ಸಿಡ್ನಿ : ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಹಾಗೂ ತಂಡದ ಸುವರ್ಣ ಯುಗದ ವೇಳೆ ಕೋಚ್ ಆಗಿದ್ದ ಬಾಬ್ ಸಿಂಪ್ಸನ್ (89) ಅವರು ನಿಧನರಾಗಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಶನಿವಾರ ತಿಳಿಸಿದೆ.

ಆಲ್ರೌಂಡರ್ ಸಿಂಪ್ಸನ್ 1957 ರಿಂದ 1978ರ ಅವಧಿಯಲ್ಲಿ 62 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ಇದರಲ್ಲಿ 10 ಶತಕ, 27 ಅರ್ಧ ಶತಕ ಒಳಗೊಂಡಿವೆ. ಲೆಗ್ ಸ್ಪಿನ್ ಬೌಲಿಂಗ್ನಲ್ಲಿ 71 ವಿಕೆಟ್ ಪಡೆದಿದ್ದಾರೆ. 110 ಕ್ಯಾಚ್ ಹಿಡಿದಿದ್ದಾರೆ. 39 ಟೆಸ್ಟ್ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

1957ರಲ್ಲಿ ಜೊಹಾನೆಸ್ಬರ್ಗ್ ನಲ್ಲಿ ಟೆಸ್ಟ್ಗೆ ಪದಾರ್ಪಣೆ ಮಾಡಿದ್ದರು. ಓಲ್ಡ್ ಟ್ರಾಫರ್ಡ್ನಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಗಳಿಸಿದ 311 ರನ್ಗಳು ಆಗ ಆಸ್ಟ್ರೇಲಿಯಾ ಆಟಗಾರನೊಬ್ಬನ ಎರಡನೇ ಗರಿಷ್ಠ ವೈಯಕ್ತಿಕ ಮೊತ್ತ ಎನಿಸಿತ್ತು. ಬ್ರಾಡ್ಮನ್ 1930ರಲ್ಲಿ ಇಂಗ್ಲೆಂಡ್ ವಿರುದ್ಧ 334 ರನ್ ಗಳಿಸಿದ್ದು ಅತ್ಯಧಿಕವಾಗಿತ್ತು.

ಸ್ಲಿಪ್ನಲ್ಲಿ ಅತ್ಯಂತ ಶ್ರೇಷ್ಠ ಫೀಲ್ಡರ್ ಎನಿಸಿದ್ದ ಅವರು 1968ರಲ್ಲಿ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಆದರೆ ಆಸ್ಟ್ರೇಲಿಯಾದ ಕೆಲವು ಪ್ರಮುಖ ಆಟಗಾರರು ಕೆರಿ ಪ್ಯಾಕರ್ ಅವರ 1977ರ ವಿಶ್ವ ಸರಣಿ ಆಡಲು ಹೋದ ನಂತರ ಸಿಂಪ್ಸನ್ ತಮ್ಮ 41ನೇ ವಯಸ್ಸಿನಲ್ಲಿ ನಿವೃತ್ತಿ ತೊರೆದು ತಂಡಕ್ಕೆ ಮರಳಿದ್ದರು.

‘ಸಿಂಪ್ಸನ್ ಅವರು ಆಸ್ಟ್ರೇಲಿಯಾದ ಮಹಾನ್ ಆಟಗಾರರಲ್ಲಿ ಒಬ್ಬರಾಗಿದ್ದರು. ಅವರ ಆಟ ನೋಡಿದ ಅಥವಾ ಅವರ ಕ್ರಿಕೆಟ್ ಜ್ಞಾನದ ಪ್ರಯೋಜನ ಪಡೆದವರಿಗೆ ಇದು ಬೇಸರದ ದಿನ’ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಅಧ್ಯಕ್ಷ ಮೈಕ್ ಬೇರ್ಡ್ ಸಂತಾಸ ಸೂಚಿಸಿದ್ದಾರೆ.

‘ಆಕರ್ಷಕ ಆರಂಭ ಆಟಗಾರ, ಅಮೋಘ ಸ್ಲಿಪ್ ಫೀಲ್ಡರ್ ಮತ್ತು ಉಪಯುಕ್ತ ಸ್ಪಿನ್ ಬೌಲರ್ ಆಗಿ ಬಾಬ್ ಅವರು 1960ರ ದಶಕದ ಆಸ್ಟ್ರೇಲಿಯಾ ತಂಡದ ಪ್ರಮುಖ ಶಕ್ತಿಯಾಗಿದ್ದರು. ಅವರ ಕೋಚಿಂಗ್, ಆಸ್ಟ್ರೇಲಿಯಾದ ಸುವರ್ಣಯುಗಕ್ಕೆ ಬುನಾದಿ ಹಾಕಿತು’ ’ ಎಂದು ಅವರು ಸಂದೇಶ ದಲ್ಲಿ ಬಣ್ಣಿಸಿದ್ದಾರೆ.

ಕೋಚ್ ಆಗಿ ಅವರು ಆಸ್ಟ್ರೇಲಿಯಾ ತಂಡದಲ್ಲಿ ಶಿಸ್ತು ಮೂಡಿಸಿದರು. 1987ರಲ್ಲಿ ಆ್ಯಲನ್ ಬಾರ್ಡರ್ ಅವರ ನೇತೃತ್ವದ ತಂಡವು ರಿಲಯನ್ಸ್ ವಿಶ್ವಕಪ್ ಗೆದ್ದುಕೊಂಡಿತು. ಆ್ಯಷಸ್ ಸರಣಿ ಮತ್ತು ಫ್ರಾಂಕ್ ವೊರೆಲ್ ಟ್ರೋಫಿಯನ್ನೂ ತನ್ನದಾಗಿಸಿ ಕೊಂಡಿತ್ತು.

‘ತಾವು ಕಂಡ ಶ್ರೇಷ್ಠ ಕೋಚ್ ಮತ್ತು ತಮ್ಮ ಪ್ರಗತಿಗೆ ನೆರವಾದವರು ಸಿಂಪ್ಸನ್’ ಎಂದು ಲೆಗ್ಸ್ಪಿನ್ ದಿಗ್ಗಜ ದಿ.ಶೇನ್ ವಾರ್ನ್ ಹಿಂದೊಮ್ಮೆ ಹೇಳಿದ್ದರು.

ಸಿಂಪ್ಸನ್ ಅವರು 1990ರ ದಶಕದ ಕೊನೆಯಲ್ಲಿ ಭಾರತ ತಂಡಕ್ಕೂ ಕೋಚ್ ಆಗಿದ್ದರು. ಕೆಲಕಾಲದ ಲ್ಯಾಂಕಾಶೈರ್ ಮತ್ತು ನೆದರ್ಲೆಂಡ್ಸ್ ತಂಡಕ್ಕೂ ತರಬೇತುದಾರರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.