ಸಿಗೆ ಧೈರ್ಯವನ್ನು ತರುವುದು.
ಧನು
ಈ ದಿನ ನೀವು ಮಾಡುವ ಹೊಸ ಕಾರ್ಯದಿಂದ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು ಎದುರಾಗುವುದು. ಹೀಗಾಗಿ ಯಾವುದೇ ಹೊಸ ನಿರ್ಧಾರ ತೆಗೆದುಕೊಳ್ಳಬೇಡಿ. ಶುಭ ಕಾರ್ಯಗಳಿಗಾಗಿ ಪ್ರಯಾಣ ಮಾಡಬೇಕಾಗುವುದು.
ಮಕರ
ನಿಮ್ಮ ಅಚ್ಚುಕಟ್ಟಾದ ಕೆಲಸಗಳಿಂದ ಅಧಿಕಾರಿ ವರ್ಗದವರಲ್ಲಿ ನಿಮ್ಮ ಮೇಲಿನ ವಿಶ್ವಾಸವನ್ನು ಇಮ್ಮಡಿಗೊಳಿಸಿಕೊಳ್ಳುವಿರಿ. ಬಟ್ಟೆ ವ್ಯಾಪಾರಿಗಳು ರಿಯಾಯಿತಿ ಮಾರಾಟಗಳಿಂದ ಹೆಚ್ಚಿನ ಲಾಭವನ್ನು ಹೊಂದುವಿರಿ.
ಕುಂಭ
ಕೆಲಸಗಳು ಎಷ್ಟು ಕಷ್ಟವಾದರೂ ನೀವೆಂದೂ ಸೋಲುವುದಿಲ್ಲ. ವೈದ್ಯಕೀಯ ವಿದ್ಯಾರ್ಥಿಗಳು ಅಧಿಕ ಪರಿಶ್ರಮ ಪಡಬೇಕಾಗುವುದು. ಏಜೆನ್ಸಿಯಂತಹ ಉದ್ಯೋಗ ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು.
ಮೀನ
ಸ್ಟೇಷನರಿ ಹೋಲ್‌ಸೇಲ್ ವ್ಯಾಪಾರಿಗಳು ವ್ಯಾಪಾರ ವಿಸ್ತರಿಸುವ ಬಗ್ಗೆ ಮಾತುಕತೆ ನಡೆಸಿ. ವೃತ್ತಿಯಲ್ಲಿ ಬದಲಾವಣೆ ಮಾಡುವವರು ಲಕ್ಷ್ಮೀ ಸಮೇತನಾದ ಶ್ರೀನಿವಾಸ ದೇವರ ಸೇವೆ ಮಾಡಿದರೆ ಶುಭವಾಗುವುದು.