ಮುಂಬೈ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೊ ನ್ಯಾಯ ಯಾತ್ರೆ’ಯು ಮಾರ್ಚ್ 10ರಂದು ಗುಜರಾತ್ನಿಂದ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯನ್ನು ಪ್ರವೇಶಿಸಲಿದೆ’ ಎಂದು ಪಕ್ಷದ ಸ್ಥಳೀಯ ಕಾರ್ಯಕರ್ತರು ಶುಕ್ರವಾರ ಹೇಳಿದ್ದಾರೆ.

‘ನಂದುರ್ಬಾರ್ನಿಂದ ಧುಲೆ, ಮಾಲೆಗಾಂವ್, ನಾಸಿಕ್ ಮೂಲಕ ಯಾತ್ರೆ ಸಾಗಲಿದೆ. ಯಾತ್ರೆಯ ವೇಳೆ ಕಾಲಾರಾಮ್ನ ರಾಮ ಮಂದಿರದಲ್ಲಿ ಹಾಗೂ ತ್ರಯಂಬಕೇಶ್ವರದ ಶಿವ ಮಂದಿರದಲ್ಲಿ ರಾಹುಲ್ ಅವರು ಪ್ರಾರ್ಥನೆ ಸಲ್ಲಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಠಾಣೆಯ ಭಿವಂಡಿಯಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ರಾಹುಲ್ ಅವರು ಭಾಷಣ ಮಾಡಲಿದ್ದಾರೆ. ಬಳಿಕ ಯಾತ್ರೆಯು ಮುಂಬೈನಲ್ಲಿ ಮಾರ್ಚ್ 13 ಅಥವಾ 14ರಂದು ಸಮಾರೋಪಗೊಳ್ಳಲಿದೆ’ ಎಂದೂ ಅವರು ಹೇಳಿದ್ದಾರೆ.
.ಜಾರ್ಖಂಡ್: 3ನೇ ದಿನ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.