ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: ಈ ರಾಶಿಯವರಿಗೆ ಹಣದ ಒಳ ಹರಿವು ಮಂದಗತಿಯಲ್ಲಿರುತ್ತದೆ
Published 2 ಡಿಸೆಂಬರ್ 2023, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಅತಿಯಾದ ಆತ್ಮಭಿಮಾನ ನಿಮ್ಮಲ್ಲಿ ಇರುತ್ತದೆ. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ಬಹಳ ಬುದ್ಧಿವಂತಿಕೆಯ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ಆಸ್ತಿ ಕೊಳ್ಳುವ ವಿಚಾರದಲ್ಲಿ ಮುಂದುವರಿಯಬಹುದು. ಪಶು ಸಂಗೋಪನಾ ಇಲಾಖೆಯಲ್ಲಿ ಕೆಲಸ ಮಾಡುವ ಕೆಲವರಿಗೆ ಅಭಿವೃದ್ಧಿ ಇರುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಸಿಗುವುದು ಕಷ್ಟ. ಆರೋಗ್ಯದಲ್ಲಿ ತಕ್ಷಣದ ಏರಿಳಿತಗಳು ಉಂಟಾಗಿ ಸ್ವಲ್ಪ ದಿನ ನರಳು ವಂತಾಗಬಹುದು. ಸಂಗಾತಿಯ ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಲೇವಾದೇವಿ ವ್ಯವಹಾರಗಳು ನಷ್ಟ ಉಂಟುಮಾಡಬಹುದು. ಸಂಗಾತಿಯಿಂದ ಹೆಚ್ಚಿನ ಹಣಕ್ಕೆ ಬೇಡಿಕೆ ಬರಬಹುದು. ಸೇನೆ ಅಥವಾ ರಕ್ಷಣಾ ಪಡೆಯಲ್ಲಿರುವವರಿಗೆ ಉನ್ನತ ಸ್ಥಾನ ಸಿಗುವ ಸಾಧ್ಯತೆ ಇದೆ. ವಿದೇಶ ವೀಕ್ಷಣೆಗೆ ಹೋಗಬೇಕೆನ್ನುವವರಿಗೆ ಅವಕಾಶಗಳು ಸಿಗುತ್ತವೆ
ವೃಷಭ
ಕೆಲವು ಬಾರದಿದ್ದ ಸಾಲಗಳು ಈಗ ಬರುವ ಸಾಧ್ಯತೆಗಳಿವೆ. ನವೀನ ರೀತಿಯ ಕೃಷಿಗೆ ಹೆಚ್ಚು ಆಸಕ್ತಿಯನ್ನು ತೋರುವಿರಿ. ವಾಹನ ದುರಸ್ತಿ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ಹಿರಿಯರ ಆರೋಗ್ಯಕ್ಕಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ಹಿರಿಯರ ಆರೈಕೆಗಾಗಿ ಹೆಚ್ಚಿನ ಹಣ ಖರ್ಚಾಗುತ್ತದೆ. ಲೇವಾದೇವಿ ವ್ಯವಹಾರಗಳು ನಷ್ಟ ಉಂಟು ಮಾಡಬಹುದು. ಸಂಗಾತಿಯಿಂದ ಹೆಚ್ಚಿನ ಹಣಕ್ಕೆ ಬೇಡಿಕೆಬರಬಹುದು. ಸೇನೆ ಅಥವಾ ರಕ್ಷಣಾ ಪಡೆಯಲ್ಲಿರುವವರಿಗೆ ಉನ್ನತ ಸ್ಥಾನ ಸಿಗುವ ಸಾಧ್ಯತೆ ಇದೆ. ಶಿಕ್ಷಣ ಸಂಸ್ಥೆಗಳನ್ನು ನಡಸುತ್ತಿರುವವ ರಿಗೆ ಅಭಿವೃದ್ಧಿ ಇರು ತ್ತದೆ. ವೃತ್ತಿಯಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ಬಹಳ ದಿನದಿಂದ ಸ್ಥಾನಮಾನಕ್ಕಾಗಿ ಹೋರಾಡುತ್ತಿದ್ದ ಕೆಲವು ರಾಜಕಾರಣಿಗಳಿಗೆ ಈಗ ಸ್ಥಾನ ದೊರೆಯುತ್ತದೆ. ವಿದೇಶ ವೀಕ್ಷಣೆಗೆ ಹೋಗಬೇಕೆನ್ನುವವರಿಗೆ ಅವಕಾಶಗಳು ಸಿಗುತ್ತವೆ..
ಮಿಥುನ
ಬಹಳ ಜಾಣತನ ಈ ವಾರ ನಿಮಗೆ ಮೈಗೂಡುತ್ತದೆ. ಗಣಿತ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಹಕಾರ ಮತ್ತು ಯಶಸ್ಸು ಸಿಗುತ್ತದೆ. ಧನಾದಾಯವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ. ತಾಯಿಯಿಂದ ಅಥವಾ ಸೋದರಿಯರಿಂದ ನಿಮಗೆ ಧನ ಸಹಾಯ ಸಿಗುತ್ತದೆ. ಹಿರಿಯ ಬಂಧುಗಳು ನಿಮ್ಮ ಕೆಲಸ ಕಾರ್ಯಗಳಿಗೆ ತಡೆ ಉಂಟುಮಾಡಬಹುದು. ಆಸ್ತಿಕೊಳ್ಳುವ ವಿಚಾರದಲ್ಲಿ ಅಂತಹ ಪ್ರಗತಿ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಯಶಸ್ಸು ಇರುತ್ತದೆ. ಫ್ಯಾಶನ್ ಡಿಸೈನನ್ನು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಸರ್ಕಾರಿ ಕೆಲಸಕಾರ್ಯಗಳಲ್ಲಿ ಸ್ವಲ್ಪನಿಧಾನ ಗತಿಯನ್ನು ಕಾಣಬಹುದು. ಸಂಗಾತಿಯು ನಿಮ್ಮನ್ನು ಅನುಸರಿಸಿ ನಿಮ್ಮೆಲ್ಲಾ ಕೆಲಸ ಕಾರ್ಯಗಳಿಗೆ ಸಹಕಾರ ನೀಡುವವರು. ವಿದೇಶದಲ್ಲಿ ವೃತ್ತಿಯಲ್ಲಿರುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ.
ಕರ್ಕಾಟಕ
ವಾರದ ಆರಂಭವು ಪ್ರಪಲ್ಲದಾಯಕವಾಗಿರುತ್ತದೆ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಧನದಾಯವು ನಿರೀಕ್ಷಿತ ಮಟ್ಟದಲ್ಲಿ ಬರುವ ಸಾಧ್ಯತೆ ಇದೆ. ನಿಮ್ಮ ಚಟುವಟಿಕೆಗಳಲ್ಲಿ ಆಲಸೀತನವನ್ನು ಕಾಣಬಹುದು. ವ್ಯಾಪಾರಿಗಳಿಗೆ ಸ್ವಲ್ಪಮಟ್ಟಿನ ವ್ಯಾಪಾರ ವೃದ್ಧಿ ಇರುತ್ತದೆ. ತಂದೆ ಮಕ್ಕಳ ಸಂಬಂಧ ಬಹಳ ಅನ್ಯೋನ್ಯವಾಗಿರುತ್ತದೆ. ಕ್ರೀಡಾಪಟುಗಳಿಗೆ ಸರ್ಕಾರದಿಂದ ಸಾಕಷ್ಟು ಉತ್ತೇಜನ ಇರುತ್ತದೆ. ರಕ್ತ ಪರಿಚಲನೆ ಅಥವಾ ನರ ದೌರ್ಬಲ್ಯ ಇರುವವರು ಎಚ್ಚರಿಕೆ ವಹಿಸಿರಿ. ಹಣದ ಒಳಹರಿವು ನಿರೀಕ್ಷಿತ ಮಟ್ಟದಲ್ಲಿ ಇದ್ದರೂ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಕೆಲವೊಮ್ಮೆ ನಿಮ್ಮ ಬುದ್ಧಿವಂತಿಕೆ ಕಳೆದು ಹೋದಂತಾಗುತ್ತದೆ. ತಾಯಿಯಿಂದ ಅಥವಾ ಹಿರಿಯ ಹೆಂಗಸರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿಯಾಗಬಹುದು.
ಸಿಂಹ
ಕುಟುಂಬದಲ್ಲಿ ಸಂತೋಷವನ್ನು ಕಾಣುವಿರಿ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮ ಚಟುವಟಿಕೆಗಳಲ್ಲಿ ಹೆಚ್ಚಿನ ಅಲಂಕಾರತೆಯನ್ನು ಕಾಣಬಹುದು. ಸಹೋದರಿಯರಿಂದ ನಿಮ್ಮ ಕೆಲಸ ಗಳಿಗೆ ಅಡ್ಡಿ ಎದುರಾದರು ನಂತರ ಸರಿಯಾಗುತ್ತದೆ. ಆಸ್ತಿಯನ್ನು ಕೊಳ್ಳುವ ವಿಚಾರದಲ್ಲಿ ಸರ್ಕಾರದಿಂದ ಧನಸಹಾಯಗಳು ದೊರೆಯಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ದೊರೆಯುತ್ತದೆ. ಸಾಫ್ಟ್ ವೇರ್ ತಂತ್ರಜ್ಞರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ರಾಜಕಾರಣಿಗಳಿಗೆ ಕಾನೂನಿನತೊಡಕುಗಳು ಎದುರಾಗುವ ಸಾಧ್ಯತೆಗಳಿವೆ. ರಾಜಕಾರಣಿಗಳು ಗ್ರಾಮಗಳ ಹಿರಿಯರನ್ನು ಓಲೈಸುವುದರಲ್ಲಿ ಯಶಸ್ವಿಯಾಗುವರು. ಉದರ ಸಂಬಂಧಿ ದೋಷಗಳು ಅಥವಾ ವಾಯು ಪ್ರಕೋಪ ನಿಮ್ಮನ್ನು ಕಾಡಬಹುದು. ಸಂಗಾತಿಯು ನಿಮ್ಮ ಮೇಲೆ ಕೋಪಿಸಿಕೊಂಡರೂ ನಂತರ ಸರಿಯಾಗುವರು.
ಕನ್ಯಾ
ಸ್ವಲ್ಪ ಆಲಸೀತನ ಮೈಗೂಡಿದ್ದು ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಮ್ಮಿಯಾಗುತ್ತದೆ. ಹಣದ ಒಳ ಹರಿವು ಮಂದ ಗತಿಯಲ್ಲಿರುತ್ತದೆ. ಕ್ರೀಡಾಪಟುಗಳಿಗೆ ಸರ್ಕಾರಿ ಸಂಸ್ಥೆಗಳಲ್ಲಿ ಕ್ರೀಡಾ ಕಲಿಕೆಯ ಅವಕಾಶ ದೊರೆಯುತ್ತದೆ. ಹಿರಿಯರಿಂದ ನಿಮಗೆ ಸಮಯಕ್ಕೆ ತಕ್ಕ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ.ವ್ಯಾಪಾರ ವ್ಯವಹಾರಗಳಲ್ಲಿ ಲಾಭ ಕಡಿಮೆ ಇದ್ದರೂ ಸಹ ನಷ್ಟ ಇರುವುದಿಲ್ಲ. ನಿಮ್ಮ ಮಕ್ಕಳಿಂದ ಅಷ್ಟು ಸಂತೋಷವಿರುವುದಿಲ್ಲ ಬದಲಾಗಿ ಸಣ್ಣ ಸಣ್ಣ ಮಾತುಗಳು ಕೇಳಿ ಬರುತ್ತದೆ. ಮೂಳೆ ನೋವುಗಳು ಅಥವಾ ಶ್ವಾಸಕೋಶದ ತೊಂದರೆಗಳು ಸ್ವಲ್ಪಮಟ್ಟಿಗೆ ಬಾಧಿಸಬಹುದು.ವಿದೇಶದಲ್ಲಿರುವವರಿಗೆ ವಿವಾಹ ಸಂಭಂದಗಳು ಒದಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ಸ್ವಲ್ಪ ಗೊಂದಲಗಳು ಮೂಡಬಹುದು. ವಿದೇಶದಲ್ಲಿರುವ ಸಂಗಾತಿ ನಿಮ್ಮನ್ನು ಅಲ್ಲಿಗೆ ಕರೆಸಿಕೊಳ್ಳುವರು. ಅನಿರೀಕ್ಷಿತ ಖರ್ಚುಗಳು ಬರುವ ಸಾಧ್ಯತೆಗಳಿವೆ.
ತುಲಾ
ವೈಯಕ್ತಿಕ ಅಲಂಕಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಯನ್ನು ಕೊಡುವಿರಿ. ಧನದಾಯವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ನಿಮ್ಮ ನಡವಳಿಕೆಯಲ್ಲಿ ಅತ್ಯಂತ ವ್ಯವಹಾರದ ರೀತಿ ಇರುತ್ತದೆ. ಕೃಷಿಯಿಂದ ಹೆಚ್ಚಿನ ಲಾಭವಿರುತ್ತದೆ. ಕೃಷಿಕರಿಗೆ ಸಿಗಬೇಕಾದ ಸಹಾಯಧನಗಳು ಹರಿದುಬರುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಂತಹ ಯಶಸ್ಸು ಇರುವುದಿಲ್ಲ. ವಿದೇಶಿ ವ್ಯವಹಾರ ಮಾಡುವವರಿಗೆ ಸ್ವಲ್ಪಮಟ್ಟಿನ ಕಾನೂನಿನ ತೊಡಕುಗಳು ಬರಬಹುದು. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗುತ್ತವೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಂತಹ ಯಶಸ್ಸುಇರುವುದಿಲ್ಲ. ಕೀಲುಗಳ ನೋವು ಕೆಲವರನ್ನು ಭಾದಿಸಬಹುದು. ಹಿತ ಶತ್ರುಗಳ ಕಾಟ ಹೆಚ್ಚಾಗುವ ಸಾಧ್ಯತೆಗಳಿವೆ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಒದಗುವ ಸಾಧ್ಯತೆ ಇದೆ.
ವೃಶ್ಚಿಕ
ಕ್ರೀಡಾಪಟುಗಳಿಗೆ ಸರ್ಕಾರದಿಂದ ಉತ್ತಮ ಸಹಕಾರಗಳು ಸೌಲಭ್ಯಗಳು ದೊರೆಯುತ್ತವೆ. ಬಹಳ ಬುದ್ಧಿವಂತಿಕೆಯಿಂದ ಹಣ ಸಂಪಾದನೆ ಮಾಡುವಿರಿ. ಶತ್ರುಗಳಿಗೆ ಗೊತ್ತಾಗದಂತೆ ಅವರ ಶಕ್ತಿಕುಂದುಸುವಿರಿ. ಕೃಷಿಕರಿಗೆ ಕೃಷಿಯಿಂದ ಹೆಚ್ಚು ಆದಾಯವಿರುತ್ತದೆ. ಕಬ್ಬಿಣ ಮತ್ತು ಉಕ್ಕನ್ನು ತಯಾರಿಸುವವರಿಗೆ ಹೆಚ್ಚಿನ ವ್ಯಾಪಾರ ವ್ಯವಹಾರಗಳು ಸರಾಗವಾಗಿ ಆಗುತ್ತದೆ. ವೃತ್ತಿಯ ಸ್ಥಳದಲ್ಲಿ ಸ್ವಲ್ಪ ಗೊಂದಲಗಳು ಉಂಟಾಗುವ ಸಾಧ್ಯತೆಗಳಿವೆ. ಹೈನುಗಾರಿಕೆ ಮಾಡುವವರಿಗೆ ಬಹಳ ಆದಾಯ ಹೆಚ್ಚುತ್ತದೆ. ಹಿರಿಯರಿಗಾಗಿ ಹಣ ಖರ್ಚಾಗುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸುಇರುವುದಿಲ್ಲ. ಮೂಳೆ ತೊಂದರೆ ಅಥವಾ ಹೊಟ್ಟೆತೊಂದರೆಗಳು ಕಾಡಬಹುದು, ಎಚ್ಚರವಹಿಸಿರಿ. ಆಭರಣ ತಯಾರಕರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಧಾರ್ಮಿಕ ಕಾರ್ಯಗಳಿಗಾಗಿ ಹೆಚ್ಚಿನಹಣಗಳು ಖರ್ಚಾಗುತ್ತದೆ.
ಧನು
ಬುದ್ಧಿವಂತಿಕೆ ಈ ವಾರ ನಿಮಗೆ ಮೈಗೂಡುತ್ತದೆ. ಆದಾಯ ಕಡಿಮೆ ಇದ್ದರೂ ಹಣ ನಿರ್ವಹಣೆಯನ್ನು ಸರಿಯಾಗಿ ಮಾಡುವಿರಿ. ರಾಜಕೀಯ ನಾಯಕರು ಅವರ ಶತ್ರುಗಳನ್ನು ಸದ್ದಿಲ್ಲದೆ ತಣ್ಣಗಾಗಿಸುವರು. ಆಸ್ತಿ ವಿಚಾರಗಳಲ್ಲಿ ಹೊಸ ಸಮಸ್ಯೆಗಳು ಬರಬಹುದು. ವಿದೇಶಗಳಿಂದ ವಸ್ತುಗಳನ್ನು ತರಿಸಿ ಮಾರಾಟಮಾಡು ವವರಿಗೆ ವ್ಯಾಪಾರ ವೃದ್ಧಿಸುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇದ್ದೇ ಇರುತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನಗತಿಯನ್ನು ಕಾಣಬಹುದು. ಹೈನುಗಾರಿಕೆ ಅಥವಾ ಕೋಳಿ ಸಾಕಾಣಿಕೆಯಿಂದ ಹೆಚ್ಚಿನ ಆದಾಯವನ್ನು ಪಡೆಯಬಹುದು. ಭೂಮಿಯ ವ್ಯಾಪಾರ ಮಾಡುವವರಿಗೆ ಆದಾಯ ಕಡಿಮೆಯಾಗುವ ಸಾಧ್ಯತೆ ಇದೆ. ಸಂಗಾತಿಯ ಖರ್ಚಿನಲ್ಲಿ ಏರಿಕೆಯಾಗುವ ಸಂದರ್ಭವಿದೆ. ಅನಿರೀಕ್ಷಿತ ಆದಾಯಗಳು ಬರಬಹುದು.
ಮಕರ
ಸ್ಥಿರ ಮನಸ್ಸಿನಿಂದ ಕೆಲಸಗಳನ್ನು ಮಾಡುವಿರಿ. ಆದಾಯ ಕಡಿಮೆ ಇದ್ದರೂ ಹಣ ನಿರ್ವಹಣೆಯಲ್ಲಿ ಜಾಣ್ಮೆಯನ್ನು ತೋರುವಿರಿ. ವಿದೇಶದಲ್ಲಿರುವವರಿಗೆ ತಮ್ಮ ವ್ಯಕ್ತಿತ್ವದಿಂದ ನೆರೆಹೊರೆಯವರನ್ನು ಆಕರ್ಷಿಸುವ ಯೋಗವಿದೆ. ಆಸ್ತಿ ವಿಚಾರದಲ್ಲಿದ್ದ ಸಮಸ್ಯೆಗಳು ಸಂಧಾನದ ಮೂಲಕ ಪರಿಹಾರವಾಗುತ್ತದೆ. ವೃತ್ತಿಯಲ್ಲಿ ಆದಾಯ ಹೆಚ್ಚುವ ಸಂದರ್ಭವಿದೆ. ಅದಿರು ವ್ಯಾಪಾರ ದಾರರಿಗೆ ವ್ಯವಹಾರದಲ್ಲಿ ಹಿನ್ನಡೆಯಾಗಬಹುದು. ತಾಯಿಯ ಸಹಕಾರಗಳು ಅತಿ ಹೆಚ್ಚು ದೊರೆಯುತ್ತವೆ. ಸಂಗಾತಿಯು ನಿಮ್ಮನ್ನು ಅರಿತು ನಡೆಯುವವರು. ಹಿರಿಯರಿಂದ ಬರಬೇಕಾಗಿದ್ದ ಹಣ ಅಥವಾ ಒಡವೆ ಗಳಲ್ಲಿ ಸ್ವಲ್ಪ ಭಾಗ ಕಡಿಮೆಯಾಗುತ್ತದೆ. ಸರ್ಕಾರಿ ಕೆಲಸ ಕಾರ್ಯಗಳು ಸರಾಗವಾಗಿ ಆಗುತ್ತದೆ. ಧಾರ್ಮಿಕ ಕೆಲಸಗಳಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತದೆ. ಗಣಿ ಉದ್ಯಮಕ್ಕೆ ಬೇಕಾದ ಸರಕುಗಳು ಶೀಘ್ರವಾಗಿ ಬಿಕರಿಯಾಗುತ್ತವೆ.
ಕುಂಭ
ಸಾಂಪ್ರದಾಯಿಕ ಕೃಷಿಕರಿಗೆ ಲಾಭವಿದೆ. ವಿದೇಶಿ ಹಣ ವಿನಿಮಯ ಮಾಡುವವರಿಗೆ ಹೆಚ್ಚಿನ ಆದಾಯವಿದೆ. ವಾಹನ ಮಾರಾಟಗಾರರಿಗೆ ಹೆಚ್ಚಿನ ವ್ಯಾಪಾರ ನಡೆಯುತ್ತದೆ. ಹಿರಿಯರು ತಮ್ಮ ನಡವಳಿಕೆ ಗಳಿಂದ ಸಮಾಜವನ್ನು ತಿದ್ದುವರು. ಸಿದ್ಧ ಉಡುಪು ತಯಾರಕರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಗಣಿತಜ್ಞರಿಗೆ ಲೆಕ್ಕ ಪರಿಶೋಧಕರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ ಮತ್ತು ಆದಾಯವು ವೃದ್ಧಿಸುತ್ತದೆ. ಶ್ವಾಸಕೋಶ ಹಾಗೂ ಉಸಿರಾಟ ಸಂಬಂಧಿ ಕಾಯಿಲೆ ಇರುವವರು ಸಾಕಷ್ಟು ಎಚ್ಚರ ವಹಿಸುವುದು ಉತ್ತಮ. ಹಿರಿಯರ ವಶೀಲಿಯಿಂದ ಯುವಕರಿಗೆ ಕೆಲಸ ಸಿಗುವ ಸಾಧ್ಯತೆ ಇದೆ. ಯುವಕರು ಆಡುವ ಉಡಾಫೆಯ ಮಾತುಗಳು ವೃತ್ತಿಗೆ ಸಂಚಕಾರ ತರಬಹುದು. ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ಉದ್ಯೋಗದಲ್ಲಿ ಸಾಮಾನ್ಯ ಪ್ರಗತಿ ಇರುತ್ತದೆ.
ಮೀನ
ನಿಮ್ಮ ವರ್ತನೆಯಲ್ಲಿ ಅತಿ ಅಹಂಕಾರವಿರುತ್ತದೆ. ಹಣದ ಧನಾದಾಯವು ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ಹಿರಿಯರಿಂದ ಬರಬೇಕಾಗಿದ್ದ ಹಣಕಾಸುಗಳು ಈಗ ಬರುತ್ತದೆ. ಆಡಳಿತಾತ್ಮಕ ಪರೀಕ್ಷೆಗಳನ್ನುತೆಗೆದುಕೊಳ್ಳುವವರಿಗೆ ಹೆಚ್ಚಿನ ಯಶಸ್ಸಿರುತ್ತದೆ. ವೃತ್ತಿಯಲ್ಲಿ ದ್ವಂದ್ವವಿದ್ದು ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅತಿ ಶ್ರದ್ಧೆ ಮೂಡುತ್ತದೆ. ಹಿರಿಯರ ಆಸ್ತಿ ವಿಚಾರದಲ್ಲಿ ಗಲಾಟೆಗಳು ಹೆಚ್ಚಾಗಿ ಆಸ್ತಿ ಬರುವುದು ನಿಲ್ಲಬಹುದು. ಸಂಗಾತಿಯ ನಿರ್ಲಿಪ್ತತೆ ನಿಮಗೆ ಕೋಪ ತರಿಸಬಹುದು. ಸಾಲದ ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಇರುವುದಿಲ್ಲ. ಹೈನುಗಾರಿಕೆ ಮಾಡುವವರಿಗೆ ಹೆಚ್ಚಿನ ಆದಾಯವಿರುತ್ತದೆ. ಕೈ ಕಾಲು ನೋವುಗಳು ಕೆಲವರಿಗೆ ಬಾಧಿಸಬಹುದು. ಕೆಲವೊಮ್ಮೆ ದುಂದು ವೆಚ್ಚಗಳಿಂದ ಹಣದ ಮುಗ್ಗಟ್ಟು ಆಗಬಹುದು.