ವಾರಾಂತ್ಯದ ವೇಳೆ ಕದನವಿರಾಮ ಸಾಧ್ಯತೆ: ಟ್ರಂಪ್
‘ಇಸ್ರೇಲ್ ಮತ್ತು ಹಮಾಸ್ ನಡುವಣ ಸಂಘರ್ಷ ನಿಲ್ಲಿಸಲು ಕದನವಿರಾಮ ಮಾತುಕತೆ ನಡೆದಿದೆ. ಶೀಘ್ರವೇ ಒಪ್ಪಂದಕ್ಕೆ ಬರಲಾಗುತ್ತದೆ‘ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ‘ಮಾತುಕತೆ ಈ ವಾರಾಂತ್ಯದ ವೇಳೆಗೆ ಅಂತ್ಯವಾಗಬಹುದು’ ಎಂದು ನ್ಯೂಸ್ ಮ್ಯಾಕ್ಸ್ ಸುದ್ದಿವಾಹಿನಿಗೆ ಟ್ರಂಪ್ ಹೇಳಿದರು. ಒಪ್ಪಂದ ಕುರಿತು ಹೆಚ್ಚು ಮಾತನಾಡಲು ನಿರಾಕರಿಸಿದರು.