ನವದೆಹಲಿ: ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗಾವಣೆ ಮಾಡುವ ನಿರ್ಣಯವನ್ನು ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳ ಸಮಿತಿಯು (ಕೊಲಿಜಿಯಂ) ಮಂಗಳವಾರ ದೃಢೀಕರಿಸಿದೆ.

ಈ ನಡುವೆ, ಅವರನ್ನು ಅಲಹಾಬಾದ್ ಹೈಕೋರ್ಟ್ಗೆ ವರ್ಗ ಮಾಡುವುದನ್ನು ವಿರೋಧಿಸಿ ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘವು ಸೋಮವಾರ ನಿರ್ಣಯ ಕೈಗೊಂಡಿದೆ. ನ್ಯಾಯಮೂರ್ತಿ ವರ್ಮಾ ಅವರು ನೀಡಿರುವ ಆದೇಶಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಕೂಡ ಸಂಘವು ಮನವಿ ಮಾಡಿದೆ.

ನ್ಯಾಯಮೂರ್ತಿ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಅರ್ಧ ಸುಟ್ಟ ನೋಟಿನ ಕಂತೆಗಳು ಪತ್ತೆಯಾಗಿವೆ ಎಂಬ ವರದಿಗಳು ಪ್ರಕಟವಾದ ನಂತರದಲ್ಲಿ ಪ್ರಕರಣದ ಬಗ್ಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಸಮಿತಿಯೊಂದನ್ನು ರಚಿಸಿದ್ದಾರೆ. ನ್ಯಾಯಮೂರ್ತಿ ವರ್ಮಾ ಅವರಿಗೆ ನ್ಯಾಯಾಂಗಕ್ಕೆ ಸಂಬಂಧಿಸಿದ ಕೆಲಸಗಳನ್ನು ವಹಿಸದಂತೆ ಕೂಡ ಈಗಾಗಲೇ ಸೂಚಿಸಿದ್ದಾರೆ.

ವರ್ಮಾ ಅವರನ್ನು ವರ್ಗಾವಣೆ ಮಾಡಲು ಕೇಂದ್ರಕ್ಕೆ ಕಳುಹಿಸಿರುವ ಶಿಫಾರಸನ್ನು ಸುಪ್ರೀಂ ಕೋರ್ಟ್ನ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಶಿಫಾರಸನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ನಂತರ ವರ್ಗಾವಣೆ ಜಾರಿಗೆ ಬರಲಿದೆ.

ತಮ್ಮ ನಿವಾಸದಲ್ಲಿ ಕರೆನ್ಸಿ ನೋಟುಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂಬ ಆರೋಪಗಳು ತಮ್ಮ ಹೆಸರಿಗೆ ಕಳಂಕ ತರುವ ಯತ್ನ ಎಂದು ನ್ಯಾಯಮೂರ್ತಿ ವರ್ಮಾ ಹೇಳಿದ್ದಾರೆ.

ಪದಚ್ಯುತಿಗೆ ಮನವಿ: ನ್ಯಾಯಮೂರ್ತಿ ವರ್ಮಾ ಅವರನ್ನು ಪದಚ್ಯುತಗೊಳಿಸಲು ಪ್ರಕ್ರಿಯೆ ಆರಂಭಿಸುವಂತೆ ಸರ್ಕಾರಕ್ಕೆ ತಕ್ಷಣವೇ ಶಿಫಾರಸು ಮಾಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ವಕೀಲರ ಸಂಘವು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರಿಗೆ (ಸಿಜೆಐ) ಮನವಿ ಮಾಡಿದೆ.

ನ್ಯಾಯಮೂರ್ತಿ ವರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟ್ಗೆ, ಲಖನೌ ಪೀಠಕ್ಕೆ ಅಥವಾ ಇತರ ಯಾವುದೇ ಹೈಕೋರ್ಟ್ಗೆ ವರ್ಗ ಮಾಡುವುದನ್ನು ವಿರೋಧಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಅನಿಲ್ ತಿವಾರಿ ಹೇಳಿದ್ದಾರೆ.

ಸಿಬಿಐ, ಇ.ಡಿ ಅಥವಾ ಇತರ ತನಿಖಾ ಸಂಸ್ಥೆಗಳಿಗೆ ಎಫ್ಐಆರ್ ದಾಖಲಿಸಲು ಸಿಜೆಐ ತಕ್ಷಣವೇ ಅನುಮತಿ ನೀಡಬೇಕು, ತನಿಖಾ ಸಂಸ್ಥೆಗಳು ದೇಶದ ಕಾನೂನನ್ನು ತಪ್ಪು ಮಾಡಿರುವ ಪ್ರತಿಯೊಬ್ಬರ ಮೇಲೆಯೂ ಅನ್ವಯಿಸಬೇಕು ಎಂದು ಸಂಘವು ಹೇಳಿದೆ.

ಸಿಜೆಐ ನಡೆಗೆ ಧನಕರ್ ಮೆಚ್ಚುಗೆ

ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣಾ ವರದಿಯನ್ನು ಸಾರ್ವಜನಿಕರ ಎದುರು ಇರಿಸಿದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರ ಕ್ರಮವನ್ನು ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಅವರು ಸೋಮವಾರ ಪ್ರಶಂಸಿಸಿದ್ದಾರೆ.

ನ್ಯಾಯಾಂಗದ ಉತ್ತರದಾಯಿತ್ವ ಮತ್ತು ಎನ್ಜೆಎಸಿ ಕಾಯ್ದೆಯ ಬಗ್ಗೆ ಚರ್ಚೆ ನಡೆಸುವ ಕುರಿತಾಗಿ ಮಾತುಕತೆ ನಡೆಸಲು ಸದನದ ನಾಯಕರ ಸಭೆ ನಡೆಸಲಾಗುವುದು ಎಂದು ಧನಕರ್ ಹೇಳಿದ್ದಾರೆ.

ಸದನದ ನಾಯಕರ ಸಭೆಯನ್ನು ನಡೆಸಬೇಕು ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಲಹೆ ನೀಡಿದ್ದರು. ಸಿಜೆಐ ಅವರು ತಮಗೆ ಲಭ್ಯವಾಗಿರುವ ಎಲ್ಲ ಮಾಹಿತಿಯನ್ನು ಪಾರದರ್ಶಕವಾಗಿ ಉತ್ತರದಾಯಿತ್ವ ಇರುವ ಬಗೆಯಲ್ಲಿ ಬಹಿರಂಗಪಡಿಸಿರುವುದು ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲು ಎಂದು ಧನಕರ್ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.