ಶನಿವಾರ, 12 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
06/07/2025 - 12/07/2025
ವಾರ ಭವಿಷ್ಯ: 2025 ಜುಲೈ 13ರಿಂದ 19ರವರೆಗೆ– ಉದ್ಯೋಗದಲ್ಲಿ ಅಭಿವೃದ್ಧಿ ಕಾಣಬಹುದು
Published 12 ಜುಲೈ 2025, 18:35 IST
ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡು ಮುನ್ನಡೆಯುವಿರಿ. ಆದಾಯವು ನಿಮ್ಮ ನಿರೀಕ್ಷೆಯ ಹತ್ತಿರ ಬರುತ್ತದೆ. ನಿಮ್ಮವರೇ ವ್ಯವಹಾರಗಳಲ್ಲಿ ನಿಮಗೆ ಮೋಸ ಮಾಡಬಹುದು. ಭೂಮಿ ವ್ಯವಹಾರ ಮಾಡುವವರ ಆದಾಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಯಶಸ್ಸು ದೊರೆಯುತ್ತದೆ. ಸಂಗಾತಿಗಾಗಿ ಹೆಚ್ಚು ಹಣ ಖರ್ಚಾಗುತ್ತದೆ. ಕೃಷಿಯಿಂದ ಲಾಭವಿರುತ್ತದೆ. ವೃತ್ತಿಯಲ್ಲಿ ಸ್ವಲ್ಪಮಟ್ಟಿನ ಅಭಿವೃದ್ಧಿ ಇರುತ್ತದೆ.
ವೃಷಭ
ಬಹಳ ಗಂಭೀರ ನಡವಳಿಕೆ ನಿಮ್ಮಲ್ಲಿ ಇರುತ್ತದೆ. ವ್ಯವಹಾರಗಳಲ್ಲಿ ನಿಮಗೆ ಹೆಚ್ಚು ಸಂಪಾದನೆ ಇರುತ್ತದೆ. ಆಸ್ತಿ ಮಾಡುವ ವಿಚಾರದಲ್ಲಿ ಅತಿಯಾದ ಆತುರ ಬೇಡ. ಮೂತ್ರ ಸಂಬಂಧಿ ದೋಷಗಳಿರುವವರು ಹೆಚ್ಚು ಎಚ್ಚರ ವಹಿಸಿ. ನಿಮ್ಮೆಲ್ಲ ಕೆಲಸ ಕಾರ್ಯಗಳಿಗೆ ಸಂಗಾತಿಯ ಸಹಕಾರ ದೊರೆಯುತ್ತದೆ. ಹಣಕಾಸಿನ ವ್ಯವಹಾರ ಮಾಡುವವರಿಗೆ ಅನಿರೀಕ್ಷಿತ ಲಾಭ ಇರುತ್ತದೆ. ವೃತ್ತಿಯಲ್ಲಿ ಹೊಸ ಅವಕಾಶಗಳು ದೊರೆಯುತ್ತವೆ.
ಮಿಥುನ
ಉದ್ಯೋಗದಲ್ಲಿ ನಿಮ್ಮದೇ ಆದ ಪ್ರಭಾವ ಬೀರಿ ಯಶಸ್ಸನ್ನು ಪಡೆಯುವಿರಿ. ಕೃಷಿಯಿಂದ ಸ್ವಲ್ಪ ಆದಾಯವಿರುತ್ತದೆ. ಸಾಂಪ್ರದಾಯಿಕ ಕೃಷಿ ಮಾಡುವವರಿಗೆ ಹೆಚ್ಚು ಬೇಡಿಕೆ ಬರುತ್ತದೆ. ವೃತ್ತಿಯಲ್ಲಿ ಹಿರಿಯ ಮಹಿಳಾಧಿಕಾರಿಗಳಿಂದ ನಿಮಗೆ ಅನುಕೂಲವಾಗುತ್ತದೆ. ನಿಮ್ಮ ಹಗುರ ಮಾತಿನಿಂದ ಶತ್ರುಗಳು ಜಾಸ್ತಿಯಾಗಬಹುದು. ವೃತ್ತಿಯಲ್ಲಿದ್ದ ಕೆಲವು ಗೊಂದಲಗಳು ಪರಿಹಾರವಾಗುತ್ತವೆ.
ಕರ್ಕಾಟಕ
ನಿಮ್ಮ ಬಂಧುಗಳು ನಿಮಗೆ ಸಹಕರಿಸುವಂತೆ ನಟಿಸುವರು. ಹಿರಿಯರ ಸಹಾಯದಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಹಿರಿಯರಿಂದ ಆಸ್ತಿ ದೊರೆಯುವ ಸಂದರ್ಭವಿದೆ. ವಿದ್ಯಾರ್ಥಿಗಳು ಸ್ವಲ್ಪ ಶ್ರಮವಹಿಸಿದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದು. ಕೆಲವರಿಗೆ ವಾಯು ಪ್ರಕೋಪ ಜಾಸ್ತಿಯಾಗುವ ಸಂದರ್ಭವಿದೆ. ಅವಿವಾಹಿತರಿಗೆ ಹಿರಿಯರಿಂದ ಸೂಕ್ತ ಸಂಬಂಧಗಳು ಒದಗುವ ಸಂದರ್ಭವಿದೆ. ಸರ್ಕಾರಿ ವೃತ್ತಿಯಲ್ಲಿರುವವರಿಗೆ ಹೆಚ್ಚಿನ ಅನುಕೂಲವಿರುತ್ತದೆ.
ಸಿಂಹ
ಹಿರಿಯರಿಂದ ನಿಮ್ಮೆಲ್ಲಾ ಕೆಲಸಗಳಿಗೆ ಸಹಕಾರ ದೊರೆಯುತ್ತದೆ. ಆದಾಯವು ಕಡಿಮೆ ಇರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಯೋಗವಿದೆ. ಮೂಳೆ ನೋವು ಕೆಲವರನ್ನು ಕಾಡಬಹುದು. ಸಂಗಾತಿಯು ಉತ್ತಮ ಸಂಪಾದನೆ ಮಾಡಿ ಸಂಸಾರಕ್ಕೆ ಬಳಸುವರು. ವಿದೇಶಿ ವ್ಯವಹಾರಗಳಲ್ಲಿ ನಿರೀಕ್ಷಿತ ಆದಾಯ ಇರುವುದಿಲ್ಲ. ವಾಹನ ಮಾರಾಟಗಾರರಿಗೆ ಉತ್ತಮ ಆದಾಯ ಇರುತ್ತದೆ.
ಕನ್ಯಾ
ವಾರದ ಆರಂಭ ಬಹಳ ಆಲಸ್ಯದಿಂದ ಕೂಡಿರುತ್ತದೆ. ಆದಾಯವು ಸಾಮಾನ್ಯಗತಿಯಲ್ಲಿರುತ್ತದೆ. ಕೃಷಿಯಿಂದ ಆದಾಯವಿರುತ್ತದೆ. ಹಿರಿಯರಿಂದ ಆರ್ಥಿಕ ಸಹಕಾರವನ್ನು ನಿರೀಕ್ಷೆ ಮಾಡಬಹುದು. ಸಂಗಾತಿಯಿಂದ ವೆಚ್ಚಗಳು ಹೆಚ್ಚಾಗಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನ ಗತಿ ಇರುತ್ತದೆ. ಹಿರಿಯರು ಕೆಲವೊಂದು ವಿಚಾರಗಳಲ್ಲಿ ನಿಮ್ಮ ವಿರುದ್ಧ ನಿಲ್ಲುವರು. ವಂಶಪಾರಂಪರ್ಯವಾಗಿ ಔಷಧಿ ಕೊಡುವವರಿಗೆ ಬೇಡಿಕೆ ಹೆಚ್ಚುತ್ತದೆ.
ತುಲಾ
ಸ್ವಲ್ಪ ಆರ್ಥಿಕ ಅಸಮತೋಲನವನ್ನು ಕಾಣಬಹುದು. ವೃತ್ತಿಯಲ್ಲಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಭೂಮಿಯನ್ನು ಖರೀದಿಸುವ ವಿಚಾರದಲ್ಲಿ ಸಾಕಷ್ಟು ಎಚ್ಚರದಿಂದಿರಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲಿತಾಂಶವಿರುವುದಿಲ್ಲ. ವಿದೇಶಿ ಬಂಡವಾಳ ಹೂಡಿಕೆ ಮಾಡುವ ಮುನ್ನ ಸಾಕಷ್ಟು ಎಚ್ಚರವಹಿಸಿ. ಸಂಗಾತಿ ಕಡೆಯ ಹಿರಿಯರಿಂದ ನಿಮಗೆ ಸಾಕಷ್ಟು ಅನುಕೂಲವಾಗುತ್ತದೆ. ಶಾಲಾ ಕಾಲೇಜುಗಳನ್ನು ನಡೆಸುವವರಿಗೆ ಅಡೆತಡೆಗಳು ಎದುರಾಗಬಹುದು.
ವೃಶ್ಚಿಕ
ಅತಿ ಹೆಚ್ಚು ಒತ್ತಡದಲ್ಲಿ ಕೆಲಸ ಮಾಡಬೇಕಾಗಬಹುದು. ಆದಾಯವು ಮಧ್ಯಮ ಗತಿಯಲ್ಲಿರುತ್ತದೆ. ನಿಮ್ಮ ಶತ್ರುಗಳು ಈಗ ನಿಮ್ಮ ಸಹವಾಸಕ್ಕೆ ಬರುವುದಿಲ್ಲ. ಕೃಷಿ ಸಂಬಂಧಿತ ಅಧ್ಯಯನವನ್ನು ಮಾಡುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ವಿವಾಹ ಆಕಾಂಕ್ಷಿತರಿಗೆ ಸಂಬಂಧಗಳು ದೊರಕುವ ಸಾಧ್ಯತೆಗಳಿವೆ. ವಿದೇಶಿ ವ್ಯವಹಾರ ಮಾಡುತ್ತಿರುವವರಿಗೆ ನಿರೀಕ್ಷಿತ ಲಾಭ ಬರುವ ಸಾಧ್ಯತೆ ಇದೆ. ಕೃಷಿಯಿಂದ ಆದಾಯವಿರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಸ್ವಲ್ಪ ಸವಲತ್ತುಗಳು ಕಡಿಮೆಯಾಗಬಹುದು.
ಧನು
ಎಲ್ಲರಿಗೂ ಉಪಕಾರಿಯಾಗಿರುವಿರಿ. ಆದಾಯವು ಕಡಿಮೆ ಇರುತ್ತದೆ. ಹೆಚ್ಚಿನ ಪರಿಶ್ರಮದಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ವೃತ್ತಿಪರ ಪರೀಕ್ಷೆಗಳನ್ನು ತೆಗೆದುಕೊಂಡು ಮುನ್ನಡೆಯಬಹುದು. ಪಿತ್ತ ವಿಕಾರಗಳು ಕೆಲವರನ್ನು ಕಾಡಬಹುದು. ಸಂಗಾತಿಗೆ ಹಿರಿಯರಿಂದ ಆಸ್ತಿ ದೊರಕುವ ಸಾಧ್ಯತೆಗಳಿವೆ. ಕೃಷಿಯಿಂದ ಆದಾಯವಿರುವುದಿಲ್ಲ. ಹಿರಿಯರ ಸಹಾಯದಿಂದ ನಿಮ್ಮ ಉದ್ಯೋಗದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.
ಮಕರ
ಹೆಚ್ಚು ಪರಿಶ್ರಮ ಪಟ್ಟು ಕೆಲಸ ಮಾಡುವಿರಿ. ಆದಾಯವು ಕಡಿಮೆ ಇದ್ದು ಅದರಲ್ಲೇ ನಿರ್ವಹಣೆ ಮಾಡುವಿರಿ. ಸಹೋದ್ಯೋಗಿಗಳ ಸಹಕಾರ ನಿಮಗೆ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅತಿ ಹೆಚ್ಚು ಫಲಿತಾಂಶ ಪಡೆಯುವ ಯೋಗವಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಸಾಕಷ್ಟು ಎಚ್ಚರವಾಗಿರಿ. ಹಿರಿಯರ ಸಹಾಯದಿಂದ ಸರ್ಕಾರಿ ಕೆಲಸಗಳು ಸುಗಮವಾಗುತ್ತವೆ. ವೃತ್ತಿಯಲ್ಲಿ ಸ್ವಲ್ಪ ಅನುಕೂಲಗಳು ಹೆಚ್ಚುತ್ತವೆ.
ಕುಂಭ
ಹೆಚ್ಚು ವ್ಯಾಪಾರಿ ಮನೋಭಾವದಲ್ಲಿರುವಿರಿ. ಆದಾಯವು ಚೇತರಿಸಿಕೊಳ್ಳುತ್ತದೆ. ಪುಸ್ತಕದ ಸಗಟು ವ್ಯಾಪಾರಿಗಳಿಗೆ ಹೆಚ್ಚು ಲಾಭವಿರುತ್ತದೆ. ಮಕ್ಕಳಿಂದ ಆರ್ಥಿಕ ಸಹಾಯ ದೊರೆಯುತ್ತದೆ. ಕಾನೂನು ವಿಷಯ ಓದುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಇರುತ್ತದೆ. ಹರಿತವಾದ ಆಯುಧಗಳ ಜತೆ ಕೆಲಸ ಮಾಡುವವರು ಬಹಳ ಎಚ್ಚರದಿಂದ ಮಾಡಿ. ಸಂಗಾತಿಯ ಸಹಕಾರದಿಂದ ಸರಕಾರಿ ಹುದ್ದೆಗಳಲ್ಲಿ ಉನ್ನತ ಸ್ಥಾನ ಪಡೆಯಬಹುದು. ಬೆಳ್ಳಿಯ ವ್ಯಾಪಾರಿಗಳಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ.
ಮೀನ
ನಿಮ್ಮ ಮಾತಿನಲ್ಲಿ ಮತ್ತು ನಡೆನುಡಿಯಲ್ಲಿ ಬಹಳ ವ್ಯಾವಹಾರಿಕತೆ ಇರುತ್ತದೆ. ಆದಾಯವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಕ್ರೀಡಾಪಟುಗಳಿಗೆ ನಿರೀಕ್ಷಿತ ಯಶಸ್ಸು ಇರುವುದಿಲ್ಲ. ಹಿರಿಯರಿಗಾಗಿ ಹಣ ಖರ್ಚಾಗುವುದು. ಸಂಗಾತಿಗೆ ಧಾರ್ಮಿಕ ಕಾರ್ಯಗಳಿಂದ ಆದಾಯ ಹೆಚ್ಚುತ್ತದೆ. ಸ್ತ್ರೀಯರ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ಲಾಭ ಹೆಚ್ಚುತ್ತದೆ. ಹಿರಿಯರು ನಿಮ್ಮ ಬಗೆಗಿನ ಅಭಿಪ್ರಾಯಗಳನ್ನು ಬದಲಾಯಿಸಿಕೊಳ್ಳುತ್ತಾರೆ.
ADVERTISEMENT
ADVERTISEMENT