ತುರ್ತು ಪರಿಸ್ಥಿತಿ ಹೇರಿಕೆಯು ರಾಷ್ಟ್ರೀಯ ಅಗತ್ಯವೇನೂ ಆಗಿರಲಿಲ್ಲ. ಅದು ಕಾಂಗ್ರೆಸ್ ಪಕ್ಷ ಹಾಗೂ ಏಕೈಕ ವ್ಯಕ್ತಿಯ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯ ಪ್ರತಿಫಲನವಾಗಿತ್ತು. ಅಧಿಕಾರದಲ್ಲಿರುವವರು ಸರ್ವಾಧಿಕಾರಿಗಳಾದಲ್ಲಿ ಅವರನ್ನು ಜನರೇ ಕೆಳಗಿಳಿಸುತ್ತಾರೆ ಎಂಬುದನ್ನು ತುರ್ತು ಪರಿಸ್ಥಿತಿ ಪ್ರತಿಯೊಬ್ಬರನ್ನೂ ಜ್ಞಾಪಿಸುತ್ತದೆ. ಇದೇ ಕಾರಣಕ್ಕೆ ಮೋದಿ ನೇತೃತ್ವದ ಸರ್ಕಾರವು ಈ ದಿನವನ್ನು ‘ಸಂವಿಧಾನ ಹತ್ಯಾ ದಿವಸ’ವನ್ನಾಗಿ ಹಮ್ಮಿಕೊಳ್ಳುತ್ತಿದೆ.ಅಮಿತ್ ಶಾ, ಕೇಂದ್ರ ಗೃಹ ಸಚಿವ
50 ವರ್ಷಗಳ ಹಿಂದೆ ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷ ಈಗಲೂ ಸರ್ವಾಧಿಕಾರಿ ಮನಸ್ಥಿತಿಯನ್ನು ಹೊಂದಿದೆ. ಒಂದು ಕುಟುಂಬ ಮಾತ್ರ ದೇಶದ ಆಡಳಿತ ನಡೆಸುವ ಹಕ್ಕು ಹೊಂದಿದೆ ಎಂಬುದು ಕಾಂಗ್ರೆಸ್‌ನ ನಂಬಿಕೆಯಾಗಿದೆ.ಜೆ.ಪಿ.ನಡ್ಡಾ, ಬಿಜೆಪಿ ಅಧ್ಯಕ್ಷ
ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮರೆಮಾಚುವುದಕ್ಕಾಗಿ ಬಿಜೆಪಿಯು ‘ಸಂವಿಧಾನ ಹತ್ಯಾ ದಿವಸ’ ಎಂಬ ನಾಟಕವಾಡುತ್ತಿದೆ. ಕೇಂದ್ರ ಸರ್ಕಾರ ಸಹಿಷ್ಣುತೆ ಭ್ರಾತೃತ್ವ ಅಭಿವೃದ್ಧಿ ಹೊಂದುವ ಸ್ವಾತಂತ್ರ್ಯವನ್ನು ಅಳಿಸಿ ಹಾಕಿದ್ದು ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ.ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭೆಯಲ್ಲಿ ವಿಪಕ್ಷ ನಾಯಕ
‘ಸಂಘ ಪರಿವಾರ ನೇತೃತ್ವದ ಸರ್ಕಾರ’ವು ಸಂವಿಧಾನವನ್ನು ನಾಶಪಡಿಸಲು ಯತ್ನಿಸುತ್ತಿದ್ದು ದೇಶದಲ್ಲಿ ಸದ್ಯ ಅಘೋಷಿತ ತುರ್ತು ಪರಿಸ್ಥಿತಿ ಮನೆ ಮಾಡಿದೆ. ಆಗಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ಭಾರತದ ಪ್ರಜಾಪ್ರಭುತ್ವದಲ್ಲಿನ ಕರಾಳ ಅಧ್ಯಾಯ.ಪಿಣರಾಯಿ ವಿಜಯನ್, ಕೇರಳ ಮುಖ್ಯಮಂತ್ರಿ
ದುಡಿಯುವ ವರ್ಗಗಳು ಹೋರಾಟದ ಮೂಲಕ ಪಡೆದಿದ್ದ ಪ್ರತಿಭಟಿಸುವ ಹಕ್ಕನ್ನು ತುರ್ತು ಪರಿಸ್ಥಿತಿ ಕಸಿದುಕೊಂಡಿತ್ತು. ಸಂಘಟಿತರಾಗುವ ಮುಷ್ಕರ ಹೂಡುವಂತಹ ಮೂಲಭೂತ ಹಕ್ಕನ್ನು ಕೂಡ ತುರ್ತು ಪರಿಸ್ಥಿತಿ ತೊಡೆದುಹಾಕಿತ್ತು.ಬೃಂದಾ ಕಾರಟ್, ಸಿಪಿಎಂ ನಾಯಕಿ
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನದಲ್ಲಿರುವ ಅವಕಾಶಗಳಡಿಯೇ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ನಂತರ ಸೂಕ್ತ ಸಮಯದಲ್ಲಿ ಹಿಂಪಡೆದಿದ್ದರು. ಇದು ಲೋಕಸಭೆಗೆ ಹೊಸದಾಗಿ ಚುನಾವಣೆಗಳನ್ನು ನಡೆಸಲು ದಾರಿ ಮಾಡಿಕೊಟ್ಟಿತ್ತು.ಸಂಜಯ ರಾವುತ್, ಶಿವಸೇನಾ(ಯುಬಿಟಿ) ರಾಜ್ಯಸಭಾ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.