ಭಾನುವಾರ, 13 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆಯಿದೆ
Published 26 ಜೂನ್ 2025, 0:32 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕುಟುಂಬದಲ್ಲಿ ನಿಮ್ಮ ನಿಲುವುಗಳೇನು ಎಂಬುದನ್ನು ಸ್ಪಷ್ಟಪಡಿಸಬೇಕಾಗುವುದು. ಬದುಕಿನಲ್ಲಿ ನೆಲೆ ನಿಂತ ನೆಮ್ಮದಿ ಸಿಗಲಿದೆ. ಹಿರಿಯರಿಂದ ತಿಳಿದುಕೊಂಡಿದ್ದ ಕೆಲ ವಿಷಯಗಳು ಉಪಯೋಗಕ್ಕೆ ಬರಲಿವೆ.
ವೃಷಭ
ಸಂಘ ಸಂಸ್ಥೆಯಂಥ ಕಡೆಯಿಂದ ಹಣಕಾಸಿನ ಸಲಹೆಗಾರರಾಗಿ ಆಹ್ವಾನ ಬರುವ ಲಕ್ಷಣಗಳಿವೆ. ಆತ್ಮೀಯರೊಂದಿಗೆ ಭಾವನೆ ಹಂಚಿಕೊಳ್ಳುವಿರಿ. ರೇಷ್ಮೆ ವಸ್ತ್ರಗಳ ಉತ್ಪಾದನಾ ಕೆಲಸಗಳು ಚುರುಕುಗತಿಯಿಂದ ಸಾಗಲಿವೆ.
ಮಿಥುನ
ಪಾಲುದಾರಿಕೆ ವಿಷಯದಲ್ಲಿ ಸಹೋದರರೇ ಶತ್ರುಗಳಾಗುವ ಸಂಭವವಿದೆ. ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರು ತಪ್ಪು ದಾರಿಯಲ್ಲಿ ಸಂಚರಿಸಿ ಗೌರವ ಕಳೆದುಕೊಳ್ಳಬೇಡಿ.
ಕರ್ಕಾಟಕ
ಬರಲಿರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವ ವಿಚಾರದಲ್ಲಿ ವಿಫಲರಾಗುವಿರಿ. ರಕ್ತದೊತ್ತಡ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು. ಬ್ಯಾಂಕ್ ನೌಕರರಿಗೆ ಒತ್ತಡ ಕಡಿಮೆಯಾಗಿ ನೆಮ್ಮದಿ ಸಿಗುವುದು.
ಸಿಂಹ
ಆರೋಪಗಳು ನಿರಾಧಾರ ಎಂದು ಸಾಬೀತುಗೊಂಡು ಮನಸ್ಸಿಗೆ ನೆಮ್ಮದಿ ಉಂಟಾಗುವುದು. ನಿಮ್ಮಂತೆಯೇ ಇತರರೂ ಸಂತೋಷವಾಗಿರಬೇಕೆಂಬ ನಿಮ್ಮ ಮನೋಭಾವದಿಂದಾಗಿ ಗೌರವ ಪಡೆದುಕೊಳ್ಳುವಿರಿ.
ಕನ್ಯಾ
ಮನೆಯಲ್ಲಿನ ಆಗು–ಹೋಗುಗಳ ಬಗೆಗೆ ಗಮನ ನೀಡಬೇಕಾಗುವುದು. ಆಫೀಸಿನಲ್ಲಿ ಉಂಟಾಗಿದ್ದ ಸಮಸ್ಯೆಗಳ ಒತ್ತಡ ಮನೆಯ ಸದಸ್ಯರ ಮೇಲೆ ತೀರಿಸುವುದು ಸರಿಯಲ್ಲ. ಅಸಮಾಧಾನದ ವಾತಾವರಣವಿರುವುದು.
ತುಲಾ
ಆರ್ಥಿಕವಾಗಿ ದೃಢ ನಿರ್ಧಾರವನ್ನು ಕೈಗೊಂಡ ಫಲದಿಂದಾಗಿ ಒಳ್ಳೆಯ ಫಲಿತಾಂಶ ಪಡೆಯುವಿರಿ. ವ್ಯವಹಾರಕ್ಕೆ ಅನುಕೂಲವಾಗುವಂತೆ ಹೊಸಜನರ ಪರಿಚಯವಾಗಲಿದೆ. ಅನಿವಾರ್ಯದ ಪ್ರಯಾಣವನ್ನು ಮಾತ್ರ ಕೈಗೊಳ್ಳಿ.
ವೃಶ್ಚಿಕ
ಸೃಜನಶೀಲ ಯೋಜನೆಯನ್ನು ಮುಂದುವರಿಸಲು ಶುಭದಿನ. ಆಶಾದಾಯಕ ಬೆಳವಣಿಗೆಯು ಗೋಚರಕ್ಕೆ ಬರಲಿದೆ. ಯಾವ ಕೆಲಸದಲ್ಲೂ ಅಡೆತಡೆಗಳೇನೂ ಇರದು. ಗೃಹ ಸಾಮಗ್ರಿ ಖರೀದಿಯಿಂದ ಖರ್ಚು ಬರಲಿದೆ.
ಧನು
ವೃತ್ತಿಯಲ್ಲಿ ಉನ್ನತಿ ತೋರಿಬಂದರೂ ವಿಘ್ನ ಭೀತಿ ಇರುತ್ತದೆ. ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ಚರ್ಚಿಸಿ ನಂತರದಲ್ಲಿ ತೀರ್ಮಾನಿಸಿ. ದಿನಸಿ ವರ್ತಕರಿಗೆ ಲಾಭದಾಯಕ ದಿನ.
ಮಕರ
ಪತ್ರಿಕೆಯವರ ಸಹಕಾರದಿಂದ ಪ್ರಚಾರವನ್ನು ಪಡೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಪ್ರತಿಪಕ್ಷಗಳ ಆಪಾದನೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆಯನ್ನು ಕೊಡುವುದರಿಂದ ಹೆಸರುವಾಸಿಯಾಗುವ ಸಂಭವವಿದೆ.
ಕುಂಭ
ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ಸಂಘ ಸಂಸ್ಥೆಗಳ ದೊಡ್ಡ ಸ್ಥಾನವನ್ನು ಅಲಂಕರಿಸಲು ಗಣ್ಯರು ಒತ್ತಾಯಿಸುವರು.
ಮೀನ
ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲಕರ ದಿನ. ಹಣಕಾಸಿನ ವಿಷಯದಲ್ಲಿ ಅಪರಿಚಿತರಿಂದ ಮೋಸ ಹೋಗುವ ಸಾಧ್ಯತೆ. ಸುಗಂಧ ವಸ್ತುಗಳ ಮಾರಾಟದಲ್ಲಿ ಹೆಚ್ಚಳ ಇರುವುದು.
ADVERTISEMENT
ADVERTISEMENT