ಸಮೀಕ್ಷೆಗೂ ವನ್ಯಜೀವಿ ಮಂಡಳಿ ಒಪ್ಪಿಗೆ ಬೇಕು
ಅಭಯಾರಣ್ಯದಲ್ಲಿ ಹೊಸ ಅಧ್ಯಯನ ಹಾಗೂ ಸಮೀಕ್ಷೆ ನಡೆಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಒಪ್ಪಿಗೆ ಅಗತ್ಯ. ಮೇಕೆದಾಟು ಯೋಜನೆಯ ಸಮೀಕ್ಷೆ ನಡೆಸಲು ಅನುಮತಿ ನೀಡುವಂತೆ ಕೋರಿ ಕಾವೇರಿ ನೀರಾವರಿ ನಿಗಮವು ಪಿಸಿಸಿಎಫ್ (ವನ್ಯಜೀವಿ) ಮೂಲಕ ಕೇಂದ್ರ ಅರಣ್ಯ ಸಚಿವಾಲಯಕ್ಕೆ ಫೆಬ್ರುವರಿ 4ರಂದು ಪ್ರಸ್ತಾವ ಸಲ್ಲಿಸಿದೆ.