ಶಿರಾ: ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಮಂಗಳವಾರ ಸಂಜೆ ಸುರಿದ ಮಳೆ ರೈತರ ಮುಖದಲ್ಲಿ ಹರ್ಷ ಮೂಡಿಸಿದೆ.

ಮಳೆಯಿಲ್ಲದೆ ಬರದಿಂದಾಗಿ ಕುಡಿಯುವ ನೀರಿಗೆ ಸಹ ಸಂಕಷ್ಟ ಪಡುವಂತಾಗಿದೆ. ಬಿಸಿಲಿನ ಬೇಗೆಯಿಂದ ಜನತೆ ಸಂಕಷ್ಟಕ್ಕೆ ಗುರಿಯಾಗಿ ಮಳೆಗಾಗಿ ಕಾದು ಕುಳಿತಿದ್ದರು. ಈ ವರ್ಷದ ಮೊದಲ ಮಳೆ ಬಂದಿದೆ.

ಮಳೆಯ ಜತೆಗೆ ಬೀಸಿದ ಬಿರುಗಾಳಿಯಿಂದಾಗಿ ಹಲವಾರು ಕಡೆ ವಿದ್ಯುತ್ ಕಂಬ ಮತ್ತು ತಂತಿಗಳ ಮೇಲೆ ಮರದ ರಂಬೆಗಳು ಬಿದ್ದಿದ್ದು ವಿದ್ಯುತ್ ವ್ಯತ್ಯಯ ಉಂಟಾಗುವಂತಾಯಿತು. ಶಿರಾ ನಗರದ ಕೆಲವು ಕಡೆ ರಾತ್ರಿ 11.15ರವರೆಗೆ ವಿದ್ಯುತ್ ಇಲ್ಲದೆ ಜನರು ಸಂಕಷ್ಟ ಪಡುವಂತಾಯಿತು.

ತಾಲ್ಲೂಕಿನ ಕಳುವರಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿಯ ಶೀಟ್ಗಳು ಕುಸಿದು ಬಿದ್ದಿವೆ.

ಮಳೆ ವಿವರ: ಶಿರಾ 11 ಮಿ.ಮೀ, ಚಿಕ್ಕನಹಳ್ಳಿ 64 ಮಿ.ಮೀ, ಕಳ್ಳಂಬೆಳ್ಳ 18.20 ಮಿ.ಮೀ, ಬುಕ್ಕಾಪಟ್ಟಣ 6.20 ಮಿ.ಮೀ, ತಾವರೆಕೆರೆ 2 ಮಿ.ಮೀ, ಬರಗೂರು 8.40 ಮಿ.ಮೀ ಹಾಗೂ ಹುಣಸೇಹಳ್ಳಿಯಲ್ಲಿ 6 ಮಿ.ಮೀ ಸೇರಿದಂತೆ ಒಟ್ಟು115.80 ಮಿ.ಮೀ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.