ನವದೆಹಲಿ: ದೇಶದಲ್ಲಿ ಕನಿಷ್ಠ 150 ಆನೆ ಕಾರಿಡಾರ್ಗಳನ್ನು ಗುರುತಿಸಲಾಗಿದೆ. ಈ ಪೈಕಿ ಗರಿಷ್ಠ 26 ಆನೆ ಕಾರಿಡಾರ್ಗಳನ್ನು ಹೊಂದಿರುವ ಪಶ್ಚಿಮ ಬಂಗಾಳ ಅಗ್ರಸ್ಥಾನದಲ್ಲಿದೆ ಎಂದು ಪರಿಸರ ಸಚಿವಾಲಯದ ವರದಿ ಹೇಳುತ್ತದೆ.

ಈ 150 ಕಾರಿಡಾರ್ಗಳು 15 ರಾಜ್ಯಗಳ ನಾಲ್ಕು ಪ್ರದೇಶಗಳಲ್ಲಿ ವ್ಯಾಪಿಸಿವೆ ಎಂದು ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಭಾರತದ ಆನೆ ಕಾರಿಡಾರ್ಗಳು’ ವರದಿಯಲ್ಲಿ ಹೇಳಲಾಗಿದೆ.

ಆದರೆ, 2010ರಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದ ‘ಆನೆ ಕಾರ್ಯಪಡೆ ವರದಿ’(ಗಜ ವರದಿ)ಯಲ್ಲಿ 88 ಕಾರಿಡಾರ್ಗಳನ್ನು ಪಟ್ಟಿ ಮಾಡಲಾಗಿತ್ತು.

59 ಕಾರಿಡಾರ್ಗಳಲ್ಲಿ ಆನೆಗಳ ಚಲನವಲನ ಹೆಚ್ಚಿರುವುದು ಕಂಡುಬಂದಿದೆ. 29 ಕಾರಿಡಾರ್ಗಳಲ್ಲಿ ಯಥಾಸ್ಥಿತಿ ಕಂಡುಬಂದಿದ್ದರೆ, 29 ಕಾರಿಡಾರ್ಗಳಲ್ಲಿ ಕಡಿಮೆಯಾಗಿದೆ. 15 ಕಾರಿಡಾರ್ಗಳ ಪುನರುಜ್ಜೀವನ ಅಗತ್ಯವಿದ್ದರೆ, 18 ಕಾರಿಡಾರ್ಗಳ ಕುರಿತ ಮಾಹಿತಿ ಲಭ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

2017ರಲ್ಲಿನ ಅಂದಾಜಿನಂತೆ, ಭಾರತದಲ್ಲಿ 30 ಸಾವಿರದಷ್ಟು ಆನೆಗಳಿದ್ದವು. ಇದು ಜಗತ್ತಿನಲ್ಲಿರುವ ಒಟ್ಟು ಪ್ರಾಣಿಗಳ ಸಂಖ್ಯೆಯ ಶೇ 60ರಷ್ಟಾಗುತ್ತದೆ.

ಪರಿಸರ ಸಚಿವಾಲಯವು ರಾಜ್ಯಗಳ ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಈ ವರದಿಯನ್ನು ಸಿದ್ಧಪಡಿಸಿದೆ. 15 ರಾಜ್ಯಗಳಲ್ಲಿರುವ ವಿಸ್ತರಿಸಿರುವ 150 ಆನೆ ಕಾರಿಡಾರ್ಗಳ ಸಮೀಕ್ಷೆ ನಡೆಸಿ, ವರದಿ ಸಿದ್ಧಪಡಿಸಲು ಎರಡು ವರ್ಷಗಳಷ್ಟು ಸಮಯ ಹಿಡಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.