ನವದೆಹಲಿ:‘ಒಂದೇ ಧರ್ಮದ ಎರಡು ಪಂಗಡಗಳ ನಡುವಣ ವ್ಯಾಜ್ಯದ ಸಂದರ್ಭದಲ್ಲಿ 1991ರ ಪೂಜಾ ಸ್ಥಳ ಕಾಯ್ದೆ ಅನ್ವಯಿಸಲು ಆಗುವುದಿಲ್ಲ’ ಎಂದು ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ.

ಶ್ವೇತಾಂಬರ ಮೂರ್ತಿಪೂಜಕ್ ಜೈನ್ ಸಮುದಾಯಕ್ಕೆ ಸೇರಿದ ತಪಗಚ್ ಪಂಗಡದ ಮೋಹಿಜಿತ್ ಸಮುದೆ ಅವರ ಅನುಯಾಯಿ ಶರದ್ ಜವೇರಿ ಹಾಗೂ ಇತರರು 1991ರ ಪೂಜಾ ಸ್ಥಳ ಕಾಯ್ದೆ ಜಾರಿಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠವು ಶನಿವಾರ ಇದರ ವಿಚಾರಣೆ ನಡೆಸಿತು.

ತಪಗಚ್ ಅನುಯಾಯಿಗಳು ಪ್ರಾರ್ಥನೆ ಹಾಗೂ ಪೂಜೆ ನಡೆಸುವ ಸ್ಥಳಗಳು ಸನ್ಯಾಸಿಗಳು ಸೇರಿದಂತೆ ಸಮುದಾಯದ ಇತರರಿಗೂ ಮುಕ್ತವಾಗಿರಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.