ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಮಕ್ಕಳೊಂದಿಗೆ ವಿದೇಶ ಪ್ರಯಾಣ ಮಾಡುವ ಸಂದರ್ಭ ಬರಲಿದೆ
Published 3 ಜುಲೈ 2024, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತುಂಬ ಮೃದುವಾಗಿ ಬದುಕನ್ನು ಸಾಗಿಸಿದವರಿಗೆ ಕಳೆಯಬೇಕಾದ ಬದುಕು ಸ್ವಲ್ಪ ಕಷ್ಟಕರವೆಂದು ತೋರಬಹುದು. ಹಣ್ಣು ತರಕಾರಿ ವ್ಯಾಪಾರಿಗಳಿಗೆ ಸರಕು ಸಾಗಣೆಯಲ್ಲಿ ತೊಂದರೆಗಳಾಗಬಹುದು.
ವೃಷಭ
ತಾಳ್ಮೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಎಚ್ಚರಿಕೆಯ ಮಾತುಗಳು ಹಿರಿಯರಿಂದ ಕೇಳಬೇಕಾಗಬಹುದು. ಹಾಗೆ ನಡೆದುಕೊಳ್ಳಿ. ಮದುವೆಯ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ದುಡುಕುವುದು ಬೇಡ.
ಮಿಥುನ
ಮುಖ್ಯ ವ್ಯಕ್ತಿಯ ಬಳಿ ಮಾತನಾಡುವಾಗ ಪೂರ್ವ ತಯಾರಿ ಮಾಡಿಕೊಳ್ಳುವುದು ಪ್ರಮುಖವಾಗುವುದು. ರಾಸಾಯನಿಕ ವಸ್ತುಗಳ ಮಾರಾಟಗಾರರಿಗೆ ಲಾಭಾಂಶ ವೃದ್ಧಿ. ದೇವತಾ ಅನುಗ್ರಹ ಸದಾ ಇರಲಿದೆ.
ಕರ್ಕಾಟಕ
ಸುಲಭವಾಗಿ ಕೆಲವೊಂದು ವಿಷಯಗಳು ಎಲ್ಲರಿಗೂ ಲಭ್ಯವಾಗುವುದು; ಕೆಲವೊಂದು ಸಮಯದಲ್ಲಿ ಕುಟುಂಬದವರಿಗೆ ತೊಂದರೆಯಾಗುತ್ತದೆ. ಮಕ್ಕಳೊಂದಿಗೆ ವಿದೇಶ ಪ್ರಯಾಣ ಮಾಡುವ ಸಂದರ್ಭ ಬರಲಿದೆ.
ಸಿಂಹ
ರಾಜಕೀಯದವರಿಂದ ಸಾಮಾಜಿಕ ಕಾರ್ಯ ಸಾಧಿಸಿಕೊಳ್ಳುವಲ್ಲಿ ಪಾತ್ರ ಮುಖ್ಯವಾಗಿರಲಿದೆ. ವರ್ಗಾವಣೆಯಿಂದಾಗಿ ದೂರದೂರಿನಲ್ಲಿ ವಾಸಿಸುವ ಸಂದರ್ಭ ಬರಲಿದೆ. ಅಕ್ಕ ಪಕ್ಕದವರಲ್ಲಿ ಅನುಕಂಪ ತೋರುವಿರಿ.
ಕನ್ಯಾ
ದೇಹ ಪ್ರಕೃತಿಗೆ ಸರಿ ಹೊಂದದಂಥ ಆಹಾರವನ್ನು ಸ್ವೀಕರಿಸಿದ ಕಾರಣಕ್ಕೆ ಅನಾರೋಗ್ಯ ಉಂಟಾಗುವುದು. ಸಾಮಾಜಿಕ ಜೀವನದಲ್ಲಿ ಮತ್ತು ಭಾವನಾತ್ಮಕ ಸಂಬಂಧಗಳಲ್ಲಿ ಉತ್ತಮ ಪ್ರಗತಿ ಹೊಂದುವಿರಿ.
ತುಲಾ
ಸಹೋದರ ಅಥವಾ ಸಹೋದರಿಯರ ಆರೋಗ್ಯ ವಿಚಾರವಾಗಿ ಹಣ, ಸಮಯ ಕೊಡುವಿರಿ. ನಿತ್ಯ ಕೆಲಸಗಳನ್ನೇ ವಿಶೇಷವಾಗಿ ಮಾಡುವ ರೀತಿಯನ್ನು ಕಂಡುಕೊಳ್ಳುವಿರಿ. ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವ ಬಗ್ಗೆ ಯೋಚಿಸಿ.
ವೃಶ್ಚಿಕ
ಆಸ್ತಿಯನ್ನು ಸೇರಬೇಕಾದವರಿಗೆಲ್ಲರಿಗೂ ಸೇರಿಸುವಂಥ ಕೆಲಸವನ್ನು ಮಾಡಬೇಕಾದೀತು . ಪ್ರಾರಂಭಿಕ ವಿಫಲತೆಯ ಬಗ್ಗೆ ನೀವು ನಿರಾಶೆಗೊಳ್ಳಬಾರದು. ಅಧಿಕ ಸುತ್ತಾಟದಿಂದ ಆಯಾಸವಾಗುವುದು.
ಧನು
ಸರಿ ರೀತಿಯಲ್ಲಿ ರೂಪುರೇಷೆಯನ್ನು ಹಾಕಿಕೊಳ್ಳದೆ ಶುರು ಮಾಡಿದ ಕೆಲಸವು ಶುರುವಿನಲ್ಲಿ ವಿಘ್ನಗಳನ್ನು ಎದುರಿಸುವುದು. ತಾಂತ್ರಿಕ ಕ್ಷೇತ್ರದಲ್ಲಿರುವವರು ಸಾಧನೆಯನ್ನು ಮಾಡುವಿರಿ. ಬಟ್ಟೆ ವ್ಯಾಪಾರಿಗಳಿಗೆ ಲಾಭವಿರುವುದು.
ಮಕರ
ಅಪ್ರಿಯ ಸತ್ಯವನ್ನು ಸ್ವೀಕರಿಸಲು ಅಸಾಧ್ಯವಾಗುವಂಥ ಹಿರಿಯ ನಾಗರಿಕರ ಬಳಿ ಹೇಳದಿರುವುದು ಒಳ್ಳೆಯದೆಂದು ಯೋಚಿಸುವಿರಿ. ಹೊಸ ಕೆಲಸಗಳ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳುವಿರಿ.
ಕುಂಭ
ಭಾಗವತ ಅಥವಾ ಮಹಾಭಾರತದಂತಹ ಧಾರ್ಮಿಕ ಉಪನ್ಯಾಸಗಳಲ್ಲಿ ಭಾಗವಹಿಸುವ ಅವಕಾಶ ದೊರೆಯುವ ಸಾಧ್ಯತೆ ಇದೆ. ವ್ಯವಹಾರ ನಿಮಿತ್ತವಾಗಿ ವಿದೇಶಯಾನವನ್ನು ಮಾಡುವ ಅವಕಾಶ ಸಿಗಲಿದೆ.
ಮೀನ
ವೃತ್ತಿ ವಿಷಯದಲ್ಲಿ ಏಳುಬೀಳುಗಳು ಸಹಜ ಎಂದು ಕಂಡುಕೊಂಡದ್ದನ್ನು ಕಿರಿಯರಿಗೂ ತಿಳಿಸುವಂಥ ಕೆಲಸ ಮಾಡುವಿರಿ. ಆರ್ಥಿಕವಾಗಿ ಬೆಳೆಯುವ ಅವಕಾಶವನ್ನು ಪಡೆಯಲಿದ್ದೀರಿ. ದೂರ ಸಂಚಾರದ ಸಾಧ್ಯತೆ ಇದೆ.