ವಾರ ಭವಿಷ್ಯ: ಜೂನ್ 01 ರಿಂದ 07ರವರೆಗೆ; ಈ ರಾಶಿಯ ವ್ಯಾಪಾರಿಗಳಿಗೆ ಉತ್ತಮ ಲಾಭ
Published 31 ಮೇ 2025, 22:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಹಿತಶತ್ರುಗಳ ಕಾಟ ಜಾಸ್ತಿಯಾಗಬಹುದು. ಆದಾಯವು ಉತ್ತಮಗೊಳ್ಳುತ್ತದೆ. ಭೂಮಿ ವ್ಯಾಪಾರ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳು ದ್ವಂದ್ವದಲ್ಲಿ ತಮ್ಮ ಫಲಿತಾಂಶ ವ್ಯತ್ಯಾಸ ಮಾಡಿಕೊಳ್ಳುವರು. ನರ ದೌರ್ಬಲ್ಯ ಇದ್ದವರಿಗೆ ಈಗ ಆರೋಗ್ಯ ಸುಧಾರಿಸುತ್ತದೆ. ಸಂಗಾತಿ ಜತೆ ಮಾಡಿದ ವ್ಯವಹಾರಗಳಲ್ಲಿ ಲಾಭ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಕೆಲಸದ ಒತ್ತಡಗಳು ಬಹಳ ಹೆಚ್ಚಾಗಬಹುದು.
ವೃಷಭ
ಬಹಳ ಅಲಂಕಾರಿಕವಾಗಿ ಕಾಣಿಸಿಕೊಳ್ಳಲು ಪ್ರಯತ್ನಪಡುವಿರಿ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ಬಹಳ ಬುದ್ಧಿವಂತಿಕೆಯಿಂದ ಮಾತನಾಡಿ ಎಲ್ಲರನ್ನೂ ಸೆಳೆಯುವಿರಿ. ಆಸ್ತಿ ಖರೀದಿಯ ವಿಚಾರಗಳಲ್ಲಿ ಮೋಸವಾಗಬಹುದು ಎಚ್ಚರ. ವಿದ್ಯಾರ್ಥಿಗಳು ಶ್ರಮಪಟ್ಟು ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಕೆಲವರಿಗೆ ಬಾಯಿಯಲ್ಲಿ ತೊಂದರೆಯಾಗಬಹುದು. ಸಂಗಾತಿಯ ಆಲಸಿತನವು ನಿಮ್ಮನ್ನು ಕೆರಳಿಸುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ನಿರೀಕ್ಷೆಗೆ ಮೀರಿದ ವ್ಯಾಪಾರವಿರುತ್ತದೆ.
ಮಿಥುನ
ಏನನ್ನಾದರೂ ಸಾಧಿಸುವ ಆಲೋಚನೆಯಲ್ಲಿರುವಿರಿ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಮಾತಿನಲ್ಲಿ ಬಹಳ ಚುರುಕಾಗಿರುವಿರಿ. ವ್ಯವಹಾರಗಳಿಂದ ಹೆಚ್ಚು ಆದಾಯವನ್ನು ಪಡೆಯುವಿರಿ. ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ ಸಾಕಷ್ಟು ಲಾಭವಿರುತ್ತದೆ. ಶೀತ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಸಂಗಾತಿಯಿಂದ ನಿಮ್ಮ ಆದಾಯ ಕೂಡ ಹೆಚ್ಚುತ್ತದೆ. ವೃತ್ತಿಯಲ್ಲಿ ನಿಮ್ಮ ಕೆಲಸಕ್ಕೆ ತಕ್ಕಂತೆ ಸ್ಥಾನಮಾನ ದೊರೆಯುತ್ತದೆ. ಕೆಲಸದ ಒತ್ತಡ ಹೆಚ್ಚಾಗಬಹುದು.
ಕರ್ಕಾಟಕ
ಆದಾಯ ಕಡಿಮೆ ಇರುತ್ತದೆ. ಸಮೂಹದಲ್ಲಿ ಮಾತನಾಡುವಾಗ ಎಚ್ಚರಿಕೆ ಇರಲಿ, ಮಾತು ದಿಕ್ಕು ತಪ್ಪಬಹುದು. ಬಂಧುಗಳಿಂದ ಸಹಾಯ ದೊರೆಕದಿರಬಹುದು. ಮಧ್ಯವರ್ತಿ ಕೆಲಸ ಮಾಡುವವರಿಗೆ ಹೆಚ್ಚು ಕಮಿಷನ್ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶ ದೊರೆಯುವುದಿಲ್ಲ. ಕೆಲವರಿಗೆ ಜೀರ್ಣಕ್ರಿಯೆಯಲ್ಲಿ ಸಮಸ್ಯೆಯಾಗಬಹುದು. ಜಿಮ್ ನಡೆಸುವವರಿಗೆ ಅಷ್ಟು ಆದಾಯವಿರುವುದಿಲ್ಲ. ವೃತ್ತಿಯಲ್ಲಿ ಸ್ವಲ್ಪ ಕಿರಿಕಿರಿಯಾಗಬಹುದು.
ಸಿಂಹ
ಬಹಳಷ್ಟು ದ್ವಂದ್ವಗಳಿಂದ ವಾರದ ಆರಂಭವಾಗುತ್ತದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ಭೂಮಿ ವ್ಯವಹಾರಗಳಿಗೆ ಕೈಹಾಕದಿರುವುದು ಒಳ್ಳೆಯದು. ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಹೆಚ್ಚು ಅನುಕೂಲತೆ ಇರುತ್ತದೆ. ಪ್ರಮುಖ ಸರ್ಕಾರಿ ಹುದ್ದೆಗಳಲ್ಲಿ ಇರುವವರಿಗೆ ಜವಾಬ್ದಾರಿ ಹೆಚ್ಚುತ್ತದೆ. ಅನಿರೀಕ್ಷಿತವಾಗಿ ಆರೋಗ್ಯದ ವ್ಯತ್ಯಾಸಗಳಾಗಬಹುದು. ರಾಜಕಾರಣಿಗಳು ಜನರ ಆಕ್ರೋಶವನ್ನು ಎದುರಿಸಬೇಕಾಗಬಹುದು.
ಕನ್ಯಾ
ಕೆಲಸ ಕಾರ್ಯಗಳ ಬಗ್ಗೆ ಆಸಕ್ತಿ ಕಡಿಮೆಯಾಗುತ್ತದೆ. ಆದಾಯ ಕಡಿಮೆ ಇರುತ್ತದೆ. ನಿಮ್ಮ ಮಾತಿನಿಂದಾಗಿ ಬರುವ ಆದಾಯವು ನಿಲ್ಲಬಹುದು. ವೃತ್ತಿಯಲ್ಲಿ ಸ್ವಲ್ಪ ಉತ್ತಮ ವಾತಾವರಣವಿರುತ್ತದೆ. ಸಂಗಾತಿಯು ಸಂಸಾರದ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೆ. ಕೃಷಿ ಮೇಲೆ ಹೂಡಿದ ಹಣ ಸಂಪೂರ್ಣ ನಷ್ಟವಾಗುತ್ತದೆ. ಲೋಹದ ವ್ಯಾಪಾರಿಗಳಿಗೆ ಸಾಕಷ್ಟು ಲಾಭವಿರುತ್ತದೆ. ವ್ಯಾಪಾರದಲ್ಲಿ ಹೆಚ್ಚು ಲಾಭವಿರುತ್ತದೆ.
ತುಲಾ
ಆದಾಯವು ಕಡಿಮೆ ಇರುತ್ತದೆ. ಸಂಸಾರದಲ್ಲಿ ಸ್ವಲ್ಪ ಕಾವೇರಿದ ವಾತಾವರಣವಿರುತ್ತದೆ. ವಿದೇಶಕ್ಕೆ ಮಕ್ಕಳನ್ನು ಓದಲು ಕಳಿಸಬೇಕೆಂದವರಿಗೆ ಈಗ ಅವಕಾಶಗಳು ದೊರೆಯುತ್ತವೆ. ಮಾಂಸಖಂಡದ ಸೆಳೆತ ಕೆಲವರನ್ನು ಕಾಡಬಹುದು. ಸಂಗಾತಿಯಿಂದ ಸಂಸಾರಕ್ಕಾಗಿ ಅಲ್ಪಮಟ್ಟಿನ ಸಹಕಾರ ಸಿಗುತ್ತದೆ. ಬೆಳ್ಳಿಯ ವ್ಯಾಪಾರಿಗಳಿಗೆ ನಷ್ಟವಾಗಬಹುದು. ವೃತ್ತಿಯಲ್ಲಿ ಬುದ್ಧಿವಂತಿಕೆಯನ್ನು ಬಳಸಿ ಉನ್ನತ ಸ್ಥಾನ ಪಡೆಯಬಹುದು.
ವೃಶ್ಚಿಕ
ಮನಸ್ಸು ಗೊಂದಲದ ಗೂಡಾಗಿರುತ್ತದೆ. ಆದಾಯವು ಸ್ವಲ್ಪಮಟ್ಟಿಗೆ ಉತ್ತಮಗೊಳ್ಳುತ್ತದೆ. ನಿಮ್ಮ ಮಕ್ಕಳ ಸಹಾಯದಿಂದ ಶತ್ರುಗಳನ್ನು ಮಟ್ಟ ಹಾಕುವಿರಿ. ನವೀನ ರೀತಿಯ ಕೃಷಿಯನ್ನು ಮಾಡುವವರಿಗೆ ಹೆಚ್ಚು ಅನುಕೂಲವಿರುತ್ತದೆ. ನೀರಿನಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ಸರ್ಕಾರಿ ಕೆಲಸ ಕಾರ್ಯಗಳಿಗಾಗಿ ವಿನಿಯೋಗಿಸಿದ ಹಣ ಬರುವ ಸಾಧ್ಯತೆ ಕಡಿಮೆ. ತಂದೆಯ ವ್ಯಾಪಾರದಲ್ಲಿ ನಿಮಗೆ ಪಾಲು ದೊರೆಯುತ್ತದೆ. ಉದ್ಯೋಗದ ಸ್ಥಳದಲ್ಲಿ ಗೊಂದಲಗಳಿರುತ್ತವೆ.
ಧನು
ಬಹಳ ಹುಮ್ಮಸ್ಸಿನಿಂದ ಕೆಲಸ ಮಾಡುವಿರಿ. ಆದಾಯವು ಕಡಿಮೆ ಇದ್ದರೂ ತೊಂದರೆಯಾಗುವುದಿಲ್ಲ. ಸ್ವಯಂ ಕೃಷಿ ಮಾಡುವ ಆಲೋಚನೆ ಮೂಡುತ್ತದೆ. ವಿದ್ಯಾರ್ಥಿಗಳಿಗೆ ಈಗ ನಿರೀಕ್ಷಿತ ಫಲಿತಾಂಶ ಸಿಗುವುದಿಲ್ಲ. ಸ್ತ್ರೀರೋಗ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ವ್ಯಾಪಾರ, ವ್ಯವಹಾರಗಳಿಂದ ಆದಾಯ ಕಡಿಮೆಯಾಗಬಹುದು. ತಂದೆ ಮಕ್ಕಳ ಸಂಬಂಧ ಸರಿಯಾಗಿಟ್ಟುಕೊಳ್ಳುವುದು ಒಳ್ಳೆಯದು.
ಮಕರ
ವಿದೇಶಿ ಮೂಲದಿಂದ ಹಣ ಸಂಪಾದನೆ ಮಾಡುವ ಯೋಗವಿದೆ. ನಿಮ್ಮ ಪರಾಕ್ರಮದಿಂದ ಶತ್ರುಗಳನ್ನು ನಿಗ್ರಹಿಸುವಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಕಣ್ಣಿನ ತೊಂದರೆ ಇರುವವರು ಎಚ್ಚರವಹಿಸಿ. ಸಂಗಾತಿಯ ಜತೆಗೂಡಿ ಮಾಡಿದ ವ್ಯವಹಾರಗಳಲ್ಲಿ ನಿಮಗೆ ಲಾಭವಿರುತ್ತದೆ. ಕೃಷಿಯಿಂದ ಆದಾಯವಿರುವುದಿಲ್ಲ. ಹೈನುಗಾರಿಕೆಯಲ್ಲಿ ಪ್ರಗತಿ ಇರುವುದಿಲ್ಲ. ಉದ್ಯೋಗದಲ್ಲಿ ಪ್ರಗತಿ ಇರುತ್ತದೆ.
ಕುಂಭ
ಯುವಕರಿಗೆ ವಿದೇಶಿ ವ್ಯಾಮೋಹ ಬಹಳ ಹೆಚ್ಚಿರುತ್ತದೆ. ಆದಾಯ ಬಹಳ ಕಡಿಮೆ ಇರುತ್ತದೆ. ರಾಜಕಾರಣಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಸ್ಥಿರಾಸ್ತಿಯನ್ನು ಮಾಡಲು ಹಣಕಾಸಿನ ಸಹಾಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಮಕ್ಕಳ ಬಗ್ಗೆ ಶುಭ ವಾರ್ತೆಗಳನ್ನು ಕೇಳಬಹುದು. ವ್ಯವಹಾರದಲ್ಲಿ ಬಹಳಎಚ್ಚರವಾಗಿರಿ, ಇಲ್ಲವಾದಲ್ಲಿ ನಿಮ್ಮ ಲಾಭವನ್ನು ಬೇರೆಯವರು ತಿನ್ನಬಹುದು.
ಮೀನ
ಆದಾಯವು ಬಹಳ ಕಡಿಮೆ ಇರುತ್ತದೆ. ಸಹೋದರಿಯರಿಂದ ನಿಮಗೆ ಸಹಾಯ ಲಭಿಸುತ್ತದೆ. ನಿಮ್ಮ ಚಟುವಟಿಕೆಗಳಿಂದ ವೃತ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದಬಹುದು. ಮಠಮಾನ್ಯಗಳ ಆದಾಯ ಹೆಚ್ಚುತ್ತದೆ. ವೃತ್ತಿಯಲ್ಲಿ ಸ್ವಲ್ಪ ಸಂತೋಷವಿರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಬಹುದು. ಅಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಆದಾಯ ಹೆಚ್ಚುತ್ತದೆ. ತೆರಿಗೆ ತಜ್ಞರಿಗೆ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಉಕ್ಕಿನ ವ್ಯಾಪಾರಿಗಳಿಗೆ ಆದಾಯವಿರುತ್ತದೆ.