ವಾಷಿಂಗ್ಟನ್: ಅಮೆರಿಕದ ಜನಪ್ರಿಯ ಪಾಡ್ಕಾಸ್ಟರ್ ಲೆಕ್ಸ್ ಫ್ರಿಡ್ಮನ್ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರ ಮಾತುಕತೆಯ ವಿಡಿಯೊ ಕೊಂಡಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ‘ಟ್ರುತ್’ ಸೋಷಿಯಲ್ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

‘ನಾನು ಮತ್ತು ಟ್ರಂಪ್ ನಮ್ಮ ದೇಶಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಈ ಕಾರಣದಿಂದಾಗಿ ನಾನು ಮತ್ತು ಅವರು ಬಹಳ ಚೆನ್ನಾಗಿ ಬೆರೆಯುತ್ತೇವೆ’ ಎಂದು ಮೋದಿ ಅವರು ಪಾಡ್ಕಾಸ್ಟ್ನಲ್ಲಿ ಹೇಳಿದ್ದಾರೆ.

ಸೋವಿಯತ್ ಒಕ್ಕೂಟ ಪತನವಾದ ನಂತರ ರಷ್ಯಾದಿಂದ ಅಮೆರಿಕಕ್ಕೆ ವಲಸೆ ಹೋದ ಫ್ರಿಡ್ಮನ್ ಅವರು 2018ರಲ್ಲಿ ತಮ್ಮ ಪಾಡ್ಕಾಸ್ಟ್ ಆರಂಭಿಸಿದರು.

‘ಉಕ್ಕು, ಅಲ್ಯೂಮಿನಿಯಂ ಸುಂಕ ಇಳಿಕೆ ಇಲ್ಲ’: ಉಕ್ಕು ಮತ್ತು ಅಲ್ಯೂಮಿನಿಯಂ ಮೇಲಿನ ಸುಂಕದಲ್ಲಿ ವಿನಾಯಿತಿ ನೀಡುವ ಯಾವುದೇ ಯೋಚನೆಯನ್ನು ಹೊಂದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಮುಖ ಪಾಲುದಾರರಿಂದ ವ್ಯಾಪಾರ ವಹಿವಾಟಿನಲ್ಲಿ ಪ್ರತಿರೋಧ ಎದುರಾಗುವ ಸಾಧ್ಯತೆ ಇದ್ದರೂ ಉಕ್ಕು ಹಾಗೂ ಅಲ್ಯೂಮಿನಿಯಂ ಮೇಲಿನ ಆಮದು ಸುಂಕವನ್ನು ಇಳಿಸದೇ ಇರಲು ನಿರ್ಧರಿಸಲಾಗಿದೆ’ ಎಂದರು.

‘ಏ.2 ನಮ್ಮ ದೇಶಕ್ಕೆ ವಿಮೋಚನಾ ದಿನವಾಗಿದೆ. ಈಗಾಗಲೇ ನಮ್ಮ ದೇಶಕ್ಕೆ ಶತಕೋಟಿಗಟ್ಟಲೆ ಡಾಲರ್ನಷ್ಟು ಆರ್ಥಿಕ ಸಂಪತ್ತು ಹರಿದುಬಂದಿದೆ. ಏ.2ರಿಂದ ಇನ್ನೂ ದೊಡ್ಡ ಪ್ರಮಾಣದಲ್ಲಿ ಹಣ ಹರಿದುಬರಲಿದೆ’ ಎಂದು ಹೇಳಿದರು.

ಉಕ್ಕು, ಅಲ್ಯೂಮಿನಿಯಂ ಮೇಲೆ ಟ್ರಂಪ್ ಜನವರಿಯಿಂದ ಶೇ 25ರಷ್ಟು ಆಮದು ಸುಂಕ ವಿಧಿಸಿದ್ದಾರೆ. ಈ ಬೆಳವಣಿಗೆಯು ಜಾಗತಿಕ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.

ಮಂಗಳವಾರ ಟ್ರಂಪ್–ಪುಟಿನ್ ಮಾತುಕತೆ

ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಮಾತುಕತೆ ನಡೆಸಲಿದ್ದಾರೆ.

ಉಕ್ರೇನ್–ರಷ್ಯಾ ಯುದ್ಧವನ್ನು ಕೊನೆಗಾಣಿಸುವ ಉದ್ದೇಶವನ್ನು ಈ ಮಾತುಕತೆ ಒಳಗೊಂಡಿದೆ. ಫ್ಲಾರಿಡಾದಿಂದ ವಾಷಿಂಗ್ಟನ್ಗೆ ವಿಮಾನದಲ್ಲಿ ಭಾನುವಾರ ಸಂಜೆ ಪ್ರಯಾಣ ಮಾಡಿದ ಸಂದರ್ಭದಲ್ಲಿ ಪುಟಿನ್ ಜತೆ ಮಾತುಕತೆ ನಡೆಸುವ ವಿಷಯವನ್ನು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದರು.

‘ಮಂಗಳವಾರ ಪುಟಿನ್ ಜತೆ ಮಾತುಕತೆ ನಡೆಸಲಿದ್ದೇನೆ. ಚರ್ಚೆಯ ನಂತರ ಪ್ರಕಟಿಸುವಂತಹ ಮಹತ್ವದ ವಿಷಯ ಹೊರಹೊಮ್ಮಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂದು ಟ್ರಂಪ್ ಹೇಳಿದರು.

ಟ್ರಂಪ್ ಹಾಗೂ ಪುಟಿನ್ ನಡುವೆ ಮಾತುಕತೆ ನಡೆಯಲಿದೆ ಎನ್ನುವುದನ್ನು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸೋಮವಾರ ಬೆಳಿಗ್ಗೆ ಸ್ಪಷ್ಟಪಡಿಸಿದರು. ಯಾವ ವಿಷಯ ಚರ್ಚೆಗೆ ಬರಲಿದೆ ಎಂದು ವಿವರ ನೀಡಲು ಅವರು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.