ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: ಈ ರಾಶಿಯ ರಾಜಕೀಯ ನಾಯಕರಿಗೆ ಅನಿರೀಕ್ಷಿತ ಬೆಂಬಲ ದೊರೆಯಲಿದೆ
Published 13 ಜನವರಿ 2024, 23:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ನಾನೇ ಬುದ್ದಿವಂತನೆಂಬ ಮನೋಭಾವ ನಿಮ್ಮಲ್ಲಿ ಇರುತ್ತದೆ, ಇದನ್ನು ಮನಸ್ಸಿನಿಂದ ತೆಗೆದು ಹಾಕಿರಿ. ಧನದಾಯವು ಅಗತ್ಯವನ್ನು ಪೂರೈಸುತ್ತದೆ. ನಿಮ್ಮ ನಡವಳಿಕೆಗಳಿಂದ ಹಿರಿಯರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುವಿರಿ. ಕೃಷಿ ಭೂಮಿಯನ್ನು ಖರೀದಿ ಮಾಡಬಹುದು. ಪಶು ಸಾಕಾಣಿಕೆ ಮಾಡುವ ವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚಿನ ಯಶಸ್ಸು ಅಧ್ಯಯನದಲ್ಲಿ ಸಿಗುತ್ತದೆ. ದೀರ್ಘ ಕಾಲಿನ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ದೊರೆಯುವ ಸಾಧ್ಯತೆ ಇದೆ. ಸಂಗಾತಿಯ ಸಂತೋಷಕ್ಕಾಗಿ ದುಂದುವೆಚ್ಚ ಆಗಬಹುದು.ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯನ್ನು ಕಂಡರೂ ಕೆಲಸ ನಿಲ್ಲುವುದಿಲ್ಲ. ಹಿರಿಯರಿಂದ ವ್ಯವಹಾರಗಳಲ್ಲಿ ಪಾಲು ದೊರೆಯುತ್ತದೆ. ವೃತ್ತಿಯಲ್ಲಿ ಸ್ವಲ್ಪ ಕಿರಿಕಿರಿಗಳು ಇದ್ದರೂ ಸಹ ಅವರಿವರ ವಶೀಲಿಯಿಂದ ವೃತ್ತಿಯಲ್ಲಿ ಮುಂದುವರೆಯುವಿರಿ.
ವೃಷಭ
ಮನಸ್ಸಿನಲ್ಲಿ ಸ್ಥಿರತೆ ಇರುತ್ತದೆ, ಮಾಡಬೇಕಾದ ಕೆಲಸದಲ್ಲಿ ಸರಿಯಾದಗುರಿ ಇರುತ್ತದೆ.ಧನಾದಾಯವು ಮಧ್ಯಮ ಗತಿಯಲ್ಲಿ ಇರುತ್ತದೆ. ನಿಮ್ಮ ನಡವಳಿಕೆ ಯಿಂದ ಜನರನ್ನು ಗೆಲ್ಲುವಿರಿ. ಸಂಸಾರದಲ್ಲಿ ಹಿರಿಯರ ಕೋಪವನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಅಷ್ಟು ಯಶಸ್ಸು ಇರುವುದಿಲ್ಲ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳಾಗಬಹುದು. ತಂದೆಯಿಂದ ಸಾಂಪ್ರ ದಾಯಕ ಕೃಷಿಯ ಬಗೆಗಿನ ತಿಳುವಳಿಕೆಯನ್ನು ಪಡೆ ಯಬಹುದು. ವಾಹನದುರಸ್ತಿ ಮಾಡುವವರಿಗೆ ಹೆಚ್ಚಿನ ಕೆಲಸದೊರೆತು ಹೆಚ್ಚುಸಂಪಾದನೆ ಆಗುತ್ತದೆ. ಧನಾದಾ ಯವು ಮಧ್ಯಮಗತಿಯಲ್ಲಿರುತ್ತದೆ.ಕ್ರೀಡಾಪಟುಗಳಿಗೆ ಸರ್ಕಾರದಿಂದ ಸಿಗುತ್ತಿದ್ದ ಪ್ರೋತ್ಸಾಹ ಸ್ವಲ್ಪ ಕಡಿಮೆ ಆಗುತ್ತದೆ. ನಿಮ್ಮ ಕೃಷಿ ಭೂಮಿಯಲ್ಲಿ ಉತ್ತಮ ಬೆಳೆ ಬೆಳೆಯುವ ಅವಕಾಶಗಳಿವೆ. ವೃತ್ತಿಯಲ್ಲಿ ಎಲ್ಲರ ಸಹಕಾರ ನಿಮಗೆ ದೊರೆಯುತ್ತದೆ.
ಮಿಥುನ
ನಿಮ್ಮ ಬಗ್ಗೆ ನಿಮಗೆ ಒಂದು ರೀತಿ ಹೆಮ್ಮೆ ಇರುತ್ತದೆ. ಧನದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ನಿಮ್ಮೆಲ್ಲಾ ಕಾರ್ಯಗಳಿಗೆ ಸಂಗಾತಿಯ ಸಹಕಾರ ಖಂಡಿತವಾಗಿ ದೊರೆಯುತ್ತದೆ. ಸಂಗಾತಿಯು ಅವರ ವ್ಯವಹಾರಗಳಲ್ಲಿ ನಿಮ್ಮನ್ನು ಸೇರಿಸಿಕೊಳ್ಳುತ್ತಾರೆ. ಆಸ್ತಿ ಕೊಳ್ಳುವವಿಚಾರದಲ್ಲಿ ಮುಂದುವರೆಯುವುದುಬೇಡ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ಸಂಗಾತಿಯ ಸಹಾಯದಿಂದ ಸರ್ಕಾರಿ ಗುತ್ತಿಗೆ ಕೆಲಸ ಗಳು ದೊರೆಯುತ್ತವೆ. ಕೃಷಿ ಸಂಯೋಜಿತ ಪಶು ಸಾಕಾ ಣಿಕೆ ಲಾಭವನ್ನು ತರುತ್ತದೆ .ವಾಹನಗಳನ್ನು ರಿಪೇರಿ ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಹೆಚ್ಚು ಸಂಪಾ ದನೆಯಾಗುತ್ತದೆ. ಹಳೆ ಹೂಡಿಕೆಹಣಗಳು ಈಗ ದೊಡ್ಡ ಮೊತ್ತವಾಗಿ ವಾಪಸ್ಸು ಬರುತ್ತವೆ. ಕಾದಂಬರಿಗಳನ್ನು ಬರೆಯುವವರಿಗೆ ಮತ್ತು ಪ್ರಕಾಶ ಪ್ರಕಾಶನ ಮಾಡುವ ವರಿಗೆ ಹೆಚ್ಚಿನ ಮುಂಗಡ ಹಣ ದೊರೆಯುತ್ತದೆ.
ಕರ್ಕಾಟಕ
ಮನಸ್ಸಿನಲ್ಲಿ ಬಹಳಷ್ಟು ದ್ವಂದ್ವಗಳಿರುತ್ತವೆ. ನಿರ್ಧಾರಿತ ಕೆಲಸಗಳನ್ನು ಕೈಗೊಳ್ಳಲು ಹಿಂಜರಿಯುವಿರಿ. ಧನಾದಾಯವು ಮಧ್ಯಮ ಗತಿಯಲ್ಲಿರುತ್ತದೆ. ಸರ್ಕಾರಿ ಸಹಾಯಧನಗಳು ಬರುವುದು ನಿಧಾನವಾಗಬಹುದು. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಬಂಧುಗಳಿಗೆ ಸಾಲ ಕೊಟ್ಟರೆ ವಾಪಸ್ಸು ಬರುವುದಿಲ್ಲ. ಸಂಗಾತಿಯ ವ್ಯತಿರಿಕ್ತ ನಡ ವಳಿಕೆಗಳು ನಿಮಗೆ ಜಿಗುಪ್ಸೆಹುಟ್ಟಿಸುತ್ತದೆ. ರಾಜಕೀಯ ನಾಯಕರುಗಳಿಗೆ ಅನಿರೀಕ್ಷಿತ ಜನಬೆಂಬಲ ಹೆಚ್ಚಾಗಿ ದೊರಕುವ ಸಾಧ್ಯತೆ ಇದೆ. ವಿದೇಶದಲ್ಲಿಉದ್ಯೋಗದಲ್ಲಿ ರುವವರಿಗೆ ಹೆಚ್ಚಿನಸ್ಥಾನಮಾನ ಸಿಗುವ ಸಾಧ್ಯತೆ ಇದೆ. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಲಾಭ ಕಡಿಮೆ ಇದ್ದರೂ ನಷ್ಟವಿರುವುದಿಲ್ಲ. ಬೇಕಾಗಿದ್ದ ಕೆಲವು ಹಣಗಳು ಬಾರದೇನಿಲ್ಲಬಹುದು.
ಸಿಂಹ
ಆತ್ಮ ಗೌರವ ಸ್ವಲ್ಪ ಜಾಸ್ತಿ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ನಿಮ್ಮ ನಡವಳಿಕೆಯಲ್ಲಿ ನಿಮ್ಮಸಂಗಾತಿಯ ಛಾಯೆ ಎದ್ದು ಕಾಣುತ್ತದೆ. ಆಸ್ತಿ ಖರೀದಿಗಾಗಿ ಈಗ ಹಣ ಒಟ್ಟು ಮಾಡಬಹುದು. ವಿದ್ಯಾರ್ಥಿ ಗಳಿಗೆ ಅವರ ಅಧ್ಯಯನದಲ್ಲಿ ಹೆಚ್ಚಿನ ಯಶಸ್ಸು ಇರುತ್ತದೆ. ಗಣಿತ ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಸಂಗಾತಿಗೆ ಮೂಳೆ ನೋವುಗಳ ಕಾಣಿಸಬಹುದು ಕೋಪಿಷ್ಟರಾದ ಸಂಗಾತಿ ಈಗಸಮಾ ಧಾನಗೊಳ್ಳುವರು. ವಿದೇಶದಲ್ಲಿ ಕೆಲಸಮಾಡುತ್ತಿರುವ ವರಿಗೆ ಕೆಲಸದ ಬಗ್ಗೆ ಅನುಮಾನ ಉಂಟಾಗಬಹುದು. ಆಮದು ಮತ್ತು ರಫ್ತು ವ್ಯವಹಾರ ಮಾಡುತ್ತಿರುವವ ರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಆಗಬಹುದು. ಹಿರಿಯರ ಸಲಹೆಗಳಿಂದ ನಿಮ್ಮ ವ್ಯವಹಾರಗಳು ಸರಿದಾರಿಗೆ ಬರುತ್ತದೆ.ವೃತ್ತಿಯಲ್ಲಿ ಶ್ರದ್ಧೆವಹಿಸುವುದುಒಳ್ಳೆಯದು. ಪಾಲುದಾರಿಕೆಯ ವ್ಯವಹಾರಗಳಲ್ಲಿ ನಿಮಗೆ ಯಶಸ್ವಿ ಇರುತ್ತದೆ.
ಕನ್ಯಾ
ದೈವ ಭಕ್ತಿ ಬಹಳ ಜಾಸ್ತಿ ಆಗುತ್ತದೆ. ನಿಮ್ಮ ಚಟುವಟಿಕೆಗಳಿಂದ ಹಣಸಂಪಾದನೆ ಮಾಡಬಹುದು. ಸ್ವಯಂ ಉದ್ಯೋಗ ಮಾಡುವವರಿಗೆ ಹೆಚ್ಚಿನ ಹಣ ಸಂಪಾದನೆ ಮಾಡುವ ಯೋಗವಿದೆ. ನಿಮ್ಮ ಚಟುವಟಿ ಕೆಗಳಲ್ಲಿ ಚುರುಕುತನವನ್ನು ಕಾಣಬಹುದು. ಮಹಿಳೆ ಯರಿಂದ ನಿಮಗೆ ಹೆಚ್ಚಿನ ಸಹಕಾರಗಳು ದೊರೆಯು ತ್ತವೆ. ಸ್ಥಿರಾಸ್ತಿಮಾಡಿಕೊಳ್ಳಲು ಕಾಲಪಕ್ವವಾಗಿದೆ ಹಾಗೂ ಅದಕ್ಕೆ ಬೇಕಾದ ಹಣಬರುವ ಮಾರ್ಗಗಳನ್ನು ಹುಡುಕಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ತಲೆನೋವು ಅಥವಾ ಮೂಳೆ ನೋವುಗಳು ಭಾದಿಸಬಹುದು. ಸಂಗಾತಿಯ ದುಂದು ವೆಚ್ಚಗಳು ಹೆಚ್ಚುವ ಸಾಧ್ಯತೆ ಇದೆ. ಕುಟುಂಬದ ಹಿರಿ ಯರು ನಿಮ್ಮ ವಿರುದ್ಧ ಸಿಟ್ಟಾಗುವ ಸಾಧ್ಯತೆ ಇದೆ. ತಂದೆಯಿಂದ ಅಥವಾ ತವರು ಮನೆಯಿಂದ ಸ್ವಲ್ಪ ಸಹಾಯಗಳು ಸಿಗುತ್ತವೆ. ವಿದೇಶದಲ್ಲಿರುವವರು ತಮ್ಮ ಸಂಗಾತಿಯನ್ನು ಅಲ್ಲಿಗೆಬರಮಾಡಿಕೊಳ್ಳುವರು.
ತುಲಾ
ನಿಮ್ಮಲ್ಲಿ ಅತಿಯಾದ ಆತ್ಮ ಗೌರವ ಇರುತ್ತದೆ, ಇದು ನಿಮ್ಮಿಂದ ಕೆಲವರನ್ನು ದೂರ ಮಾಡಬಹುದು. ಧನಾದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಬೇರೆಯವರನ್ನು ಮಟ್ಟ ಹಾಕಲು ನೀವು ಬಳಸುವ ತಂತ್ರಗಳು ಅವರಿಗೆ ತಿಳಿದು ಅದನ್ನು ಅವರೇ ನಿಮ್ಮ ಮೇಲೆ ಪ್ರಯೋಗ ಮಾಡುವರು. ಕೃಷಿ ಭೂಮಿಯನ್ನು ಖರೀದಿ ಮಾಡುವ ಯೋಗವಿದೆ. ಕೃಷಿಕರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಅಂತಹ ಯಶಸ್ಸು ಇರುವುದಿಲ್ಲ. ವಿದೇಶದಲ್ಲಿ ಓದುತ್ತಿರುವವ ರಿಗೆ ನಿರೀಕ್ಷಿತ ಯಶಸ್ಸು ಇರುತ್ತದೆ. ಆಹಾರ ವ್ಯತ್ಯಾಸ ಗಳಿಂದ ಅನಾರೋಗ್ಯ ಉಂಟಾಗಬಹುದು. ಸಂಗಾತಿ ಮಾಡುವ ವ್ಯವಹಾರಗಳಲ್ಲಿ ಆದಾಯ ಹೆಚ್ಚುತ್ತದೆ. ಹಿರಿಯರೊಂದಿಗೆ ಕೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಉದ್ಯೋಗಸ್ಥಳದಲ್ಲಿದ್ದತೊಂದರೆಗಳು ದೂರವಾಗುವ ಲಕ್ಷಣಗಳಿವೆ. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಸಾಕಷ್ಟು ಸರಾಗತೆಯನ್ನು ಕಾಣಬಹುದು.
ವೃಶ್ಚಿಕ
ಬಹಳ ಅಲಂಕಾರಕವಾಗಿ ಕಾಣಿಸಿಕೊಳ್ಳುವ ಪ್ರಯತ್ನ ಮಾಡುವಿರಿ ಹಾಗೂ ಇದಕ್ಕಾಗಿ ಹೆಚ್ಚು ಹಣ ಖರ್ಚುಮಾಡುವಿರಿ. ಹಣದ ಒಳಹರಿವು ನಿಮ್ಮನಿರೀಕ್ಷೆ ಯಷ್ಟು ಇರುತ್ತದೆ. ಕೃಷಿಯಿಂದ ಆದಾಯ ಬರುವ ಸಾಧ್ಯತೆ ಇದೆ. ದಿನಸಿ ವ್ಯಾಪಾರಿಗಳಿಗೆ ಹೆಚ್ಚುಆದಾಯ ವಿರುತ್ತದೆ. ತಾವೇಆಹಾರ ಪದಾರ್ಥಗಳನ್ನುತಯಾರಿಸಿ ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ.ಶತ್ರು ಗಳನ್ನು ಮಣಿಸುವ ನಿಮ್ಮ ತಂತ್ರ ಮುಕ್ಕಾಲು ಭಾಗ ಫಲಕೊಡುತ್ತದೆ. ಕೃಷಿ ಉತ್ಪನ್ನಗಳಿಗಳಿಂದ ಆದಾಯ ಹೆಚ್ಚುತ್ತದೆ. ವಿದೇಶದಲ್ಲಿ ಓದಬೇಕೆನ್ನುವವರಿಗೆ ಸೂಕ್ತ ಅವಕಾಶ ಗಳು ದೊರೆಯುತ್ತವೆ. ಆಹಾರ ವ್ಯತ್ಯಾಸ ಗಳಿಂದ ಹೊಟ್ಟೆಯುಬ್ಬರ ಬರಬಹುದು. ಸಂಗಾತಿಗಾಗಿ ಹೆಚ್ಚು ಖರ್ಚು ಮಾಡಬೇಕಾದ ಸಂದರ್ಭವಿದೆ. ಗಣಿ ಗಾರಿಕೆ ಮಾಡುವವರಿಗೆ ಸೂಕ್ತಪರವಾನಗಿ ದೊರೆಯು ತ್ತದೆ. ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಾಧ್ಯತೆಗಳಿವೆ.
ಧನು
ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಗೌರವ ಹೆಚ್ಚುತ್ತದೆ. ಹೆಚ್ಚು ಬುದ್ಧಿವಂತಿಕೆಯಿಂದ ನಿಮ್ಮ ಕೆಲಸ ಕಾರ್ಯಗಳನ್ನು ಸಾಧಿಸಿಕೊಳ್ಳುವಿರಿ.ಧನಾದಾಯದಲ್ಲಿ ಚೇತರಿಕೆಯನ್ನು ಕಾಣಬಹುದು. ಸಾಂಪ್ರದಾಯಕ ಕೃಷಿಯಲ್ಲಿ ಹೆಚ್ಚು ಆಸಕ್ತಿ ಮೂಡುತ್ತದೆ. ತಾಯಿಯ ಜೊತೆಯಲ್ಲಿ ವಾಗ್ವಾದಗಳಾಗಬಹುದು. ವಿದ್ಯಾರ್ಥಿಗ ಳಿಗೆ ಅವರ ಶ್ರಮಕ್ಕಿಂತ ಹೆಚ್ಚಿನ ಯಶಸ್ಸು ದೊರೆತು ಸಂತಸವಾಗುತ್ತದೆ. ಸಂಗಾತಿ ಆರೋಗ್ಯದ ಬಗ್ಗೆ ಗಮನ ವಿರಲಿ. ಸಂಗಾತಿಗೆ ಆದಾಯ ಹೆಚ್ಚುವ ಸಾಧ್ಯತೆಗಳಿವೆ. ಅವರ ಹೂಡಿಕೆಗಳು ಹೆಚ್ಚು ಲಾಭ ತರುತ್ತವೆ. ಕೃಷಿ ಯಿಂದ ಆದಾಯ ಕಡಿಮೆಯಾಗಬಹುದು. ಹಿರಿಯ ರಿಂದ ಸಂಗಾತಿಗೆ ಹೆಚ್ಚು ಅನುಕೂಲವಾಗುತ್ತದೆ. ವೃತ್ತಿ ಯಲ್ಲಿ ಯಾವುದೇ ಏರಿಳಿತ ಇರುವುದಿಲ್ಲ. ಸರಿಯಾಗಿ ಗಮನಿಸದಿದ್ದಲ್ಲಿ ವ್ಯವಹಾರದಲ್ಲಿನ ನಿಮ್ಮ ಲಾಭಾಂಶ ಕರಗಬಹುದು.
ಮಕರ
ನಯವಾಗಿ ಮಾತನಾಡಿ ಜನರ ಮನಸ್ಸನ್ನು ಗೆಲ್ಲುವಿರಿ. ಧನದಾಯವು ಚೇತರಿಕೆ ಹಂತವನ್ನು ಕಾಣು ತ್ತದೆ. ಭಾಷಣಕಾರರಿಗೆ ಉತ್ತಮ ವೇದಿಕೆ ದೊರೆಯು ತ್ತದೆ. ಕೆಲವೊಂದು ನಿಧಾನ ನಿರ್ಧಾರಗಳು ಕೆಲವು ಕೆಲಸಗಳನ್ನು ನಿಲ್ಲಿಸುವಂತೆ ಮಾಡುತ್ತವೆ. ವಿದ್ಯಾರ್ಥಿ ಗಳಿಗೆ ಉತ್ತಮ ಫಲಿತಾಂಶ ಇರುತ್ತದೆ. ಫ್ಯಾಶನ್ ಡಿಸೈ ನಿಂಗ್ ಮತ್ತೆ ಟೆಕ್ಸ್ಟೈಲ್ ಇಂಜಿನಿಯರಿಂಗ್ ಅಂತಹ ವಿದ್ಯಾರ್ಥಿಗಳಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ನರ ದೌರ್ಬಲ್ಯ ಅಥವಾ ಕಣ್ಣಿನತೊಂದರೆ ಇರುವವರುಈಗ ಹೆಚ್ಚುಎಚ್ಚರ ವಹಿಸಿರಿ. ಸಂಗಾತಿಯಿಂದ ಧನಸಹಾಯ ವನ್ನು ನಿರೀಕ್ಷೆ ಮಾಡಬಹುದು. ಹಿರಿಯರಿಗಾಗಿ ಹಣ ಖರ್ಚು ಮಾಡುವಿರಿ. ಹೈನುಗಾರಿಕೆ ಮಾಡುವವರಿಗೆ ಅಭಿವೃದ್ಧಿ ಸ್ವಲ್ಪಮಟ್ಟಿಗೆ ಆಗಬಹುದು. ಹಿರಿಯರ ಆಚಾರ ವಿಚಾರಗಳನ್ನು ಅವರಿಂದ ತಿಳಿಯಬಹುದು. ಉದ್ಯೋಗದಲ್ಲಿ ಅಭಿವೃದ್ಧಿ ಇರುತ್ತದೆ.
ಕುಂಭ
ಮನಸ್ಸಿನಲ್ಲಿ ಒಂದು ರೀತಿಯ ಪ್ರಶಾಂತತೆ ಇರುತ್ತದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವ ರಿಗೆ ವೇತನ ಹೆಚ್ಚಳಾಗಬಹುದು. ವಿದೇಶೀಯ ಹಣ ವರ್ಗಾವಣೆ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಹಿರಿಯರಿಗೆ ಅವರ ನಡವಳಿಕೆಯಿಂದ ಗೌರವ ಬರು ತ್ತದೆ. ಕೆಲವರಿಗೆ ವೃತ್ತಿಯಲ್ಲಿ ಹಿರಿಯ ಮಹಿಳಾ ಅಧಿ ಕಾರಿಗಳು ಸಹಾಯ ಮಾಡುವರು. ಅಧಿರನ್ನು ಬಳಸಿ ಕಚ್ಚಾ ಲೋಹವನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ತೆರಿಗೆ ತಜ್ಞರಿಗೆ ಲೆಕ್ಕಪರಿಶೋಧಕರಿಗೆ ಈಗ ಹೆಚ್ಚಿನ ಮಾರುಕಟ್ಟೆ ದೊರೆಯುತ್ತದೆ. ಶ್ವಾಸಕೋಶದ ತೊಂದರೆ ಅಥವಾ ಗಂಟಲಿನ ತೊಂದರೆ ಇರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಯ ಸಹಾಯದಿಂದ ಕೆಲಸ ಕಾರ್ಯಗಳಲ್ಲಿ ಸರಾಗತೆಯನ್ನು ಕಾಣಬಹುದು. ತಾಯಿಯಿಂದ ಹೆಚ್ಚುನಿಷ್ಠುರಕ್ಕೆ ಒಳಗಾಗುವಿರಿ.ಕೆಲವು ಹಿರಿಯರು ಸಮಯಕ್ಕೆ ಸರಿಯಾಗಿ ಸೂಕ್ತ ಮಾರ್ಗ ದರ್ಶನ ನೀಡುವರು.
ಮೀನ
ಅತ್ಯಂತ ಕೋಪವನ್ನು ಪ್ರದರ್ಶಿಸುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಬಣ್ಣದ ಮಾತುಗಳನ್ನು ಆಡಿ ಜನರಿಂದ ಕೆಲಸ ತೆಗೆಯುವಿರಿ. ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವ ರಿಗೆ ಅವರ ಸಂಸ್ಥೆಯಮೂಲಕ ನಿವೇಶನ ಪಡೆಯುವ ಯೋಗವಿದೆ. ಉನ್ನತ ವಿದ್ಯೆಯನ್ನುಓದುತ್ತಿರುವವರಿಗೆ ನಿರೀಕ್ಷಿತಫಲಿತಾಂಶ ಇರುವುದಿಲ್ಲ. ಸರ್ಕಾರಿಉದ್ಯೋಗಿಗಳಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರುತ್ತದೆ. ಹರಿತವಾದ ಆಯುಧಗಳನ್ನು ಉಪಯೋಗಿಸುವಾಗಎಚ್ಚರಇರಲಿ. ಸಂಗಾತಿಯ ವೈರಾಗ್ಯತೆಯು ಬೇಸರ ತರಿಸಬಹುದು. ಮೂಳೆಗಳ ನೋವು ಕಾಡಬಹುದು.ಹಣ ವರ್ಗಾವಣೆ ಮಾಡುವವರಿಗೆ ಕಾನೂನಿನ ತೊಡಕುಗಳು ಎದುರಾ ಗುವ ಸಂದರ್ಭವಿದೆ. ಹಿರಿಯರ ಆಸ್ತಿಗಳನ್ನುಖರೀದಿ ಮಾಡಬಹುದು. ಕಬ್ಬಿಣದ ವ್ಯಾಪಾರಿಗಳಿಗೆ ಆದಾಯ ಹೆಚ್ಚುತ್ತದೆ.