ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ಕಲಬುರಗಿ|12 ದಿನಗಳಿಂದ 9 ಬಡಾವಣೆಗಳಿಗಿಲ್ಲ ನೀರು: ಸಾರ್ವಜನಿಕರ ಗೋಳು ಕೇಳುವವರಾರು?

ವಿಶ್ವರಾಧ್ಯ ಎಸ್‌.ಹಂಗನಳ್ಳಿ
Published : 16 ಫೆಬ್ರುವರಿ 2026, 5:23 IST
Last Updated : 16 ಫೆಬ್ರುವರಿ 2026, 5:23 IST
ಫಾಲೋ ಮಾಡಿ
Comments
ಕಲಬುರಗಿಯ ಜೇವರ್ಗಿ ರಸ್ತೆಯಲ್ಲಿ ಒಡೆದ ಪೈಪ್‌ಲೈನ್‌ ದುರಸ್ತಿಗೆ ತಗ್ಗು ಅಗೆದಿರುವುದು
ಕಲಬುರಗಿಯ ಜೇವರ್ಗಿ ರಸ್ತೆಯಲ್ಲಿ ಒಡೆದ ಪೈಪ್‌ಲೈನ್‌ ದುರಸ್ತಿಗೆ ತಗ್ಗು ಅಗೆದಿರುವುದು
ಪೈಪ್‌ಲೈನ್‌ ಬಹಳಷ್ಟು ಹಾಳಾಗಿದ್ದು 2 ದಿನಗಳಲ್ಲಿ ದುರಸ್ತಿ ಆಗಲಿದೆ. ಸಮಸ್ಯೆ ಇರುವ ಬಡಾವಣೆಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು
ಕುಮಾರೇಶ ಎಲ್‌ ಅಂಡ್‌ ಟಿ ಕಂಪನಿ ಅಧಿಕಾರಿ
‘ದುರಸ್ತಿಗೆ ಇನ್ನೆರಡು ದಿನ ಬೇಕು’
‘ಹೊಸ ಜೇವರ್ಗಿ ರಸ್ತೆ ಹತ್ತಿರ ಒಡೆದಿರುವ ಪೈಪ್‌ಲೈನ್‌ಗಳ ದುರಸ್ತಿಗೆ ಇನ್ನೆರಡು ದಿನ ಬೇಕು. ಸಾರ್ವಜನಿಕರಿಗೆ ಅಗತ್ಯಕ್ಕೆ ತಕ್ಕಂತೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಪಂಚಶೀಲ ನಗರದಲ್ಲಿರುವ 2 ಬೋರ್‌ವೆಲ್‌ ಹಳೆಯದಾಗಿರುವುದರಿಂದ ಪದೇಪದೆ ಹಾಳಾಗುತ್ತಿವೆ. ಇವುಗಳನ್ನು ಕೂಡ ಸೋಮವಾರ ದುರಸ್ತಿ ಮಾಡಲಾಗುವುದು. ಸಾರ್ವಜನಿಕರು ಸಹಕರಿಸಬೇಕು’ ಎಂದು ಮಹಾನಗರ ಪಾಲಿಕೆ ಸದಸ್ಯ ಮಲ್ಲು ಉದನೂರ ಮನವಿ ಮಾಡಿದರು.
ನೀರಿಲ್ಲದೇ ಮಹಾಶಿವರಾತ್ರಿ ಜಾಗರಣೆ!
ಭಾನುವಾರ ಮಹಾಶಿವರಾತ್ರಿ ದಿನವಾದರೂ ನೀರು ಬರುತ್ತದೆ ಎಂದು ಕಾಯ್ದು ಕುಳಿತಿದ್ದ ಹಲವು ಬಡಾವಣೆ ನಿವಾಸಿಗಳ ನಿರೀಕ್ಷೆ ಹುಸಿಯಾಯ್ತು. ಹಾಗಾಗಿ ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಶಪಿಸುತ್ತಲೇ ಮಹಾಶಿವರಾತ್ರಿ ಜಾಗರಣೆ ಮಾಡಿದರು. ‘ಶಿವರಾತ್ರಿ ಇದೆ. ನಮ್ಮ ಏರಿಯಾಕ್ಕೂ ನೀರು ಕೊಡಿ’ ಎಂದು ಭಾನುವಾರ ಪಂಚಶೀಲ ನಗರದಲ್ಲಿ ಟ್ಯಾಂಕರ್‌ ನೀರು ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳ ಬಳಿ ವೆಂಕಟೇಶ ನಗರದ ಮಹಿಳೆಯೊಬ್ಬರು ಬೇಡಿಕೊಳ್ಳುತ್ತಿರುವುದು ಕಂಡುಬಂತು. ವೆಂಕಟೇಶ ನಗರಕ್ಕೆ ಜನವರಿ 4 10 16 21 26ರಂದು ನೀರು ಬಿಡಲಾಗಿದೆ. ಫೆಬ್ರುವರಿಯಲ್ಲಿ 4ರಂದು ಬಂದ ನೀರು ಈವರೆಗೂ ಮತ್ತೆ ಸರಬರಾಜು ಆಗಿಲ್ಲ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT