ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಚಾಕು ತೋರಿಸಿ ಬಾಲಕಿ ಮೇಲೆ ಅತ್ಯಾಚಾರ, ಜೀವ ಬೆದರಿಕೆ

Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಕಲಬುರಗಿ: ಕಾಳಗಿ ತಾಲ್ಲೂಕಿನ ಗ್ರಾಮವೊಂದರಲ್ಲಿ 16 ವರ್ಷದ ಇಬ್ಬರು ಬಾಲಕರು ಚಾಕು ತೋರಿಸಿ ಬೆದರಿಸಿ 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ‌ಅತ್ಯಾಚಾರ ಎಸಗಿದ್ದು, ಈ ದೃಶ್ಯವನ್ನು ಮೊಬೈಲ್‌ನಲ್ಲಿ ವಿಡಿಯೊ ಸಹ ಮಾಡಿಕೊಂಡಿದ್ದಾರೆ.

ಸಂತ್ರಸ್ತ ಬಾಲಕಿಯ ಪೋಷಕರು ನೀಡಿದ ದೂರಿನ ಅನ್ವಯ ಕಾನೂನು ಸಂಘರ್ಷಕ್ಕೆ ಒಳಗಾದ ಇಬ್ಬರು ಬಾಲಕರ ವಿರುದ್ಧ ಕಾಳಗಿ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಾಲಕಿ ಹಾಗೂ ಬಾಲಕರಿಗೆ ವೈದ್ಯಕೀಯ ತಪಾಸಣೆ ನಡೆಸಲಾಗಿದ್ದು, ಇಬ್ಬರು ಬಾಲಕರನ್ನು ಬಾಲ ನ್ಯಾಯ ಮಂಡಳಿ (ಜೆಜೆಬಿ) ಎದುರು ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಬಾಲಕಿಯ ಪೋಷಕರು ಕೂಲಿಗಾಗಿ ಮುಂಬೈ ಹೋಗಿದ್ದರು. ಅಜ್ಜಿಯ ಕಣ್ಗಾವಲಿನಲ್ಲಿ 9 ಮತ್ತು 10ನೇ ತರಗತಿ ಓದುತ್ತಿರುವ ಸಹೋದರರೊಂದಿಗೆ ಬೇರೊಂದು ಮನೆಯಲ್ಲಿ 6ನೇ ತರಗತಿ ಓದುತ್ತಿರುವ ಬಾಲಕಿ ವಾಸವಾಗಿದ್ದಳು. ಡಿಸೆಂಬರ್ 7 ಮತ್ತು 10ರಂದು ಬಾಲಕಿಯ ಮನೆಯಲ್ಲಿ ಬೇರೆ ಯಾರೂ ಇಲ್ಲದ ವೇಳೆ 9 ಮತ್ತು 10ನೇ ತರಗತಿ ಓದುತ್ತಿರುವ ಬಾಲಕರು ಒಳ ನುಗ್ಗಿದರು. ಚಾಕು ತೋರಿಸಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಯಾರಿಗಾದರು ಹೇಳಿದರೆ ಸಹೋದರರು ಸೇರಿ ಬಾಲಕಿಯನ್ನು ಕೊಲ್ಲುವುದಾಗಿ ಚಾಕು ತೋರಿಸಿ ಬೆದರಿಕೆ ಹಾಕಿದರು. ಹೀಗಾಗಿ, ಬಾಲಕಿಯು ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೊಂಡಿರಲಿಲ್ಲ ಎಂದು ಮಾಹಿತಿ ನೀಡಿದರು.

ಲೈಂಗಿಕ ದೌರ್ಜನ್ಯ ಎಸಗುವಾಗ ಬಾಲಕನೊಬ್ಬ ಇನ್ನೊಬ್ಬನಿಗೆ ಗೊತ್ತಾಗದಂತೆ ವಿಡಿಯೊ ಮಾಡಿಕೊಂಡು, ತನ್ನ ಮೊಬೈಲ್‌ಗೆ ಕಳುಹಿಸಿಕೊಂಡಿದ್ದ. ಬಳಿಕ ಸ್ನೇಹಿತನ ಮೊಬೈಲ್‌ನಿಂದ ವಿಡಿಯೊ ಡಿಲೀಟ್ ಮಾಡಿದ್ದ. ಬಾಲಕನಲ್ಲಿ ಲೈಂಗಿಕ ದೌರ್ಜನ್ಯದ ವಿಡಿಯೊ ಇರುವುದು ಬಾಲಕಿಯ ಅಣ್ಣನ ಗಮನಕ್ಕೆ ಬಂತು. ಈ ಬಗ್ಗೆ ಹಿರಿಯ ಮಗ ಮಾಹಿತಿ ನೀಡಿದ್ದರಿಂದ ಮುಂಬೈನಿಂದ ಬಂದ ಪೋಷಕರು, ಮಗಳಿಂದ ಘಟನೆ ಬಗ್ಗೆ ಮಾಹಿತಿ ಪಡೆದು ಠಾಣೆಗೆ ದೂರು ನೀಡಿದ್ದಾರೆ.

ಎಸ್ಸೆಸ್ಸೆಲ್ಸಿ ಓದಿಗೆ ಅನುಕೂಲ ಆಗಲಿ ಎಂದು ಬಾಲಕನ ತಾಯಿ ಹಾಗೂ ಮತ್ತೊಬ್ಬ ಬಾಲಕಿಗೆ ಆತನ ಸೋದರ ಮಾವ ಮೊಬೈಲ್‌ ಕೊಡಿಸಿದ್ದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT