ವಾರ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ
Published 11 ಜನವರಿ 2025, 22:30 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ದೇಹದ ಶಕ್ತಿ, ಸಾಮರ್ಥ್ಯದ ಕಡೆಗೆ ಹೆಚ್ಚು ಗಮನ ಕೊಡುವಿರಿ. ಭಾಷಣಕಾರರಿಗೆ ಉತ್ತಮ ವೇದಿಕೆ ದೊರಕುತ್ತದೆ. ಆದಾಯವು ಉತ್ತಮವಾಗಿರುತ್ತದೆ. ಆಸ್ತಿ ಖರೀದಿ ವಿಚಾರದಲ್ಲಿ ಮುಂದುವರಿಯಬಹುದು. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶವಿರುತ್ತದೆ. ವೃತ್ತಿಯಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಫಲವಿರುತ್ತದೆ. ರಾಜಕೀಯ ನಾಯಕರುಗಳಿಗೆ ಸ್ವಲ್ಪ ಅಭಿವೃದ್ಧಿ ಇದೆ. ವಿದೇಶಿ ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಇರುವುದಿಲ್ಲ. ಹಿರಿಯರಿಂದ ಸಂಗಾತಿಗೆ ಧನ ಸಹಾಯ ಲಭಿಸುತ್ತದೆ.
ವೃಷಭ
ಅಧ್ಯಾಪಕರಿಗೆ ಗೌರವ ಹೆಚ್ಚುತ್ತದೆ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಸಂಗೀತದಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಒಡಹುಟ್ಟಿದವರ ಕಾಟ ತಪ್ಪುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ಫಲಿತಾಂಶವಿರುತ್ತದೆ. ಸಂಬಂಧಿಕರಿಂದ ವಿವಾಹ ಸಂಬಂಧಗಳು ಒದಗಿಬರುತ್ತವೆ. ಹಿರಿಯರ ಸಹಾಯದಿಂದ ವೃತ್ತಿಯಲ್ಲಿ ಮುಂದುವರೆಯಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಸಾಕಷ್ಟು ಅಭಿವೃದ್ಧಿ ಇರುತ್ತದೆ.
ಮಿಥುನ
ಮನಸ್ಸಿನಲ್ಲಿ ಒಂದು ರೀತಿಯ ಸಂತೋಷವಿದ್ದರೂ, ಅದನ್ನು ಅನುಭವಿಸಲು ಒದ್ದಾಡುವಿರಿ. ಕೃಷಿಯಿಂದ ಆದಾಯವಿರುತ್ತದೆ. ನಿಮ್ಮ ಸಂಬಂಧಿಕರು ನಿಮ್ಮ ಸಂಗಾತಿಯ ಮೇಲೆ ಒತ್ತಡ ಹೇರುವರು. ಆಸ್ತಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಆದಾಯವಿರುತ್ತದೆ. ಬಾಯಿ ಹುಣ್ಣು ಕೆಲವರಿಗೆ ಕಾಣಿಸಬಹುದು. ಸರ್ಕಾರಿ ವ್ಯವಹಾರಗಳಲ್ಲಿ ಅಭಿವೃದ್ಧಿ ಇರುತ್ತದೆ. ದೈವ ಕಾರ್ಯಗಳಿಗಾಗಿ ಹಣ ಖರ್ಚಾಗುತ್ತದೆ.
ಕರ್ಕಾಟಕ
ಕೆಲವರ ಮೇಲೆ ಕೋಪ ಬಂದರು ಅದನ್ನು ತೋರಿಸಿಕೊಳ್ಳಲು ಆಗುವುದಿಲ್ಲ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಕೃಷಿಗಾಗಿ ಹೆಚ್ಚು ಹಣ ಹೂಡಿಕೆ ಮಾಡಬೇಕಾಗುತ್ತದೆ. ಕೃಷಿಯಿಂದ ಬರಬೇಕಾದ ಆದಾಯ ಕಡಿಮೆಯಾಗಬಹುದು. ರಕ್ತ ಪರಿಚಲನೆಯಲ್ಲಿ ವ್ಯತ್ಯಾಸವಿರುವವರು ಸ್ವಲ್ಪ ಎಚ್ಚರವಹಿಸಿ. ಸಂಗಾತಿಯ ಸಿಡುಕು ನುಡಿಗಳು ಮುಜುಗರ ತರಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಇರುತ್ತದೆ. ವೃತ್ತಿಯಲ್ಲಿ ಹಿತ ಶತ್ರುಗಳಿರುವರು.
ಸಿಂಹ
ವಿಪರೀತವಾದ ಆತ್ಮ ಗೌರವ ಇರುತ್ತದೆ. ಮಾತನಾಡುವಾಗ ಎಚ್ಚರಿಕೆ ಇರಲಿ. ಸ್ತ್ರೀಯರಿಂದ ಕೆಲಸ ಕಾರ್ಯಗಳಿಗೆ ತೊಂದರೆ ಬರಬಹುದು. ಭೂಮಿಗಾಗಿ ಹಣ ಹೂಡುವಾಗ ಸ್ವಲ್ಪ ಎಚ್ಚರಿಕೆ ಇರಲಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವನ್ನು ಪಡೆಯುವ ಯೋಗವಿದೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆಯನ್ನು ಕಾಣಬಹುದು. ಸಂಸಾರಕ್ಕಾಗಿ ಸಂಗಾತಿ ಸಾಕಷ್ಟು ಶ್ರಮ ಪಡುವರು. ಆಯುರ್ವೇದ ವೈದ್ಯರಿಗೆ ಬೇಡಿಕೆ ಹೆಚ್ಚುತ್ತದೆ.
ಕನ್ಯಾ
ಧಾರ್ಮಿಕ ವಿಷಯಗಳನ್ನು ಕಲಿಯಲು ಆಸಕ್ತಿ ಹೊಂದುವಿರಿ. ಗಂಟಲು ಬೇನೆ ಅಥವಾ ಹಲ್ಲು ನೋವು ಕೆಲವರನ್ನು ಕಾಡಬಹುದು. ಆದಾಯವು ನಿರೀಕ್ಷಿತ ಮಟ್ಟದಲ್ಲಿ ಇರುವುದಿಲ್ಲ. ಹಿರಿಯರಿಂದ ಆಸ್ತಿ ವಿವಾದಗಳು ಪರಿಹಾರವಾಗುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುವುದಿಲ್ಲ. ಮಕ್ಕಳ ಸುಖಕ್ಕಾಗಿ ಹೆಚ್ಚು ಹಣ ಖರ್ಚಾಗುತ್ತದೆ. ವೃತ್ತಿಯಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ. ಕೃಷಿ ಪಂಡಿತರಿಗೆ ಸಂಶೋಧನೆಯಲ್ಲಿ ಹೆಚ್ಚಿನ ಅವಕಾಶಗಳು ದೊರೆಯುತ್ತವೆ.
ತುಲಾ
ಜನರೊಡನೆ ಸುಂದರವಾಗಿ ಮಾತನಾಡುತ್ತಾ ಅವರ ವಿರುದ್ಧವೇ ತಂತ್ರಗಳನ್ನು ರೂಪಿಸುವಿರಿ. ಆದಾಯವಿದ್ದರೂ, ಅದು ನಿಮ್ಮನ್ನು ತಲುಪುವುದು ನಿಧಾನವಾಗಬಹುದು. ಹಿರಿಯರ ಜೊತೆ ನಡೆಸುವ ವ್ಯವಹಾರಗಳಲ್ಲಿ ಸಮಸ್ಯೆಗಳಾಗಬಹುದು. ಆಸ್ತಿ ವಿವಾದ ಮತ್ತೆ ಶುರುವಾಗಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿ ಇರುತ್ತದೆ. ಆಹಾರ ವಸ್ತುಗಳನ್ನು ಮಾರಾಟ ಮಾಡುವವರಿಗೆ ಲಾಭವಿರುತ್ತದೆ.
ವೃಶ್ಚಿಕ
ಹಿರಿಯರ ಬುದ್ಧಿ ಮಾತುಗಳು ನಿಮಗೆ ಬಹಳ ಒಳಿತನ್ನು ಮಾಡುತ್ತವೆ. ಆದಾಯವು ನಿಮ್ಮ ನಿರೀಕ್ಷೆಯಷ್ಟಿರುತ್ತದೆ. ನಿಮ್ಮ ನಡವಳಿಕೆಯಿಂದ ಶತ್ರುಗಳನ್ನು ಗೆಲ್ಲುವಿರಿ. ವೈಮಾನಿಕ ತಂತ್ರಜ್ಞಾನ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಇರಲಿ. ಅವಿವಾಹಿತರಿಗೆ ವಿವಾಹ ಸಂಬಂಧಗಳು ಕೂಡಿ ಬರುವ ಯೋಗವಿದೆ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರಿಗೆ ಲಾಭ ಹೆಚ್ಚುತ್ತದೆ. ಉದ್ಯೋಗದಲ್ಲಿ ಮುಸುಕಿನ ಗುದ್ದಾಟಗಳಿರುತ್ತವೆ.
ಧನು
ಹಿರಿಯರ ಜೊತೆಗೂಡಿ ಮಾಡಿದ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಆದಾಯವು ಕಡಿಮೆ ಇರುತ್ತದೆ. ಮಹಿಳೆಯರಿಂದ ನಿಮ್ಮ ಕೆಲಸಗಳಿಗೆ ತೊಡಕು ಬರಬಹುದು. ಕ್ರೀಡಾಪಟುಗಳಿಗೆ ಅನಿರೀಕ್ಷಿತವಾಗಿ ಸೌಲಭ್ಯಗಳು ದೊರೆಯುತ್ತವೆ. ವಾಯು ಪ್ರಕೋಪ ಕೆಲವರನ್ನು ಕಾಡಬಹುದು. ಸಾಹಸ ಕಲಾವಿದರಗಳು ಸಾಹಸ ಪ್ರದರ್ಶನ ಮಾಡುವಾಗ ಎಚ್ಚರವಹಿಸಿರಿ. ಕೆಲವು ಹೆಣ್ಣು ಮಕ್ಕಳಿಗೆ ತವರಿನಿಂದ ದೊಡ್ಡ ರೀತಿಯ ಉಡುಗೊರೆ ದೊರೆಯುವ ಸಾಧ್ಯತೆ ಇದೆ.
ಮಕರ
ಯಾವುದೇ ಕೆಲಸವನ್ನು ಬಹಳ ಶ್ರದ್ಧೆಯಿಂದ ಮಾಡುವಿರಿ. ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ಯಾರ ವಿರೋಧವಿದ್ದರೂ ಕೂಡ ನಿಮ್ಮ ಕೆಲಸವನ್ನು ನೀವು ಸಾಧಿಸುವಿರಿ. ಕೃಷಿಯಲ್ಲಿ ಹೆಚ್ಚು ಸಂಪಾದನೆ ಮಾಡುವಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಸಿಗುತ್ತದೆ. ಶೀತ ಸಂಬಂಧಿ ದೋಷಗಳು ಕೆಲವರನ್ನು ಕಾಡಬಹುದು. ಬಂಧುಗಳಲ್ಲಿ ವಿವಾಹಸಂಬಂಧಗಳು ಒದಗುವ ಸಾಧ್ಯತೆಗಳಿವೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿಯಿದ್ದರೂ, ನಿಲ್ಲುವುದಿಲ್ಲ.
ಕುಂಭ
ನಿಮ್ಮ ಹಿರಿತನದ ಜೊತೆಗೆ ಜ್ಞಾನವು ಸೇರಿಕೊಂಡು ನಿಮಗೆ ಗೌರವ ತರುತ್ತದೆ. ವ್ಯಾಯಾಮ ಮಾಡುವರು ಎಚ್ಚರವಹಿಸುವುದು ಒಳ್ಳೆಯದು, ಕೆಲವೊಂದು ಪರಿಣಾಮಗಳು ಎದುರಾಗಬಹುದು. ವಿದ್ಯಾರ್ಥಿಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಮಧ್ಯವರ್ತಿ ಕೆಲಸ ಮಾಡುವವರಿಗೆ ಹೆಚ್ಚು ಆದಾಯ ಬರುತ್ತದೆ. ಸಂಗಾತಿಯ ಸಹಾಯದಿಂದ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಲಾಭವಿರುತ್ತದೆ. ವೃತ್ತಿಯಲ್ಲಿ ಸ್ವಲ್ಪ ಏಳಿಗೆ ಇರುತ್ತದೆ.
ಮೀನ
ಬಲವಂತವಾಗಿ ದೇಹ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಹಾಸ್ಯ ಕವಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಶ್ವಾಸಕೋಶದ ತೊಂದರೆ ಇರುವವರು ಎಚ್ಚರ ವಹಿಸಿರಿ. ಕಬ್ಬಿಣದ ಕೆಲಸ ಮಾಡುವವರಿಗೆ ನಿರೀಕ್ಷಿತ ಆದಾಯ ಇರುತ್ತದೆ. ಆಭರಣ ತಯಾರಕರಿಗೆ ಲಾಭ ಹೆಚ್ಚುತ್ತದೆ.