ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕ್‌ ರಾಮಸ್ವಾಮಿಯನ್ನು ಕೊಂಡಾಡಿದ ಡೊನಾಲ್ಡ್ ಟ್ರಂಪ್

Published 1 ಸೆಪ್ಟೆಂಬರ್ 2023, 16:22 IST
Last Updated 1 ಸೆಪ್ಟೆಂಬರ್ 2023, 16:22 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಅಧ್ಯಕ್ಷೀಯ ಚುನಾವಣೆ ಕುರಿತಂತೆ ಕಳೆದ ವಾರ ನಡೆದ ಮೊದಲ ಪ್ರಾಥಮಿಕ ಚರ್ಚೆಯಲ್ಲಿ ಗಮನಸೆಳೆದ ಭಾರತ ಮೂಲದ ಅಮೆರಿಕನ್‌, 38ರ ಹರೆಯದ ವಿವೇಕ್‌ ರಾಮಸ್ವಾಮಿ ಅವರನ್ನು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಂಡಾಡಿದ್ದಾರೆ. ವಿವೇಕ್‌ ಒಬ್ಬ ಬುದ್ಧಿವಂತ, ಯುವ ನಾಯಕ (ಯಂಗ್‌, ಸ್ಮಾರ್ಟ್‌) ಎಂದು ಬಣ್ಣಿಸಿದ್ದಾರೆ. 

ಮಂಗಳವಾರ ಗ್ಲೆನ್ ಬೆಕ್ ಅವರ ಕಾರ್ಯಕ್ರಮದಲ್ಲಿ ವಿವೇಕ್‌ ರಾಮಸ್ವಾಮಿ ಅವರನ್ನು ಉಪಾಧ್ಯಕ್ಷರಾಗಿ ಪರಿಗಣಿಸುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ ಟ್ರಂಪ್‌ ಈ ಉತ್ತರ ನೀಡಿದ್ದಾರೆ.

’ಅವರು ಬಹಳ ಒಳ್ಳೆಯವರು ಎಂದು ನಾನು ಭಾವಿಸುತ್ತೇನೆ. ಅವರು ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ. ಬುದ್ಧಿವಂತ, ಯುವಕ, ಉತ್ಸಾಹಿ, ಪ್ರತಿಭಾನ್ವಿತ. ಆದರೆ, ಅವರು ಸ್ವಲ್ಪ ಜಾಗ್ರತೆಯಾಗಿರಬೇಕು’ ಎಂದೂ ಟ್ರಂಪ್‌ ಸಲಹೆ ನೀಡಿದರು.

2024ರ ಚುನಾವಣೆಗೆ ಅಧ್ಯಕ್ಷೀಯ ನಾಮನಿರ್ದೇಶನಕ್ಕೆ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಅಭ್ಯರ್ಥಿಗಳ ಪೈಕಿ ಟ್ರಂಪ್‌ ಮುಂಚೂಣಿಯಲ್ಲಿದ್ದಾರೆ. ಆಗಸ್ಟ್ 23 ರಂದು ನಡೆದ ಮೊದಲ ರಿಪಬ್ಲಿಕನ್ ಅಧ್ಯಕ್ಷೀಯ ಪ್ರಾಥಮಿಕ ಚರ್ಚೆಯ ನಂತರ ರಾಮಸ್ವಾಮಿ ಮಾಧ್ಯಮಗಳ ಗಮನ ಸೆಳೆದಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT