ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
09/06/2024 - 15/06/2024
ವಾರ ಭವಿಷ್ಯ: ತಾಯಿಯೊಂದಿಗೆ ನಿಷ್ಠುರ ಹೆಚ್ಚಾಗುವ ಅಪಾಯ ಈ ರಾಶಿಯವರದ್ದು
Published 15 ಜೂನ್ 2024, 22:30 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಆಕ್ರೋಶವೇ ನಿಮ್ಮಲ್ಲಿ ಮನೆ ಮಾಡಿರುತ್ತದೆ. ಆದಾಯವು ಉತ್ತಮವಾಗಿರುತ್ತದೆ. ಹಿರಿಯರು ನಿಮ್ಮ ಮಾತಿನಿಂದ ಬೇಸರಪಟ್ಟುಕೊಂಡರೂ ನಿಮಗೆ ಸಹಕರಿಸುತ್ತಾರೆ. ಆಸ್ತಿ ವಿಚಾರದಲ್ಲಿ ಗಾಳಿಮಾತುಗಳು ಕೇಳಿ ಬರುತ್ತವೆ. ಅಧ್ಯಯನವನ್ನೇ ವೃತ್ತಿಯಾಗಿಸಿಕೊಂಡವರಿಗೆ ಸೂಕ್ತ ಸಹಕಾರ ಸಿಗಲಿದೆ. ಶೀತ ಸಂಬಂಧಿ ಕಾಯಿಲೆಗಳು ಕಾಡಬಹುದು. ಸಂಗಾತಿಯ ನಡವಳಿಕೆಯಲ್ಲಿ ಭಿನ್ನತೆಯನ್ನು ಕಾಣಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರವಾಗಿರಿ. ಪಾಲುದಾರರು ಲಾಭ ನುಂಗುವ ಸಾಧ್ಯತೆಗಳಿವೆ. ಕೃಷಿ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬಡ್ತಿ ದೊರೆಯಬಹುದು. ಹಿರಿಯರಿಂದ ಕೃಷಿ ತಂತ್ರಜ್ಞಾನಗಳು ಬಳುವಳಿಯಾಗಿ ದೊರೆಯಬಹುದು. ಸರ್ಕಾರಿ ಕಚೇರಿಗಳಲ್ಲಿ ಆಗಬೇಕಿದ್ದ ಕೆಲಸಗಳು ಸರಾಗವಾಗಿ ಆಗುತ್ತವೆ.
ವೃಷಭ
ಬಹಳ ಸಭ್ಯರಂತೆ ಇರುವಿರಿ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ವೃತ್ತಿಯ ಜಾಗದಲ್ಲಿ ಹೊಸ ರೀತಿಯ ಸಮಸ್ಯೆಗಳು ಎದುರಾಗುವ ಲಕ್ಷಣಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇಲ್ಲವಾದಲ್ಲಿ ನಷ್ಟವಾಗುವ ಸಾಧ್ಯತೆಗಳಿವೆ. ಕೃಷಿಯಿಂದ ಸ್ವಲ್ಪ ಆದಾಯ ಕಡಿಮೆಯಾಗಬಹುದು. ತಂದೆಯಿಂದ ಸ್ಥಿರಾಸ್ತಿ ಕೊಳ್ಳಲು ಸಹಾಯ ಒದಗಲಿದೆ. ಕಬ್ಬಿಣ ಸಂಬಂಧಿತ ವಸ್ತುಗಳ ಮಾರಾಟಗಾರರಿಗೆ ಲಾಭ ಹೆಚ್ಚುತ್ತದೆ. ವಿದೇಶಿ ವ್ಯವಹಾರ ಮಾಡುವವರಿಗೆ ವ್ಯಾಪಾರದಲ್ಲಿ ಮಂದಗತಿ ಇರುತ್ತದೆ. ತಾಯಿಯಿಂದ ಸಿಗುವ ಸಹಾಯ ಕಡಿಮೆಯಾಗಬಹುದು. ತಂದೆಯಿಂದ ಕುಲಕಸುಬನ್ನು ಕಲಿಯಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಇದ್ದ ಕಾನೂನು ತೊಡಕು ತಪ್ಪುತ್ತದೆ.
ಮಿಥುನ
ಆತ್ಮ ಗೌರವ ಬಹಳ ಜಾಸ್ತಿ ಇರುತ್ತದೆ. ಆದಾಯವು ಮಂದಗತಿಯಲ್ಲಿರುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಹಾಗೂ ಹಣಕಾಸಿನ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ವಿದೇಶದಲ್ಲಿ ಗಣಿಗಾರಿಕೆ ಮಾಡುವವರಿಗೆ ಹೆಚ್ಚು ಪ್ರೋತ್ಸಾಹ ಸಿಗಲಿದೆ. ಉದ್ಯೋಗದ ಸ್ಥಳದಲ್ಲಿ ಹೊಸ ಸಮಸ್ಯೆಗಳು ಎದುರಾದರೂ ಅದನ್ನು ಜಾಣತನದಿಂದ ನಿವಾರಿಸಿಕೊಳ್ಳುವಿರಿ. ಆಟೋ ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿರುವವರಿಗೆ ಕೆಲಸ ದೊರೆತು ಹೆಚ್ಚು ಸಂಪಾದನೆಯಾಗಲಿದೆ. ಮನೆಪಾಠ ಮಾಡುವವರಿಗೆ ಆದಾಯ ಹೆಚ್ಚಲಿದೆ. ಸಂಗಾತಿ ಸಂಪಾದನೆಯಲ್ಲಿ ಹೆಚ್ಚಳವನ್ನು ಕಾಣಬಹುದು. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಅಡೆ ತಡೆಗಳನ್ನು ಕಾಣಬಹುದು. ತಂದೆಯಿಂದ ನಿಮ್ಮ ಉದ್ಯೋಗದಲ್ಲಿ ಸ್ವಲ್ಪ ಹೆಚ್ಚಿನ ಅನುಕೂಲವಾಗುತ್ತದೆ.
ಕರ್ಕಾಟಕ
ಬಹಳ ಚುರುಕಾಗಿ ಕೆಲಸ ಮಾಡುವಿರಿ. ಆದಾಯವು ಮಂದಗತಿಯಲ್ಲಿರುತ್ತದೆ. ವಿದೇಶಿ ವ್ಯವಹಾರಗಳಲ್ಲಿ ಪಾಲುದೊರೆಯುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಆದಾಯ ಹೆಚ್ಚುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ನಿರೀಕ್ಷಿತ ಗುರಿಯನ್ನು ತಲುಪಲು ಕಷ್ಟವಾಗಬಹುದು. ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಿಗೆ ಹೆಚ್ಚಿನ ಅನುಕೂಲಗಳು ಒದಗಿ ಹೊಸ ಶಾಖೆಗಳನ್ನು ತೆರೆಯಬಹುದು. ಸಗಟು ಲೋಹ ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಅಡ್ಡಿ ಆತಂಕಗಳು ಎದುರಾಗಬಹುದು. ಕೆಲವು ಸ್ತ್ರೀಯರಿಗೆ ವಿದೇಶಗಳಲ್ಲಿ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ನಿಮ್ಮ ವ್ಯವಹಾರವನ್ನು ಹಿರಿಯರು ಸರಿದಾರಿಗೆ ತಂದುಕೊಡುವರು. ಸ್ವಂತ ಉದ್ಯೋಗ ಮಾಡುವವರಿಗೆ ಹೆಚ್ಚು ಲಾಭವಿರುತ್ತದೆ.
ಸಿಂಹ
ಬಹಳ ಗತ್ತು ಮತ್ತು ಗೈರತ್ತು ನಿಮ್ಮಲ್ಲಿರುತ್ತವೆ. ಆದಾಯವು ಮದ್ಯಮ ಗತಿಯಲ್ಲಿರುತ್ತದೆ. ಉದ್ಯೋಗದಲ್ಲಿ ಆದಾಯ ಹೆಚ್ಚುವ ಸಾಧ್ಯತೆಗಳಿವೆ. ಧನಾದಾಯಗಳು ಬಂದರೂ ಅಷ್ಟೇ ಖರ್ಚು ಇರುತ್ತದೆ. ವೃತ್ತಿಯಲ್ಲಿ ಗೌರವ ಇರುತ್ತದೆ. ಮಹಿಳೆಯರು ನಡೆಸುವ ವ್ಯವಹಾರಗಳಲ್ಲಿ ಲಾಭ ಹೆಚ್ಚುತ್ತದೆ. ವಿದೇಶಕ್ಕೆ ಹೋಗಬೇಕೆನ್ನುವವರಿಗೆ ಸ್ವಲ್ಪ ಮಟ್ಟಿನ ವಿಳಂಬ ಆಗಬಹುದು. ತಾಯಿಯಿಂದ ಸೂಕ್ತ ಸಹಕಾರ ಹೆಚ್ಚುತ್ತದೆ ಹಾಗೂ ಸಲಹೆಗಳು ದೊರೆಯುತ್ತವೆ. ತೆರಿಗೆ ತಜ್ಞರಿಗೆ ಬೇಡಿಕೆ ಹೆಚ್ಚು. ಗಣಿಗಾರಿಕೆ ನಡೆಸುವವರಿಗೆ ಆದಾಯ ಅಧಿಕ. ವಿದೇಶಿ ವ್ಯವಹಾರ ಮಾಡುವವರಿಗೆ ಕಾನೂನಿನ ತೊಡಕುಗಳು ಎದುರಾಗುವ ಸಾಧ್ಯತೆಗಳಿವೆ. ತಂದೆಯ ವ್ಯವಹಾರದಲ್ಲಿ ನಿಮಗೆ ಸ್ಥಾನ ದೊರೆಯುತ್ತದೆ.
ಕನ್ಯಾ
ಬಹಳ ಆಲಸೀತನ ನಿಮ್ಮಲ್ಲಿರುತ್ತದೆ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಹಿರಿಯರಿಂದ ಸೂಕ್ತ ಸಮಯಕ್ಕೆ ಸರಿಯಾದ ಸಹಕಾರ ಮತ್ತು ಧನಸಹಾಯ ಸಿಗುತ್ತದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ದ್ರವರೂಪದ ವಸ್ತುಗಳನ್ನು ಮಾರುವವರಿಗೆ ಲಾಭವಿದೆ. ಕಣ್ಣಿನ ತೊಂದರೆಗಳು ಕೆಲವರನ್ನು ಕಾಡಬಹುದು. ಕೃಷಿಯಿಂದ ಆದಾಯ ಕಡಿಮೆಯಾಗಬಹುದು. ಕೆಲವೊಮ್ಮೆ ವೃತ್ತಿಯಲ್ಲಿ ತೊಂದರೆ ಎದುರಾದರೂ ಕೆಲವರ ಸಹಾಯದಿಂದ ಮುಂದುವರೆಯಬಹುದು. ನವೀನ ರೀತಿಯ ತಿನಿಸುಗಳ ತಯಾರಕರಿಗೆ ಆದಾಯ ಹೆಚ್ಚು. ಸರ್ಕಾರಿ ನೆರವು ಸಿಗುವುದು ನಿಧಾನವಾಗಬಹುದು.
ತುಲಾ
ಬಹಳ ಅಧಿಕಾರಸ್ಥರಂತೆ ಮಾತನಾಡುವಿರಿ. ಆದಾಯವು ಸಾಮಾನ್ಯ ಗತಿಯಲ್ಲಿರುತ್ತದೆ. ಕಣ್ಣಿನ ಚಿಕಿತ್ಸಕರಿಗೆ ಹೆಚ್ಚು ಸಂಪಾದನೆ ಇರಲಿದೆ. ಆರೋಗ್ಯಕ್ಕಾಗಿ ಹಣ ಖರ್ಚಾಗುವ ಸಾಧ್ಯತೆಗಳಿವೆ. ಕೊಟ್ಟ ಸಾಲಗವನ್ನು ಹಿರಿಯರು ಮರಳಿ ಕೇಳಬಹುದು. ವೃತ್ತಿಯ ಸ್ಥಳದಲ್ಲಿ ಹಿತಕರ ವಾತಾವರಣ ಇರುವುದಿಲ್ಲ. ವೃತ್ತಿಯಲ್ಲಿ ಮಹಿಳಾ ಮೇಲಧಿಕಾರಿಗಳಿಂದ ಸಹಾಯವನ್ನು ನಿರೀಕ್ಷಿಸಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸರಾಗತೆಯನ್ನು ಕಾಣಬಹುದು. ಸಂಗಾತಿಗಾಗಿ ಹಣ ಖರ್ಚು ಮಾಡಬೇಕಾದ ಸಂದರ್ಭ ಎದುರಾಗಲಿದೆ. ಬರಬೇಕಾದ ಆಸ್ತಿಗಳಲ್ಲಿ ಸ್ವಲ್ಪ ಗೊಂದಲಗಳು ಮೂಡುತ್ತವೆ. ಸರ್ಕಾರಿ ಕೆಲಸ ಕಾರ್ಯ ಮಾಡುವ ಮಧ್ಯವರ್ತಿಗಳಿಗೆ ಲಾಭವಾಗುತ್ತದೆ.
ವೃಶ್ಚಿಕ
ಸ್ವಲ್ಪ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಆದಾಯವು ಈಗ ಮಧ್ಯಮ ಗತಿಯಲ್ಲಿರುತ್ತದೆ. ತಂದೆ ಮಕ್ಕಳ ನಡುವೆ ಕಾವೇರಿದ ಮಾತುಗಳಾಗಬಹುದು. ವ್ಯವಹಾರಗಳಲ್ಲಿ ನಿರೀಕ್ಷಿತ ಪ್ರಗತಿ ನಿಧಾನವಾಗುತ್ತದೆ. ವೃತ್ತಿಯಲ್ಲಿ ಇದ್ದ ಮುಸುಕಿನ ಗುದ್ದಾಟಗಳು ಹಾಗೆಯೇ ಮುಂದುವರೆಯುತ್ತವೆ. ಧಾರ್ಮಿಕ ಸಂಸ್ಥೆಗಳನ್ನು ನಡೆಸುವವರಿಗೆ ಸಮಾಜದಿಂದ ಸಹಾಯ ದೊರೆಯುತ್ತದೆ. ಸಂಗಾತಿಯ ಖರ್ಚುಗಳಲ್ಲಿ ಹೆಚ್ಚಳವನ್ನು ಕಾಣಬಹುದು. ತಾಯಿಯೊಡನೆ ಕಾವೇರಿದ ಮಾತುಗಳಾಗಬಹುದು. ಹೈನುಗಾರಿಕೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗದು. ಉದ್ಯೋಗದಲ್ಲಿ ಕಿರಿಯ ಅಧಿಕಾರಿಗಳು ನಿಮ್ಮನ್ನು ಹೊಗಳಲಿದ್ದಾರೆ. ಧರ್ಮಬೋಧನೆ ಮಾಡುವವರಿಗೆ ಗೌರವಗಳು ದೊರೆಯುತ್ತವೆ.
ಧನು
ಸಮಾಜಮುಖಿ ಕೆಲಸ ಮಾಡಲು ಉತ್ಸುಕರಾಗಿರುವಿರಿ. ಆದಾಯವು ಕಡಿಮೆ ಇರುತ್ತದೆ. ಅನಿರೀಕ್ಷಿತ ಖರ್ಚು ವೆಚ್ಚಗಳು ಎದುರಾಗಬಹುದು ಹಾಗೂ ಅದನ್ನು ನಿಭಾಯಿಸುವ ಶಕ್ತಿಯೂ ದೊರಕಲಿದೆ. ತಂದೆಯಿಂದ ಬರಬೇಕಾದ ಆಸ್ತಿ ಸಿಗುವುದು ನಿಧಾನವಾಗಲಿದೆ. ಕೆಲಸದಲ್ಲಿ ನಿಮ್ಮ ವೃತ್ತಿ ಧರ್ಮವನ್ನು ಕಾಪಾಡಿಕೊಳ್ಳುವಿರಿ. ಆಭರಣ ತಯಾರಕರಿಗೆ ಬೇಡಿಕೆ ಬರಲಿದೆ. ಹೈನುಗಾರಿಕೆ ಮಾಡುವವರಿಗೆ ಸ್ವಲ್ಪ ಹಿನ್ನಡೆ ಆಗಬಹುದು. ಸರ್ಕಾರಿ ಕಚೇರಿಯ ಕೆಲಸ ಕಾರ್ಯಗಳಲ್ಲಿ ಮಧ್ಯಮ ಗತಿಯ ಫಲಿತಾಂಶವಿರುತ್ತದೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಬಾವಿ ತೋಡುವವರಿಗೆ ಹೆಚ್ಚು ಅನುಕೂಲವಾಗುತ್ತದೆ. 
ಮಕರ
ಸ್ತಿತಪ್ರಜ್ಞರಾಗಿ ಕೆಲಸ ಮಾಡುವಿರಿ. ಆದಾಯವು ಕಡಿಮೆ ಇರುತ್ತದೆ ಹಾಗೂ ಅದರಲ್ಲೇ ನಿರ್ವಹಣೆ ಮಾಡುವ ಶಕ್ತಿ ನಿಮಗಿರುತ್ತದೆ. ವೃತ್ತಿಯಲ್ಲಿ ಏನೇ ಗೊಂದಲಗಳಿದ್ದರೂ ಧೈರ್ಯವಾಗಿ ನಿಭಾಯಿಸುವಿರಿ. ಹಣ ಗಳಿಸುವುದು ನಿಮ್ಮ ಚಟುವಟಿಕೆಯ ಒಂದು ಭಾಗವಾಗಿರಲಿದೆ. ಹೈನುಗಾರಿಕೆಯಲ್ಲಿ ಆದಾಯ ಕಡಿಮೆಯಾಗಬಹುದು. ತಾಯಿಯು ನಿಮಗೆ ಸಾಕಷ್ಟು ಸಲಹೆ ಸೂಚನೆಗಳನ್ನು ಕೊಡುವರು. ತಾಯಿಯೊಂದಿಗೆ ನಿಷ್ಠುರಗಳು ಹೆಚ್ಚಾಗುವ ಸಾಧ್ಯತೆಗಳಿವೆ. ತಂದೆಯಿಂದ ಧನಸಹಾಯ ದೊರೆಯುತ್ತದೆ. ವೃತ್ತಿಯಲ್ಲಿ ಸ್ಥಿರತೆ ಇರುತ್ತದೆ. ವಿದೇಶಗಳಿಗೆ ಆಹಾರ ವಸ್ತುಗಳನ್ನು ರಫ್ತು ಮಾಡುವವರಿಗೆ ಆದಾಯ ಹೆಚ್ಚುತ್ತದೆ.
ಕುಂಭ
ನ್ಯಾಯ, ಧರ್ಮ ಸಮ್ಮತವಾಗಿ ನಡೆಯುವಿರಿ. ಆದಾಯವು ಕಡಿಮೆ ಇದ್ದು ಖರ್ಚನ್ನು ಸರಿದೂಗಿಸುವಿರಿ. ಗುಂಪಿನಲ್ಲಿ ಮಾತನಾಡುವಾಗ ಎಚ್ಚರವಿರಲಿ. ಧಾರ್ಮಿಕ ಮುಖಂಡರಿಗೆ ಗೌರವ ದೊರೆಯುತ್ತದೆ. ಜಲ ಸಂಸ್ಕರಣೆ ಮಾಡುವವರಿಗೆ ಬೇಡಿಕೆ ಹೆಚ್ಚು. ವೃತ್ತಿಯಲ್ಲಿ ಕಿರಿಕಿರಿ ಹೆಚ್ಚು. ಸಿಹಿ ಪದಾರ್ಥ ಸೇರಿದಂತೆ ಆಹಾರ ತಯಾರಕರು ಹಾಗೂ ಮಾರಾಟಗಾರರಿಗೆ ಲಾಭ ಹೆಚ್ಚು. ಧಾರ್ಮಿಕ ಕ್ರಿಯೆಗಳ ಕುರಿತು ಟೀಕೆ ಮಾಡುವ ಕಿರಿಯರಿಗೆ ಅವರ ಮಾತೇ ಮುಳುವಾಗಲಿದೆ. ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಹಣ ಖರ್ಚಾಗುವುದು.
ಮೀನ
ಒಂದು ರೀತಿಯ ಅಸಮಾಧಾನವು ನಿಮ್ಮಲ್ಲಿ ತುಂಬಿರುತ್ತದೆ. ಮಾತಿನಲ್ಲಿ ಬಹಳ ಕಠಿಣತೆ ಇರುತ್ತದೆ. ಕಬ್ಬಿಣದ ವ್ಯಾಪಾರಸ್ಥರಿಗೆ ವಹಿವಾಟು ವಿಸ್ತರಿಸುವ ಅವಕಾಶ ದೊರೆಯಲಿದೆ. ಜತೆಗೆ ಲಾಭವೂ ಹೆಚ್ಚಾಗಲಿದೆ. ಪಾದದಲ್ಲಿ ನೋವು ಕಾಣಿಸಿಕೊಳ್ಳಬಹುದು. ನಿಮ್ಮ ಸಹೋದ್ಯೋಗಿಗಳಿಂದ ನಿಮಗೆ ಸ್ವಲ್ಪ ಕಿರುಕುಳಗಳಾಗುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ನಿರೀಕ್ಷಿತ ಏಳಿಗೆ ಇರುವುದಿಲ್ಲ ಕೆಲವೊಂದು ವಿಷಯಗಳಲ್ಲಿ ನಿಮ್ಮ ಅಭಿಪ್ರಾಯಕ್ಕಿಂತ ತಂದೆಯವರ ಅಭಿಪ್ರಾಯ ಬಹಳ ಭಿನ್ನವಾಗಿರುತ್ತದೆ. ವ್ಯವಹಾರಗಳಲ್ಲಿ ಲಾಭ ಬಂದರೂ ಖರ್ಚಿಗೆ ಹೊಂದಾಣಿಕೆಯಾಗುತ್ತದೆ. ಸಂಗಾತಿಯಿಂದ ನಿರೀಕ್ಷಿತ ಸಹಾಯ ದೊರೆಯುವುದಿಲ್ಲ. ಕುಸುರಿ ಕಲೆಗಳನ್ನು ಮಾಡುವವರಿಗೆ ಬೇಡಿಕೆ ಬರುತ್ತದೆ.