ವಾರ ಭವಿಷ್ಯ: ಈ ರಾಶಿಯವರು ವೃತ್ತಿಯಲ್ಲಿ ಹೆಚ್ಚು ವೇತನ,ಹೊಸ ಸ್ಥಾನವನ್ನು ಕಾಣಬಹುದು
Published 28 ಫೆಬ್ರುವರಿ 2026, 22:44 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
ಜ್ಯೋತಿಷ್ಯ ವಿಶಾರದ, ಮಾದಾಪುರ
ಸಂಪರ್ಕ ಸಂಖ್ಯೆ: 8197304680
ಮೇಷ
ಸ್ವಂತ ಬಲದ ಮೇಲೆ ನಂಬಿಕೆ ಇಟ್ಟು ಮುನ್ನಡೆಯಿರಿ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಹೊಸ ಆಸ್ತಿ ಕೊಳ್ಳಲು ಸಕಾಲ. ಪಶುಸಂಗೋಪನೆ ಮಾಡುವವರಿಗೆ ಉತ್ತಮ ಲಾಭವಿರುತ್ತದೆ. ಮಕ್ಕಳಿಂದ ನಿರೀಕ್ಷಿತ ಸಹಕಾರ ದೊರೆಯುವುದಿಲ್ಲ. ನರರೋಗ ತಜ್ಞರಿಗೆ ಬೇಡಿಕೆ ಹೆಚ್ಚುತ್ತದೆ. ಸಂಗಾತಿಯ ಜೊತೆ ಮಾಡಿದ ವ್ಯವಹಾರಗಳಲ್ಲಿ ಲಾಭ ಹೆಚ್ಚಿರುತ್ತದೆ. ಕೃಷಿಯಿಂದ ಅನಿರೀಕ್ಷಿತ ಲಾಭ ಬರುವ ಸಾಧ್ಯತೆಗಳಿವೆ.
( ಅಶ್ವಿನಿ ಭರಣಿ ಕೃತಿಕ 1)
28 ಫೆಬ್ರುವರಿ 2026, 22:44 IST
ವೃಷಭ
ಸಂಗೀತಗಾರರಿಗೆ ಬೇಡಿಕೆ ಹೆಚ್ಚುತ್ತದೆ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ ವಿದ್ಯಾರ್ಥಿಗಳಿಗೆ ಮಧ್ಯಮಗತಿಯ ಫಲಿತಾಂಶವಿರುತ್ತದೆ. ವೃತ್ತಿಯಲ್ಲಿ ಅಭಿವೃದ್ಧಿಯನ್ನು ಕಂಡರೂ, ಹಿತಶತ್ರುಗಳು ಜಾಸ್ತಿಯಾಗುವರು. ಸ್ತ್ರೀರೋಗ ತಜ್ಞರಿಗೆ ಬೇಡಿಕೆ ಹೆಚ್ಚಾಗುತ್ತದೆ. ಸಂಗಾತಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಹೊಸ ಸ್ಥಾನ ಸಿಗುವ ಸಾಧ್ಯತೆಗಳಿವೆ.
(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
28 ಫೆಬ್ರುವರಿ 2026, 22:44 IST
ಮಿಥುನ
ಅಧ್ಯಾಪಕರಿಗೆ ಬೇಡಿಕೆ ಮತ್ತು ಗೌರವ ಹೆಚ್ಚಾಗುತ್ತದೆ. ವೈಯಕ್ತಿಕ ಆದಾಯ ನಿರೀಕ್ಷೆಯ ಮಟ್ಟ ತಲುಪುತ್ತದೆ. ಒಳ್ಳೆಯ ಕೆಲಸಗಳಿಗೆ ಮಾತ್ರ ಜನರ ಸಹಕಾರ ಸಿಗುತ್ತದೆ. ಹಿರಿಯರ ಆಸ್ತಿಯನ್ನು ಖರೀದಿ ಮಾಡಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಿದೆ. ಕೃಷಿಯಿಂದ ನಿರೀಕ್ಷಿತ ಆದಾಯ ಸಿಗುವುದಿಲ್ಲ. ಸಂಗಾತಿಯ ಸಹಕಾರ ಬಹಳ ಮುಖ್ಯವಾಗಿರುತ್ತದೆ. ನಿಮ್ಮ ವೃತ್ತಿಯಲ್ಲಿ ಸ್ವಲ್ಪ ಏರಿಳಿತಗಳು ಇರುತ್ತವೆ. ವ್ಯವಹಾರಗಳಲ್ಲಿ ನಿಮಗೆ ಹೊಸ ಸ್ಥಾನ ದೊರೆತು ಲಾಭ ಹೆಚ್ಚುತ್ತದೆ.
(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
28 ಫೆಬ್ರುವರಿ 2026, 22:44 IST
ಕರ್ಕಾಟಕ
ಒಂದು ಕಾರ್ಯ ಸಾಧನೆಯಾದ ಸಂತೋಷ ಮನಸ್ಸಿನಲ್ಲಿರುತ್ತದೆ. ಆದಾಯವು ಕಡಿಮೆ ಇದ್ದು, ಅದರಲ್ಲಿ ನಿಭಾಯಿಸಬೇಕಾದ ಅನಿವಾರ್ಯತೆ ಇರುತ್ತದೆ. ಆಸ್ತಿ ವಹಿವಾಟು ನಡೆಸುವ ಮಧ್ಯವರ್ತಿಗಳಿಗೆ ಅಭಿವೃದ್ಧಿ ಇದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟದ ಯಶಸ್ಸು ದೊರೆಯುವುದಿಲ್ಲ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸಂಗಾತಿಗೆ ಕೃಷಿ ಭೂಮಿ ದೊರೆಯುವ ಸಾಧ್ಯತೆಗಳಿವೆ. ಸರ್ಕಾರಿ ವ್ಯವಹಾರಗಳಲ್ಲಿ ನಿಧಾನ ಗತಿ ಇರುತ್ತದೆ.
( ಪುನರ್ವಸು 4 ಪುಷ್ಯ ಆಶ್ಲೇಷ)
28 ಫೆಬ್ರುವರಿ 2026, 22:44 IST
ಸಿಂಹ
ವೈರಾಗ್ಯದ ಕಡೆಗೆ ಮನಸ್ಸು ಹರಿಯಬಹುದು. ಆದಾಯವು ಖರ್ಚನ್ನು ಪೂರೈಸುವಷ್ಟಿರುತ್ತದೆ. ಸ್ಥಿರಾಸ್ತಿಯನ್ನು ಪಡೆಯುವ ಯೋಗವಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭಿಸುತ್ತದೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಸಂಗಾತಿಯ ಸಹಾಯದಿಂದ ಆರ್ಥಿಕ ಚೇತರಿಕೆಯನ್ನು ಕಾಣಬಹುದು. ಹಿರಿಯರ ಆಸ್ತಿಯಿಂದ ನಿಮಗೆ ಆದಾಯ ಮತ್ತು ಅಭಿವೃದ್ಧಿ ಇರುತ್ತದೆ. ವೃತ್ತಿಯಲ್ಲಿ ಹೊಸತನವನ್ನು ಕಾಣಬಹುದು. ಪತ್ರಕರ್ತರಿಗೆ ಆದಾಯ ಹೆಚ್ಚುತ್ತದೆ.
( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
28 ಫೆಬ್ರುವರಿ 2026, 22:44 IST
ಕನ್ಯಾ
ವಾರದ ಆರಂಭದಲ್ಲಿ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಸಂಗಾತಿ ಕಡೆಯವರಿಂದ ನಿರೀಕ್ಷಿತ ಸಹಕಾರ ದೊರೆಯುವುದಿಲ್ಲ. ವೃತ್ತಿ ಸಂಬಂಧಿತ ಸ್ಥಳದಲ್ಲಿ ವಾಸಿಸಲು ಅವಕಾಶಗಳು ದೊರೆಯಬಹುದು. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ ಮಾತ್ರವಿರುತ್ತದೆ. ಕೆಲವೊಮ್ಮೆ ಸಂಗಾತಿಯಿಂದ ನಿರೀಕ್ಷಿತ ಸಹಾಯ ದೊರೆಯುವುದಿಲ್ಲ. ಕೃಷಿಯಲ್ಲಿ ಸ್ವಲ್ಪ ಲಾಭವಿರುತ್ತದೆ. ಹೈನುಗಾರಿಕೆ ಮಾಡುವವರ ಆದಾಯ ನಿರೀಕ್ಷಿತ ಮಟ್ಟ ತಲುಪುತ್ತದೆ.
( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
28 ಫೆಬ್ರುವರಿ 2026, 22:44 IST
ತುಲಾ
ಹೆಚ್ಚು ಆತ್ಮವಿಶ್ವಾಸದಿಂದ ಕೆಲಸ ಮಾಡುವಿರಿ. ಸಿದ್ಧ ಉಡುಪು ತಯಾರಕರಿಗೆ ಹೆಚ್ಚು ಲಾಭವಿರುತ್ತದೆ. ಕೃಷಿ ಸಂಶೋಧಕರಿಗೆ ಹಿನ್ನಡೆಯಾಗಬಹುದು. ಸಂಗಾತಿಯ ಸಹಕಾರದಿಂದ ಆಸ್ತಿ ಖರೀದಿಸಬಹುದು. ವೃತ್ತಿಯಲ್ಲಿ ಅನುಕೂಲತೆಗಳು ಹೆಚ್ಚುತ್ತವೆ. ಧರ್ಮ ಕಾರ್ಯಗಳನ್ನು ಮಾಡುವವರಿಗೆ ಸಾಕಷ್ಟು ಜನಬೆಂಬಲ ದೊರೆಯುತ್ತದೆ. ದೇಣಿಗೆಯ ಆದಾಯವು ಹೆಚ್ಚುತ್ತದೆ.
( ಚಿತ್ತಾ 3 4 ಸ್ವಾತಿ ವಿಶಾಖ 1 2 3)
28 ಫೆಬ್ರುವರಿ 2026, 22:44 IST
ವೃಶ್ಚಿಕ
ಕುಟುಂಬದಲ್ಲಿ ಸಂತಸವಿರುತ್ತದೆ. ಆದಾಯವು ಮಧ್ಯಮಗತಿಯಲ್ಲಿರುತ್ತದೆ. ಕೆಲವು ಬಂಧುಗಳು ನಿಮ್ಮ ಕಷ್ಟಕ್ಕೆ ಸ್ಪಂದಿಸುವರು. ಕಟ್ಟಡ ನಿರ್ಮಾಣ ಮಾಡುವವರ ಆದಾಯವು ಹೆಚ್ಚುತ್ತದೆ. ಕೃಷಿ ಸಂಶೋಧಕರಿಗೆ ಮತ್ತು ಕೃಷಿ ವಿದ್ಯಾರ್ಥಿಗಳಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಸಂಗಾತಿಯಿಂದ ಸಂಸಾರದಲ್ಲಿ ಸುಖ ಹೆಚ್ಚುತ್ತದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ವೃತ್ತಿಯಲ್ಲಿ ಹೆಚ್ಚಿನ ಸಮಸ್ಯೆಗಳಿರುವುದಿಲ್ಲ.
( ವಿಶಾಖಾ 4 ಅನುರಾಧ ಜೇಷ್ಠ)
28 ಫೆಬ್ರುವರಿ 2026, 22:44 IST
ಧನು
ಬಹಳ ಗಂಭೀರವಾಗಿ ವಿಷಯಗಳನ್ನು ಚಿಂತನೆ ಮಾಡುವಿರಿ. ಆದಾಯವು ತಕ್ಕಮಟ್ಟಿಗೆ ಇರುತ್ತದೆ. ಕೃಷಿ ಭೂಮಿಯನ್ನು ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳು ಹೆಚ್ಚು ಶ್ರಮವಹಿಸಲೇ ಬೇಕಾದ ಅನಿವಾರ್ಯತೆ ಇದೆ. ಕುಡಿಯುವ ನೀರು ಆರೋಗ್ಯ ವ್ಯತ್ಯಾಸಕ್ಕೆ ಕಾರಣವಾಗಬಹುದು. ನಿಮ್ಮ ಸಂಗಾತಿಯಿಂದ ನಿಮ್ಮ ಅಗತ್ಯತೆಗಳಿಗೆ ಪೂರಕವಾಗಿ ಆರ್ಥಿಕ ಸಹಾಯ ದೊರೆಯುತ್ತದೆ. ನಿಮ್ಮ ಸ್ವಂತ ಬಲದಿಂದ ವೃತ್ತಿಯಲ್ಲಿ ಮೇಲ್ದರ್ಜೆಗೆ ಏರಬಹುದು ಮತ್ತು ಸಂಪಾದನೆ ಹೆಚ್ಚುತ್ತದೆ.
( ಮೂಲ ಪೂರ್ವಾಷಾಢ ಉತ್ತರಾಷಾಢ 1 )
28 ಫೆಬ್ರುವರಿ 2026, 22:44 IST
ಮಕರ
ಆದಾಯವು ಅಗತ್ಯವನ್ನು ಪೂರೈಸುವಷ್ಟಿರುತ್ತದೆ. ವೈರಿಗಳನ್ನು ಮಣಿಸಲು ಬೇಕಾದ ತಂತ್ರಗಳನ್ನು ಹೆಣೆಯುವಿರಿ. ಆಧುನಿಕ ಕೃಷಿ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುತ್ತದೆ. ಹಿರಿಯರ ನಡುವಿನ ಹಣದ ವ್ಯವಹಾರಗಳು ದ್ವೇಷಕ್ಕೆ ಕಾರಣವಾಗಬಹುದು. ಸಂಗಾತಿಯ ಧರ್ಮ ನಿಷ್ಠುರತೆ ನಿಮ್ಮನ್ನು ಕೆರಳಿಸುತ್ತದೆ. ಪ್ರೀತಿ, ಪ್ರೇಮದಲ್ಲಿರುವವರಿಗೆ ಹೆಚ್ಚು ಯಶಸ್ಸು ದೊರೆಯುತ್ತದೆ.
( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
28 ಫೆಬ್ರುವರಿ 2026, 22:44 IST
ಕುಂಭ
ಆದಾಯವು ಕಡಿಮೆ ಇರುತ್ತದೆ. ಚುರುಕಾದ ನಡವಳಿಕೆ ಇರುತ್ತದೆ. ಭೂಮಿ ವ್ಯಾಪಾರ ಮಾಡುವವರ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಫಲಿತಾಂಶ ಬರುತ್ತದೆ. ಶೀತ ಬಾಧೆ ಕೆಲವರನ್ನು ಕಾಡಬಹುದು. ತಾಯಿ ಮತ್ತು ಮಕ್ಕಳ ನಡುವೆ ಕಾವೇರಿದ ವಾತಾವರಣವಿರುತ್ತದೆ. ಸಂಗಾತಿಯ ನಿರ್ಲಿಪ್ತತೆ ಕೋಪ ತರಿಸಬಹುದು. ವೃತ್ತಿಯಲ್ಲಿ ಹೆಚ್ಚು ವೇತನ ಮತ್ತು ಹೊಸ ಸ್ಥಾನವನ್ನು ಕಾಣಬಹುದು.
( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
28 ಫೆಬ್ರುವರಿ 2026, 22:44 IST
ಮೀನ
ಎಷ್ಟೇ ಶ್ರಮಪಟ್ಟು ದುಡಿದರೂ ಫಲವಿಲ್ಲವೆಂದು ಚಿಂತಿಸುವಿರಿ. ಆದಾಯವು ಕಡಿಮೆ ಇದ್ದು, ಖರ್ಚು ಹೆಚ್ಚಾಗುತ್ತದೆ. ಬಂಧುಗಳ ಸಹಕಾರ ಸಿಗುವುದಿಲ್ಲ. ವಿದ್ಯಾರ್ಥಿಗಳಿಗೆ ಪ್ರಗತಿಯ ಕಾಲ. ಹೊಟ್ಟೆ ನೋವು ಕಾಣಿಸಬಹುದು. ಸಂಗಾತಿಯಿಂದ ಖರ್ಚು ಹೆಚ್ಚಾಗುವ ಸಾಧ್ಯತೆಗಳಿವೆ. ಕೃಷಿಯಿಂದ ಲಾಭ ಬರುವ ಸಾಧ್ಯತೆಗಳಿವೆ. ವೃತ್ತಿಯಲ್ಲಿ ಹಿತಕರವಾದ ವಾತಾವರಣ ಇರುತ್ತದೆ. ಇತರರ ಸಹಾಯದಿಂದ ಆಗಬೇಕಾದ ಕೆಲಸಗಳು ನಿಧಾನವಾಗುತ್ತವೆ.
( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ
28 ಫೆಬ್ರುವರಿ 2026, 22:44 IST