ಬ್ಯಾಂಕಾಕ್: ಶುಕ್ರವಾರ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕಟ್ಟಡಗಳು ಅಲುಗಾಡಿವೆ.

ಪ್ರಾಥಮಿಕ ವರದಿಗಳ ಪ್ರಕಾರ, ಮ್ಯಾನ್ಮಾರ್ನ ಮಂಡಲೆ ನಗರದ ಬಳಿ 10 ಕಿಮೀ (6.21 ಮೈಲುಗಳು) ಆಳದಲ್ಲಿ ಕೇಂದ್ರಬಿಂದು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಜರ್ಮನಿಯ ಜಿಎಫ್ಝಡ್ ಭೂವಿಜ್ಞಾನ ಕೇಂದ್ರ ತಿಳಿಸಿದೆ.

ಬ್ಯಾಂಕಾಕ್ ನಗರವು 17 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿದೆ. ಅವರಲ್ಲಿ ಹಲವರು ಎತ್ತರದ ಅಪಾರ್ಟ್ಮೆಂಟ್ಗಳಲ್ಲಿ ವಾಸಿಸುತ್ತಿದ್ದಾರೆ.

ಭೂಕಂಪ ಸಂಭವಿಸಿದಾಗ ಕಟ್ಟಡಗಳಲ್ಲಿ ಎಚ್ಚರಿಕೆಯ ಗಂಟೆಗಳು ಮೊಳಗಿದವು ಮತ್ತು ಜನನಿಬಿಡ ಕೇಂದ್ರ ಬ್ಯಾಂಕಾಕ್ನಲ್ಲಿರುವ ಎತ್ತರದ ಕಟ್ಟಡಗಳು ಮತ್ತು ಹೋಟೆಲ್ಗಳ ಗಾಬರಿಗೊಂಡ ನಿವಾಸಿಗಳನ್ನು ಹೊರಗೆ ಕಳುಹಿಸಲಾಗಿದೆ.

ಬ್ಯಾಂಕಾಂಕ್ನಲ್ಲಿ ಜನರು ಭಯಭೀತರಾಗಿ ಬೀದಿಗಳಿಗೆ ಓಡಿಬದರು. ಈಜುಕೊಳಗಳಿಂದ ನೀರು ಹೊರಗೆ ಚಿಮ್ಮಿತು ಎಂದು ಬ್ಯಾಂಕಾಕ್ನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಕಟ್ಟಡ ಕುಸಿತಗಳ ಬಗ್ಗೆ ವರದಿಯಾಗಿಲ್ಲ.

ಭೂಕಂಪದ ನಂತರ ಹಾನಿಯ ಬಗ್ಗೆ ಮ್ಯಾನ್ಮಾರ್ನಿಂದಲೂ ತಕ್ಷಣದ ಮಾಹಿತಿ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.