ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯ ಜೀವನ ಸುಖಮಯವಾಗಿರುವುದು
Published 5 ಜುಲೈ 2024, 20:36 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತರಗತಿಯಲ್ಲಿ ವಿದ್ಯಾರ್ಥಿಗಳ ಸಂಶಯವನ್ನು ಹಾಗೂ ಮನೆಯಲ್ಲಿ ಮಗುವಿನ ಸಂಶಯನ್ನು ಬಗೆ ಹರಿಸುವುದರಲ್ಲಿ ದಿನ ಕಳೆಯುವಿರಿ. ಮಾನಸಿಕ ನೋವನ್ನು ಮರೆಯಲು ಪ್ರೀತಿಪಾತ್ರರೊಂದಿಗೆ ಮಾತನಾಡಿ.
ವೃಷಭ
ಗುರು-ಹಿರಿಯರ ಅನುಗ್ರಹದಿಂದ ಹಾಗೂ ನಿಮ್ಮ ಶಾಂತಿ ಸ್ವಭಾವದಿಂದ ಹೆಚ್ಚಿನ ನೆಮ್ಮದಿ ಕಾಣುವಿರಿ. ದೈವಾನುಗ್ರಹದಿಂದ ಕಾರ್ಯಗಳು ಕೈಗೂಡಿ ನಿರೀಕ್ಷಿತ ಫಲ ಲಭಿಸಲಿದೆ.
ಮಿಥುನ
ಸಣ್ಣ ಕಾರಣಗಳಿಗೆ ಶುರುವಾದ ವಾದಗಳನ್ನು ಸಂಸಾರ ಒಡೆಯುವ ಹಂತಕ್ಕೆ ತಲುಪಲು ಬಿಡದಿರಿ. ನಿಮ್ಮ ಸ್ಪರ್ಧಾತ್ಮಕ ಮನೋಭಾವ ಹೊಸ ಸಾಹಸಕ್ಕೆ ಕೈ ಹಾಕಲು ಪ್ರೇರೇಪಿಸುವುದು.
ಕರ್ಕಾಟಕ
ಗ್ರಹಫಲಗಳು ಅನುಕೂಲಕರ ಆಗಿರುವುದರಿಂದ ವ್ಯಾಪಾರ–ಉದ್ಯಮಗಳಲ್ಲಿ ನಿರೀಕ್ಷೆಗೂ ಮೀರಿದ ಲಾಭವಾಗಲಿದೆ. ಕಷ್ಟವಾದ ಕೆಲಸಗಳನ್ನು ಸರಳೀಕರಿಸಿಕೊಳ್ಳುವ ಸರ್ವಪ್ರಯತ್ನಗಳನ್ನೂ ಮಾಡುವಿರಿ.
ಸಿಂಹ
ಇನ್ನೊಬ್ಬರ ಜೀವನದಲ್ಲಿ ನಿಮ್ಮ ಪಾತ್ರ ಮಹತ್ವದ್ದು ಎಂದು ತಿಳಿದು ಸಂತಸವಾಗುವುದು. ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ಈ ದಿನ ತಿಳಿಯುವುದು. ಅವಿವಾಹಿತರಿಗೆ ಶುಭ ಫಲಗಳು ಲಭಿಸಲಿವೆ.
ಕನ್ಯಾ
ಸ್ನೇಹಿತರ ಸಲಹೆ ಸಹಕಾರದಿಂದ ಪ್ರಾರಂಭಿಸಿದ ವ್ಯವಹಾರದಲ್ಲಿ ಒಳ್ಳೆಯ ಫಲಿತಾಂಶ ಸಿಗಲಿದೆ. ಅಧಿಕ ಓಡಾಟಗಳಿಂದ ದೇಹಾಯಾಸ ಇದ್ದರೂ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ.
ತುಲಾ
ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ತೋರಿಬಂದರೂ ಬುದ್ಧಿ ಬಲ ಮತ್ತು ಶ್ರದ್ಧೆಯಿಂದ ಆಲೈಸುವ ಗುಣದಿಂದಾಗಿ ಫಲಿತಾಂಶಕ್ಕೆ ಚ್ಯುತಿ ಬರುವುದಿಲ್ಲ. ದಾಂಪತ್ಯ ಜೀವನ ಸುಖಮಯವಾಗಿರುವುದು.
ವೃಶ್ಚಿಕ
ಮಳೆಗಾಲಕ್ಕೆ ಸೂಕ್ತವಾಗುವ ರೀತಿಯಲ್ಲಿ ಮನೆಯಲ್ಲಿ ಸಣ್ಣ ಪುಟ್ಟ ಮಾರ್ಪಾಡು ಕಾರ್ಯಗಳನ್ನು ನಡೆಸುವಿರಿ. ಸಹೋದರನ ವ್ಯಾಪಾರ ವಹಿವಾಟುಗಳಿಗೆ ಉಪಕಾರವಾಗುವ ಸಲಹೆಗಳನ್ನು ನೀಡಬಹುದು.
ಧನು
ನೂತನ ಯೋಜನೆ ಆರಂಭಕ್ಕೆ ಮುನ್ನ ದೀರ್ಘಾಲೋಚನೆ ಮತ್ತು ಸಲಹೆ ಪಡೆದುಕೊಳ್ಳುವುದನ್ನು ಅವಶ್ಯ. ನಂಬಿಕಸ್ಥ ಸ್ನೇಹಿತರೊಂದಿಗಷ್ಟೇ ಪ್ರಯಾಣದ ಯೋಜನೆ ರೂಪಿಸಿ. ಇಷ್ಟದ ಸಿಹಿ ಖಾದ್ಯಗಳನ್ನು ಸೇವಿಸುವ ಯೋಗವಿದೆ.
ಮಕರ
ವಿದ್ಯಾರ್ಥಿಗಳು ಶಿಕ್ಷಕರ ಹೆಸರನ್ನು ಉನ್ನತಮಟ್ಟಕ್ಕೆ ಕೊಂಡೊಯ್ಯುವರು. ಕ್ರೀಡಾ ಕ್ಷೇತ್ರದಲ್ಲಿ ಈಗಾಗಲೇ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿರುವವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸುವಿರಿ.
ಕುಂಭ
ಕುಟುಂಬದ ಅತಿ ಮುಖ್ಯ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದಾಗಿ ತಪ್ಪಿಸಿಕೊಳ್ಳಬೇಕಾದ ಪರಿಸ್ಥಿತಿಯು ನೋವುಂಟು, ಆಡಲಿದೆ. ಪದವೀದರರಿಗೆ ಸನ್ಮಾನದಂತಹ ಗೌರವ ದೊರಕಲಿದೆ.
ಮೀನ
ಮಗಳ ಮದುವೆಯ ಜವಾಬ್ದಾರಿಯು ಹೆಂಡತಿಯ ತವರು ಮನೆಯವರ ಸಹಕಾರದಿಂದಾಗಿ ನೀವಂದುಕೊಂಡಷ್ಟು ಕಷ್ಟವಾಗಿ ಪರಿಣಮಿಸದು. ವಾಹನ ಖರೀದಿಗೆ ಆತುರ ಬೇಡ.