ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಮುರ್ಮು ಕುರಿತ ‘ಪಾಪ’ದ ಮಾತು: ಸೋನಿಯಾ ಹೇಳಿಕೆಗಳನ್ನು ಒಪ್ಪಲಾಗದು–ರಾಷ್ಟ್ರಪತಿ ಭವನ

Published : 31 ಜನವರಿ 2025, 11:01 IST
Last Updated : 31 ಜನವರಿ 2025, 11:01 IST
ಫಾಲೋ ಮಾಡಿ
Comments
ಉದ್ದೇಶಪೂರ್ವಕವಾಗಿ ಇಂತಹ ಪದಗಳನ್ನು ಬಳಸಿರುವುದು ಕಾಂಗ್ರೆಸ್ ಪಕ್ಷದ ಬಡವರ ಬುಡಕಟ್ಟ ಜನರ ವಿರೋಧಿ ಹಾಗೂ ಶ್ರೀಮಂತರ ಪರ ನಿಲುವನ್ನು ತೋರಿಸುತ್ತದೆ. ರಾಷ್ಟ್ರಪತಿ ಹಾಗೂ ದೇಶದ ಬುಡಕಟ್ಟು ಸಮುದಾಯಗಳ ಬೇಷರತ್‌ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್‌ ಪಕ್ಷವನ್ನು ಆಗ್ರಹಿಸುತ್ತೇನೆ –
ಜೆ.ಪಿ.ನಡ್ಡಾ ಬಿಜೆಪಿ ಅಧ್ಯಕ್ಷ
ಈ ಹೇಳಿಕೆಗಳು ಸೋನಿಯಾ ಗಾಂಧಿ ಅವರ ಊಳಿಗಮಾನ್ಯ ಮನಸ್ಥಿತಿಯನ್ನು ತೋರಿಸುತ್ತದೆ.  ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೇರಿರುವ ಬುಡಕಟ್ಟು ಮಹಿಳೆ ಕುರಿತು ಕಾಂಗ್ರೆಸ್‌ ಪಕ್ಷ ಅಪಹಾಸ್ಯ ಮಾಡುತ್ತಿರುವುದು ಇದೇ ಮೊದಲಲ್ಲ. ರಾಹುಲ್‌ ಗಾಂಧಿ ಪದೇಪದೇ ಸಂವಿಧಾನದ ಪ್ರತಿಯೊಂದನ್ನು ಪ್ರದರ್ಶಿಸುತ್ತಾರೆ. ಆದರೆ ರಾಷ್ಟ್ರಪತಿ ಅವರನ್ನು ಭೇಟಿಯಾಗುವ ಸೌಜನ್ಯವನ್ನೂ ಅವರು ಪ್ರದರ್ಶಿಸಿಲ್ಲ
– ಅಮಿತ್‌ ಮಾಳವೀಯ ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥ
ಸೋನಿಯಾ ಗಾಂಧಿ ಅವರು ರಾಷ್ಟ್ರಪತಿಗಳ ಆರೋಗ್ಯದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇದನ್ನು ಬಿಜೆಪಿಯವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ದೇಶದ ಪ್ರತಿಯೊಬ್ಬ ವ್ಯಕ್ತಿಯೂ ರಾಷ್ಟ್ರಪತಿಯವರ ಕುರಿತು ಗೌರವ ಹಾಗೂ ಸಹಾನುಭೂತಿ ಹೊಂದಿದ್ದಾರೆ
– ಗೌರವ ಗೊಗೋಯಿ
ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಉಪನಾಯಕ 59 ನಿಮಿಷ ಭಾಷಣ ಮಾಡಿ ದಣಿದಿದ್ದ ರಾಷ್ಟ್ರಪತಿಗಳ ಬಗ್ಗೆ ಸೋನಿಯಾ ಗಾಂಧಿ ಅವರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ನೀವು (ಬಿಜೆಪಿ ಹಾಗೂ ಮಾಧ್ಯಮದವರು) ಶಾಲೆ ಅಥವಾ ಕಾಲೇಜು ಮೆಟ್ಟಿಲು ಹತ್ತಿದ್ದರೆ ಅಲಂಕಾರಗಳ ಬಗ್ಗೆ ಹಾಗೂ ಸಹಾನುಭೂತಿ ವ್ಯಕ್ತಪಡಿಸಲು ‘ಪಾಪ’ ಎಂಬ  ಪ್ರಯೋಗ ಮಾಡುವ ಬಗ್ಗೆ ಗೊತ್ತಿರುತ್ತಿತ್ತು
–ಸುಪ್ರಿಯಾ ಶ್ರೀನೇತ್ ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್‌ ವೇದಿಕೆಗಳ ಮುಖ್ಯಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT