ನವದೆಹಲಿ: ಕೇರಳ ಶೀಘ್ರದಲ್ಲೇ 'ಕೇರಳಂ' ಆಗಲಿದೆ. ರಾಜ್ಯದ ಮರು ನಾಮಕರಣ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಮಂಗಳವಾರ ಚಾಲನೆ ನೀಡಿದೆ.

ಕೇರಳ ಸೇರಿದಂತೆ ಪಂಚ ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟಕ್ಕೆ ತಿಂಗಳು ಉಳಿದಿರುವಾಗ, ದಕ್ಷಿಣದ ರಾಜ್ಯದ ಹೆಸರು ಬದಲಾವಣೆಯ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಪ್ರಧಾನಿಯವರ ಹೊಸ ಕಚೇರಿ ‘ಸೇವಾ ತೀರ್ಥ‘ದಲ್ಲಿ ಮೊದಲ ಸಂಪುಟ ಸಭೆ ನಡೆಯಿತು.

ಕೇರಳದ ಹೆಸರನ್ನು ಅಧಿಕೃತ ವಾಗಿ ‘ಕೇರಳಂ’ ಎಂದು ಬದಲಾಯಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆಯು 2023ರ ಆಗಸ್ಟ್ 9ರಂದು ಅಂಗೀಕರಿಸಿತ್ತು.

‘ಭಾಷೆಗಳ ಆಧಾರದಲ್ಲಿ 1956ರ ನವೆಂಬರ್ 1ರಂದು ರಾಜ್ಯಗಳನ್ನು ರಚಿಸಲಾಗಿತ್ತು. ಕೇರಳ ಪಿರವಿ ದಿನವನ್ನೂ ನವೆಂಬರ್ 1 ರಂದು ಆಚರಿಸಲಾಗುತ್ತದೆ. ರಾಜ್ಯವನ್ನು ಮಲಯಾಳ ಭಾಷೆಯಲ್ಲಿ ‘ಕೇರಳಂ’ ಎಂದೇ ಕರೆಯಲಾಗುತ್ತಿದೆ. ಆದರೆ, ಇತರ ಭಾಷೆಗಳಲ್ಲಿ ರಾಜ್ಯದ ಹೆಸರು ಇನ್ನೂ ಕೇರಳವಾಗಿದೆ. ಸಂವಿಧಾನದ 3ನೇ ವಿಧಿದಡಿ ‘ಕೇರಳಂ’ ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ 8ನೇ ವಿಧಿಯಡಿದಲ್ಲಿ ಉಲ್ಲೇಖಿಸಿರುವ ಎಲ್ಲ ಭಾಷೆಗಳಲ್ಲಿ ‘ಕೇರಳಂ’ ಎಂದು ಮರುನಾಮಕರಣ ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ವಿಧಾನಸಭೆ ಸರ್ವಾನುಮತದಿಂದ ಕೇಂದ್ರ ಸರ್ಕಾರವನ್ನು ಕೋರುತ್ತದೆ‘ ಎಂದು ನಿರ್ಣಯ ತೆಗೆದುಕೊಂಡಿತ್ತು.

ಮೊದಲ ಬಾರಿ ಕಳುಹಿಸಿದ್ದ ನಿರ್ಣಯವನ್ನು ಪರಿಶೀಲಿಸಿದ್ದ ಕೇಂದ್ರ ಗೃಹ ಸಚಿವಾಲಯವು ಕೆಲ ತಾಂತ್ರಿಕ ಬದಲಾವಣೆ ಮಾಡುವಂತೆ ಸಲಹೆ ಮಾಡಿತ್ತು. ಹೀಗಾಗಿ, ಕೇರಳ ವಿಧಾನಸಭೆಯು 2024ರ ಜೂನ್ 24ರಂದು ಮತ್ತೊಮ್ಮೆ ನಿರ್ಣಯ ಅಂಗೀಕರಿಸಿತ್ತು.

ಈ ವಿಷಯವನ್ನು ಗೃಹ ಸಚಿವಾಲಯದಲ್ಲಿ ಪರಿಗಣಿಸಿತ್ತು. ಗೃಹ ಸಚಿವ ಅಮಿತ್ ಶಾ ಅನುಮೋದನೆಯೊಂದಿಗೆ ಸಂಪುಟದ ಕರಡು ಟಿಪ್ಪಣಿಯನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಹೆಸರು ಬದಲಾವಣೆ ಪ್ರಸ್ತಾವಕ್ಕೆ ಕಾನೂನು ಸಚಿವಾಲಯ ಒಪ್ಪಿಗೆ ಸೂಚಿಸಿತ್ತು.

ಮುಂದಿನ ಪ್ರಕ್ರಿಯೆ ಏನು?

‘ಕೇರಳ (ಹೆಸರು ಬದಲಾವಣೆ) ಮಸೂದೆ– 2026‘ಯನ್ನು ರಾಷ್ಟ್ರಪತಿ ಅವರು ಸಂವಿಧಾನದ 3ನೇ ವಿಧಿ ಅಡಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಕೇರಳ ವಿಧಾನಸಭೆಗೆ ಕಳುಹಿಸುತ್ತಾರೆ. ವಿಧಾನಸಭೆಯ ಅಭಿಪ್ರಾಯ ಸ್ವೀಕರಿಸಿದ ಬಳಿಕ ಕೇಂದ್ರ ಸರ್ಕಾರವು ಮುಂದಿನ ಕ್ರಮ ಕೈಗೊಳ್ಳುತ್ತದೆ. ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲು ರಾಷ್ಟ್ರಪತಿಗಳ ಶಿಫಾರಸನ್ನು ಪಡೆಯಲಾಗುತ್ತದೆ.

ಈ ಹಿಂದೆ ಹೆಸರು ಬದಲಾವಣೆ

ಈ ಹಿಂದೆ, ಮೂರು ರಾಜ್ಯಗಳ ಹೆಸರನ್ನು ಬದಲಾಯಿಸಲಾಗಿತ್ತು. ಕ್ರಮವಾಗಿ ಪಾಂಡಿಚೇರಿ, ಉತ್ತರಾಂಚಲ, ಒರಿಸ್ಸಾ ರಾಜ್ಯಗಳ ಹೆಸರು ಪುದುಚೇರಿ, ಉತ್ತರಾಖಂಡ ಮತ್ತು ಒಡಿಶಾ ಎಂದು ಬದಲಾಗಿತ್ತು. ಇದಲ್ಲದೆ, ಚೆನ್ನೈ, ಮುಂಬೈ, ತಿರುವನಂತಪುರಂ ಮತ್ತು ಪ್ರಯಾಗ್ರಾಜ್ನಂತಹ ಹಲವಾರು ನಗರಗಳು ಮತ್ತು ಪಟ್ಟಣಗಳ ಹೆಸರುಗಳು ಬದಲಾಗಿವೆ.

ಪಶ್ಚಿಮ ಬಂಗಾಳ ಬೇಡಿಕೆಗಿಲ್ಲ ಮನ್ನಣೆ

ಕೇರಳ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದರೂ, ಪಶ್ಚಿಮ ಬಂಗಾಳದ ಬೇಡಿಕೆಗೆ ಈವರೆಗೆ ಮನ್ನಣೆ ನೀಡಿಲ್ಲ. ರಾಜ್ಯದ ಹೆಸರನ್ನು ಬಂಗಾಳಿಯಲ್ಲಿ 'ಬಾಂಗ್ಲಾ', ಇಂಗ್ಲಿಷ್ನಲ್ಲಿ 'ಬಂಗಾಳ' ಮತ್ತು ಹಿಂದಿಯಲ್ಲಿ 'ಬಂಗಾಳಿ' ಎಂದು ಬದಲಾಯಿಸಬೇಕೆಂಬ ಪಶ್ಚಿಮ ಬಂಗಾಳ ಸರ್ಕಾರ 2018ರಲ್ಲಿ ಬೇಡಿಕೆ ಮುಂದಿಟ್ಟಿತ್ತು. ಆದರೆ, ವಿವಿಧ ಭಾಷೆಗಳಲ್ಲಿ ಮೂರು ಹೆಸರುಗಳನ್ನು ಹೊಂದುವುದನ್ನು ಸರಿಯಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಪ್ರಸ್ತಾವವನ್ನು ಅಂಗೀಕರಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.