ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ ಅಗತ್ಯವಿರಲಿಲ್ಲ: ಕುಂ.ವೀರಭದ್ರಪ್ಪ

Published 2 ಫೆಬ್ರುವರಿ 2024, 15:47 IST
Last Updated 2 ಫೆಬ್ರುವರಿ 2024, 15:47 IST
ಅಕ್ಷರ ಗಾತ್ರ

ಹಂಪಿ (ವಿಜಯನಗರ): ‘ಮಳೆಯಿಲ್ಲದೇ ರೈತರು ಹತಾಶೆ, ಸಂಕಷ್ಟದಲ್ಲಿ ಇರುವಾಗ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಹಂಪಿ ಉತ್ಸವ ಮಾಡುವ ಅಗತ್ಯವಿರಲಿಲ್ಲ’ ಎಂದು ಕುಂ.ವೀರಭದ್ರಪ್ಪ ತಿಳಿಸಿದರು.

ಹಂಪಿ ಉತ್ಸವದ ಪ್ರಯುಕ್ತ ವಿರುಪಾಕ್ಷೇಶ್ವರ ದೇವಸ್ಥಾನ ವೇದಿಕೆಯಲ್ಲಿ ಶುಕ್ರವಾರ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಲಾಶಯಗಳಲ್ಲಿ ನೀರಿಲ್ಲದೇ ರೈತರು ಕಣ್ಣೀರು ಹಾಕುತ್ತಿರುವ ಸಂದರ್ಭದಲ್ಲಿ ಉತ್ಸವ ಬೇಕಿರಲಿಲ್ಲ. ರೈತರು ಸುಖದಲ್ಲಿ ಇಲ್ಲದಿರುವಾಗ, ರಾಜ ಕೂಡ ಸುಖದಲ್ಲಿ ಇರಬಾರದು ಎಂಬುದು ನೃಪತುಂಗನ ಆಶಯವಾಗಿತ್ತು’ ಎಂದರು.

‘ಹಂಪಿ ಉತ್ಸವಕ್ಕೆ ಕಾರಣರಾದ ಎಂ.ಪಿ.ಪ್ರಕಾಶ್ ಅವರ ಭಾವಚಿತ್ರ ದಾರಿಯುದ್ದಕ್ಕೂ ಇರುವ ಯಾವ ಫ್ಲೆಕ್ಸ್‌ಗಳಲ್ಲಿ ಇಲ್ಲ. ಅವರಿಗೆ ಇದ್ದ ಅಗಾಧ ಸಾಮಾನ್ಯ ಜ್ಞಾನ ಈಗ ಯಾರಿಗೂ ಇಲ್ಲ’ ಎಂದರು.

‘ರಾಜಕೀಯ ಶಕ್ತಿಗಳು ಅಭಿವ್ಯಕ್ತಿ ಸಹಿತ ಎಲ್ಲ ಸ್ವಾತಂತ್ರ್ಯ ಕಿತ್ತುಕೊಂಡಿವೆ. ತಪ್ಪು ಕಥೆಗಳು ಆಳುತ್ತಿವೆ. ಸಂವಿಧಾನಕ್ಕಿಂತ ಕಪೋಲಕಲ್ಪಿತ ಕಥೆಗಳಿಗೆ ಮಾನ್ಯತೆ ಸಿಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT