ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: ಭೂಮಿಯ ವ್ಯವಹಾರ ಮಾಡುವವರಿಗೆ ವ್ಯವಹಾರ ನಡೆದು ಕಮಿಷನ್ ಹಣ ಬರುತ್ತದೆ
Published 21 ಜನವರಿ 2024, 3:45 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಮನಸ್ಸಿನಲ್ಲಿ ಒಂದು ರೀತಿಯ ಪ್ರಶಾಂತತೆಯು ಇರುತ್ತದೆ. ಹಣದಒಳಹರಿವು ನಿಮ್ಮಅವಶ್ಯಕತೆಯನ್ನು ಪೂರೈಸುತ್ತದೆ. ನಿಮ್ಮ ಚಟುವಟಿಕೆಗಳಲ್ಲಿ ನಿಧಾನ ಗತಿ ಯನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ದೊರೆಯುತ್ತದೆ. ಹೊಟ್ಟೆಗೆ ಸಂಬಂಧಿಸಿದ ಕೆಲವು ಅನಾರೋಗ್ಯಗಳು ನಿಮ್ಮನ್ನು ಕಾಡಬಹುದು. ಆಸ್ತಿ ವಿಚಾರದಲ್ಲಿ ಸ್ವಲ್ಪ ಪ್ರಗತಿಯನ್ನು ಕಾಣಬಹುದು. ಸಂಗಾತಿಯ ಗೌರವಕಾಪಾಡಲು ಅವರ ಸಹಾಯಕ್ಕೆ ನಿಲ್ಲುವಿರಿ. ಕೃಷಿಕರಿಗೆ ನಿರೀಕ್ಷಿತ ಧನ ಲಾಭ ಇರುತ್ತದೆ. ಸರ್ಕಾರಿ ಆಡಿಟ್ ಮಾಡುವವರಿಗೆ ಹೆಚ್ಚಿನ ಕೆಲಸಗಳು ದೊರೆ ಯುತ್ತವೆ. ವೃತ್ತಿಯ ಸ್ಥಳದಲ್ಲಿ ನಾಯಕರಾಗಲು ಪ್ರಯತ್ನ ಮಾಡುವಿರಿ, ಆದರೆ ಎಚ್ಚರಿಕೆ ಹೆಜ್ಜೆ ಇರಲಿ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಸಾಕಷ್ಟು ಮುನ್ನಡೆ ಇರುತ್ತದೆ. ಮೂಳೆ ತಜ್ಞರಿಗೆ ಬೇಡಿಕೆ ಕಡಿಮೆ ಯಾಗಬಹುದು.
ವೃಷಭ
ವಾರದ ಆರಂಭ ಬಹಳ ಸಂತೋಷದಾಯಕ ವಾಗಿರುತ್ತದೆ. ಧನದಾಯವು ಮಧ್ಯಮ ಗತಿಯಲ್ಲಿರು ತ್ತದೆ. ಬಹಳ ಚುರುಕಾಗಿ ಕೆಲಸ ಮಾಡಿ ಎಲ್ಲರಿಂದ ಹೊಗಳಿಕೆ ಪಡೆಯುವಿರಿ. ಆಸ್ತಿ ಖರೀದಿಯ ಬಗ್ಗೆ ಇದ್ದ ತಕರಾರುಗಳು ಈಗ ಪರಿಹಾರವಾಗುತ್ತದೆ. ವಿದ್ಯಾರ್ಥಿ ಗಳಿಗೆ ಅಧ್ಯಯನದಲ್ಲಿ ಅಷ್ಟು ಶ್ರದ್ಧೆ ಇರುವುದಿಲ್ಲ. ಕೆಲವರಿಗೆ ಗುಪ್ತಾಂಗಗಳಲ್ಲಿತೊಂದರೆಕಾಣಿಸಬಹುದು. ಸಂಗಾತಿಕೊಳ್ಳುವ ಆಸ್ತಿಗೆ ಧನಸಹಾಯ ಮಾಡಲೇ ಬೇಕಾದ ಅನಿವಾರ್ಯತೆ ಎದುರಾಗುತ್ತದೆ.ತಂದೆ ಅಥವಾ ಹಿರಿಯರ ಸಹಾಯದಿಂದ ಉದ್ಯೋಗದಲ್ಲಿ ಅನುಕೂಲವಾಗಬಹುದು. ವೃತ್ತಿಯಲ್ಲಿ ಹೆಚ್ಚು ಶ್ರಮ ಹಾಕಲೇಬೇಕಾದ ಅನಿವಾರ್ಯತೆ ಇರುತ್ತದೆ. ರಾಜ ಕೀಯ ನಾಯಕರುಗಳಿಗೆ ನಂಬಿಕಸ್ತ ಹಿಂಬಾಲಕರು ದೊರೆಯುವರು. ವಿದೇಶದಲ್ಲಿ ಉದ್ಯೋಗದಲ್ಲಿರುವ ವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ.
ಮಿಥುನ
ಬಹಳಷ್ಟು ವಿಚಾರಗಳಲ್ಲಿ ದ್ವಂದ್ವ ವಿರುತ್ತದೆ. ಮಾತನಾಡುವಾಗ ಎಚ್ಚರಿಕೆ ಇರಲಿ ನಿಮ್ಮ ಮಾತು ನಿಮಗೆ ವಾಪಸ್ ಬರುವ ಸಾಧ್ಯತೆ ಇದೆ. ಹಣದ ಒಳ ಹರಿವು ಮಂದಗತಿಯಲ್ಲಿರುತ್ತದೆ. ನಿಮ್ಮ ಚಟುವಟಿಕೆ ಗಳಲ್ಲಿ ಚುರುಕುತನವನ್ನು ಕಾಣಬಹುದು. ಬಂಧುಗಳು ನಿಮ್ಮ ಸಹಕಾರಕ್ಕೆ ಬರುತ್ತಾರೆ. ಆಸ್ತಿ ವಿಸ್ತರಣೆಯನ್ನು ಮಾಡಿಕೊಳ್ಳಬಹುದು.. ವಿದ್ಯಾರ್ಥಿಗಳಿಗೆ ಅಧ್ಯಯನ ದಲ್ಲಿ ಯಶಸ್ಸು ದೊರೆಯುತ್ತದೆ. ಹರಿತವಾದ ಆಯುಧ ಗಳನ್ನು ಉಪಯೋಗಿಸುವಾಗ ಎಚ್ಚರ ಇರಲಿ. ನಿಮ್ಮ ಸಂಗಾತಿ ನಿಮ್ಮ ವ್ಯವಹಾರಗಳಿಗೆ ಸಾಕಷ್ಟು ಸಹಕಾರ ನೀಡುವರು. ರಾಜಕೀಯ ನಾಯಕರುಗಳಿಗೆ ಇದ್ದ ಕಾನೂನಿನ ತೊಡಕುಗಳು ಬಿಡುಗಡೆಯಾಗಬಹುದು. ಹಿರಿಯರಿಂದ ಜನಸಂಪರ್ಕ ಹೆಚ್ಚಾಗುತ್ತದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ.
ಕರ್ಕಾಟಕ
ಆತ್ಮ ಗೌರವ ಹೆಚ್ಚಾಗಿ ಇರುತ್ತದೆ. ಧನಾದಾಯವು ನಿಮ್ಮನಿರೀಕ್ಷೆಯನ್ನು ತಲುಪುತ್ತದೆ.ಪಾಲುದಾರಿಕೆ ವ್ಯವ ಹಾರಗಳಲ್ಲಿ ನಿಮಗೆ ಹೆಚ್ಚು ಲಾಭವಿರುತ್ತದೆ. ಭಾಷಣ ಕಾರರಿಗೆ ಉತ್ತಮ ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ವನ್ನು ಮಂಡಿಸುವ ಯೋಗವಿದೆ. ಬಂಧುಗಳು ನಿಮ್ಮ ಕೆಲಸಕಾರ್ಯಗಳಿಗೆ ಅಡ್ಡಿಯಾಗಬಹುದು. ನಿಮ್ಮ ಸಂಗಾತಿಯ ಅತಿ ಮಾತುಗಳು ಬಹಳ ಬೇಸರ ಹುಟ್ಟಿ ಸಬಹುದು. ಆಸ್ತಿ ಹೂಡಿಕೆ ಮೇಲೆ ಹಣ ಹೂಡುವಾಗ ಎಚ್ಚರವಿರಲಿ, ಮೋಸ ಹೋಗುವ ಸಾಧ್ಯತೆಗಳು ಇವೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ದೊರೆಯುವುದು ಕಷ್ಟ. ಚರ್ಮ ರೋಗಗಳು ಕೆಲವರನ್ನು ಕಾಡಬಹುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಪಾಲುದಾರರು ನಿಮಗೆ ಹೆಚ್ಚಿನ ಸ್ಥಾನಮಾನ ಕೊಡುವರು. ವಾಹನ ಮಾರಾಟಗಾರರಿಗೆ ವ್ಯವಹಾರ ಹೆಚ್ಚಾಗಿ ಲಾಭ ಬರು ತ್ತದೆ. ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಗೌರವದ ಜೊತೆ ಆದಾಯವು ಹೆಚ್ಚುತ್ತದೆ.
ಸಿಂಹ
ನಿಮ್ಮ ಉತ್ಸಾಹವು ಕಡಿಮೆಯಾದಂತೆ ಅನಿಸ ತೊಡಗುತ್ತದೆ. ನಿಮ್ಮ ಮಾತಿನಲ್ಲಿ ಕಾಠಿಣ್ಯತೆ ಬೇಡ, ಸೌಮ್ಯತೆ ಇದ್ದಲ್ಲಿ ನಿಮಗೆ ಹೆಚ್ಚು ಅನುಕೂಲ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ನಿಮ್ಮ ಚಟು ವಟಿಕೆಗಳಲ್ಲಿ ವ್ಯವಹಾರಿಕತೆಯನ್ನು ಕಾಣಬಹುದು. ಅಪೇಕ್ಷಿತ ಆಸ್ತಿಯನ್ನುಕೊಳ್ಳಲು ಮನಸ್ಸುಮಾಡುವಿರಿ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಕಣ್ಣಿನತೊಂದರೆ ಅಥವಾ ತಲೆಗೆಪೆಟ್ಟು ಬಿದ್ದಿರುವವರು ಹೆಚ್ಚು ಎಚ್ಚರ ವಹಿಸಿರಿ. ಹಿರಿಯರ ಆರೋಗ್ಯಕ್ಕಾಗಿ ಹೆಚ್ಚು ಗಮನ ಕೊಡಲೇಬೇಕು. ಸಂಸಾರದಲ್ಲಿ ಸ್ವಲ್ಪ ಕಾವೇರಿದ ಮಾತುಗಳಾಗಬಹುದು. ವಿದೇಶದಲ್ಲಿರುವ ವರಿಗೆ ಸ್ವಲ್ಪಮಟ್ಟಿನ ಕಾನೂನುತೊಡಕುಗಳು ಎದುರಾ ದರೂ ನಂತರ ಸರಿಯಾಗುತ್ತದೆ. ಹಿರಿಯರಮನಸ್ಸನ್ನು ಗೆಲ್ಲುವದರಲ್ಲಿ ಯಶಸ್ವಿಯಾಗುವಿರಿ. ವೃತ್ತಿಯಲ್ಲಿ ಸ್ವಲ್ಪ ಸಂಕಷ್ಟಗಳಿದ್ದರೂ ಸಹ ವೃತ್ತಿ ಮುಂದುವರೆಯುತ್ತದೆ.
ಕನ್ಯಾ
ಕೆಲವೊಂದು ಕೆಲಸಗಳು ಆಗದೆ ಇರುವುದರಿಂದ ಮನಸ್ಸು ವ್ಯಘ್ರವಾಗಿರುತ್ತದೆ, ಸಮಾಧಾನವಾಗಿರುವುದು ಬಹಳ ಒಳ್ಳೆಯದು. ನಿಮ್ಮ ನಿರೀಕ್ಷೆಯಷ್ಟು ಧನ ದಾಯ ಇಲ್ಲದಿದ್ದರೂ ಸಹ ತೀರಾ ತೊಂದರೆ ಏನಿಲ್ಲ. ನಿಮ್ಮಚಟುವಟಿಕೆಗಳಿಂದಲೇ ವೈರಿಗಳನ್ನು ಸಂಪಾದನೆ ಮಾಡಿಕೊಳ್ಳುವಿರಿ. ಭೂಮಿಯ ವ್ಯವಹಾರವನ್ನು ಮಾಡುವವರಿಗೆ ವ್ಯವಹಾರ ನಡೆದು ಕಮಿಷನ್ ಹಣ ಬರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆತೆಯ ಹತ್ತಿರ ಫಲಿ ತಾಂಶ ದೊರೆಯುತ್ತದೆ. ಕೆಲವರಿಗೆ ಸಾಲ ಕೊಟ್ಟವರು ಬಂದು ಕಾಡುವ ಸಾಧ್ಯತೆ ಇದೆ. ನಿಮ್ಮ ಹಿತವಚನ ದಿಂದ ಸಂಗಾತಿಯು ಖರ್ಚನ್ನು ಕಡಿಮೆ ಮಾಡುವರು. ವೃತ್ತಿಯ ಸ್ಥಳದಲ್ಲಿ ಸ್ವಲ್ಪ ಗೊಂದಲಗಳು ಉಂಟಾಗುವ ಸಾಧ್ಯತೆಗಳಿವೆ. ಕೆಲವುಹಿರಿಯರು ನಿಮ್ಮಮೇಲೆ ಸಿಟ್ಟಾ ಗಬಹುದು. ಹಿರಿಯರಿಂದ ಸಿಗುವ ಆದಾಯ ಕಡಿಮೆ ಯಾಗಬಹುದು. ವೃತ್ತಿಯಲ್ಲಿ ಮೇಲಧಿಕಾರಿಗಳ ಶ್ರೀರಕ್ಷೆ ಇರುತ್ತದೆ.
ತುಲಾ
ಎಲ್ಲರಲ್ಲೂ ಹೊಂದಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುವಿರಿ, ಹೀಗೆ ಮಾಡಿ ನಿಮ್ಮ ವರ್ಚಸ್ಸನ್ನು ಉಳಿಸಿಕೊಳ್ಳಲು ಯತ್ನಿಸುವಿರಿ. ನಿಮ್ಮ ಕೆಲಸಕಾರ್ಯ ಗಳಿಂದ ಹಣ ಸಂಪಾದನೆ ಮಾಡಬಹುದು. ನಿಮ್ಮೆಲ್ಲಾ ಕೆಲಸ ಕಾರ್ಯಗಳಲ್ಲಿ ಚಟುವಟಿಕೆಗಳಲ್ಲಿ ಸಂಪೂರ್ಣ ವ್ಯವಹಾರಿಕತೆ ಇರುತ್ತದೆ. ಕೃಷಿ ಭೂಮಿಯನ್ನು ಈಗ ಹೊಂದುವ ಯೋಗವಿದೆ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಲಾಭವಿರುತ್ತದೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ವಿದೇಶಿ ಸಂಸ್ಥೆಗಳಿಂದ ಸಾಲ ಪಡೆ ದವರಿಗೆ ಸಮಸ್ಯೆಗಳು ಹೆಚ್ಚಾಗಬಹುದು. ಸಂಗಾತಿಯ ಸಾಂತ್ವನದಮಾತುಗಳು ನಿಮಗೆ ನೆಮ್ಮದಿತರಬಹುದು. ಹಣದ ನಿರ್ವಹಣೆಯು ಬಹಳ ಮುಖ್ಯ ಇಲ್ಲವಾದಲ್ಲಿ ಸಾಲಗಾರರ ಕಾಟ ಬರಬಹುದು. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಕೈಸಾಲ ಕೊಟ್ಟಲ್ಲಿ ನಷ್ಟ ಅನುಭವಿಸುವ ಸಂದರ್ಭವಿದೆ.
ವೃಶ್ಚಿಕ
ಸಮೂಹದಲ್ಲಿ ಉತ್ತಮ ಗೌರವ ದೊರೆಯುತ್ತದೆ. ಧಮದಾಯವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಜಾಣ ತನದಿಂದ ಶತ್ರುಗಳನ್ನು ನಿವಾರಣೆ ಮಾಡಿಕೊಳ್ಳುವಿರಿ. ಕೃಷಿ ಸಂಬಂಧಿತ ಚಟುವಟಿಕೆಗಳನ್ನು ಮಾಡುವವರಿಗೆ ಈಗ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಹೊಸ ಆಸ್ತಿಯನ್ನು ಕೊಳ್ಳುವ ವಿಚಾರ ಈಗ ಸದ್ಯಕ್ಕೆ,ಬೇಡ. ಆಟೋಮೊಬೈಲ್ ಕ್ಷೇತ್ರದಲ್ಲಿ ಕಲಿಯುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆ ಯುತ್ತದೆ. ಲೆವಾದೇವಿ ವ್ಯವಹಾರವನ್ನು ಮಾಡುತ್ತಿರುವವರಿಗೆ ಹಿನ್ನಡೆಆಗಬಹುದು. ಸಂಗಾತಿಯು ನಿಮ್ಮೆಲ್ಲಾ ಕಾರ್ಯಗಳಿಗೆ ಧನ ಮತ್ತು ವೈಯಕ್ತಿಕ ಸಹಕಾರಗಳನ್ನು ನೀಡುವರು.ಸರ್ಕಾರದಿಂದ ಕೃಷಿಕರಿಗೆ ಈಗ ಸಹಾಯ ಧನಗಳು ದೊರೆಯುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಹಿರಿಯರ ಮಾರ್ಗದರ್ಶನ ದೊರೆತು ಏಳಿಗೆಯನ್ನು ಸಾಧಿಸುವಿರಿ.ಧಾರ್ಮಿಕಸಂಸ್ಥೆಗಳನ್ನು ನಡೆಸುವವರಿಗೆ ಹೆಚ್ಚು ಆದಾಯ ಬರುವ ಸಾಧ್ಯತೆ ಇದೆ.
ಧನು
ಆತ್ಮ ಪೂರಕವಾಗಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಧನಾದಾಯವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ಸರ್ಕಾರದಿಂದ ಅಥವಾ ಸಂಸ್ಥೆ ಗಳಿಂದ ಬರಬೇಕಾಗಿದ್ದ ಸಹಾಯಧನಗಳು ಈಗ ಬರು ತ್ತವೆ. ನಿಮ್ಮಶತ್ರುಗಳಿಗೆ ನಿಮ್ಮನ್ನಕಂಡರೆ ಭಯಪಡುವ ಸಂದರ್ಭಗಳು ಇರುತ್ತವೆ. ವಿದೇಶದಲ್ಲಿರುವವರು ಈಗ ಸ್ಥಿರಾಸ್ತಿಯನ್ನು ಮಾಡಿಕೊಳ್ಳಬಹುದು. ವಿದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ವಿದೇಶದಲ್ಲಿ ಓದುತ್ತಿರುವ ವರಿಗೆ ಹೆಚ್ಚು ಅನುಕೂಲಗಳು ದೊರೆಯುತ್ತವೆ. ಸ್ತ್ರೀರೋಗ ತಜ್ಞರಿಗೆ ಸ್ವಲ್ಪಮಟ್ಟಿಗೆ ಬೇಡಿಕೆ ಕಡಿಮೆಯಾ ಗುವ ಸಂದರ್ಭವಿದೆ. ಸಂಗಾತಿ ತಡೆಯ ವ್ಯವಹಾರಗ ಳಲ್ಲಿ ನಿಮಗೂ ಪಾಲು ದೊರೆಯುತ್ತದೆ. ನಿಮ್ಮ ವ್ಯವ ಹಾರಗಳ ಅಭಿವೃದ್ಧಿಗೆ ಸಂಗಾತಿ ಹೆಚ್ಚು ಶ್ರಮಿಸುತ್ತಾರೆ. ಕ್ಷೀರೋತ್ಪನ್ನಗಳನ್ನು ತಯಾರಿಸಿ ಮಾರುವವರಿಗೆ ಹೆಚ್ಚು ಆದಾಯವಿರುತ್ತದೆ.
ಮಕರ
ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರಿಗೆ ವಿಶೇಷ ಗೌರವ ದೊರೆಯುತ್ತದೆ. ನಿಮ್ಮ ಆತ್ಮವಿಶ್ವಾಸವು ಕೆಲಸ ಕಾರ್ಯಗಳಲ್ಲಿ ಶ್ರೇಯಸ್ ಅನ್ನು ಕೊಡುತ್ತದೆ. ಹಣದ ಒಳಹರಿವು ಕಡಿಮೆ ಇದ್ದರೂ ಸಹ ಹಣ ನಿರ್ವಹಣೆ ಯಲ್ಲಿ ಯಶಸ್ಸನ್ನು ಕಾಣುವಿರಿ. ಸಾಹಸ ಕಲಾವಿದರು ಗಳಿಗೆ ಹೆಚ್ಚಿನ ಅವಕಾಶಗಳು ದೊರೆತು ಹೆಚ್ಚು ಸಂಪಾ ದನೆಯಾಗುತ್ತದೆ. ಕೆಲವು ಬಂಧುಗಳು ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಬರುವ ಸಾಧ್ಯತೆ ಇದೆ ಎಚ್ಚರ ವಹಿಸಿರಿ. ಆಸ್ತಿಕೊಳ್ಳುವುದಕ್ಕೆ ಬೇಕಾದ ಹಣಒಗ್ಗೂಡಿಕೆ ಮಾರ್ಗಗಳು ಗೋಚರಿಸುತ್ತವೆ. ಸಂಗೀತ ವಿದ್ಯಾರ್ಥಿ ಗಳಿಗೆ ಅತಿ ಹೆಚ್ಚು ಯಶಸ್ಸು ಇರುತ್ತದೆ. ಸಾಮಾನ್ಯ ವಿದ್ಯಾರ್ಥಿಗಳಿಗೆ ಸಹ ಉತ್ತಮ ಫಲಿತಾಂಶವಿರುತ್ತದೆ. ರಕ್ತ ಸಂಬಂಧಿ ಕಾಯಿಲೆಗಳಿರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಯಿಂದ ನಿರೀಕ್ಷಿತ ಧನಸಹಾಯ ಇರುತ್ತದೆ.ನಟನೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ.
ಕುಂಭ
ಹಿರಿಯರು ನಿಶ್ಚಲ ಮನಸ್ಥಿತಿನಿಂದ ಕೆಲಸ ಕಾರ್ಯಗಳನ್ನು ಆರಂಭಿಸಿ ಮುಗಿಸುವರು. ಆಮದು ಮತ್ತು ರಫ್ತು ವ್ಯಾಪಾರ ಮಾಡುವವರಿಗೆ ನಿರೀಕ್ಷಿತ ಆದಾಯವಿರುತ್ತದೆ. ಕಿರಿಯರ ನಡವಳಿಕೆಗಳು ಬೇರೆ ಯವರಿಗೆ ಪ್ರೇರಣೆ ಕೊಡುತ್ತವೆ.ಆಸ್ತಿಖರೀದಿಮಾಡುವ ವಿಷಯದಲ್ಲಿ ಒಂದು ಮೆಟ್ಟಿಲು ಮುಂದೆ ಹೋಗುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಫಲಿತಾಂಶ ದೊರೆಯುತ್ತದೆ. ತೆರಿಗೆ ಅಧ್ಯಯನ ಮಾಡುತ್ತಿರುವವ ರಿಗೆ ಬಹಳ ಯಶಸ್ಸು ದೊರೆಯುತ್ತದೆ. ಅನಾರೋಗ್ಯ ಪೀಡಿತರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬ ಹುದು. ಸಂಗಾತಿಯು ಪ್ರವಾಸಕ್ಕೆ ಹೋಗಲು ಒತ್ತಾಯ ಮಾಡುವರು. ಯುವಕರು ಧಾರ್ಮಿಕ ಕಾರ್ಯ ಕ್ರಮಗ ಳಲ್ಲಿ ತೋರಿಕೆಗಾಗಿ ಭಾಗವಹಿಸುವರು. ಕೆಲವರಿಗೆ ಹಿರಿಯರ ಒಡವೆಗಳು ದೊರೆಯುವ ಸಾಧ್ಯತೆಗಳಿವೆ. ಕೃಷಿ ಭೂಮಿಯನ್ನು ವಿಸ್ತರಣೆ ಮಾಡಬಹುದು. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸಿ ಮಾರು ವವರಿಗೆ ಲಾಭವಿರುತ್ತದೆ. ಸರ್ಕಾರಿ ಗುತ್ತಿಗೆಗಳನ್ನು ಮಾಡುವವರಿಗೆ ಆದಾಯ ಹೆಚ್ಚುತ್ತದೆ.
ಮೀನ
ಒಳ ಮನಸು ಮತ್ತು ಹೊರಮನಸಿಗೆ ಹೊಂದಾಣಿಕೆ ಇರುವುದಿಲ್ಲ. ಧನಾದಾಯವು ನಿಮ್ಮ ಅಪೇಕ್ಷೆಯನ್ನು ಪೂರೈಸುವಷ್ಟಿರುತ್ತದೆ. ತಾಯಿಯಿಂದ ಕೆಲಸ ಕಾರ್ಯಗಳಿಗೆ ಸಹಾಯ ದೊರೆಯುತ್ತದೆ. ಸಂಸಾರದಲ್ಲಿ ವಾಗ್ವಾದದಿಂದ ಸಂತೋಷವನ್ನುಹಾಳು ಮಾಡಿಕೊಳ್ಳುವಿರಿ. ವ್ಯವಹಾರಗಳಲ್ಲಿ ನಿಮ್ಮದೇ ಅನ್ನು ವಂತಹ ಛಾಪು ಮೂಡಿಸುವಿರಿ. ವಿದ್ಯಾರ್ಥಿಗಳುಹೆಚ್ಚು ಶ್ರದ್ದೆ ಹಾಕಿದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕಾಣ ಬಹುದು. ವೈಯಕ್ತಿಕವಾಗಿ ಕಣ್ಣು ಮತ್ತು ತಲೆ ಕಡೆ ಹೆಚ್ಚಿನ ಗಮನ ಕೊಡಿರಿ. ಸಂಗಾತಿಯು ನಿಮಗೆ ಹೆಚ್ಚಿನ ಸ್ವಾತಂತ್ರ್ಯ ಕೊಡುವರು. ಕಾಲಿನ ನೋವು ಈಗ ಸ್ವಲ್ಪ ತೊಂದರೆ ಕೊಡಬಹುದು. ಕೊಟ್ಟಿದ್ದ ಸಾಲಗಳು ಪುನಃ ವಾಪಸ್ ಬರುವುದು ಕಷ್ಟವಾಗುತ್ತದೆ. ಕ್ರೀಡಾಪಟುಗ ಳಿಗೆ ಉದ್ಯೋಗ ದೊರೆಯುವ ಸಂದರ್ಭಗಳಿವೆ